For Quick Alerts
ALLOW NOTIFICATIONS  
For Daily Alerts

ವಿನೇಗರ್ ಬಳಸಿ ತರಕಾರಿಗಳನ್ನು ತೊಳೆಯುವುದು ಹೇಗೆ?

|

ಯಾವುದೇ ವಸ್ತುವನ್ನು ತೊಳೆದು ಬಳಸುವುದು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಆದ್ದರಿಂದಲೇ ಹಣ್ಣು ತರಕಾರಿಗಳನ್ನು ತೊಳೆದು ಬಳಸುವುದು ಆರೋಗ್ಯಕಾರಿಯಾಗಿರುತ್ತದೆ. ತರಕಾರಿ ಮತ್ತು ಹಣ್ಣುಗಳಲ್ಲಿ ಕೊಳೆ, ಕೀಟಾಣುಗಳು, ರಾಸಾಯನಿಕ ಅಂಶಗಳು ಕೆಲವೊಮ್ಮೆ ಸೇರಿಕೊಂಡಿರುವುದರಿಂದ ನೀವು ಅವುಗಳನ್ನು ತೊಳೆದು ಬಳಸುವುದು ಉತ್ತಮವಾಗಿರುತ್ತದೆ.

ನೀವು ಚಿಕ್ಕವರಿದ್ದಾಗ, ಕೈ ಕಾಲುಗಳನ್ನು ತೊಳೆದು ಒಳಕ್ಕೆ ಬರುವಂತೆ ಅಥವಾ ಆಹಾರವನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ ಅಲ್ಲವೇ? ಇದೇ ಪರಿಪಾಠವನ್ನು ನೀವು ತರಕಾರಿ ಹಣ್ಣುಗಳಿಗೂ ಅನ್ವಯಿಸುವುದು ಅತ್ಯವಶ್ಯಕವಾಗಿರುತ್ತದೆ. ತರಕಾರಿ ಹಣ್ಣುಗಳನ್ನು ಬೆಳೆಸುವಾಗ ಅದು ಕೆಡದಂತೆ ಅಥವಾ ಕೀಟಾಣುಗಳು ಅವುಗಳನ್ನು ಮುಟ್ಟದಂತೆ ಅದಕ್ಕೆ ರಾಸಾಯನಿಕವನ್ನು ಸಿಂಪಡಿಸಿರುತ್ತಾರೆ. ಆದ್ದರಿಂದಲೇ ತರಕಾರಿ ಹಣ್ಣುಗಳ ತೊಳೆಯುವಿಕೆ ಮುಖ್ಯವಾಗಿರುತ್ತದೆ.

ಬಟ್ಟೆಯಿಂದ ಇಂಕ್ ಕಲೆಯನ್ನು ಹೋಗಲಾಡಿಸಲು ಸರಳ ವಿಧಾನಗಳು

ತರಕಾರಿಗಳನ್ನು ತೊಳೆಯದೆ ಬಳಸುವುದು ನಿಮ್ಮಲ್ಲಿ ಕೆಲವೊಂದು ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ. ತರಕಾರಿಗಳನ್ನು ಮಾರುಕಟ್ಟೆಯಿಂದ ಕೊಂಡು ಅದನ್ನು ಸ್ವಚ್ಛವಾಗಿ ತೊಳೆದು ರಾಸಾಯನಿಕಗಳನ್ನು ಹೊರತೆಗೆಯುವುದರಿಂದ ನಿಮಗೆ ಆರೋಗ್ಯಕರ ಜೀವನ ದೊರೆಯುತ್ತದೆ.

ತರಕಾರಿಗಳನ್ನು ತೊಳೆಯುವುದರಲ್ಲಿ ಕೆಲವೊಂದು ವಿಧಾನಗಳಿದ್ದು ಅದನ್ನು ನಿಮ್ಮದಾಗಿಸಿಕೊಳ್ಳಬಹುದು. ವಿನೇಗರ್‌ನಿಂದ ತರಕಾರಿಗಳನ್ನು ತೊಳೆಯುವುದು ಅದ್ಭುತವಾದ ವಿಧಾನವಾಗಿದ್ದು ಇದು ಪೂರ್ಣವಾಗಿ ಕೂಡ ತರಕಾರಿಗಳಲ್ಲಿನ ರಾಸಾಯನಿಕವನ್ನು ಹೊರತೆಗೆದು ತರಕಾರಿಯನ್ನು ಸ್ವಚ್ಛವಾಗಿಸುತ್ತದೆ.

ವಿನೇಗರ್ ಮತ್ತು ನೀರು

ವಿನೇಗರ್ ಮತ್ತು ನೀರು

ತರಕಾರಿಗಳನ್ನು ತೊಳೆಯುವಾಗ, ಈ ಮಿಶ್ರಣದ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಇದು ನಿಮ್ಮ ತರಕಾರಿಗಳನ್ನು ಸ್ವಚ್ಛವಾಗಿಸಲು ಸಹಕರಿಸಿ ರಾಸಾಯನಿಕಗಳಿಂದ ತರಕಾರಿಯನ್ನು ಸಂರಕ್ಷಿಸುತ್ತದೆ. ನೀವು ನೀರಿನಲ್ಲಿ ವಿನೇಗರ್ ಅನ್ನು 1:3 ಪ್ರಮಾಣದಲ್ಲಿ ಬಳಸಿ. ಇವೆರಡನ್ನೂ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ. ಈ ಬಾಟಲಿಯನ್ನು ಚೆನ್ನಾಗಿ ಕುಲುಕಿಸಿ ಮತ್ತು ಮಿಶ್ರಣ ಚೆನ್ನಾಗಿ ಬೆರೆತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈಗ ಬಾಟಲಿಯಲ್ಲಿನ ಸ್ಪ್ರೇ ಬಳಸಿಕೊಂಡು ತರಕಾರಿಗಳ ಮೇಲೆ ಸಿಂಪಡಿಸಿ. ಇದು ತರಕಾರಿಗಳ ಮೇಲೆ 30 ನಿಮಿಷಗಳ ಕಾಲ ಇರುವಂತೆ ನೋಡಿಕೊಳ್ಳಿ. ನಂತರ ಇದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ನಿಮ್ಮ ತರಕಾರಿಗಳು ಸ್ವಚ್ಛವಾಗಿರುತ್ತವೆ ಮತ್ತು ವಿನೇಗರ್‌ನ ಪರಿಮಳ ಕೂಡ ತರಕಾರಿಗಳ ಮೇಲೆ ಇರುವುದಿಲ್ಲ.

ವಿನೇಗರ್ ಮಿಶ್ರಣದಲ್ಲಿ ಮುಳುಗಿಸಿ

ವಿನೇಗರ್ ಮಿಶ್ರಣದಲ್ಲಿ ಮುಳುಗಿಸಿ

ನೀವು ತರಕಾರಿಗಳ ದಪ್ಪನೆಯ ವಲಯವನ್ನು ಮಾತ್ರ ತೊಳೆಯುತ್ತಿದ್ದೀರಿ ಎಂದಾದಲ್ಲಿ ಕೇವಲ ಬಾಟಲಿ ಸ್ಪ್ರೇಯನ್ನು ಬಳಸುವುದು ಉಚಿತವಾಗಿರುವುದಿಲ್ಲ. ನೀರು ಮತ್ತು ವಿನೇರ್ ಮಿಶ್ರಣದಲ್ಲಿ ತರಕಾರಿಯನ್ನು ಮುಳುಗಿಸಿಡಿ. ಹೂಕೋಸು, ಬ್ರಕೋಲಿ ಮುಂತದ ತರಕಾರಿಗಳನ್ನು ಈ ಮಿಶ್ರಣದಲ್ಲಿ ಅದ್ದಿಡಿ. ನಂತರ ಸ್ವಲ್ಪ ಸಮಯದ ನಂತರ ತಂಪು ನೀರಿನಲ್ಲಿ ನೀವು ಈ ತರಕಾರಿಗಳನ್ನು ತೊಳೆಯಬಹುದು. ಬೇಕಿದ್ದಲ್ಲಿ ಬ್ರಶ್ ಕೂಡ ಬಳಸಿ ತರಕಾರಿಯ ಮೇಲಿರುವ ಕೊಳೆಯನ್ನು ನಿಮಗೆ ತೆಗೆಯಬಹುದಾಗಿದೆ.

ವಿನೇಗರ್‌ನಲ್ಲಿ ಹಣ್ಣುಗಳನ್ನು ಅದ್ದಿಡುವುದು

ವಿನೇಗರ್‌ನಲ್ಲಿ ಹಣ್ಣುಗಳನ್ನು ಅದ್ದಿಡುವುದು

ಹಣ್ಣುಗಳನ್ನು ಬಳಸುವುದಕ್ಕಿಂತ ಮುಂಚೆ ಅವನ್ನು ತೊಳೆಯುವುದು ಮುಖ್ಯವಾದ ಮತ್ತು ಒಳ್ಳೆಯ ಸಂಗತಿಯಾಗಿದೆ. ಹಣ್ಣು ಮಾರಾಟ ಮಾಡುವವರಲ್ಲಿ ನೀವು ಹಣ್ಣನ್ನು ಖರೀದಿಸಿದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ತುಂಬಿರುತ್ತದೆ. ಹಣ್ಣುಗಳು ತಾಜಾ ಮತ್ತು ಸ್ವಚ್ಛವಾಗಿದ್ದರೆ ಮಾತ್ರ ಅವುಗಳು ಆರೋಗ್ಯಪೂರ್ಣವಾಗಿರುತ್ತದೆ. ವಿನೇಗರ್ ದ್ರಾವಣದಲ್ಲಿ ಅವುಗಳನ್ನು ಮುಳುಗಿಸಿ ನಂತರ ನೀರಿನಲ್ಲಿ ತೊಳೆಯುವುದರಿಂದ ಹಣ್ಣುಗಳ ಸ್ವಚ್ಛತೆ ಚೆನ್ನಾಗಿ ಆಗುತ್ತದೆ.

ಉತ್ತಮ ತರಕಾರಿಗಳನ್ನು ಖರೀದಿಸುವುದು

ಉತ್ತಮ ತರಕಾರಿಗಳನ್ನು ಖರೀದಿಸುವುದು

ನೀವು ಒಳ್ಳೆಯ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸಿದಾಗ ಮಾತ್ರವೇ ವಿನೇಗರ್ ದ್ರಾವಣ ಅದ್ಭುತ ಪರಿಣಾಮವನ್ನು ಬೀರುತ್ತದೆ. ಹಾಳಾಗಿರುವ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗೂ ಈ ಹಣ್ಣು ತರಕಾರಿಗಳ ಸೇವನೆ ಕೂಡಲೇ ರೋಗವನ್ನು ಉಂಟುಮಾಡುತ್ತದೆ. ಇತ್ತೀಚೆಗೆ ಕತ್ತರಿಸಿರುವ ಮತ್ತು ತೊಳೆದಿರುವ ತರಕಾರಿ ಹಣ್ಣುಗಳ ಸೇವನೆಯನ್ನು ನೀವು ಮಾಡುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

English summary

Should You Clean Vegetables With Vinegar

Isn’t it considered unhygienic to consume vegetables without cleaning or washing them? Don’t you want to make sure you are not infected with the worms and germs that vegetables attract when they are either being grown or stored?
X
Desktop Bottom Promotion