For Quick Alerts
ALLOW NOTIFICATIONS  
For Daily Alerts

ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ

|

ದಪ್ಪಗಿರುವ ಹೊದಿಕೆಗಳನ್ನು ಚಳಿಗಾಲಕ್ಕೆ ನಿಮ್ಮನ್ನು ಬೆಚ್ಚಗೆ ಇಡಲು ಸಹಕರಿಸುವ ಮೇಲೊದಿಕೆಗಳಾಗಿವೆ. ಆರಾಮವಾಗಿ ಕುಳಿತು ವಿಶ್ರಾಂತಿಯನ್ನು ಪಡೆದುಕೊಳ್ಳಲು ಸಹ ಇವು ನಿಮಗೆ ಸಹಕರಿಸುತ್ತವೆ. ಎಲ್ಲಾ ಹಾಸಿಗೆ ಮತ್ತು ಹೊದಿಕೆಗಳಂತೆ ದಪ್ಪಗಿರುವ ಹೊದಿಕೆಗಳನ್ನು ಸಹ ನಾವು ಸರಿಯಾಗಿ ನಿರ್ವಹಿಸಬೇಕಾಗುತ್ತದೆ.

ಸುಮಾರು ದಿನಗಳ ಕಾಲ ಈ ದಪ್ಪಗಿರುವ ಹೊದಿಕೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಮೈಮೇಲೆ ಕಜ್ಜಿ, ಗುಳ್ಳಿಗಳು ಮುಂತಾದ ತ್ವಚೆಯ ಸಮಸ್ಯೆಗಳು ಕಂಡು ಬರುತ್ತವೆ. ಈ ಅಂಕಣದಲ್ಲಿ ನಾವು ದಪ್ಪಗಿರುವ ಹೊದಿಕೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು, ಹಾಗು ಅವುಗಳಿಂದ ಕೀಟಾಣುಗಳನ್ನು ಮತ್ತು ಕೊಳೆಗಳನ್ನು ಹೇಗೆ ನಿವಾರಿಸಬೇಕು ಎಂಬುದರ ಕುರಿತು ತಿಳಿಸಿಕೊಡಲಿದ್ದೇವೆ.

ಈ ಸಲಹೆಗಳು ಎಲ್ಲಾ ಹಾಸಿಗೆ ಮತ್ತು ಹೊದಿಕೆಗಳಿಗು ಸಹ ಹೊಂದಿಕೊಳ್ಳುತ್ತದೆ ಎಂಬುದನ್ನು ನೀವು ಗಮನಿಸಬೇಕು. ಸಾಮಾನ್ಯವಾಗಿ ಇಂತಹ ಹೊದಿಕೆಗಳನ್ನು ತಿಂಗಳಿಗೊಮ್ಮೆಯಾದರು ಒಗೆದು ಸ್ವಚ್ಛಗೊಳಿಸುವುದು ಒಳಿತು. ಚಳಿಗಾಲದಲ್ಲಿ ಇದನ್ನು ಪ್ರತಿನಿತ್ಯ ಬಳಸುತ್ತಿದ್ದಲ್ಲಿ, ಇನ್‍ಫೆಕ್ಷನ್‍ಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಇದನ್ನು ಸರಿಯಾಗಿ ನಿರ್ವಹಣೆ ಮಾಡುವುದನ್ನು ಮರೆಯಬೇಡಿ. ಬೆಡ್ ಶೀಟ್ ಮೇಲಿನ ರಕ್ತದ ಕಲೆ ತೆಗೆಯಲು ಟಿಪ್ಸ್!

ಸಾಮಾನ್ಯವಾಗಿ ದಪ್ಪಗಿರುವ ಹೊದಿಕೆಗಳು ಭಿನ್ನ ಭಿನ್ನವಾದ ಫ್ಯಾಬ್ರಿಕ್‍ಗಳ ಪದರಗಳಿಂದ ಮಾಡಲ್ಪಟ್ಟಿರುತ್ತದೆ, ಹಾಗಾಗಿ ಇದು ಕೀಟಾಣು ಮತ್ತು ಕೊಳೆಗೆ ಅತಿ ಶೀಘ್ರವಾಗಿ ಸಿಕ್ಕಿಕೊಳ್ಳುತ್ತದೆ. ಬನ್ನಿ ಅಂತಹ ಸಮಸ್ಯೆಗಳಿಂದ ಹೇಗೆ ನಾವು ಮುಕ್ತರಾಗಬಹುದು ಎಂಬುದನ್ನು ಇಲ್ಲಿ ನೋಡೋಣ. ಈ ಸಲಹೆಗಳನ್ನು ನೀವು ಪಾಲಿಸುವುದರ ಮೂಲಕ ನಿಮ್ಮ ಹೊದಿಕೆಗಳ ಬಾಳಿಕೆಯನ್ನು ಮತ್ತು ಅಂದವನ್ನು ಕಾಪಾಡಿಕೊಳ್ಳಬಹುದು ಮುಂದೆ ಓದಿ...

ಸೂರ್ಯನ ಬೆಳಕಿನಲ್ಲಿ ಒಣಗಿಸಿ
ದಪ್ಪಗಿರುವ ಹೊದಿಕೆಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸುವುದರಿಂದ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯಬಹುದು. ಆದರೂ ಈ ಪ್ರಕ್ರಿಯೆಯು ನಿಮ್ಮ ಹೊದಿಕೆಗಳ ಬಣ್ಣವನ್ನು ಹಾಳು ಮಾಡುತ್ತದೆ ಮತ್ತು ಅದರ ಮೇಲೆ ಇರುವ ವಿನ್ಯಾಸಗಳನ್ನು ಮಂಕುಗೊಳಿಸುತ್ತದೆ. ಆದ್ದರಿಂದ ಇದನ್ನು ಬಿಸಿಲಿನಲ್ಲಿ ತುಂಬಾ ಹೊತ್ತು ಒಣಗಿಸಬೇಡಿ. ಒಗೆದ ಮೇಲೆ ನೀರು ಒಣಗುವವರೆಗೆ ಮಾತ್ರ ಇದನ್ನು ಒಣಗಿಸಿ. ಆದರೆ ನೇರವಾಗಿ ಬಿಸಿಲಿನಲ್ಲಿ ಒಣಗಿಸುವುದರಿಂದ ಬಣ್ಣ ಮತ್ತು ಫ್ಯಾಬ್ರಿಕ್ ಎರಡಕ್ಕು ಹಾನಿಯುಂಟಾಗುತ್ತದೆ.

ವ್ಯಾಕ್ಯೂಮ್ ಕ್ಲೀನರನ್ನು ಬಳಸುವುದು
ವ್ಯಾಕ್ಯೂಮ್ ಕ್ಲೀನರ್ ನಿಮ್ಮ ಹೊದಿಕೆಗಳನ್ನು ಮೇಲಿರುವ ಧೂಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದರ ಮೇಲೆ ಇರುವ ಧೂಳನ್ನು ಹೋಗಲಾಡಿಸಲು ವಾರಕ್ಕೊಮ್ಮೆ ವ್ಯಾಕ್ಯೂಮ್ ಕ್ಲೀನರ್ ಬಳಸಿ. ದಪ್ಪಗಿರುವ ಹೊದಿಕೆಗಳ ಮೇಲೆ ಇರುವ ಧೂಳನ್ನು ಹೋಗಲಾಡಿಸಲು ಇದು ಪರಿಣಾಮಕಾರಿಯಾದ ಮಾರ್ಗವಾಗಿರುತ್ತದೆ. ಅದರಲ್ಲೂ ಹೆಚ್ಚಾಗಿ ಬಳಸುವ ಹೊದಿಕೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಇದರಿಂದ ಅನುಕೂಲವಾಗುತ್ತದೆ.

ಡ್ರೈ ಕ್ಲೀನಿಂಗ್
ಒಂದು ವೇಳೆ ನಿಮ್ಮ ದಪ್ಪಗಿರುವ ಹೊದಿಕೆಗಳು ತುಂಬಾ ದಿನಗಳವರೆಗೆ ಬಳಸಲಿಲ್ಲವಾದಲ್ಲಿ, ಡ್ರೈಕ್ಲೀನ್ ಮಾಡಿ ಅದನ್ನು ಸ್ವಚ್ಛಗೊಳಿಸುವುದು ಒಳ್ಳೆಯ ಆಲೋಚನೆಯಾಗಿರುತ್ತದೆ. ಇದರಿಂದ ಅದರ ಸ್ವಚ್ಛತೆ ಮತ್ತು ಬಾಳಿಕೆಯು ಹೆಚ್ಚಾಗುತ್ತದೆ. ಹಾಗೆಂದು ನಿಮ್ಮ ದಪ್ಪಗಿರುವ ಹೊದಿಕೆಗಳನ್ನು ಡ್ರೈ ಕ್ಲೀನ್‍ಗೆ ಆಗಾಗ ನೀಡುತ್ತ ಇರಬೇಕು ಎಂದೇನಿಲ್ಲ, ಎರಡು ತಿಂಗಳಿಗೊಮ್ಮೆ ನೀಡಿದರೆ ಸಾಕು

English summary

Important Tips To Maintain Your Quilt

In this article, we look at some tips to maintain your quilt. We look at the ways to wash your quilt and eliminate germs and dust that are a common phenomenon in bedding items. Ideally, it is advisable to wash your quilt at least once a month.
X
Desktop Bottom Promotion