For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಉಡುಗೆಗಳನ್ನು ಸುರಕ್ಷಿತವಾಗಿ ಶೇಖರಿಸಲು ಸರಳ ಸಲಹೆ

By Viswanath S
|

ಭಾರತದಲ್ಲಿ ಚಳಿಗಾಲವು ಆರಂಭವಾಗುತ್ತಿದಂತೆಯೇ, ವಾರ್ಡ್‌ರೋಬ್‌ನಲ್ಲಿ ನಿಮ್ಮನ್ನು ಬೆಚ್ಚಗಿಡುವ ಉಡುಗೆಗಳನ್ನು ಮರುಜೋಡಿಸಲು ಈಗ ಸರಿಯಾದ ಸಮಯ. ಈ ಲೇಖನದಲ್ಲಿ ನಿಮ್ಮ ಚಳಿಗಾಲದಲ್ಲಿ ಧರಿಸುವ ಉಡುಗೆಗಳನ್ನು ಅಂದರೆ ಸ್ವೆಟ್ಟರ್ ಮತ್ತು ಕೋಟುಗಳನ್ನು ಹೇಗೆ ಸುಸಜ್ಜಿತವಾಗಿ ಜೋಡಿಸಿಡಬೇಕೆಂದು ಹೇಳುತ್ತೇವೆ. ನಮ್ಮಲ್ಲಿ ಅನೇಕರು ಆಯಾ ಋತುವಿಗೆ ಸಮಯೋಚಿತವಾಗಿ ಬಟ್ಟೆಗಳನ್ನು ವಾರ್ಡ್‌ರೋಬ್‌ನಲ್ಲಿ ನಿರ್ವಹಿಸಲು ಬೇಕಾದ ಗಮನಕೊಡುವುದಿಲ್ಲ.

ಹೀಗೆ ಮಾಡಿದಾಗ ಸಹಜವಾಗಿ ಬಟ್ಟೆಗಳೆಲ್ಲ ಅಸ್ತವ್ಯಸ್ತವಾಗಿರುತ್ತದೆ. ವಾರ್ಡ್‌ರೋಬ್‌ನ್ನು ಸ್ವಚ್ಛಗೊಳಿಸಿ ಚಳಿಗಾಲದ ಉಡುಗೆಗಳನ್ನು ಮರುಜೋಡಿಸುವುದು ಒಂದು ಪ್ರಯಾಸದ ಕೆಲಸ ಎಂದೆನಿಸುತ್ತದೆ. ಆದರೆ ಇಲ್ಲಿ ಕೊಟ್ಟಿರುವ ಸಲಹೆಗಳಿಂದ ಉತ್ತಮ ರೀತಿಯಲ್ಲಿ ಜೋಡಿಸಿಕೊಳ್ಳಲು ಪ್ರಯತ್ನ ಮಾಡಿದರೆ ನಿಮ್ಮ ವಾರ್ಡ್‌ರೋಬ್‌ನ್ನು ಬಹಳ ಕಡಿಮೆ ಸಮಯದಲ್ಲೇ ನೀವು ಜೋಡಿಸಬಹುದಾಗಿದೆ.

Simple Ways To Store Your Winter Clothes

ನಮ್ಮ ಪೋಷಕರು ಚಳಿಗಾಲದ ಉಡುಗೆಗಳನ್ನು ಶೇಖರಿಸಿಡಲು ಕೆಲವು ತಂತ್ರಗಳನ್ನು ಅಭ್ಯಾಸಮಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ಅವರು ಚಳಿಗಾಲದಲ್ಲಿ ಹಾಕಿಕೊಳ್ಳುವ ಸ್ವೆಟ್ಟರ್‌ಗಳಲ್ಲಿ ಉಣ್ಣೆಯ ಬಟ್ಟೆಗಳನ್ನು ಗಾತ್ರದ ಮತ್ತು ಬಣ್ಣಗಳ ಪ್ರಕಾರ ವಿಂಗಡಿಸಿ ಮತ್ತು ಕ್ರಿಮಿಕೀಟಗಳನ್ನು ದೂರವಿಡಲು ನೆಫ್ತಾಲೀನ್ ಬಾಲ್ಗಳನ್ನು ಅವುಗಳ ಮಧ್ಯೆ ಇಡುತ್ತಿದ್ದರು. ಹೀಗೆ ಮಾಡುವುದು ಹೆಚ್ಚಾಗಿ ಎಲ್ಲರೂ ಅನುಸರಿಸಿ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ವಿಧಾನಗಳು. ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ

ಆದಾಗ್ಯೂ ಕೆಲವು ಹೆಚ್ಚು ಸರಳ ಶೇಖರಣಾ ಕಲ್ಪನೆಗಳ ಸಹಾಯದಿಂದ ನಿಮ್ಮ ಚಳಿಗಾಲದ ಉಡುಗೆಗಳನ್ನು ಅಚ್ಚುಕಟ್ಟಾಗಿ, ಸ್ವಚ್ಛ ಮತ್ತು ವಾಸನೆ ಮುಕ್ತ ರೀತಿಯಲ್ಲಿ ಇಡಬಹುದು. ಚಳಿಗಾಲದ ಉಡುಗೆಗಳನ್ನು ಸರಿಯಾಗಿ ಸಮಸ್ಯೆ ಇಲ್ಲದ ರೀತಿಯಲ್ಲಿ ನಿರ್ವಹಣೆಮಾಡುವುದೇ ಇದರ ಉದ್ದೇಶ. ಆದ್ದರಿಂದ ಇನ್ನೂ ಹೆಚ್ಚು ಸಮಯ ಕಳೆಯದೇ ಚಳಿಗಾಲದ ಉಡುಗೆಗಳನ್ನು ಹೇಗೆ ಕಾಪಾಡಿಕೊಂಡು ಬರಬಹುದು ಎಂಬ ಸಲಹೆಗಳಿಗೆ ಮುಂದೆ ಓದಿ.

ಚಳಿಗಾಲದಲ್ಲಿ ಉಡದಿರುವ ಬಟ್ಟೆಗಳಿಗೆ ವಿಶ್ರಾಂತಿ ಕೊಡಿ
ಚಳಿಗಾಲದ ತಂಪಾಗಿರುವ ಕಾಲದಲ್ಲಿ ಉಡದಿರುವ ಬಟ್ಟೆಗಳನ್ನು ತೆಗೆದು ದೂರವಿಡಿ. ಹೀಗೆ ಮಾಡುವುದರಿಂದ ನಿಮ್ಮ ಅಲಮಾರಿನಲ್ಲಿ ಹೆಚ್ಚು ಜಾಗ ದೊರೆಯುವುದಕ್ಕೆ ಸಹಾಯವಾಗುವುದಲ್ಲದೆ ಚಳಿಗಾಲದಲ್ಲಿ ಉಡುವ ದೈನಂದಿನ ಉಡುಗೆಗಳನ್ನು ಹುಡುಕುವುದು ಸುಲಭವಾಗುತ್ತದೆ. ಚಳಿಗಾಲದ ಉಡುಗೆಗಳನ್ನು ಸಂಪೂರ್ಣವಾಗಿ ಪ್ರತ್ಯೇಕ ಅಲಮಾರಿನಲ್ಲಿಡಬಹುದು ಇಲ್ಲದಿದ್ದರೆ ಇರುವ ಅಲಮಾರಿನ ಮೇಲಿನ ಗೂಡನ್ನು ಈ ಬಟ್ಟೆಗಳಿಗೇ ಎಂದು ಮೀಸಲಾಗಿಡಬಹುದು.

ವರ್ಗೀಕರಿಸಿ
ಚಳಿಗಾಲದ ದೈನಂದಿನ ಉಡುಗೆಗಳನ್ನು ಬಣ್ಣ, ಸ್ವೆಟ್ಟರ್ಗಳು, ಮೇಲಿನ ಉಡುಗೆ, ಕೋಟುಗಳು, ಪ್ಯಾಂಟ್ಗಳು ಮತ್ತು ಇತರ ಪೂರಕಗಳು ಈ ರೀತಿಯಲ್ಲಿ ವ್ಯವಸ್ಥೆ ಮಾಡಿ. ಇದು ಚಳಿಗಾಲದ ಉಡುಗೆಗಳನ್ನು ವಾರ್ಡ್‌ರೋಬ್‌ನಲ್ಲಿ ನಿರ್ವಹಣೆಮಾಡುವುದು ಅತ್ಯಂತ ಸುಲಭವಾದ ಮಾರ್ಗ. ಉಡುಗೆಗಳ ಶೈಲಿಯನ್ನು ಅನುಸರಿಸಿಕೊಂಡು ಸಹಾ ಒಂದು ಸಮೂಹದ ವ್ಯವಸ್ಥೆಯಲ್ಲಿಡಬಹುದು. ಫ್ಯಾಷನ್ ಉಡುಗೆಗಳಾದ ಚಳಿಗಾಲ ಟೊಪಿಗಳು, ಶಿರೋವಸ್ತ್ರಗಳು, ಕೈ ಗ್ಲೌಸುಗಳು ಇವನ್ನೆಲ್ಲಾ ಒಂದು ವಿಭಾಗದಲ್ಲಿಡಬಹುದು. ಈ ರೀತಿ ವಾರ್‌ಡ್ರೋಬಿನಲ್ಲಿ ವರ್ಗೀಕರಣ ಮಾಡಿದರೆ ನಿಮಗೆ ಆತುರದಲ್ಲಿ ಉದುಗೆಯನ್ನು ತೋಡಬೇಕಾದಾಗ ಹೆಚ್ಚು ಸಮಯದ ಸಹಾಯ ದೊರಕುತ್ತದೆ. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ಚಳಿಗಾಲದಲ್ಲಿ ಉಡುವ ದೊಡ್ದಗಾತ್ರದ ಉಡುಗೆಗಳನ್ನು ಮಡಸಿಡುವುದು
ಚಳಿಗಾಲದ ಉಡುಪು ಸಾಮಾನ್ಯವಾಗಿ ಭಾರವಾಗಿರುವ ಸಂಭವವಿರುತ್ತದೆ. ಅಂತಹ ಉಡುಗೆಗಳನ್ನು ಮಡಸಿಡುವ ಕಲೆಯನ್ನು ಉತ್ತಮಗೊಳಿಸಿ. ಚಳಿಗಾಲ ಉಡುಗೆಗಳನ್ನು ಮಡಸಿ ಒಂದರ ಮೇಲೊಂದು ಅಂದವಾಗಿ ಜೋಡಿಸಿ. 'ಹೆಚ್ಚಾಗಿ ಬಳಸುವ ಉಡುಗೆಗಳು' ಎನ್ನುವ ಪ್ರಕಾರ ಜೋಡಿಸಿ. ನಿಮ್ಮ ನೆಚ್ಚಿನ ಸ್ವೆಟ್ಟರುಗಳು ಅಥವ ಪ್ಯಾಂಟುಗಳು ಇವುಗಳನ್ನು ಸುಲಭವಾಗಿ ಎಟುಕುವಂತೆ ಜೋಡಿಸಿ ಮತ್ತು ಇತರ ಯಾವಾಗಲಾದರೊಮ್ಮೆ ಉಡುವ ಬಟ್ಟೆಗಳನ್ನು ತಳದಲ್ಲಿ ಜೋಡಿಸಿ.

ಹ್ಯಾಂಗರ್ ಬಳಕೆ
ವಾರ್ಡ್‌ರೋಬ್‌ನಲ್ಲಿ ಹ್ಯಾಂಗರ್ ಬಳಕೆಯಿಂದ ಹೆಚ್ಚು ಸ್ಥಳ ಪಡೆಯುತ್ತೀರಿ. ತಕ್ಷಣಬೇಕಾದ ಉಡುಗೆಯನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುತ್ತದೆ. ಇದಲ್ಲದೆ ನಿಮ್ಮ ವಾರ್ಡ್‌ರೋಬ್‌ ಕೂಡ ಅಚ್ಚುಕಟ್ಟಾಗಿ ಕಾಣುತ್ತದೆ.

English summary

Simple Ways To Store Your Winter Clothes

As winter makes its way to India, it is proper time to restructure the wardrobe for the warm clothes. In this post we tell you how to store winter clothes such as like sweaters and coats properly. But, by trying out these best ways to store winter clothes you will make up your closet in no time.
X
Desktop Bottom Promotion