For Quick Alerts
ALLOW NOTIFICATIONS  
For Daily Alerts

ಸ್ವಾಭಾವಿಕವಾಗಿ ಸೊಳ್ಳೆಗಳನ್ನು ಮನೆಯಿಂದ ನಿವಾರಿಸುವುದು ಹೇಗೆ?

By Deepak M
|

ಸೊಳ್ಳೆಗಳು ಮನೆಯಲ್ಲಿ ಇದ್ದರೆ ಯಾರಿಗೆ ತಾನೇ ಕಿರಿಕಿರಿಯಾಗುವುದಿಲ್ಲ. ಜೊತೆಗೆ ಇದು ಸ್ವಲ್ಪ ಅಪಾಯವನ್ನು ತರುವ ಕೀಟಗಳಾದ್ದರಿಂದ ಇದರ ಬಗ್ಗೆ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಮಳೆಗಾಲ ಬಂತೆಂದರೆ ಸಾಕು ಅಧಿಕ ನೀರಿನ ಜೊತೆಗೆ, ಕೆಸರು ಮತ್ತು ನಿಂತ ನೀರು ಎಲ್ಲವೂ ಸೇರಿ ಸೊಳ್ಳೆಗಳ ಸಂತಾನೋತ್ಪತಿಯನ್ನು ಹೆಚ್ಚಿಸುತ್ತವೆ. ಆಗ ಅಪಾಯ ತಪ್ಪಿದ್ದಲ್ಲ.

ಇದನ್ನು ನಿವಾರಿಸಲು ಹಲವಾರು ರಾಸಾಯನಿಕಗಳಿದ್ದರೂ ಕೂಡ, ಸ್ವಾಭಾವಿಕವಾಗಿ ಸೊಳ್ಳೆಗಳನ್ನು ಮನೆಯಿಂದ ನಿವಾರಿಸುವ ಬಗೆ ಹೇಗೆ? ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆ ತಾನೇ? ನೀವು ಎಂದಾದರು ಸಾಮಾನ್ಯವಾದ ಮನೆಯ ಉತ್ಪನ್ನಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದೀರೇ? ಅಧ್ಯಯನಗಳ ಪ್ರಕಾರ ಕೆಲವೊಂದು ಸೊಳ್ಳೆ ನಿವಾರಕಗಳು ಮಾನವನ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ.

ಏಕೆಂದರೆ ನೀವು ನಂಬಿದ ಸೊಳ್ಳೆ ನಿವಾರಕವು ನೀವು ಅಂದು ಕೊಂಡದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಹೀಗಿರುವಾಗ ನೀವು ಅವುಗಳನ್ನು ಓಡಿಸಲು ಮನೆಯಲ್ಲಿಯೇ ಸಿಗುವ ನಿರಪಾಯಕಾರಿ ವಸ್ತುಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸುವುದು ಉತ್ತಮ. ಸ್ವಾಭಾವಿಕ ಸೊಳ್ಳೆ ನಿವಾರಕಗಳು ನಿಮಗೆ ಎಲ್ಲಾ ರೀತಿಯಲ್ಲೂ ಸುರಕ್ಷಿತವಾಗಿರುತ್ತವೆ.

ಇವುಗಳು ಏಕಕಾಲದಲ್ಲಿ ಸೊಳ್ಳೆಗಳನ್ನು ದೂರವಿಡುತ್ತದೆ ಮತ್ತು ನಿಮ್ಮ ದೇಹಕ್ಕು ಸಹ ಹಾನಿ ಮಾಡಲಾರವು. ನಿಜಾಂಶವೇನೆಂದರೆ ರಾಸಾಯನಿಕ ಸೊಳ್ಳೆ ನಿವಾರಕಗಳು ವಾಂತಿ, ಉಸಿರಾಟದ ಏರು ಪೇರು, ತಲೆ ನೋವು ಮತ್ತು ಇನ್ನಿತರ ಹಲವಾರು ಕಾಯಿಲೆಗಳನ್ನು ತಂದು ಕೊಡುತ್ತದೆ. ಆದ್ದರಿಂದ ನಾವಿಲ್ಲಿ ಸ್ವಾಭಾವಿಕವಾದ ಸೊಳ್ಳೆ ನಿವಾರಕಗಳ ಕುರಿತು ತಿಳಿಸುತ್ತಿದ್ದೇವೆ. ಇವುಗಳನ್ನು ರಾಸಾಯನಿಕ ಕೀಟ ನಾಶಕಗಳ ಜಾಗದಲ್ಲಿ ಬಳಸಿ.

ನೊಣಗಳನ್ನು ಹೋಗಲಾಡಿಸಲು 16 ಮನೆಮದ್ದುಗಳು

ಲ್ಯಾವೆಂಡರ್

ಲ್ಯಾವೆಂಡರ್

ಲ್ಯಾವೆಂಡರ್ ಎಣ್ಣೆಯನ್ನು ಬಳಸಿ ಚಮತ್ಕಾರವನ್ನು ನೋಡಿ! ಈ ವಾಸನೆಯು ಸೊಳ್ಳೆಗಳನ್ನು ಓಡಿಸುವ ಗುಣಗಳನ್ನು ಹೊಂದಿದೆ. ಇವುಗಳನ್ನು ಅಪ್ರಿಕೊಟ್ ಕೆರ್ನೆಲ್, ಸ್ವೀಟ್ ಅಲ್ಮಾಂಡ್ ಅಥವಾ ತೆಂಗಿನ ಕಾಯಿ ಎಣ್ಣೆಯಲ್ಲಿ ಬೆರೆಸಿದಾಗ ಮತ್ತಷ್ಟು ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ನಿಮಗೆ ಬೇಕಾದಲ್ಲಿ ಸಾವಯವ ಸೋಯಾ ಎಣ್ಣೆಯಲ್ಲಿ ಬೆರೆಸಿದರೆ ಸೊಳ್ಳೆಗಳನ್ನು ದೂರವಿಡಲು ಇನ್ನಷ್ಟು ಉಪಕಾರಿಯಾಗುತ್ತದೆ.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಸೊಳ್ಳೆಗಳನ್ನು ಓಡಿಸುವ ಅತ್ಯುತ್ತಮವಾದ ನಿವಾರಕವೆಂದರೆ ಅದು ಬೇವಿನ ಎಣ್ಣೆ!. ಇದರ ವಾಸನೆಯು ಸಾಮಾನ್ಯವಾಗಿ ಸೊಳ್ಳೆಗಳನ್ನು ದೂರವಿಡುತ್ತದೆ. ಒಮ್ಮೆ ಪ್ರಯತ್ನಿಸಿ ಮತ್ತು ಅದರ ಫಲಿತಾಂಶವನ್ನು ನೀವೇ ನೋಡಿ. ಅಧ್ಯಯನಗಳ ಪ್ರಕಾರ ರಾಸಾಯನಿಕ ಆಧಾರಿತ ಸೊಳ್ಳೆ ನಿವಾರಕಗಳಿಗಿಂತ ಅತ್ಯಂತ ಪರಿಣಾಮಕಾರಿಯಾಗಿ ಸೊಳ್ಳೆಗಳನ್ನು ನಿವಾರಿಸುತ್ತದೆ. ಎಲ್ಲೆಡೆಯಲ್ಲು ಕಂಡು ಬರುವ ಬೇವಿನ ಸೊಪ್ಪಿನಿಂದ ತಯಾರಾಗುವ ಎಣ್ಣೆಯು ಸುಲಭವಾಗಿ ಗ್ರಂಧಿಗೆ ಅಂಗಡಿಗಳಲ್ಲಿ ಮತ್ತು ಆಯುರ್ವೇದ ಅಂಗಡಿಗಳಲ್ಲಿ ನಿಮಗೆ ದೊರೆಯುತ್ತದೆ.

ಕರಿ ಮೆಣಸು

ಕರಿ ಮೆಣಸು

ಸೊಳ್ಳೆಗಳಿಗೆ ಕರಿ ಮೆಣಸಿನ ಘಾಟನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲ. ಇದನ್ನು ನೀವು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದಲ್ಲವೆ. ಕರಿ ಮೆಣಸಿನ ಎಣ್ಣೆಯು ಸೊಳ್ಳೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿವೆ ಎಂದು ಅಧ್ಯಯನಗಳು ಖಚಿತಪಡಿಸಿವೆ. ಅಧ್ಯಯನಗಳು ಆಲ್ಕೋಹಾಲ್ ಸೊಳ್ಳೆಗಳನ್ನು ನಿವಾರಿಸುತ್ತದೆ ಎಂದು ತಿಳಿಸಿದರು, ಕರಿಮೆಣಸು ಅದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಸಾಭೀತು ಮಾಡಿದೆ.

ಕಾಫಿ

ಕಾಫಿ

ನಿಮಗೆ ಅಚ್ಚರಿಯಾಗಬಹುದು, ಕಾಫಿಯು ನಿಮ್ಮನ್ನು ಸೊಳ್ಳೆಗಳಿಂದ ಕಾಪಾಡುತ್ತದೆ! ಎಂದು. ಇದು ಸೊಳ್ಳೆಗಳನ್ನು ಓಡಿಸುವ ಪರಿಸರ ಸ್ನೇಹಿ ನಿವಾರಕವಾಗಿರುವುದರ ಜೊತೆಗೆ, ನಿಮ್ಮ ಮನೆಯಲ್ಲಿ ಬಳಕೆಯಾಗದ ಕಾಫಿ ಗಸಿಯನ್ನು ಸಹ ಮರು ಬಳಕೆ ಮಾಡಬಹುದಾಗಿದೆ. ಕಾಫಿಯನ್ನು ನೀವು ಕೂರುವ ಜಾಗದಲ್ಲಿ ಚೆಲ್ಲಿ ಅಥವಾ ಬಟ್ಟಲಿನಲ್ಲಿ ಹಾಕಿ ಇಟ್ಟುಕೊಳ್ಳಬಹುದು. ಇದು ಸೊಳ್ಳೆಗಳನ್ನು ನಿವಾರಿಸುವ ಸ್ವಾಭಾವಿಕ ಪರಿಹಾರವಾಗಿದ್ದು, ಸುಲಭವಾಗಿ ನಿಮಗೆ ದೊರೆಯುತ್ತದೆ.

ಸಿಟ್ರೊನೆಲ್ಲ ಕ್ಯಾಂಡಲ್‍ಗಳು

ಸಿಟ್ರೊನೆಲ್ಲ ಕ್ಯಾಂಡಲ್‍ಗಳು

ಇವುಗಳನ್ನು ನೀವು ಯಾವುದಾದರು ಹೋಮ್ ಡೆಕೋರ್ ಸ್ಟೋರ್‌ಗಳಲ್ಲಿ ಕೊಳ್ಳಬಹುದು. ಇವುಗಳನ್ನು ನೀವು ನಿಮ್ಮ ಉಪಯೋಗಕ್ಕೆ ಸುಲಭವಾಗಿ ಬಳಸಿಕೊಳ್ಳಬಹುದು. ಇದರ ಜೊತೆಗೆ ಈ ಮೇಣದ ಬತ್ತಿಗಳಲ್ಲಿರುವ ಹಲವಾರು ಗಿಡಮೂಲಿಕೆಗಳು ಸೊಳ್ಳೆಗಳನ್ನು ದೂರದಲ್ಲಿರಿಸುತ್ತದೆ. ಈ ಮೇಣದ ಬತ್ತಿಯಲ್ಲಿ ಸೆಡರ್ ವುಡ್, ಲ್ಯಾವೆಂಡರ್, ಲೆಮನ್ ಗ್ರಾಸ್ ಮತ್ತು ರೋಸ್‍ಮೇರಿಯಂತಹ ಎಣ್ಣೆಯಂಶಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಈ ಕ್ಯಾಂಡಲ್ ಸೊಳ್ಳೆ ನಿವಾರಿಸುವ ಅತ್ಯುತ್ತಮ ಸ್ವಾಭಾವಿಕ ಪರಿಹಾರವಾಗಿದೆ. ಇದರ ಜೊತೆಗೆ ನೀವು ನಿಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ. ಸೊಳ್ಳೆಗಳ ಸಂತಾನೋತ್ಪತಿಯಾಗುವ ವಾತಾವರಣವನ್ನು ನಿವಾರಿಸಿ.

English summary

Natural Mosquito Repellents For The Home

Mosquitoes are a real nuisance, and a pretty dangerous one too as some would rightly say. The monsoon season brings with it large amount of water, and dirt and allows mosquitoes to breed, and that is dangerous for anyone.
Story first published: Thursday, August 7, 2014, 11:32 [IST]
X
Desktop Bottom Promotion