For Quick Alerts
ALLOW NOTIFICATIONS  
For Daily Alerts

ಈ ವಿಧಾನದಿಂದ ವಾಶ್‌ಬೇಸಿನ್ ಅನ್ನು ಪಳಪಳಗೊಳಿಸಿ

|

ವಾಶ್ ಬೇಸಿನ್ ಪ್ರತಿ ಮನೆಯಲ್ಲಿ ಅತ್ಯವಶ್ಯಕ. ಬಾತ್‌ರೂಮ್ ಹಾಗೂ ಮನೆಯ ಕೆಲಸ ಕಾರ್ಯಗಳಿಗೆ ವಾಶ್ ಬೇಸಿನ್ ಅಗತ್ಯ. ವಾಶ್ ಬೇಸಿನ್ ಅನ್ನು ಉಪಯೋಗಿಸುವುದು ಮಾತ್ರವಲ್ಲ ಅದನ್ನು ಸ್ವಚ್ಛಗೊಳಿಸುವುದೂ ಅಷ್ಟೇ ಮುಖ್ಯ. ನಿಮ್ಮ ಮನೆಯ ಹೈಜೀನ್ ಮಟ್ಟವನ್ನು ಸುಧಾರಿಸಲು ವಾಶ್ ಬೇಸಿನ್‌ನನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯವಶ್ಯಕ.

ತಿಳಿ ಬಣ್ಣದ ಮಾರ್ಬಲ್‌ನಿಂದ ವಾಶ್ ಬೇಸಿನ್‌ ಅನ್ನು ನಿರ್ಮಿಸಿದ್ದರೆ ಅದನ್ನು ನಿಯಮಿತವಾಗಿ ತೊಳೆಯುವುದು ಮಹತ್ವಪೂರ್ಣ ವಿಷಯವಾಗಿದೆ. ನಿಮ್ಮ ವಾಶ್ ಬೇಸಿನ್ ಅನ್ನು ಇನ್ನಷ್ಟು ಚೆನ್ನಾಗಿ ಹೊಳೆಯುವಂತೆ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಅರಿತುಕೊಳ್ಳೋಣ. ಕೆಲವೊಂದು ಮಿತದರದ ವಸ್ತುಗಳ ಮೂಲಕ ನಿಮ್ಮ ವಾಶ್ ಬೇಸಿನ್ ಅನ್ನು ಸ್ವಚ್ಛಗೊಳಿಸಬಹುದು. ಬನ್ನಿ ಅದು ಹೇಗೆ ಎಂಬುದನ್ನು ಕೆಳಗಿನ ವಿಧಾನಗಳ ಮೂಲಕ ತಿಳಿದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ 16 ಆಹಾರಗಳು!

Tips To Clean Your Wash Basin

1.ಕ್ಲೀನರ್ ಬಳಸಿ:
ನಿಮ್ಮ ವಾಶ್ ಬೇಸಿನ್ ಅನ್ನು ಸ್ವಚ್ಛಮಾಡುವ ಕೆಲವೊಂದು ಕ್ಲೀನರ್‌ಗಳು ಲಭ್ಯವಿದೆ. ಬಾತ್‌ರೂಮ್ ಕ್ಲೀನರ್ ಅಥವಾ ಫಿನೋಯಿಲ್ ಅನ್ನು ಬಳಸಿ ಅದನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದು ನಿಮಗೆ ತಿಳಿದಿರಬೇಕು. ಸ್ವಲ್ಪ ಕ್ಲೀನರ್ ಅನ್ನು ಬೇಸಿನ್‌ಗೆ ಹಾಕಿ ಕೆಲವು ಸಮಯದವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ಬ್ರಶ್ ಬಳಸಿಕೊಂಡು ಅದನ್ನು ಉಜ್ಜಿ. ಕ್ಲೀನರ್ ಮೂಲಕ ಬೇಸಿನ್‌ಗೆ ಅಂಟಿಕೊಂಡ ಕೊಳಕು ನಿವಾರಣೆಯಾಗುತ್ತದೆ. ಬೇಸಿನ್ ತೊಳೆದುಕೊಳ್ಳಿ ಅಗತ್ಯವಿದ್ದಲ್ಲಿ ಈ ವಿಧಾನವನ್ನು ಪುನಃ ಅನುಸರಿಸಿ. ವಾರಕ್ಕೊಮ್ಮೆಯಾದರೂ ಈ ವಿಧಾನವನ್ನು ಅನುಸರಿಸಿ ನಿಮ್ಮ ವಾಶ್ ಬೇಸಿನ್ ಅನ್ನು ನೀವು ಸ್ವಚ್ಛಗೊಳಿಸಬೇಕು. ನಿಮ್ಮ ಅಡುಗೆ ಕೋಣೆಯ ಸಿಂಕ್ ಹಾಗೂ ವಾಶ್‌ರೂಮ್‌ಗೂ ಈ ವಿಧಾನವನ್ನು ಅನುಸರಿಸಬಹುದು.

2.ನೈಸರ್ಗಿಕ ವಿಧಾನವನ್ನು ಬಳಸಿ:
ನಿಮ್ಮ ಬೇಸಿನ್ ಅನ್ನು ತೊಳೆಯಲು ನೈಸರ್ಗಿಕ ವಿಧಾನಗಳಿದ್ದು ಇದರಿಂದ ನಿಮಗೂ ವೆಚ್ಚ ಕಡಿಮೆ ಹಾಗೂ ರೋಗಾಣು ಮುಕ್ತವಾಗಿರುತ್ತದೆ. ಲಿಂಬೆ ರಸವನ್ನು ಬಳಸಿಕೊಂಡು ಬೇಸಿನ್ ಸ್ವಚ್ಛಗೊಳಿಸಿ. ಲಿಂಬೆಯಲ್ಲಿರುವ ಏಸಿಡ್ ಕೊಳೆಯನ್ನು ಕಲೆಯನ್ನು ನಿವಾರಿಸುವುದರಿಂದ ಲಿಂಬೆ ರಸವನ್ನು ಬಳಸಬಹುದು. ಸ್ವಲ್ಪ ಲಿಂಬೆ ರಸವನ್ನು ಬೇಸಿನ್‌ಗೆ ಹಾಕಿ ಸ್ವಲ್ಪ ನಿಮಿಷಗಳ ನಂತರ ಅದನ್ನು ಬ್ರಶ್‌ನಲ್ಲಿ ತೊಳೆಯಿರಿ. ಇನ್ನಷ್ಟು ಉತ್ತಮ ಫಲಿತಾಂಶಕ್ಕಾಗಿ ಇದೇ ವಿಧಾನವನ್ನು ಆಗಾಗ್ಗೆ ಅನುಸರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ರೀತಿ ನಿಮ್ಮ ಗ್ಯಾಸ್ ಸ್ಟವ್ ಅನ್ನು ಫಳಫಳ ಹೊಳೆಯಿಸಿ!

3.ತೆಂಗಿನ ಚಿಪ್ಪು ಬಳಸಿ:
ತೆಂಗಿನ ಚಿಪ್ಪು ಅಥವಾ ಅದರ ಚೆಪ್ಪು ಬಳಸಿ ಬೇಸಿನ್ ಸ್ವಚ್ಛಗೊಳಿಸಿ. ನಿಮ್ಮ ವಾಶ್ ಬೇಸಿನ್‌ನ ಕೊಳೆಯನ್ನು ನಿವಾರಿಸಲು ತೆಂಗಿನ ಚೆಪ್ಪು ಉತ್ತಮ ಕ್ಲೀನರ್ ಆಗಿದೆ. ಸ್ವಲ್ಪ ಬೂದಿಯನ್ನು ತೆಗೆದುಕೊಂಡು ತೆಂಗಿನ ಸಿಪ್ಪೆ ಬಳಸಿ ಬೇಸಿನ್ ಸ್ವಚ್ಛಗೊಳಿಸಿ. ಬೇರೆ ವೆಚ್ಚದಾಯಕ ವಸ್ತುಗಳನ್ನು ಬಳಸದೇ ಮನೆಯಲ್ಲೇ ಸಿಗುವ ನೈಸರ್ಗಿಕ ವಿಧಾನವನ್ನು ಬಳಸಿ ಬೇಸಿನ್ ಅನ್ನು ಹೊಳಪುಗೊಳಿಸಿ.

4.ಬ್ಲೀಚಿಂಗ್ ಬಳಸಿ:
ಬೇಸಿನ್ ಹಳಸಿಗಟ್ಟಿದ್ದರೆ ಅದನ್ನು ತೊಳೆಯದೇ ದೀರ್ಘಸಮಯವಾಗಿರುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ರಾಸಾಯನಿಕ ಬ್ಲೀಚಿಂಗ್ ಪೌಡರ್ ಅನ್ನು ಬಳಸಿ ನಿಮ್ಮ ವಾಶ್ ಬೇಸಿನ್‌ನ ಹಳದಿ ಕಲೆಯನ್ನು ನಿವಾರಿಸಿ. ರಾಸಾಯನಿಕ ಬ್ಲೀಚ್‌ಗಳು ನಿಮ್ಮ ಬೇಸಿನ್‌ನ ಮುಂಚಿನ ಹೊಳಪನ್ನು ಮರಳಿ ತಂದುಕೊಡುತ್ತದೆ. ನಿಮ್ಮ ಬೇಸಿನ್ ಅನ್ನು ಸ್ವಚ್ಛಗೊಳಿಸುವುದೂ ಮಾತ್ರವಲ್ಲದೆ ಉತ್ತಮ ಸುವಾಸನೆಯನ್ನು ಈ ಬ್ಲೀಚಿಂಗ್ ಪೌಡರ್ ತಂದುಕೊಡುತ್ತದೆ.

5.ನಿಮ್ಮ ಬೇಸಿನ್‌ಗೆ ಡೆಟ್ಟಾಲ್ ಬಳಸಿ:
ಡೆಟ್ಟಾಲ್ ಅನ್ನು ಬಳಸಿ ಕೂಡ ನಿಮ್ಮ ಬೇಸಿನ್ ಅನ್ನು ನೀವು ಸ್ವಚ್ಛಗೊಳಿಸಬಹುದು. ನಿಮ್ಮ ಬೇಸಿನ್ ಅನ್ನು ಸುಲಭವಾಗಿ ತೊಳೆಯಲು ಇದು ಒಂದು ವಿಧಾನವಾಗಿದೆ. ನಿಮ್ಮ ಅಡುಗೆ ಕೋಣೆಯ ಸಿಂಕ್ ಮತ್ತು ಬಾತ್‌ರೂಮ್ ವಸ್ತುಗಳನ್ನೂ ಕೂಡ ಫಳಫಳಗೊಳಿಸಬಹುದು.

English summary

Tips To Clean Your Wash Basin

Wash basins are an essential bathroom and home accessory. They are in every home ussd for washing hands, face and so on.Washbasins and bathrooms need to look clean and good. They should be maintained well as it would mark the hygiene level of your house.
Story first published: Wednesday, April 2, 2014, 11:57 [IST]
X
Desktop Bottom Promotion