For Quick Alerts
ALLOW NOTIFICATIONS  
For Daily Alerts

ಮಣ್ಣಿನ ಮೂರ್ತಿ ಶುಚಿಗೊಳಿಸಲು ಸುಲಭ ಟಿಪ್ಸ್

By Hemanth P
|

ಮಣ್ಣಿನ ಮೂರ್ತಿಗಳಿಗೆ ತನ್ನದೇ ಆದ ಸೌಂದರ್ಯವಿರುತ್ತದೆ ಮತ್ತು ಭಾರತದಲ್ಲಿನ ಪ್ರತಿಯೊಬ್ಬರಿಗೂ ಮಣ್ಣಿನ ಮೂರ್ತಿಗಳು ಚಿರಪರಿಚಿತ. ಗಣೇಶ ಚತುರ್ಥಿ, ದುರ್ಗಾ ಪೂಜೆ ಸಮಯದಲ್ಲಿ ಮಣ್ಣಿನ ಮೂರ್ತಿಗಳ ಮಾರಾಟ ಉತ್ತುಂಗದಲ್ಲಿರುತ್ತದೆ. ಹಬ್ಬಗಳು ಹತ್ತಿರ ಬರುತ್ತಿರುವಂತೆ ಇಂತಹ ಮೂರ್ತಿಗಳ ನಿರ್ಮಿಸುವ ಕಾರ್ಯ ಆರಂಭವಾಗುತ್ತದೆ ಮತ್ತು ಇದು ರಾಷ್ಟ್ರದ ಹೆಚ್ಚಿನ ಕಲಾವಿದರಿಗೆ ಆದಾಯ ಗಳಿಕೆಯ ಸಮಯ.

ಕೆಲವೊಂದು ನಿರ್ದಿಷ್ಟ ದಿನ ಮೂರ್ತಿಯನ್ನು ಪೂಜಿಸಿದ ಬಳಿಕ ಅದನ್ನು ನದಿ ಅಥವಾ ಕರೆಯಲ್ಲಿ ವಿಸರ್ಜಿಸಲಾಗುತ್ತದೆ. ಇದು ಹಬ್ಬಗಳ ವಿಚಾರ ಮತ್ತು ಜನರು ಸಣ್ಣ ಮಣ್ಣಿನ ಮೂರ್ತಿಗಳನ್ನು ತೆಗೆದುಕೊಂಡು ಅದನ್ನು ಪ್ರಾರ್ಥನಾ ಮಂದಿರಲ್ಲಿಡುತ್ತಾರೆ.

ಮಣ್ಣಿನಿಂದ ಮಾಡಿರುವ ಮೂರ್ತಿಗಳಿಗೆ ಆಕರ್ಷಕ ಬಣ್ಣಗಳನ್ನು ನೀಡಲಾಗುತ್ತದೆ. ಮೂರ್ತಿಗಳು ಹಲವಾರು ಗಾತ್ರ ಮತ್ತು ವಿವಿಧ ಬೆಲೆಗಳಲ್ಲಿ ಸಿಗುತ್ತದೆ. ಈ ಮೂರ್ತಿಗಳನ್ನು ವಿಶೇಷ ಮಣ್ಣಿನಿಂದ ತಯಾರಿಸಲಾಗುತ್ತದೆ. ಸಾಂಪ್ರದಾಯದ ಪ್ರಕಾರ ಹಿಂದೆ ಜನರು ನದಿ ದಡದಿಂದ ಮಣ್ಣನ್ನು ತಂದು ಹಬ್ಬ ಬರುವ ಮುನ್ನಾ ದಿನ ಅದರಿಂದ ಮೂರ್ತಿಯನ್ನು ಮಾಡುತ್ತಿದ್ದರು. ಆದರೆ ಆ ದಿನಗಳು ಈಗಿಲ್ಲ. ಇಂದು ಎಲ್ಲವೂ ವ್ಯಾಪಾರವಾಗಿದೆ.

Tips To Clean Mud Idols

ನೀವು ಮಣ್ಣಿನ ಮೂರ್ತಿ ಖರೀದಿಸಿ ಅದನ್ನು ನಿಮ್ಮ ಪ್ರಾರ್ಥನಾ ಮಂದಿರಾ ಅಥವಾ ಅಲಂಕಾರಕ್ಕೆಂದು ಮನೆಯಲ್ಲಿ ಇಡಲು ನಿರ್ಧರಿಸಿದ್ದರೆ ಆಗ ನೀವು ಅದನ್ನು ಹೇಗೆ ಶುಚಿಗೊಳಿಸುವುದು ಮತ್ತು ನಿರ್ವಹಣೆ ಮಾಡುವುದು ಎಂದು ತಿಳಿದುಕೊಳ್ಳಬೇಕು. ಮೂರ್ತಿಗಳಲ್ಲಿ ಧೂಳು ಕುಳಿತುಕೊಳ್ಳುವುದು ಸಾಮಾನ್ಯ ಸಂಗತಿ. ಮಣ್ಣಿನ ಮೂರ್ತಿ ಶುಚಿಗೊಳಿಸಲು ಇಲ್ಲಿ ಕೆಲವೊಂದು ವಿಧಾನಗಳಿವೆ. ಶುಚಿಗೊಳಿಸುವ ಟಿಪ್ಸ್ ಮತ್ತು ಲಾಭಗಳನ್ನು ಓದಿ.

ನಿಮ್ಮ ಹಳೆಯ ಬ್ರಶ್‌ನ 8 ಪವಾಡ ಸದೃಶ ಕಾರ್ಯಗಳು

* ನೀವು ಮಾರ್ಬಲ್ ಮತ್ತು ಕಂಚಿನ ಮೂರ್ತಿಗಳನ್ನು ಶುಚಿಗೊಳಿಸಿದಂತೆ ಮಣ್ಣಿನ ಮೂರ್ತಿಯನ್ನು ಕೂಡ ಶುಚಿಗೊಳಿಸಬಹುದೆಂದು ಭಾವಿಸಿದ್ದರೆ ಆಗ ಈ ಯೋಚನೆಯನ್ನು ಬಿಟ್ಟುಬಿಡಿ. ಸೋಪು ಬಳಸಿ ಮಣ್ಣಿನ ಮೂರ್ತಿಯನ್ನು ಶುಚಿಗೊಳಿಸಲೇಬಾರದು. ಸೋಪು ಬಳಸುವುದರಿಂದ ಮಣ್ಣಿನ ಮೂರ್ತಿಯಲ್ಲಿರುವ ರಂಧ್ರಗಳನ್ನು ಬಂದ್ ಮಾಡಿದಂತೆ ಆಗಬಹುದು. ಹೀಗೆ ಮಾಡಬೇಡಿ.

* ಮಣ್ಣಿನ ಮೂರ್ತಿಗಳನ್ನು ಸ್ವಚ ಮಾಡಲು ಒಳ್ಳೆಯ ವಿಧಾನವೆಂದರೆ ಬ್ರಶ್ ಮತ್ತು ಬಿಸಿ ನೀರು ತೆಗೆದುಕೊಳ್ಳಿ. ಮೂರ್ತಿಯ ಎಲ್ಲಾ ಭಾಗವನ್ನು ಬ್ರಶ್ ನಿಂದ ಶುಚಿಗೊಳಿಸಿ. ಅವಸರ ಮಾಡುವುದು ಬೇಡ. ಬ್ರಶ್ ನ್ನು ತುಂಬಾ ನಯವಾಗಿ ಬಳಸಿ ಮತ್ತು ಮೂರ್ತಿಯ ಪ್ರತೀ ಭಾಗಗಳಿಗೂ ಬ್ರಶ್ ಹಾಕಿ. ಇದರಿಂದ ಹಿಡಿದಿರುವ ಧೂಳನ್ನು ತೆಗೆಯಲು ಸಾಧ್ಯ.

* ಮೂರ್ತಿಯಲ್ಲಿ ಗಾಢ ಕಲೆಗಳು ಇದ್ದರೆ ಆಗ ನೀವು ಬೇಕಿಂಗ್ ಸೋಡಾ ಬಳಸಬಹುದು. ಅಡುಗೆ ಸೋಡಾದಲ್ಲಿ ಅದ್ದಿ ಬಳಸಿ. ಇದು ಮಣ್ಣಿನ ಮೂರ್ತಿ ಶುಚಿಗೊಳಿಸುವ ಒಂದು ವಿಧಾನ.

* ಮೂರ್ತಿಯಲ್ಲಿ ಬೂಸ್ಟ್ ಅಂಟಿಕೊಂಡಿದ್ದರೆ ಆಗ ಅಡುಗೆ ಸೋಡಾ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಿ ಮೂರ್ತಿ ತೊಳೆಯಿರಿ. ಒಣಗಲು ಕೆಲವು ಕಾಲ ಸೂರ್ಯನ ಬೆಳಕಿನಡಿ ಇಡಿ. ಮಣ್ಣಿನ ಮೂರ್ತಿ ಶುಚಿಗೊಳಿಸಲು ಇದು ಒಂದು ಟಿಪ್ಸ್.

* ಮಣ್ಣಿನ ಮೂರ್ತಿಯನ್ನು ಶುಚಿಗೊಳಿಸಲು ನೀವು ಬ್ಲೀಚ್ ನ್ನು ಉಪಯೋಗಿಸಬಹುದು. ಹತ್ತು ಭಾಗ ನೀರು ಮತ್ತು ಒಂದು ಭಾಗ ಬ್ಲೀಚ್ ಸೇರಿಸಿ, ಮಣ್ಣಿನ ಮೂರ್ತಿಯಲ್ಲಿರುವ ಕಲೆಗಳನ್ನು ತೆಗೆಯಲು ಇದನ್ನು ಬಳಸಿ. ಇದು ಮಣ್ಣಿನ ಮೂರ್ತಿ ತೊಳೆಯಲು ತುಂಬಾ ಉಪಯೋಗಿ ಮತ್ತು ಮೂರ್ತಿಯನ್ನು ಶುಚಿಯಾಗಿಡಬಲ್ಲದು.

* ಮಣ್ಣಿನ ಮೂರ್ತಿಯಲ್ಲಿ ಉಪ್ಪಿನ ಅಂಶಗಳು ಕಾಣಿಸುತ್ತಿದ್ದರೆ ಆಗ ನೀವು ವಿನೇಗರ್ ಮತ್ತು ಆಲ್ಕೋಹಾಲ್ ನ್ನು ಬಳಸಿ, ಅದನ್ನು ಮೂರ್ತಿ ಮೇಲೆ ಸ್ಪ್ರೇ ಮಾಡಿ. ಇದು ಮೂರ್ತಿ ಸ್ವಚಗೊಳಿಸುವ ಒಂದು ವಿಧ. ಇದರ ಬಳಿಕ ಸೂರ್ಯನ ಬೆಳಕಿನಲ್ಲಿ ಒಣಗಲು ಬಿಡಿ.

* ಬಿಸಿಯಿಂದ ಮಣ್ಣಿನ ಮೂರ್ತಿಯನ್ನು ಶುಚಿಗೊಳಿಸಲು ಪ್ರಯತ್ನಿಸಿ. ಇದು ಕೂಡ ಮಣ್ಣಿನ ಮೂರ್ತಿ ಶುಚಿಗೊಳಿಸುವ ಮತ್ತೊಂದು ವಿಧಾನ

* ಮೂರ್ತಿ ಶುಚಿ ಮತ್ತು ಒಣಗಿದೆ ಎಂದು ನಿಮಗನಿಸಿದರೆ ಆಗ ಬ್ರಶ್ ನಿಂದ ಸ್ವಚಗೊಳಿಸಿ. ಇದನ್ನು ಓವನ್ ನಲ್ಲಿಡಬಹುದು. ಇದು ಕೂಡ ಶುಚಿಗೊಳಿಸುವ ವಿಧಾನ.

* ನೀವು ಪಾಲಿಸುವ ಯಾವುದಾದರೂ ಟಿಪ್ಸ್ ಬಳಿಕ ಮೂರ್ತಿ ಸರಿಯಾಗಿ ಒಣಗಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಬಿಸಿಯಲ್ಲಿಟ್ಟ ಬಳಿಕ ಸ್ವಲ್ಪ ತಣ್ಣಗಾಗಲು ಬಿಡಿ. ಬಿಸಿಯಲ್ಲೇ ಇರುವಾಗ ಮೂರ್ತಿಯನ್ನು ತೆಗೆದರೆ ಅದು ಬಿರುಕು ಬಿಡಬಹುದು.

* ಮೂರ್ತಿ ಸರಿಯಾದ ಜಾಗ ಮತ್ತು ಉಷ್ಣಾಂಶದಲ್ಲಿ ಇಡಲಾಗಿದೆಯಾ ಎಂದು ನೋಡಿ. ಧೂಳು ಮೆತ್ತಿಕೊಳ್ಳದಂತಹ ಸ್ಥಳದಲ್ಲಿ ಈ ಮೂರ್ತಿ ಇಡಿ. ಮೂರ್ತಿ ಸ್ವಚಗೊಳಿಸುವಾಗ ಎಚ್ಚರಿಕೆ ವಹಿಸಿ. ಧೂಳನ್ನು ತೆಗೆಯಲು ನೀವು ಮೆತ್ತಗಿನ ಬಟ್ಟೆಯನ್ನು ಬಳಸಬಹುದು. ಶುಚಿಗೊಳಿಸುವ ಈ ಟಿಪ್ಸ್‌ನ್ನು ಪಾಲಿಸಬೇಕು.

English summary

Tips To Clean Mud Idols

Mud idols are a thing of beauty and it is nothing new to a person living in India. Ganesh Chathurthi , durga pooja every year witnesses the peak sale of mud idols.
Story first published: Saturday, June 7, 2014, 16:36 [IST]
X
Desktop Bottom Promotion