For Quick Alerts
ALLOW NOTIFICATIONS  
For Daily Alerts

ಬಟ್ಟೆಗಳಿಂದ ಗ್ರೀಸ್ ಕಲೆ ತೆಗೆಯಲು ಸುಲಭೋಪಾಯಗಳು

|

ನಮ್ಮ ಬಟ್ಟೆಗೆ ಕಲೆಯಾಗುವುದು ಸಾಮಾನ್ಯ ಪ್ರಕ್ರಿಯೆ. ಅರಶಿನ, ಕುಂಕುಮ, ನಿಂಬೆ ರಸ, ಹಣ್ಣಿನ ರಸ, ಐಸ್‌ಕ್ರೀಂ ಹೀಗೆ ಒಂದಲ್ಲಾ ಒಂದು ವಸ್ತುಗಳು ನಮ್ಮ ಬಟ್ಟೆಯ ಸೌಂದರ್ಯವನ್ನು ಹಾಳು ಮಾಡುತ್ತವೆ.

ಕೆಲವು ಕಲೆಗಳು ತೊಳೆದಾಗ ಹೋಗುತ್ತವೆ ಇನ್ನು ಕೆಲವು ಎಷ್ಟೇ ಪ್ರಯತ್ನಪಟ್ಟರೂ ಬಟ್ಟೆಯನ್ನು ಬಿಟ್ಟುಹೋಗದಂತೆ ಶಾಶ್ವತವಾಗಿ ನೆಲೆಗೊಳ್ಳುತ್ತವೆ. ನಂತರ ಇದನ್ನು ದಿರಿಸಾಗಿ ಬಳಸಲು ಸಾಧ್ಯವೇ ಇಲ್ಲ.

Remove Grease Stains From Clothes: Tips

ಕಲೆಗಳಲ್ಲಿ ಗ್ರೀಸ್ ಕಲೆ ತುಂಬಾ ಕಠಿಣವಾದುದು ಮತ್ತು ಒಗೆತಕ್ಕೆಲ್ಲಾ ಅದು ಬಗ್ಗುವುದಿಲ್ಲ. ಬಟ್ಟೆಗಳು ಒಣಗಿದ ನಂತರ ಈ ಕಲೆಯನ್ನು ತೆಗೆಯುವುದು ಮತ್ತೂ ಕಠಿಣ. ಆದರೂ ಈ ಕಲೆಯ ನಿವಾರಣೆ ಕೆಲವು ವಿಧಾನಗಳ ಮೂಲಕ ಸುಲಭ. ಹೇಗೆ ಎಂಬುದನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ. ಗ್ರೀಸ್ ಕಲೆಯನ್ನು ಬಟ್ಟೆಯಿಂದ ಹೋಗಲಾಡಿಸುವ ವಿಧಾನವನ್ನು ಈ ಕೆಲವು ವಿಧಾನಗಳ ಮೂಲಕ ತಿಳಿಸುತ್ತಿದ್ದೇವೆ, ಇದನ್ನು ನೀವೂ ಪ್ರಯತ್ನಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲಾಂಡ್ರಿ ಸುಲಭವಾಗಿಸುವ ವಿಧಾನಗಳು

1. ಟಾಲ್ಕಂ ಪೌಡರ್:

ಕಲೆಯನ್ನು ನೀರಿನಿಂದ ಉಜ್ಜುವುದು ಅದನ್ನು ಹರಡುತ್ತದೆ. ಗ್ರೀಸ್ ಕಲೆ ಇರುವ ಜಾಗಕ್ಕೆ ಟಾಲ್ಕಂ ಪೌಡರ್ ಹಾಗೂ ಬೇಬಿ ಪೌಡರ್ ಅನ್ನು ಹಾಕಿ. ಕಲೆಯನ್ನು ನಿವಾರಿಸಲು ಪೌಡರ್ ಪಫ್ ಅನ್ನು ಬಳಸಿ. ಗ್ರೀಸ್ ಕಲೆ ಮಂದವಾಗುವವರೆಗೆ ಮತ್ತು ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ.

2.ಉಪ್ಪು:

ಗ್ರೀಸ್ ಕಲೆಯನ್ನು ಹೋಗಲಾಡಿಸುವ ಇನ್ನೊಂದು ವಿಧಾನ ಉಪ್ಪು. ಉಪ್ಪು ಹಾಗೂ ಆಲ್ಕೋಹಾಲನ್ನು ಬಳಸಿ ಕಲೆಯಾದ ಜಾಗವನ್ನು ಉಜ್ಜಿ. ಬಟ್ಟೆ ಹೊಲಿದ ಜಾಗವನ್ನು ಬಿಟ್ಟು ವಿರುದ್ಧ ದಿಕ್ಕಿಗೆ ಉಜ್ಜಿ ಇಲ್ಲದಿದ್ದರೆ ಬಟ್ಟೆ ಹರಿಯುವ ಸಾಧ್ಯತೆ ಇರುತ್ತದೆ.

3.ಬೇಕಿಂಗ್ ಸೋಡ:

ಬಟ್ಟೆಗಳಿಂದ ಗ್ರೀಸ್ ಕಲೆಯನ್ನು ಹೋಗಲಾಡಿಸಲು ಬೇಕಿಂಗ್ ಸೋಡಾವನ್ನು ಬಳಸಿ. ಕಲೆಯ ಮೇಲೆ ಸೋಡಾವನ್ನು ಉದುರಿಸಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಒದ್ದೆ ಸ್ಪಾಂಜ್ ಅನ್ನು ಬಳಸಿ ಬಟ್ಟೆಯ ಮೇಲಿನ ಕಲೆ ತೆಗೆಯಿರಿ.

4.ವಿನೇಗರ್:

ಕಲೆಯಿರುವ ಬಟ್ಟೆಯನ್ನು ಒಗೆಯಲು ಲಿಂಬೆ ಮತ್ತು ವಿನೇಗರ್ ಅನ್ನು ಬಳಸಬಹುದು. ಇದೊಂದು ಉತ್ತಮ ಕಲೆನಿವಾರಕವಾಗಿದೆ. ಶರ್ಟ್, ಸಾಕ್ಸ್, ಅಡುಗೆ ಮನೆಯ ಬಟ್ಟೆಯಿಂದ ಗ್ರೀಸ್ ಕಲೆ ತೆಗೆಯಲು ವಿನೇಗರ್ ಬಳಸಿ. ಇದು ಕಲೆ ತೆಗೆಯುವುದು ಮಾತ್ರವಲ್ಲ ವಾಸನೆಯನ್ನೂ ಹೋಗಲಾಡಿಸುತ್ತದೆ. ಗ್ರೀಸ್ ಕಲೆಯಾದ ಜಾಗಕ್ಕೆ ವಿನೇಗರ್ ಅನ್ನು ಚಿಮುಕಿಸಿ 10 ನಿಮಿಷ ಹಾಗೆ ಬಿಡಿ. ನಂತರ ಉಜ್ಜಿ. ವಿನೇಗರ್‌ನೊಂದಿಗೆ ಉಪ್ಪನ್ನೂ ಬಳಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.ಬಿಳಿ ಹಾಗೂ ಇತರ ಮಂದ ಬಣ್ಣದ ಬಟ್ಟೆಗಳ ಕಲೆ ನಿವಾರಿಸಲು ವಿನೇಗರ್ ಉತ್ತಮ ವಿಧಾನವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳ್ಳಿ ವಸ್ತುಗಳು ಹೊಳೆಯಲು ಕೆಲವೊಂದು ಸಲಹೆಗಳು

5.ಕೋರ್ನ್‌ಸ್ಟ್ರಾಕ್:

ಟಾಲ್ಕಂ ಪೌಡರಿನಂತೆ, ಬಟ್ಟೆಯಿಂದ ಗ್ರೀಸ್ ಕಲೆ ನಿವಾರಿಸಲು ಕೋರ್ನ್ಸ್‌ಸ್ಟ್ರಾಕ್ ಅನ್ನು ಬಳಸಬಹುದು. ಇದನ್ನು ಬಟ್ಟೆಗೆ ಬಳಸಿ 20 ನಿಮಿಷದ ನಂತರ ತೊಳೆಯಿರಿ. ನಂತರ ಸಾಬೂನು ಬಳಸಿ ತೊಳೆಯಿರಿ. ಬಟ್ಟೆಗಳಿಂದ ಈ ಕಲೆಯನ್ನು ನಿವಾರಿಸಲು ಮೇಲೆ ತಿಳಿಸಿದ ವಿಧಾನಗಳನ್ನು ಅನುಸರಿಸಿ ನಿಮ್ಮ ಬಟ್ಟೆಯನ್ನು ಹೊಳಪುಗೊಳಿಸಿ.

English summary

Remove Grease Stains From Clothes: Tips

Got grease stains on the sleeves of the shirt while repairing a machine or working on your car? Well, it is said that getting rid of the grease stains is not easy.
Story first published: Monday, January 20, 2014, 17:32 [IST]
X
Desktop Bottom Promotion