For Quick Alerts
ALLOW NOTIFICATIONS  
For Daily Alerts

ಈ ವಿಧಾನದಿಂದ ತಾಮ್ರದ ಪಾತ್ರೆಯನ್ನು ಫಳಫಳ ಹೊಳೆಯಿಸಿ

|

ಭಾರತೀಯ ಮನೆಗಳಲ್ಲಿ ತಾಮ್ರದ ಪಾತ್ರೆಯನ್ನು ಹೆಚ್ಚು ಬಳಸುತ್ತಾರೆ. ಈ ಪಾತ್ರಯನ್ನು ತೊಳೆದಿಡುವ ಕೆಲಸ ತುಂಬಾ ಪ್ರಯಾಸಕರವಾಗಿರುತ್ತದೆ ಮತ್ತು ಜೀವನದಲ್ಲಿ ಇದರ ಅನುಭವ ನಿಮಗೆ ಖಂಡಿತ ಉಂಟಾಗಿರುತ್ತದೆ. ನಿರಂತರ ಬಳಕೆ ಮತ್ತು ಗಾಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ತಾಮ್ರದ ಪಾತ್ರೆ ಅದರ ಹೊಳಪನ್ನು ಕಳೆದುಕೊಂಡು ಕಪ್ಪಾಗುತ್ತದೆ.

ಮಾರುಕಟ್ಟೆಯಲ್ಲಿ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸುವ ಕೆಲವೊಂದು ಸಾಮಾಗ್ರಿಗಳು ಲಭ್ಯವಿವೆ. ಆದರೆ ಮಾರುಕಟ್ಟೆ ಉತ್ಪನ್ನಗಳನ್ನು ಸೋಲಿಸುವ ಕೆಲವೊಂದು ಸಾಮಾಗ್ರಿಗಳು ನಮ್ಮ ಮನೆಯಲ್ಲೇ ಇದ್ದು ಅದರಿಂದ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು ಮತ್ತು ಪಾತ್ರೆಯನ್ನು ಹೊಳೆಯಿಸಬಹುದು.

ನಿಮ್ಮ ತಾಮ್ರದ ಪಾತ್ರೆಗೆ ಹಾನಿ ಉಂಟುಮಾಡದ ಮತ್ತು ಅದರಲ್ಲಿ ಹಾಕಿಟ್ಟ ಆಹಾರ ಪದಾರ್ಥಗಳು ಕೆಡದಂತೆ ನಾವು ಮಾರುಕಟ್ಟೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವುದನ್ನು ತೆಗೆದುಕೊಳ್ಳಬೇಕು. ಆದರೆ ನೈಸರ್ಗಿಕವಾಗಿರುವ ನಮ್ಮ ಮನೆಯ ಅಡುಗೆ ಕೋಣೆಯಲ್ಲೇ ದೊರಕುವ ವಸ್ತುಗಳು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇವುಗಳು ನಿಮ್ಮ ತಾಮ್ರದ ಪಾತ್ರೆಯನ್ನು ಹೊಸದರಂತೆ ಹೊಳೆಯಿಸುತ್ತವೆ.

Tips To Clean Copper Vessels At Home

ಮೊಟ್ಟೆ ವಾಸನೆಯನ್ನು ಈ ನಾಲ್ಕು ವಿಧಾನಗಳಿಂದ ತೆಗೆಯಿರಿ

*ವಿನೇಗರ್ ಮತ್ತು ಉಪ್ಪು:
ವಿನೇಗರ್ ಮತ್ತು ಉಪ್ಪಿನ ಮಿಶ್ರಣವನ್ನು ತಾಮ್ರ ಪಾತ್ರೆ ತೊಳೆಯಲು ಬಳಸುತ್ತಾರೆ. ಇದನ್ನು ಮಿಶ್ರ ಮಾಡಿಕೊಂಡು ತಾಮ್ರದ ಪಾತ್ರೆಯ ಮೇಲೆ ಅದರ ಕೊಳೆ ಹೋಗುವವರೆಗೆ ಉಜ್ಜಿಕೊಳ್ಳಿ. ತಾಮ್ರದಿಂದ ಉತ್ಕರ್ಷಣ ಅಂಶಗಳನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

*ಲಿಂಬೆ:
ಲಿಂಬೆಯ ಹೋಳಿನಿಂದ ನಿಮ್ಮ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಲಿಂಬೆ ಹೋಳನ್ನು ತುಂಡರಿಸಿ ಮತ್ತು ತಾಮ್ರದ ಪಾತ್ರೆಯ ಮೇಲೆ ಅದನ್ನು ಉಜ್ಜಿ. ನೀರಿನಿಂದ ತಾಮ್ರದ ಪಾತ್ರೆಯನ್ನು ಚೆನ್ನಾಗಿ ತೊಳೆದು ಒಣಗಿಸಿ. ಇದು ನಿಮ್ಮ ತಾಮ್ರದ ಪಾತ್ರೆಯನ್ನು ಸ್ವಚ್ಛವಾಗಿ ಇರಿಸುತ್ತದೆ.

*ಲಿಂಬೆ ಮತ್ತು ಉಪ್ಪು:
ಲಿಂಬೆಯ ರಸಕ್ಕೆ ಉಪ್ಪು ಸೇರಿಸಿ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದನ್ನು ಪಾತ್ರೆಗೆ ಚೆನ್ನಾಗಿ ಉಜ್ಜಿ ನಂತರ ನೀರಿನಲ್ಲಿ ಅದನ್ನು ತೊಳೆಯಿರಿ.

ಈ ವಿಧಾನದಿಂದ ವಾಶ್‌ಬೇಸಿನ್ ಅನ್ನು ಪಳಪಳಗೊಳಿಸಿ

*ವಿನೇಗರ್ ಮತ್ತು ಹಿಟ್ಟು:
ಒಂದು ಸ್ಪೂನ್‌ನಷ್ಟು ಉಪ್ಪು ಹಾಗೂ ಒಂದು ಕಪ್‌ನಷ್ಟು ವಿನೇಗರ್ ಅನ್ನು ಚೆನ್ನಾಗಿ ಮಿಶ್ರ ಮಾಡಿ. ನಂತರ ಅದಕ್ಕೆ ಸ್ವಲ್ಪ ಹಿಟ್ಟನ್ನು ಸೇರಿಸಿ ಅದನ್ನು ಪೇಸ್ಟ್‌ನಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ಹದಿನೈದು ನಿಮಿಷಗಳ ಕಾಲ ಪಾತ್ರೆಯಲ್ಲಿ ಇರುವಂತೆ ನೋಡಿಕೊಳ್ಳಿ. ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದು ಪಾಲಿಶ್ ಮಾಡಿ.

*ಸಫಾಮಿಕ್ ವಿಧಾನ:
ಸಲ್ಫಾಮಿಕ್ ಏಸಿಡ್ ಅನ್ನು ಬಳಸಿಕೊಂಡು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದು ಆಕ್ಸಿಡೈಝ್ ಮತ್ತು ಟಾರ್ನಿಶ್ ಆಗಿರುವುದರಿಂದ ತಾಮ್ರದ ಪಾತ್ರಯನ್ನು ಸ್ವಚ್ಛಗೊಳಿಸುತ್ತದೆ. ಆದರೆ ತಾಮ್ರ ಪಾತ್ರೆ ಬಿಟ್ಟು ಉಳಿದ ಪಾತ್ರೆಗಳನ್ನು ಇದರಲ್ಲಿ ತೊಳೆದರೆ ಇದು ಪ್ರತಿರೋಧ ಗುಣವನ್ನು ವ್ಯಕ್ತಪಡಿಸಬಹುದು.

*ಬೇಕಿಂಗ್ ಸೋಡಾ:
ಬೇಕಿಂಗ್ ಸೋಡಾವನ್ನು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಲು ಒಂದು ಉತ್ತಮ ವಿಧಾನವೆಂದು ಪರಿಗಣಿಸಲಾಗುತ್ತದೆ. ಬೇಕಿಂಗ್ ಸೋಡಾ ಹಾಗೂ ಉಪ್ಪು ಬೆರೆಸಿ ಇದನ್ನು ಮಿಶ್ರ ಮಾಡಿಕೊಂಡು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಲು ಇದೊಂದು ಪರಿಣಾಮಕಾರಿ ವಿಧಾನವಾಗಿದೆ.

*ಜಾಗರೂಕರಾಗಿರಿ:
ಹೆಚ್ಚಿನ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸುವ ವಿಧಾನವು ಪಾತ್ರೆಗೆ ಹಾನಿಯನ್ನು ಉಂಟುಮಾಡುತ್ತವೆ. ಆದ್ದರಿಂದ ಬ್ರಶ್‌ಗಳನ್ನು ಬಳಸುವಾಗ ಪಾತ್ರೆಗೆ ಹಾನಿಯಾಗದಂತೆ ನೋಡಿಕೊಳ್ಳಿ. ಹಾನಿಯಾಗದ ಸ್ವಚ್ಛಕಗಳನ್ನು ಬಳಸಿ ಪಾತ್ರೆಯನ್ನು ತೊಳೆಯಿರಿ.

English summary

Tips To Clean Copper Vessels At Home

Copper vessels are widely used in Indian kitchen. You might have experienced the difficulty in cleaning those copper vessels at least once in your life. Copper vessels darken over time with constant use or simply by the exposure to air.
X
Desktop Bottom Promotion