ಪಾತ್ರೆಗಳಿಂದ ಮೊಟ್ಟೆ ವಾಸನೆಯನ್ನು ತೆಗೆಯುವುದು ಹೇಗೆ?

By: Poornima Heggade
Subscribe to Boldsky

ಸಾಮಾನ್ಯವಾಗಿ ಪಾತ್ರೆಗಳಲ್ಲಿ ಮೊಟ್ಟೆಯನ್ನು ಬೇಯಿಸಿದ ನಂತರ ಅದರ ವಾಸನೆಯು ಹಾಗೇ ಉಳಿಯುತ್ತದೆ, ಇಂತಹ ವಾಸನೆಯನ್ನು ಹೋಗಲಾಡಿಸುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಹಾಗಾಗಿ ಪಾತ್ರೆಗಳಲ್ಲಿ ಹಾಗೂ ಪ್ಲೇಟ್‌ಗಳಲ್ಲಿ ಕಂಡುಬರುವ ಇಂತಹ ವಾಸನೆಯನ್ನು ಹೋಗಲಾಡಿಸುವುದು ಹೇಗೆ ? ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಅಡುಗೆ ಮಾಡಲು ಬಹಳ ಸಮಯವಿಲ್ಲದೇ ಇದ್ದಾಗ ಮನೆಯಲ್ಲಿ ಒಬ್ಬರೇ ಇದ್ದಾಗ ಏನಾದರೂ ತಿನ್ನಬೇಕು ಎಂದು ಆಸೆ ಬಂದಾಗ ನಮ್ಮ ನೆರವಿಗೆ ಬರುವುದು ಮೊಟ್ಟೆ. ಇದನ್ನು ದಿನದ ಯಾವುದೇ ಅವಧಿಯಲ್ಲಿ ಬೇಕಾದರೂ ಸೇವಿಸಬಹುದು ಎನ್ನುವುದೇ ಇದರ ಹೆಗ್ಗಳಿಕೆ. ಹಾಗೂ ನೀರಲ್ಲಿ ಹಾಕಿ ಬೇಯಿಸಲು ಬಿಟ್ಟು ನಿಮ್ಮ ಕೆಲಸಗಳನ್ನು ಮಾಡಿಕೊಂಡು ಬ್ರೆಡ್ ಜೊತೆಗೆ ತಿಂದರೆ ಸಾಕು. ಒಂದು ಹೊತ್ತಿನ ತಿಂಡಿ ಸಿದ್ಧ.

ಇದು ಮಾಡಲು ಸುಲಭವಿದ್ದಷ್ಟೇ ನಿಮ್ಮ ಹೊಟ್ಟೆಗೂ ಹೆಚ್ಚಿನ ತೊಂದರೆಕೊಡದ ತಿನಿಸು. ಇಷ್ಟೆಲ್ಲಾ ಉಪಯೋಗಗಳಿರುವ ಮೊಟ್ಟೆಯನ್ನು ಬಿಡಲು ಯಾರಿಗೆ ತಾನೆ ಇಷ್ಟವಿರುತ್ತದೆ. ಇದು ಹೆಚ್ಚಿನ ಮನೆಗಳಲ್ಲಿ ತಯಾರಾಗುವ ಫಾಸ್ಟ್ ಫುಡ್ ಎಂದರೆ ತಪ್ಪಲ್ಲ. ಆದರೆ ತಿಂಡಿಯೇನೋ ಸಿದ್ಧವಾಗುತ್ತದೆ ಆದರೆ ಇದನ್ನು ಬೇಯಿಸಿದ ಪಾತ್ರೆಗಳ ವಾಸನೆ ? ಅದನ್ನು ತೆಗೆಯುವರಾರು? ಅದನ್ನು ನೋಡಿಯೇ ಮೊಟ್ಟೆ ಬೇಡ ಎಂದನ್ನಿಸಿದರೆ ತಪ್ಪಲ್ಲ.

How to remove egg smell from utensils

ಅಡುಗೆ ಮಾಡುವುದಕ್ಕಿಂತ ಹೆಚ್ಚಿನ ಸಮಸ್ಯವನ್ನು ಪಾತ್ರೆ ತೊಳೆಯುವಲ್ಲಿ ನೀವು ವ್ಯಯಿಸುವುದಾದರೆ ಅಂತಹ ಅಡುಗೆ ನಿಮ್ಮ ಮೆಚ್ಚಿನ ಅಡುಗೆ ಅಲ್ಲವೇ ಅಲ್ಲ. ಮೊಟ್ಟೆ ವಾಸನೆಯನ್ನು ಪಾತ್ರೆಗಳಿಂದ ತೆಗೆಯಲು ಹಲವು ದಾರಿಗಳಿವೆ. ಇಲ್ಲಿ ಅವುಗಳಲ್ಲಿ ಪ್ರಮುಖವಾದುದನ್ನು ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಟ್ಟೆಗಳಿಂದ ಗ್ರೀಸ್ ಕಲೆ ತೆಗೆಯಲು ಸುಲಭೋಪಾಯಗಳು

ಕಡಲೆ ಹಿಟ್ಟು: ಅಡುಗೆಯೂ ಆಯ್ತು ತಟ್ಟೆಯಲ್ಲಿ ಹಾಕಿ ಮೊಟ್ಟೆ ಚಪ್ಪರಿಸಿದ್ದೂ ಆಯ್ತು ಆದರೆ ವಾಸನೆ. ಇನ್ನು ಅದೆಷ್ಟು ಹೊತ್ತು ಪಾತ್ರೆ ತಿಕ್ಕಬೇಕು ಎಮ್ದು ಚಿಂತಿಸಬೇಡಿ. ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದನು ಪಾತ್ರೆಗೆ ತಿಕ್ಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಪಾತ್ರೆಯನ್ನು ತಿಕ್ಕಿ ಹಾಗೂ ನೋಡಿ. ಮೊಟ್ಟೆ ಬೇಯಿಸಿದ ಸ್ವಲ್ಪವೂ ಕುರುಹು ಅದರಲ್ಲಿ ಸಿಗದು.

ಲಿಂಬೆ ರಸ: ಲಿಂಬೆ ರಸ ಅಡುಗೆ ಮನೆಯಲ್ಲಿ ಹಲವು ವಿಷಯಗಳಲ್ಲಿ ನಿಮ್ಮ ನೆರವಿಗೆ ಬರುವುದು ಸುಳ್ಳಲ್ಲ. ಅದೇ ರೀತಿ ಪಾತ್ರೆಗಳಿಂದ ಮೊಟ್ಟೆಯ ವಾಸನೆ ತೆಗೆಯುವಲ್ಲೂ ಇದು ಸಹಾಯಕ. ಲಿಂಬೆ ರಸವನ್ನು ನೇರವಾಗಿ ಹಾಕುವ ಬದಲು ಒಂದು ಬಟ್ಟೆಯ ಮೇಲೆ ಲಿಂಬೆ ರಸವನ್ನು ಹಾಕಿ ಅದನ್ನು ಪಾತ್ರೆಯ ಮೇಲೆ ತಿಕ್ಕಬಹುದು. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ಪಾತ್ರೆಯನ್ನು ಸ್ವಚ್ಛಗೊಳಿಸಿ. ಲಿಂಬೆ ರಸವನ್ನು ಬಳಸುವ ಬದಲಿಗೆ ಲಿಂಬೆ ಸತ್ವ ಉಳ್ಳ ಸಾಬೂನು ಇದ್ದರೂ ಇದೇ ರೀತಿಯ ಕೆಲಸ ಮಾಡುತ್ತದೆ.

ವಿನೇಗರ್ ಸಿಂಪಡನೆ: ಒಂದು ವೇಳೆ ಮೊಟ್ಟೆಯನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿ ತಿಂದಿದ್ದಿರಾದರೆ ಅದು ಪಾತ್ರೆಯಲ್ಲಿ ಬಹಳ ಹೊತ್ತು ಹಾಗೆಯೇ ಇರುತ್ತದೆ. ಆದರೆ ಇದೇ ವಾಸನೆ ನಿಮ್ಮ ಮನೆಯಲ್ಲೆಲ್ಲಾ ತುಂಬುವುದು ಯಾರಿಗೆ ತಾನೆ ಇಷ್ಟ ಹೇಳಿ. ಹೀಗಾಗಿ ಆ ಪಾತ್ರೆಗಳ ಮೇಲೆ ವಿನೆಗರ್ ಅನ್ನು ಸಿಂಪಡನೆ ಮಾಡಿ. ಸ್ವಲ್ಪ ಹೊತ್ತಿನ ನಂತರ ಸಾಬೂನಿನ ಸಹಾಯದೊಂದಿಗೆ ಸ್ವಚ್ಛಗೊಳಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳ್ಳಿ ವಸ್ತುಗಳು ಹೊಳೆಯಲು ಕೆಲವೊಂದು ಸಲಹೆಗಳು

ವಿನೇಗರ್ : ಪಾತ್ರೆಗಳಿಂದ ಮೊಟ್ಟೆಯ ವಾಸನೆ ತೆಗೆಯಲು ವಿನೆಗರ್ ಅನ್ನು ಇನ್ನೊಂದು ರೀತಿಯಲ್ಲಿ ಬಳಸಬಹುದು. ಮೊದಲು ಪಾತ್ರೆಯನ್ನು ಸಾಮಾನ್ಯವಾಗಿ ತೊಳೆಯುವಂತೆ ತೊಳೆಯಿರಿ ಹಾಗೂ ನಂತರ ಅದಕ್ಕೆ ವಿನೇಗರ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ ನಂತರ ಕೇವಲ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ.

ಬೇಕಿಂಗ್ ಸೋಡಾ ವಿಧಾನ: ಇದು ಸಾಮಾನ್ಯವಾಗಿ ನಿಮ್ಮ ಮೂಗು ತಾಳಲಾರದ ಎಲ್ಲಾ ವಾಸನೆಗಳನ್ನು ತೆಗೆಯಲು ಬಳಸುವ ಒಂದು ಸಾಮಾನ್ಯ ವಿಧಾನ. ಬೇಕಿಂಗ್ ಸೋಡಾವನ್ನು ಹಾಕಿಟ್ಟ ನೀರಿನಲ್ಲಿ ಆ ಪಾತ್ರೆಯನ್ನು ಮುಳುಗಿಸಿ ಹಾಗೂ ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಇದರ ನಂತರ ಸಾಮಾನ್ಯ ನೀರಿನಲ್ಲಿ ಈ ಪಾತ್ರೆಯನ್ನು ತೊಳೆಯಿರಿ. ಹೀಗೆ ಮಾಡಿದಾಗ ಪಾತ್ರೆಯ ಮೇಲಿನ ಮೊಟ್ಟೆಯ ವಾಸನೆ ಹೋಗುವುದಂತೂ ನಿಜ.

English summary

How to remove egg smell from utensils

How to remove egg smell from utensils is an important question. How to remove egg smell from plates and other utensils, can be easily answered in this article. Read on. Having eggs at any time of the day seems like a good idea. It saves major efforts in cooking. You just need to either boil them or scramble them and get some bread to have along. There are ways to remove that egg smell from Plates. Use of some basic ingredients helps you remove the egg smell.
Please Wait while comments are loading...
Subscribe Newsletter