For Quick Alerts
ALLOW NOTIFICATIONS  
For Daily Alerts

ಮರದ ಬಟ್ಟೆಬೀರು ಶುಚಿಗೊಳಿಸಲು ಟಿಪ್ಸ್

By Hemanth P
|

ಹೊಸತನ್ನು ತರಲು ನೀವು ಹಳೆಯ ಮರದ ಬಟ್ಟೆ ಬೀರನ್ನು ಎಸೆಯಬೇಕೆಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನೀವು ಸರಿಯಾದ ಜಾಗದಲ್ಲೇ ಇದ್ದೀರಿ. ನೀವು ಸ್ವಲ್ಪ ಸಮಯ ಮತ್ತು ಶ್ರಮ ವಹಿಸಲು ತಯಾರಿದ್ದೀರಿ ಎಂದಾಗಿದ್ದರೆ ನಿಮ್ಮ ಮರದ ಬಟ್ಟೆಬೀರನ್ನು ಹೊಸತನ್ನಾಗಿ ಮಾಡಬಹುದು. ಮರದ ಬಟ್ಟೆ ಬೀರನ್ನು ಹೇಗೆ ಶುಚಿಗೊಳಿಸುವುದು ಎಂದು ತಿಳಿದುಕೊಂಡರೆ ಮರದ ಬಟ್ಟೆಬೀರಿಗೆ ಹೊಸತನ ನೀಡಬಹುದು.

ಕೆಲವೊಂದು ವಿಧಾನ ಮತ್ತು ತಂತ್ರಗಳನ್ನು ತಿಳಿದುಕೊಂಡಿದ್ದರೆ ಮರದ ಬಟ್ಟೆಬೀರನ್ನು ಶುಚಿಗೊಳಿಸುವುದು ಕಷ್ಟವೇನಲ್ಲ. ಕಬ್ಬಿಣ ಹಾಗೂ ಇತರ ವಸ್ತುಗಳಿಂದ ಮಾಡಿದಂತಹ ಬಟ್ಟೆಬೀರಿಗಿಂತ ಮರದ ಬಟ್ಟೆಬೀರಿಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಮರದ ಬಟ್ಟೆಬೀರನ್ನು ಶುಚಿಗೊಳಿಸುವಾದ ಸರಿಯಾದ ಶುಚಿತ್ವಕಾರಕ ಮತ್ತು ತಂತ್ರಗಳನ್ನು ಪಾಲಿಸದಿದ್ದರೆ ಅದಕ್ಕೆ ಹಾನಿಯಾಗುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ಹಾಗೂ ಸುಲಭವಾಗಿ ಮರದ ಬಟ್ಟೆಬೀರುಗಳನ್ನು ಶುಚಿಗೊಳಿಸುವುದು ಹೇಗೆಂದು ನಾವು ತಿಳಿದುಕೊಳ್ಳುವ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಬಜೆಟ್ ನಲ್ಲೇ ಮನೆ ನವೀಕರಿಸಿ

ಮೈಕ್ರೋಫೈಬರ್ ಬಟ್ಟೆ ಬಳಸಿ:
ಹೆಚ್ಚು ಶ್ರಮವಿಲ್ಲದೆ ಮರದ ಬಟ್ಟೆಬೀರನ್ನು ಶುಚಿಗೊಳಿಸುವುದು ಹೇಗೆಂದು ನೀವು ಚಿಂತಿತರಾಗಿದ್ದರೆ ಮೃದುವಾದ ಮೈಕ್ರೋಫೈಬರ್ ಬಟ್ಟೆ ಸರಳ ಪರಿಹಾರ. ಇದು ಮರದ ಬಟ್ಟೆಬೀರಿನಲ್ಲಿ ಗೆರೆಗಳು ಬೀಳದಂತೆ ತಡೆಯುತ್ತದೆ.

Tips For Cleaning A Wooden Wardrobe

ವೈಟ್ ವಿನೇಗರ್ ಬಳಸಿ:
ನಿಮ್ಮ ಬಟ್ಟೆಬೀರು ತುಂಬಾ ಕೊಳೆ ಮತ್ತು ಧೂಳಿನಿಂದ ತುಂಬಿದ್ದರೆ ವೈಟ್ ವಿನೇಗರ್ ಬಳಸುವುದು ಒಳ್ಳೆಯ ಐಡಿಯಾ. ಬಟ್ಟೆಯ ಮೇಲೆ ಸ್ವಲ್ಪ ವೈಟ್ ವಿನೇಗರ್ ಹಾಕಿ ಮತ್ತು ಅದರಿಂದ ಬಟ್ಟೆಬೀರನ್ನು ಶುಚಿಗೊಳಿಸಿ. ಅಳಿದುಳಿರುವುದನ್ನು ನೀರಿನಿಂದ ತೊಳೆದು ಬಳಿಕ ಒಣಗಿಸಿ.

ಕೋನ ಮತ್ತು ಮೂಲೆ ಸ್ವಲ್ಪ ಮಾಡಿ:
ಮರದ ಬಟ್ಟೆಬೀರುವಿನ ಕೋನ ಮತ್ತು ಮೂಲೆ ಸ್ವಚ್ಛ ಮಾಡುವುದನ್ನು ಮರೆಯಬೇಡಿ. ಸ್ವಲ್ಪ ನೀರನ್ನು ಹಾಕಿದ ಹತ್ತಿಯ ಉಂಡೆಗಳಿಂದ ಇದನ್ನು ಶುಚಿಗೊಳಿಸಬಹುದು. ಇದರ ಬಳಿಕ ಒಣ ಹತ್ತಿಯ ಉಂಡೆಯಿಂದ ಇದನ್ನು ಒಣಗುವಂತೆ ಮಾಡಿ.

ಅಪಘರ್ಷಕ ಸ್ಪಾಂಜ್ ಎಂದಿಗೂ ಬಳಸಬೇಡಿ:
ಅಪಘರ್ಷಕ ಸ್ಪಾಂಜ್ ನ್ನು ಬಳಸಿಕೊಂಡು ಮರದ ಬಟ್ಟೆಬೀರನ್ನು ಶುಚಿಗೊಳಿಸುವುದು ಅತ್ಯಂತ ಕೆಟ್ಟ ಯೋಜನೆ. ಇದರಿಂದ ಅದರ ಮೇಲ್ಭಾಗದಲ್ಲಿ ಗೆರೆಗಳು ಬೀಳಬಹುದು. ವಾರ್ನಿಶ್ ಮಾಡಿದ ಮರದ ಬಟ್ಟೆ ಬೀರು ಇದ್ದರೆ ಅದರಿಂದ ನಿಮಗೆ ನಿರಾಶೆಯಾಗಲಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?

ಒಣಗುವಂತೆ ಇಡಿ:
ಮರದ ಬಟ್ಟೆಬೀರುಗಳಿಗೆ ವಾರ್ನಿಶ್ ಮಾಡಿದ್ದರೆ ಆಗ ಅದರಲ್ಲಿ ತೇವಾಂಶ ಉಳಿದರೆ ಅದು ಒಳ್ಳೆಯ ಐಡಿಯಾವಲ್ಲ. ನಾವು ಬಳಸುವ ಹೆಚ್ಚಿನ ವಾರ್ನಿಶ್ ಗಳು ವಾಟರ್ ಪ್ರೂಫ್ ಅಲ್ಲ ಮತ್ತು ಇದು ಮರಕ್ಕೆ ಹಾನಿಯುಂಟು ಮಾಡಬಹುದು. ನೀರು ಹಾಕಿದ ಬಳಿಕ ಅದನ್ನು ಒಣಗಿಸಲು ಒಣ ಬಟ್ಟೆ ಜತೆಗಿರಲಿ.

ಉಜ್ಜಬೇಡಿ:
ಮರದ ಬಟ್ಟೆಬೀರನ್ನು ಶುಚಿಗೊಳಿಸುವಾಗ ನೀವು ವೃತ್ತಾಕಾರದಲ್ಲಿ ಇದನ್ನು ಮಾಡಿ. ಮೇಲ್ಭಾಗವನ್ನು ಗಟ್ಟಿಯಾಗಿ ಉಜ್ಜಬೇಡಿ. ಗಟ್ಟಿಯಾಗಿರುವ ಕಲೆ ಕಂಡುಬಂದರೆ ಆಗ ನೆಲಕ್ಕೆ ಹಾಕುವ ಶುಚಿಕಾರಕಗಳನ್ನು ಬಳಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲದಲ್ಲಿ ಬ್ಲ್ಯಾಂಕೆಟ್ ಶುಚಿಗೊಳಿಸುವ ಟಿಪ್ಸ್

ಅಡುಗೆ ಸೋಡಾ ಬಳಸಬೇಡಿ:
ಅಡುಗೆ ಸೋಡಾವನ್ನು ಒಳ್ಳೆಯ ಶುಚಿಕಾರಕವೆಂದು ಪರಿಗಣಿಸಲಾಗಿದ್ದರೂ ಮರದ ಬಟ್ಟೆಬೀರನ್ನು ಶುಚಿಗೊಳಿಸುವಾಗ ಇದನ್ನು ಬಳಸಬಾರದೆಂದು ಸಲಹೆ ನೀಡಲಾಗುತ್ತದೆ. ಅಡುಗೆ ಸೋಡಾವು ಬೀರಿಗೆ ಹಾನಿಯನ್ನು ಉಂಟು ಮಾಡಬಹುದು.

ನಿಯಮಿತವಾಗಿ ಶುಚಿಗೊಳಿಸಿ:
ಮರದ ಬಟ್ಟೆಬೀರು ಸಹಿತ ಪ್ರತಿಯೊಂದು ಫರ್ನಿಚರ್ ಗಳನ್ನು ಎರಡು ದಿನಕ್ಕೆ ಒಮ್ಮೆಯಾದರೂ ಶುಚಿಗೊಳಿಸಿ. ಇದರಿಂದ ನಿಮ್ಮ ಮನೆಯ ಮರದ ಬಟ್ಟೆಬೀರುವಿನ ಹೊಸತನ ಹಾಗೆ ಇರುತ್ತದೆ. ಧೂಳು ಅಂಟಿಕೊಂಡರೆ ನಿಮ್ಮ ಕೆಲಸ ಮತ್ತಷ್ಟು ಕಷ್ಟವಾಗಬಹುದು.

English summary

Tips For Cleaning A Wooden Wardrobe

Cleaning wooden wardrobes is not a difficult task if you know some tips and tricks. Apart from other wardrobes that are made of metal or other materials, wooden wardrobe demands a little more care.
Story first published: Friday, March 7, 2014, 15:09 [IST]
X
Desktop Bottom Promotion