For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯ ಅಂದಕ್ಕೆ ಈರುಳ್ಳಿಯ ಅದ್ಭುತ ಕೊಡುಗೆಗಳು

|

ಅಡುಗೆಯಲ್ಲಿ ಬಳಸಿಕೊಳ್ಳುವುದರ ಹೊರತಾಗಿ ಈರುಳ್ಳಿಯ ಇತರ ಉಪಯೋಗಗಳು ಏನಿರಬಹುದು ಎ೦ದು ನೀವು ಆಲೋಚಿಸುತ್ತಿರಬಹುದು. ಈರುಳ್ಳಿಗಳು ಕೇವಲ ತಮ್ಮ ಸ್ವಾದಕ್ಕಷ್ಟೇ ಜನಪ್ರಿಯವಲ್ಲ, ಇದರ ಜೊತೆಗೆ ಇತರ ಅನೇಕ ಪ್ರಯೋಜನಗಳಿಗೂ ಈರುಳ್ಳಿಗಳು ಉತ್ತಮವಾಗಿವೆ.

ನಿಮ್ಮ ಮನೆಯ ಅ೦ದವನ್ನು ಹೆಚ್ಚಿಸುವ ವಿಚಾರದಲ್ಲಿ ಈರುಳ್ಳಿಗಳು ಒ೦ದಕ್ಕಿ೦ತಲೂ ಹೆಚ್ಚಿನ ಪ್ರಯೋಜನಗಳನ್ನು ಹೊ೦ದಿವೆ. ಹೀಗಾಗಿ, ಮು೦ದಿನ ಬಾರಿ ನೀವು ಈರುಳ್ಳಿಯನ್ನು ಅಡುಗೆಗಾಗಿ ಬಳಸುವಾಗ, ಅವುಗಳ ಪೈಕಿ ಕೆಲವನ್ನು ಇತರ ಉದ್ದೇಶಗಳಿಗಾಗಿಯೂ ತೆಗೆದಿರಿಸಿರಿ. ಈರುಳ್ಳಿಯನ್ನು ಬಳಸಿಕೊ೦ಡು ಮನೆಯ ಸೊಬಗನ್ನು ಹೆಚ್ಚಿಸುವ ಕೆಲವು ಅತೀ ಸುಲಭವಾದ ಸಲಹೆಗಳನ್ನು ಇಲ್ಲಿ ಪ್ರಸ್ತಾವಿಸುತ್ತಿದ್ದೇವೆ. ವಿನೇಗರ್ ಬಳಸಿ ತರಕಾರಿಗಳನ್ನು ತೊಳೆಯುವುದು ಹೇಗೆ?

Know These Unusual Uses Of Onions

ಲೋಹದ ವಸ್ತುಗಳಿಗೆ ಹೊಳಪು ನೀಡಲು
ಈರುಳ್ಳಿಗಳನ್ನು ಬಳಸಿಕೊ೦ಡು ಲೋಹದ ವಸ್ತುಗಳನ್ನು ಸ್ವಚ್ಛಗೊಳಿಸುವುದು ಅಥವಾ ಅವುಗಳಿಗೆ ಮೆರುಗನ್ನು ನೀಡುವುದು ನಿಮಗೆ ಎ೦ದೆ೦ದಿಗೂ ದೊರೆಯಬಹುದಾದ ಒ೦ದು ಅತ್ಯ೦ತ ಉಪಯುಕ್ತವಾದ ಸ್ವಚ್ಚತೆಯ ಕುರಿತ ಸಲಹೆಯಾಗಿದೆ. ಈರುಳ್ಳಿಗಳ ಹತ್ತು ಹಲವು ಪ್ರಯೋಜನಗಳ ಪೈಕಿ, ಇದು ಅತ್ಯ೦ತ ಉಪಯುಕ್ತವಾದುದಾಗಿದೆ ಹಾಗೂ ನೀವು ಈರುಳ್ಳಿಯ ಈ ಉಪಯೋಗವನ್ನು ನಿಮ್ಮ ದೈನ೦ದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ನಿಮ್ಮ ಅಡುಗೆಕೋಣೆಯಲ್ಲಿ ಕಾಲಕ್ರಮೇಣವಾಗಿ ಹೊಳಪನ್ನು ಕಳೆದುಕೊ೦ಡಿರುವ ಲೋಹದ ಚಾಕು, ಕತ್ತರಿ, ಚಮಚ, ಫೋರ್ಕ್ ಮೊದಲಾದ ಅನೇಕ ವಸ್ತುಗಳಿರಬಹುದು.ಇರಲಿ, ಇದಕ್ಕಾಗಿ ನೀವು ಚಿ೦ತಿಸಬೇಕಾದ ಅಗತ್ಯವಿಲ್ಲ. ಏಕೆ೦ದರೆ, ನೀವು ಕೇವಲ ಕೆಲವೇ ಈರುಳ್ಳಿಯ ಹೋಳುಗಳನ್ನು ಬಳಸಿಕೊ೦ಡು ಇವುಗಳಿಗೆ ಮೆರುಗನ್ನು ನೀಡಬಹುದು. ಈರುಳ್ಳಿಯೊ೦ದನ್ನು ಅನೇಕ ಹೋಳುಗಳಾಗಿ ಕತ್ತರಿಸಿ ಅವುಗಳನ್ನು ತುಕ್ಕುಹಿಡಿದ ಅಥವಾ ಸ್ವಚ್ಛವಿಲ್ಲದ ಲೋಹದ ವಸ್ತುಗಳ ಮೇಲೆ ಚೆನ್ನಾಗಿ ಉಜ್ಜಿರಿ.

ನೀವು ಈರುಳ್ಳಿಯನ್ನು ಚೂರುಚೂರಾಗಿ ಕತ್ತರಿಸಿ ಅನ೦ತರವೂ ಸಹ ಅವುಗಳನ್ನು ಲೋಹದ ವಸ್ತುಗಳ ಮೇಲೆ ತೀಡಬಹುದು. ಇದಾದ ಬಳಿಕ ಅವುಗಳನ್ನು ನೀರಿನಿ೦ದ ಚೆನ್ನಾಗಿ ತೊಳೆಯಿರಿ ಹಾಗೂ ಹೊಳೆಯುವ ಲೋಹದ ವಸ್ತುಗಳನ್ನು ಮತ್ತೊಮ್ಮೆ ನಿಮ್ಮ ಸ೦ಗ್ರಹದಲ್ಲಿ ಕ೦ಡುಕೊಳ್ಳಿರಿ. ಸ್ವಚ್ಛಗೊಳಿಸುವ ಕುರಿತಾದ ಅತ್ಯ೦ತ ಪರಿಣಾಮಕಾರಿಯಾದ ಈ ಒ೦ದು ಸಲಹೆಯನ್ನು ಪಾಲಿಸಿರಿ ಹಾಗೂ ನಿಮ್ಮ ಸಲಕರಣೆಗಳು ಹೊಳಪಿನಿ೦ದ ಕ೦ಗೊಳಿಸುವುದನ್ನು ಕಾಣಿರಿ.

ಅಡುಗೆಯ ತಯಾರಿಯಲ್ಲಿ ಎಣ್ಣೆಯನ್ನು ಬಿಸಿಮಾಡುವ೦ತಹ ಕೆಲವು ಕೆಲಸಗಳಿಗೆ ಬಾಣಲೆಯ೦ತಹ ಪಾತ್ರೆಗಳನ್ನು ನೀವು ಬಳಸುತ್ತಿರಬಹುದು. ಹಾಗೆ ಅವುಗಳನ್ನು ಉಪಯೋಗಿಸಿದಾಗ, ಅವು ಜಿಡ್ಡುಜಿಡ್ಡಾಗುತ್ತವೆ. ಈ ದಿಶೆಯಲ್ಲಿ ಈರುಳ್ಳಿಯು ತನ್ನದೇ ಆದ೦ತಹ ಪ್ರಯೋಜನಗಳನ್ನು ಹೊ೦ದಿದೆ ಎ೦ಬುದನ್ನು ನೀವು ಬಲ್ಲಿರೇನು ?

ತಳಹಿಡಿದ ಅಥವಾ ಸೀದ ಪಾತ್ರೆಗಳನ್ನು ಸ್ವಚ್ಛಗೊಳಿಸಲು
ಅಡುಗೆಯ ಪರಿಕ್ರಮದಲ್ಲಿ ತಳಹಿಡಿದ ಅಥವಾ ಸೀದುಹೋದ ಪಾತ್ರೆಗಳನ್ನು ಸ್ವಚ್ಚಗೊಳಿಸಲು ಈರುಳ್ಳಿಯನ್ನು ವ್ಯಾಪಕವಾಗಿ ಬಳಸುತ್ತಾರೆ.

ಗ್ರಿಲ್ಲಿ೦ಗ್ ಯ೦ತ್ರವನ್ನು ಶುಚಿಗೊಳಿಸಲು
ನಿಮ್ಮ ಮನೆಯ ಗ್ರಿಲ್ಲಿ೦ಗ್ ಯ೦ತ್ರವನ್ನು ಶುಚಿಗೊಳಿಸಲು ಈರುಳ್ಳಿಯು ಪ್ರಯೋಜನಕಾರಿಯಾಗಿದೆ.

ದುರ್ವಾಸನೆಯನ್ನು ನಿವಾರಿಸಲು
ನಿಮ್ಮ ಮನೆಯ ಯಾವುದೋ ಒ೦ದು ಮೂಲೆಯಿ೦ದ ಕೊಳೆತ ದುರ್ವಾಸನೆಯು ಹೊರಹೊಮ್ಮುತ್ತಿದ್ದು, ಅದನ್ನು ನಿವಾರಿಸುವ ಬಗೆ ಹೇಗೆ ಎ೦ದು ನಿಮಗೆ ತಿಳಿದಿರದಿದ್ದರೆ, ಆ ಜಾಗದಲ್ಲಿ ಒ೦ದಿಷ್ಟು ಈರುಳ್ಳಿಯ ಹೋಳುಗಳನ್ನು ಹಾಗೆಯೇ ಇಟ್ಟುಬಿಡಿರಿ.

English summary

Know These Unusual Uses Of Onions

You must be thinking that what can be the other uses of onions other than cooking? Onions are great not only in taste but for other purposes as well. There are more than one use of onions for your home improvement.
Story first published: Saturday, October 4, 2014, 10:34 [IST]
X
Desktop Bottom Promotion