For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯಲ್ಲಿ ಹೆಚ್ಚು ಕೀಟಗಳು ಆವರಿಸಿರುವ ಸ್ಥಳಗಳು

By Hemanth P
|

ಸೂಕ್ಷ್ಮಾಣುಜೀವಿಗಳು, ಬ್ಯಾಕ್ಟೀರಿಯಾ ಮತ್ತು ವೈರಸ್ ನ್ನು ಬರಿಗಣ್ಣಿನಿಂದ ಪತ್ತೆ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮಾಣುಜೀವಿಗಳು ನಮ್ಮ ಸುತ್ತ ಎಲ್ಲೆಂದರಲ್ಲಿ ಇರುತ್ತವೆ. ನಮ್ಮ ಮನೆಯ ಒಳಗಡೆಯೂ ಇಂತಹ ಸುಕ್ಷ್ಮಾಣುಜೀವಿಗಳಿವೆ. ನಾವು ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತೇವೆ ಮತ್ತು ಡಿಟರ್ಜೆಂಟ್ ಮತ್ತು ನೆಲ ಒರೆಸುವ ಕ್ಲೀನರ್ ಗಳಿಂದ ಮನೆಯಲ್ಲಿ ಸೂಕ್ಷ್ಮಾಣುಜೀವಿ ಉಂಟುಮಾಡುವಂತಹ ವಸ್ತುಗಳನ್ನು ತೆಗೆಯುತ್ತೇವೆ.

ವೈಯಕ್ತಿಕವಾಗಿ ನೈರ್ಮಲ್ಯದ ಹವ್ಯಾಸಗಳಾದ ಏನಾದರೂ ತಿನ್ನುವ ಮೊದಲು ನಾವು ಕೈ ತೊಳೆದುಕೊಳ್ಳುವುದು, ಶೌಚಾಲಯಕ್ಕೆ ಹೋದ ಬಳಿಕ ಕೈ ತೊಳೆಯುವುದು, ಕೆಮ್ಮು ಅಥವಾ ಶೀನು ಬಂದಾಗ ನ್ಯಾಪ್ಕಿನ್ ಬಳಸುವುದು ಇತ್ಯಾದಿ. ನಮ್ಮ ಮನೆಯನ್ನು ನಿರ್ವಹಿಸಲು ಮತ್ತು ಸೂಕ್ಷ್ಮಾಣು ಜೀವಿಗಳನ್ನು ದೂರವಿಡಲು ಇವು ಕೆಲವೊಂದು ಆರೋಗ್ಯಕರ ಹವ್ಯಾಸಗಳು. ಎಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ನಮ್ಮ ಮನೆಯಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದೇ ಇರುತ್ತವೆ. ಇಂತಹ ಸೂಕ್ಷ್ಮಾಣು ಜೀವಿಗಳು ತಾವು ಮುತ್ತಿಕೊಳ್ಳಬಹುದಾದ ಮತ್ತು ಕ್ಲೀನರ್ ಹಾಗೂ ರಾಸಾಯನಿಕಗಳಿಂದ ತಪ್ಪಿಸಿಕೊಳ್ಳಬಹುದಾದ ಸ್ಥಳಗಳನ್ನು ಹುಡುಕುತ್ತವೆ.

ಮನೆಯಲ್ಲಿ ಸೂಕ್ಷ್ಮಾಣುಜೀವಿಗಳು ಮುತ್ತಿಕೊಳ್ಳಬಹುದಾದ ಹಲವಾರು ಸ್ಥಳಗಳಿವೆ. ಸೂಕ್ಷ್ಮಾಣುಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಉಂಟುಮಾಡುವಂತಹ ರೋಗಗಳಿಗೆ ಕಾರಣವಾಗುವಂತಹ ಇಂತಹ ಸ್ಥಳಗಳ ಬಗ್ಗೆ ಗಮನಹರಿಸಬೇಕಾಗಿದೆ.

1. ಒಗೆಯದಿರುವ ಬಟ್ಟೆಗಳು

1. ಒಗೆಯದಿರುವ ಬಟ್ಟೆಗಳು

ಕೆಲವೊಮ್ಮೆ ನಾವು ನಿಯಮಿತವಾಗಿ ಬಟ್ಟೆಗಳನ್ನು ಒಗೆಯುವುದಿಲ್ಲ. ಕೋಣೆ ಅಥವಾ ಸ್ನಾನಗೃಹದ ಮೂಲೆಯಲ್ಲಿ ಬಟ್ಟೆಗಳು ಬಿದ್ದಿರುತ್ತದೆ. ಈ ಬಟ್ಟೆಗಳು ಸೂಕ್ಷ್ಮಾಣುಜೀವಿಗಳು ಮತ್ತು ಬ್ಯಾಕ್ಟೀರಿಯಾದಿಂದ ಮುತ್ತಿಕೊಂಡಿರುತ್ತದೆ. ನಾವು ಬಳಸಿದ ಬಟ್ಟೆಗಳು ಬೆವರು ಮತ್ತು ಕೊಳೆಯಿಂದ ಕೂಡಿರುತ್ತದೆ. ಈ ಸ್ಥಳವು ಸೂಕ್ಷ್ಮಾಣು ಜೀವಿಗಳಿಗೆ ಬೆಳೆಯಲು ಮತ್ತು ದ್ವಿಗುಣಗೊಳ್ಳಲು ನೆರವಾಗುತ್ತದೆ. ಒಗೆಯದ ಬಟ್ಟೆ ಇರುವ ಸ್ಥಳ ಮತ್ತು ಲಾಂಡ್ರಿ ಸೂಕ್ಷ್ಮಾಣು ಜೀವಿಗಳು ಮುತ್ತಿಕೊಳ್ಳುವ ಸ್ಥಳವಾಗಿದೆ. ಬಟ್ಟೆಗಳಲ್ಲಿ ತುಂಬಾ ಕೊಳೆ ಮತ್ತು ಬೆವರು ಇದ್ದರೆ ಆಗ ಅವುಗಳನ್ನು ನಿಯಮಿತವಾಗಿ ಒಗೆಯುವುದು ಒಳ್ಳೆಯದು.

2. ಶೌಚಾಲಯ ಮತ್ತು ಸ್ನಾನಗೃಹ

2. ಶೌಚಾಲಯ ಮತ್ತು ಸ್ನಾನಗೃಹ

ಶೌಚಾಲಯ, ಸ್ನಾನಗೃಹವನ್ನು ಸ್ವಚ್ಛಗೊಳಿಸಲು ನಾವು ಹಲವಾರು ರೀತಿಯ ಕ್ಲೀನರ್ ಮತ್ತು ರಾಸಾಯನಿಕಗಳನ್ನು ಬಳಸುತ್ತೇವೆ. ಆದರೆ ಇದು ಸಾಕಾಗುವುದಿಲ್ಲ. ಕೆಲವೊಂದು ಮೂಲೆಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇರುತ್ತದೆ ಮತ್ತು ಅವು ಸ್ವಚ್ಛಗೊಳ್ಳುವುದಿಲ್ಲ. ಟವೆಲ್ ಇಂತಹ ಸೂಕ್ಷ್ಮಾಣುಜೀವಿಗಳಿರುವ ಒಂದು ಜಾಗ. ಟಾಯ್ಲೆಟ್ ಸೀಟ್ ಕೂಡ ಸೂಕ್ಷ್ಮಾಣು ಜೀವಿಗಳ ಆವಾಸಸ್ಥಾನ, ಸೂಕ್ಷ್ಮಾಣುಜೀವಿಗಳು ಮತ್ತು ಸೋಂಕನ್ನು ತಡೆಯಲು ಟಾಯ್ಲೆಟ್ ಸೀಟ್ ನ್ನು ತುಂಬಾ ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಟಾಯ್ಲೆಟ್, ಸ್ನಾನಗೃಹಗಳು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಜೀವಿಗಳಿಂದ ಬರುವ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛವಾಗಿಡಿ. ನೀವು ಟಾಯ್ಲೆಟ್ ಬಳಸಿದ ಬಳಿಕ ಫ್ಲಶ್ ಮಾಡಿ ಅಥವಾ ಚೆನ್ನಾಗಿ ನೀರು ಹಾಕಿ.

3. ದಿನ ಬಳಕೆಯ ಟೂಥ್ ಬ್ರಶ್

3. ದಿನ ಬಳಕೆಯ ಟೂಥ್ ಬ್ರಶ್

ಟೂಥ್ ಬ್ರಶ್ ಸೂಕ್ಷ್ಮಾಣು ಜೀವಿಗಳು ಆವರಿಸಲು ಒಂದು ಒಳ್ಳೆಯ ಸ್ಥಳ ಅಥವಾ ವಸ್ತು. ಟೂಥ್ ಬ್ರಶ್ ನ್ನು ನಾವು ನೇರವಾಗಿ ಬಳಸುತ್ತೇವೆ ಮತ್ತು ಇದರಲ್ಲಿ ಸೂಕ್ಷ್ಮಾಣುಜೀವಿಗಳಿದ್ದರೆ ಆಗ ಅವು ನಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ನೀವು ಬಳಸಿದ ಬಳಿಕ ಟೂಥ್ ಬ್ರಶ್ ನ್ನು ಮುಚ್ಚಿಡಿ. ಅದು ಅಲ್ಲಿ ಇಲ್ಲಿ ಬಿದ್ದಿರುವಂತೆ ಇಡಬೇಡಿ. ಟೂಥ್ ಬ್ರಶ್ ಬಳಸುವ ಮೊದಲು ಅದನ್ನು ತೊಳೆಯಿರಿ ಹಾಗೂ ಬಳಸಿದ ಬಳಿಕ ಕೂಡ ತೊಳೆಯಿರಿ. ಟೂಥ್ ಬ್ರಶ್ ನ್ನು ತುಂಬಾ ಸ್ವಚ್ಛವಾಗಿ ಮುಚ್ಚಿಡಿ.

4. ಉಪಕರಣ ಹಾಗೂ ಸ್ಥಳಗಳನ್ನು ಸ್ವಚ್ಛಗೊಳಿಸುವುದು

4. ಉಪಕರಣ ಹಾಗೂ ಸ್ಥಳಗಳನ್ನು ಸ್ವಚ್ಛಗೊಳಿಸುವುದು

ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಮತ್ತು ಇತರ ಕೆಲಸಗಳಿಗೆ ಉಪಯೋಗಿಸಲ್ಪಡುವ ಮನೆಯ ಬಾಲ್ಕನಿಯನ್ನು ಸೂಕ್ಷ್ಮಾಣು ಜೀವಿಗಳು ಆವರಿಸಿರುತ್ತದೆ. ಕೊಳೆಯಾದ ಬಟ್ಟೆ ಮತ್ತು ಪಾತ್ರೆಗಳಲ್ಲಿರುವ ಸೂಕ್ಷ್ಮಾಣುಜೀವಿಗಳು ಮತ್ತು ಬ್ಯಾಕ್ಟೀರಿಯಾ ಆ ಪ್ರದೇಶವನ್ನು ಆವರಿಸುತ್ತದೆ. ಶುಚಿಗೊಳಿಸಲು ಉಪಯೋಗಿಸುವಂತಹ ಸೋಪ್ ಸ್ಪಂಜ್, ಬಟ್ಟೆ ಒಗೆಯಲು ಬಳಸುವ ಬ್ರಶ್ ಇತ್ಯಾದಿ ಸೂಕ್ಷ್ಮಾಣು ಮತ್ತು ಬ್ಯಾಕ್ಟೀರಿಯಾದಿಂದ ಆವರಿಸಿರುತ್ತದೆ. ಈ ಸಲಕರಣೆಗಳನ್ನು ಬಳಸಿದ ಬಳಿಕ ಸರಿಯಾಗಿ ಶುಚಿಗೊಳಿಸಬೇಕು. ಸೂಕ್ಷ್ಮಾಣು, ಬ್ಯಾಕ್ಟೀರಿಯಾಗಳಿಗೆ ವಾಸಸ್ಥಾನವಾಗಿರುವ ಈ ಪ್ರದೇಶವನ್ನು ರಾಸಾಯನಿಕಯುಕ್ತ ಕ್ಲೀನರ್ ಗಳಿಂದ ಶುಚಿಗೊಳಿಸಬೇಕು.

5. ಕಸದಬುಟ್ಟಿ

5. ಕಸದಬುಟ್ಟಿ

ಮನೆಯಲ್ಲಿ ಕಸದಬುಟ್ಟಿ ಇರುವ ಪ್ರದೇಶವು ಸೂಕ್ಷ್ಮಾಣುಜೀವಿಗಳಿಂದ ತುಂಬಿರುತ್ತದೆ. ಕಸದ ತೊಟ್ಟಿಯಲ್ಲಿರುವ ಕಸವು ಬ್ಯಾಕ್ಟೀರಿಯಾ, ಸೂಕ್ಷ್ಮಾಣುಜೀವಿಗಳಿಗೆ ಬೆಳೆಯಲು ಒಳ್ಳೆಯ ಸ್ಥಳ. ಇದರಿಂದ ನಿಯಮಿತವಾಗಿ ಕಸವನ್ನು ಹೊರಗೆ ಹಾಕಿ, ಕಸದಬುಟ್ಟಿ ಸುತ್ತಲಿನ ಪ್ರದೇಶ ಸ್ವಚ್ಛ ಹಾಗೂ ಯಾವುದೇ ಕಸ ಇರದಂತೆ ನೋಡಿಕೊಳ್ಳಿ. ಕಸದಬುಟ್ಟಿ ಯಾವಾಗಲೂ ಮುಚ್ಚಿರಲಿ ಮತ್ತು ಅದನ್ನು ನಿಯಮಿತವಾಗಿ ಸ್ವಚ್ಛಮಾಡುತ್ತಾ ಇರಿ.

English summary

The most infested places in your home

Germs are small bacteria and viruses that cannot be detected by naked eye. There are germs everywhere around us. There are germs in our house as well.
Story first published: Saturday, January 4, 2014, 14:58 [IST]
X
Desktop Bottom Promotion