For Quick Alerts
ALLOW NOTIFICATIONS  
For Daily Alerts

ಚಿಕ್ಕ ಸ್ಥಳದಲ್ಲಿಯೂ ಮಾಡಬಹುದು ಆರಾಮದಾಯಕ ಜೀವನ

By Poornima Hegde
|

ಎಲ್ಲರಿಗೂ ತಾವಿರುವ ಸ್ಥಳ ದೊಡ್ಡದಾಗಿರಬೇಕು. ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವಿರಬೇಕು ಎಂದೇ ಬಯಸುತ್ತಾರೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವರಿಗೆ ಮನೆಯಲ್ಲಿ ಅಧಿಕ ವಸ್ತುಗಳಿಂದ ಕೊಂಚವೂ ಸ್ಥಳವೇ ಇಲ್ಲದಂತೆ ಭಾಸವಾಗಬಹುದು. ಕಿರಿಕಿರಿ ಎನಿಸಬಹುದು.

ನಿಮ್ಮ ಮನೆಯೂ ನಿಮಗೆ ಬಹಳ ಇಕ್ಕಟ್ಟು ಎನ್ನಿಸುತ್ತಿದೆಯೇ? ಅತೀ ಚಿಕ್ಕ ಸ್ಥಳದಲ್ಲಿಯೂ ಉಚಿತ ಸ್ಥಳವನ್ನು ನಿರ್ಮಿಸುವ, ವಸ್ತುಗಳನ್ನು ಚೊಕ್ಕಟವಾಗಿ ಜೋಡಿಸುವ ಕೆಲವು ಉಪಾಯಗಳನ್ನು ನಾವಿಲ್ಲಿ ಹೇಳುತ್ತೇವೆ.

Living large in small spaces

ನೀವು ಕಲ್ಪನೆಗಳಲ್ಲಿ ಬದುಕುತ್ತಿದ್ದರೆ ..
ದೊಡ್ಡ ಮನೆಯನ್ನು ಹೊಂದುವುದು ಒಳ್ಳೆಯದು ಎಂಬುದು ನಿಮ್ಮ ಭಾವನೆಯೇ? ಆದರೆ ಅತ್ಯಂತ ಸಣ್ಣ ಸ್ಥಳಗಳಲ್ಲಿಯೂ ಅತ್ಯಂತ ಸೊಗಸಾಗಿ ಜೀವನವನ್ನು ನಡೆಸಬಹುದು. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಮುಂಬೈ. ಇಲ್ಲಿನ ಜನರು ಇದಕ್ಕೆ ವಿರುದ್ಧ ದಿಕ್ಕಿನಲ್ಲಿಯೇ ಸಾಗುತ್ತಾರೆ. ಅವರ ಪ್ರಕಾರ ಕಡಿಮೆ ಸ್ಥಳ ಯಾವತ್ತಿಗೂ ಜಾಸ್ತಿ. ಇದು ಇಂದಿನ ಟ್ರೆಂಡ್ ಕೂಡ. ಇರುವುದರಲ್ಲೇ ಅತ್ಯಂತ ಚೊಕ್ಕಟ, ಆರಾಮದಾಯಕ ಜೀವನವನ್ನು ನಡೆಸುವುದು ಹೇಗೆ ಎಂಬುದಕ್ಕೆ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

ನಿಮ್ಮ ಅಗತ್ಯತೆಗಳ ಬಗ್ಗೆ ಗಮನಹರಿಸಿ
ಅತ್ಯಂತ ಇಕ್ಕಟ್ಟಾಗಿತುವ ಜಾಗದಲ್ಲಿಯೂ ಉತ್ತಮ ಬದುಕನ್ನು ಸಾಗಿಸಲು ನೀವು ಮಾಡಬೇಕಾಗಿರುವ ಮೊದಲ ಕೆಲಸ ನಿಮಗೆ ಯಾವ ವಸ್ತುಗಳು ಅಗತ್ಯ ಮತ್ತು ಯಾವವು ಅಗತ್ಯವಲ್ಲ ಎಂಬುದನ್ನು ಗುರುತಿಸುವುದು. ನಿಮಗೆ ಅಗತ್ಯವಿರುವ ಮನೆಗೆ ಬೇಕಾಗಿರುವ ವಸ್ತುಗಳನ್ನು ಮಾತ್ರ ಕೊಂಡು ತನ್ನಿ. ಅನಗತ್ಯ ವಸ್ತುಗಳನ್ನು ಖರೀದಿಸಬೇಡಿ. ಕಡಿಮೆ ಗಾತ್ರದ ವಸ್ತುಗಳು ಮನೆಯ ಜಾಗವನ್ನು ಉಳಿಸುವಲ್ಲಿ ಸಹಾಯಕವಾಗುತ್ತವೆ. ಪಶ್ಚಿಮ ಬಾಂದ್ರಾದ ಒಂದು ಸಣ್ಣ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಸ್ಟೆಲಾ ಪೌಲ್ ಪ್ರಕಾರ, " ಇದೊಂದು ಸ್ಟುಡಿಯೊ ಅಪಾರ್ಟ್ಮೆಂಟ್ ಆಗಿರುವುದರಿಂದ ನಾನು ಅನಗತ್ಯ ವಸ್ತುಗಳನ್ನು ದೂರವಿಟ್ಟಿದ್ದೇನೆ. ನನಗೆ ಅತ್ಯಂತ ಅಗತ್ಯವಾದ ವಸ್ತುವನ್ನು ಮಾತ್ರ ಕೊಂಡುಕೊಳ್ಳುತ್ತೇನೆ. ನಿಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿ ಮಾಡಿದರೆ ಅದನ್ನು ನಿಮಗೆ ಬೇಕಾದಾಗ ಬೇಕಾದ ಹಾಗೆ ಸಿದ್ಧಗೊಳಿಸಬಹುದು".

ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು

ಉತ್ತಮ ಆಲೋಚನೆ
ನಿಮ್ಮ ಮನೆಯಲ್ಲಿ ಅತ್ಯಂತ ಕಡಿಮೆ ಸ್ಥಳಾವಕಾಶಗಳಿದ್ದರೆ, ನಿಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿ. ಉತ್ತಮವಾಗಿ ಯೋಚಿಸಿ! ಆಂತರಿಕ ಗೃಹಾಲಂಕಾರ (ಇಂಟಿರಿಯರ್ ಡೆಕೋರೇಟರ್) ತಜ್ಞೆ ಸಿಮೋನಿ ಚೆರಿನ್ ಹೇಳುವಂತೆ " ಇಂದು ಸಾಮಾನ್ಯವಾಗಿ ಎಲ್ಲಾ ವಸತಿ ನಿಲಯಗಳಲ್ಲಿ ಬಂಕ್ ಬೆಡ್ (ಮೇಲೆ ಮಲಗುವ ಮಂಚ) ಗಳನ್ನು ಕಾಣಬಹುದು. ಇಂತಹ ಮನೆಗಳಲ್ಲಿ ಮಾಡಬಹುದಾದ ಉಪಾಯದ ಸಂಗತಿಯೆಂದರೆ ಮಂಚದ ಅಡಿಯ ಸಂಪೂರ್ಣ ಸ್ಥಳವನ್ನು ಸದುಪಯೋಗಪಡಿಸಿಕೊಳ್ಳುವುದು. ಅಡುಗೆ ಮನೆಗಳಲ್ಲಿ ಬಾಕರ್ ರಾಕ್ (rack) ಗಳು ಬಾಟಲ್ ಹೋಲ್ಡರ್ ಗಳನ್ನು ವಿನ್ಯಾಸಗೊಳಿಸಿದರೆ ಮನೆಯೂ ಸೊಗಸಾಗಿ ಕಾಣುತ್ತದೆ ಎನ್ನುತ್ತಾರೆ"

ಒಳ ಕಪಾಟುಗಳ ನಿರ್ಮಾಣ
ಇದು ಅಧಿಕ ವಸ್ತುಗಳನ್ನು ಚೊಕ್ಕಟವಾಗಿ ಜೋಡಿಸುವ ಇನ್ನೊಂದು ಮಾರ್ಗ. ಸರಳ ನವೀಕರಣ ನಿಮಗೆ ಇನ್ನಷ್ಟು ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಬಲ್ಲದು. ಮನೆಯ ಗೋಡೆಗೆ ಅಂಟಿಕೊಂಡಂತೆ, ಪುಸ್ತಕ ಕಪಾಟು, ಬಟ್ಟೆಗಳನ್ನಿಡುವ ಕಪಾಟುಗಳನ್ನು ನಿರ್ಮಿಸುವುದು ಸುಲಭ ಮತ್ತು ಅತ್ಯಂತ ಆರಾಮದಾಯಕ. ನಿಮ್ಮಲ್ಲಿ ಸಾಕು ಪ್ರಾಣಿಯಿದ್ದರೆ ಅದಕ್ಕೊಂಡು ಪುಟ್ಟ ಸ್ಥಳವನ್ನು ಕಾದಿರಿಸುವುದು ಉತ್ತಮ. ನಿಮ್ಮ ಮನೆಯಲ್ಲಿನ ಮಂಚದ ಅಡಿಯಲ್ಲೂ ಪುಸ್ತಕಗಳು, ಮ್ಯೂಸಿಕ್ ಅಲ್ಬಮ್ ಗಳು ಮೊದಲಾದವುಗಳನ್ನು ಸಂಗ್ರಹಿಸಿಡಲು ಕಪಾಟುಗಳನ್ನು ಕೂಡ ನಿರ್ಮಿಸಬಹುದು.

ಅನಗತ್ಯ ವಸ್ತುಗಳನ್ನು ದೂರವಿಡಿ
ಇರುವ ಅತ್ಯಂತ ಸಣಣ ಜಾಗದಲ್ಲಿ ಸುಲಭವಾಗಿ, ಆರಾಮದಾಯಕವಾಗಿ ಜೀವಿಸಲು ಇರುವ ಅತ್ಯಂತ ಪ್ರಮುಖ ಉಪಾಯವೆಂದರೆ, ಅನಗತ್ಯವಸ್ತುಗಳನ್ನು ದೂರವಿಡುವುದು. ಅಥವಾ ಸ್ಥಳಾಂತರಿಸುವುದು. ಮುಂಬೈ ಉಪನಗರದಲ್ಲಿ ವಾಸುಸುವ ವೃತ್ತಿನಿರತ ಶಿಲ್ಪಿ ವರ್ಮಾ " ದಿನವೂ ನಾವುಈಷ್ಟು ಅನಗತ್ಯ ವಸ್ತುಗಳನ್ನು ಸಂಗ್ರಹಿಸುತ್ತೇವೆ ಎಂಬುದು ಅಚ್ಚರಿಯನ್ನು ಮೂಡಿಸುತ್ತದೆ. ಅನಗತ್ಯ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿಡುವುದರ ಬದಲು ಅದನ್ನು ಸ್ಥಳಾಂತರಿಸಿದರೆ ನಿಮ್ಮ ಮನೆಯ ಸೌಂದರ್ಯವನ್ನು ನೀವೇ ಸವಿಯಬಹುದು.

ಬಾಳೆ ಹಣ್ಣಿನ ಸಿಪ್ಪೆಯ ಚಮತ್ಕಾರೀ ಉಪಯೋಗ!

ಕಲಾಕೃತಿಗಳು
ಕಲೆ ಮತ್ತು ವಿನ್ಯಾಸ, ನಿಮ್ಮ ಪುಟ್ಟ ಮನೆಯ ನೋಟವನ್ನು ಅದ್ಭುತಗೊಳಿಸಬಹುದು. ನಿಮ್ಮ ಕೆಲವು ವಯಕ್ತಿಯ ವಿಸ್ಯಾಸಗಳು ನಿಮ್ಮ ಕೊಠಡಿಯನ್ನು ನಿಜವಾದ ಅರ್ಥದಲ್ಲಿ "ನಿಮ್ಮದನ್ನಾಗಿಸಬಹುದು". ಯಾವುದೇ ರೂಪದಲ್ಲಿ ಕಲೆ ಕಣ್ಣಿಗೆ ಆನಂದ ಮತ್ತು ಸಂತೋಷವನ್ನು ನೀಡಬಲ್ಲದು. ಸಾಂಪ್ರದಾಯಿಕ, ಸಮಕಾಲೀನ, ಕೈಯಿಂದ ಮಾಡಿದ ಅಥವಾ ಬೀದಿಗಳಲ್ಲಿ ಸಂಗ್ರಹಿಸಿದ, ಕಲಾತ್ಮಕ ವಸ್ತುಗಳು ನಿಮ್ಮ ಖಾಲಿ ಗೋಡೆಗಳ ಮತ್ತು ನಿಮ್ಮ ಮನೆಯ ಸಣ್ಣ ಮೂಲೆಗಳ ನೋಡವನ್ನು ಉತ್ತಮಗೊಳಿಸಬಹುದು.

ನಿಮ್ಮ ಸಣ್ಣ ಕೊಠಡಿಯನ್ನು ಹೊಳೆಯುವಂತೆ ಮಾಡುವ ಕೆಲವು ಚಮತ್ಕಾರಗಳು:

*ನಿಮ್ಮ ಮನೆಯ ಸೀಲಿಂಗ್‌ನ್ನು, ಮನೆಯ ಗೋಡೆಗಳಿಗಿಂತ ಹೆಚ್ಚು ಗಾಢವಾದ ಬಣ್ಣಗಳಲ್ಲಿ ಪೈಂಟ್ ಮಾಡಿ (ಚಿತ್ರ ಬರೆಯಿರಿ) ಕೆಲವು ಮೋಜಿನ ವಿನ್ಯಾಸಗಳನ್ನೂ ಇದಕ್ಕೆ ಸೇರಿಸಿ.

*ನೀವು ಕೊಠಡಿಗಳಲ್ಲಿ ವರ್ಣವಯ ಹಾಗೂ ಟ್ರೆಂಡಿ ಗೋಡೆ ಚಿತ್ರಗಳನ್ನೂ ಬಳಸಬಹುದು.

*ಸ್ಥಳವನ್ನು ಹೆಚ್ಚಿಸಲು ಅತ್ಯಂತ ಹತ್ತಿರದಲ್ಲಿ ಕಪಾಟುಗಳನ್ನು ನಿರ್ಮಿಸಿ.

*ನಿಮ್ಮ ವಸ್ತುಗಳನ್ನು ನೇತುಹಾಕುವ/ ತೂಗುಹಾಕುವ ಸಲಕರಣೆಗಳನ್ನು ಬಳಸಬಹುದು. ಉದಾಹರಣೆಗೆ, ನಿಮ್ಮ ಆಭರಣಗಳನ್ನು ಗೋಡೆಗಳಲ್ಲಿ ತೂಗುಹಾಕಬಹುದು ಇದು ಕೊಠಡಿಯ ಹೊಳಪನ್ನು ಹೆಚ್ಚಿಸುತ್ತದೆ.

*ವಸ್ತುಗಳನ್ನು ಜೋಡಿಸಲು ಬುಟ್ಟಿ ಮತ್ತು ಪೆಟ್ಟಿಗೆಗಳನ್ನು ಬಳಸಿ. ಇದರಿಂದ ವಸ್ತುಗಳನ್ನು ಜೋಡಿಸುವುದು ಮಾತ್ರವಲ್ಲ ಮನೆಯೂ ಕೂಡ ಸ್ವಚ್ಛವಾಗಿ ಕಾಣುತ್ತದೆ. ರಿಬ್ಬನ್ ಅಥವಾ ಕಸೂತಿ ಬುಟ್ಟಿಗಳನ್ನು ಬಳಸಿ.

ಏನನ್ನು ನಿರ್ಲಕ್ಷಿಸಬೇಕು?

*ನಿಮ್ಮ ಕೋಣೆಯನ್ನು ಇನ್ನಷ್ಟು ಅಸ್ತವ್ಯಸ್ತವಾಗಿ ಕಾಣುವಂತೆ ಮಾಡುವ ದಪ್ಪ ಮಾದರಿಯ ಕುಶನ್ (ಮೆತ್ತನೆಯ ಹಾಸಿಗೆಗಳು), ಕರ್ಟನ್ ಗಳನ್ನು ಬಳಸಬೇಡಿ.

*ಅತೀಯಾದ ಪಿಠೋಪಕರಣಗಳು ಅದರಲ್ಲೂ ನಿಮ್ಮ ಮನೆಗೆ ಸರಿಹೊಂದದ ಪೀಠೋಪಕರಣಗಳನ್ನು ಬಳಸಬೇಡಿ.

*ನಿಮ್ಮ ಕೊಠಡಿಗೆ ಯಾವುದು ಸರಿಹೊಂದುತ್ತದೆ, ಯಾವ ವಸ್ತುವಿನ ಅಗತ್ಯವಿದೆ ಎಂಬುದನ್ನು ನಿಗದಿಪಡಿಸುವುದಕ್ಕಿಂತ ಮೊದಲು ಯಾವ ವಸ್ತುಗಳನ್ನೂ ಖರೀದಿಸದಿರಿ.

*ಅಧಿಕ ವಸ್ತುಗಳನ್ನು ಸಂಗ್ರಹಿಸದಿರಿ! ನಿಮಗೆ ಯಾವುದು ಅಗತ್ಯವೋ ಅವುಗಳನ್ನು ಮಾತ್ರ ಖರೀದಿಸಿ.

*ನಿಮ್ಮ ಕೊಠಡಿ ಚಿಕ್ಕದಾಗಿದ್ದರೆ ಅತ್ಯಂತ ದೊಡ್ಡ ಕಲಾಕೃತಿಗಳನ್ನು, ಫೋಟೊ ಫ್ರೇಮ್ ಗಳನ್ನು ತೂಗುಹಾಕಬೇಡಿ.

*ಬಹುಪಯೋಗಿ ವಸ್ತುಗಳನ್ನೇ ಬಳಸಿ. ನಿಮ್ಮ ಕೊಠಡಿಗೆ ಸಮಾನವಾದ, ಸರಿಹೊಂದುವ ದೃಶ್ಯ ವೈಭವವವನ್ನು ನೀಡಿ.

*ನಿಮ್ಮ ಮನೆ ಸಣ್ಣದಾಗಿದ್ದರೂ ಅದು ಸುಂದರವಾಗಿ, ದೊಡ್ಡದಾಗಿ ಮಾಡುವ ಕ್ರೀಯಾಶೀಲತೆ ನಿಮ್ಮಲ್ಲಿದ್ದರೆ ಒಮ್ಮೆ ಮೇಲಿನ ಸಲಹೆಗಳನ್ನು ಪ್ರಯತ್ನಿಸಿ.

English summary

Living large in small spaces

Is your place getting too cramped? Here are a few quirky ways to keep all your stuff and still make your space as personalised. here we mentioned few tips
X
Desktop Bottom Promotion