For Quick Alerts
ALLOW NOTIFICATIONS  
For Daily Alerts

ಪ್ರಣಯಮಯ ಜಳಕ, ಕೇಳಿದರೇ ಪುಳಕ

By poornima Heggade
|

ನಿಮ್ಮ ಸಂಗಾತಿಯ ಜೊತೆಗೆ ಕಳೆದ ಎಲ್ಲಾ ಕ್ಷಣಗಳೂ ನೆನಪಿರುವಂಥವೇ. ಏಕಾಂತದಲ್ಲಿರಬೇಕಾದರೆ ಒಟ್ಟಾಗಿ ಕಳೆದ ಕ್ಷಣಗಳು ಬಹಳ ಮಧುರ. ಇದು ಬೆಡ್ ರೂಮ್ ಇರಬಹುದು ಅಥವಾ ಇನ್ನೆಲ್ಲಾದರೂ ಇರಬಹುದು. ಇಂಥಹುದೇ ಪ್ರಣಮಯಮ ಸ್ಥಳ ಇನ್ನೊಂದಿದೆ ಅದೇ ನಿಮ್ಮ ಮನೆಯ ಸ್ನಾನದ ಕೋಣೆ.

ಬೇಸಗೆಯ ಸುಡುವ ಬಿಸಿಲಿಗೆ ಸ್ನಾನ ಮಾಡುವುದಿರಲಿ, ಚಳಿಗಾಲದ ಚಳಿಗೆ ಬೆಚ್ಚಗಿನ ಸ್ನಾನವೇ ಆಗಿರಲಿ ಒಟ್ಟಾಗಿ ಕಳೆದ ಕ್ಷಣಗಳು ಅತಿ ಮಧುರ. ಹೀಗೆ ಜೊತೆಗೆ ಮಾಡಿದ ಸ್ನಾನ ನೆನಪಿನಲ್ಲಿರಬೇಕಾದರೆ ಅದಕ್ಕೆ ಅಂತಹ ವಾತಾವರಣ ನಿರ್ಮಾಣ ಆಗುವುದೂ ಬಹಳ ಮುಖ್ಯ. ಇದು ಮನೆಯಲ್ಲಿರಲಿ ಅಥವಾ ಹೊಟೇಲ್ ರೂಮ್ ಆಗಿರಲಿ. ನಿಮ್ಮ ಮನೆಯ ಸ್ವಿಮ್ಮಿಂಗ್ ಪೂಲ್ ನಲ್ಲೂ ಇಂತಹ ಸನ್ನಿವೇಶವನ್ನು ಸೃಷ್ಟಿಸಬಹುದು. ಇದು ನಿಮ್ಮ ಮತ್ತು ನಿಮ್ಮ ಸಂಗಾತಿ ಯಾವ ರೀತಿಯ ಸ್ಥಳವನ್ನು ಬಯಸುತ್ತೀರಿ ಎಂಬ ಮೇಲೆ ಅವಲಂಬಿತವಾಗಿದೆ.

ಕೆಲವು ಗುಲಾಬಿ ಹೂವುಗಳು, ಕ್ಯಾಂಡಲ್ ಗಳು ಪ್ರಣಯದ ಸಾಮಾನ್ಯ ಸೂಚಕಗಳು. ಇವನ್ನು ನೀವು ಎಲ್ಲೇ ಬಳಸಿದರೂ ಆ ಸ್ಥಳ ರೊಮ್ಯಾಂಟಿಕ್ ಆಗಿಯೇ ಕಾಣಿಸುತ್ತದೆ. ಇದರ ಜೊತೆಗೆ ಇನ್ನಷ್ಟು ವಸ್ತುಗಳನ್ನು ಇಟ್ಟು ನೀವು ನಿಮ್ಮ ಪ್ರಣಯ ಸ್ನಾನವನ್ನು ಮತ್ತಷ್ಟು ಪ್ರಣಯಾತ್ಮಕವನ್ನಾಗಿಸಬಹುದು. ಇಡಿ ಸ್ನಾನ ಗೃಹವನ್ನು ಇಬ್ಬರಿಗೂ ಸರಿ ಹೊಂದುವಂತೆ ಮಾಡಿಕೊಳ್ಳಿ. ಪ್ರತಿಯೊಂದು ಮೂಲೆಯೂ ಬಹಳ ಆಕರ್ಷಕವಾಗಿ ಕಾಣಿಸುವಂತೆ ಮಾಡಿ.

How to make your bathroom look romantic

ಕೆಲವು ಪ್ರಣಯಕಾಲದ ಕಲ್ಪನೆಗಳನ್ನು ಇಲ್ಲಿ ನೀಡಲಾಗಿದೆ ನಿಮ್ಮಿಬ್ಬರಿಗೆ ಇಷ್ಟವಾದ ಒಂದನ್ನು ಅಥವಾ ಒಂದೊಂದು ದಿನ ಒಂದೊಂದು ಅಲಂಕಾರವನ್ನು ಬಳಸಿ ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿ.

1. ಪ್ರೀತಿ ಎಂದರೆ ಗುಲಾಬಿ: ಕೆಂಪು ಮತ್ತು ಗುಲಾಬಿ ಯಾವಾಗಲೂ ಪ್ರೇಮಿಗಳ ಪಾಲಿಗೆ ಪಂಚಪ್ರಾಣ. ಕೆಲವು ವಿವಿಧ ಬಣ್ಣದ ಕ್ಯಾಂಡಲ್ ಗಳೊಂದಿಗೆ ಕೆಂಪು ಗುಲಾಬಿ ಹೂವುಗಳನ್ನು ಇಟ್ಟರೆ ಆ ಸ್ಥಳ ಎಂತಹನನ್ನೂ ಪ್ರೇಮಲೋಕಕ್ಕೆ ಕರೆದೊಯ್ಯುತ್ತದೆ. ಸ್ನಾನ ಗೃಹದ ಬಾಗಿಲಿನ ಬಳಿ ಕೆಂಪು ಗುಲಾಬಿ ಹೂಗಳ ಎಸಳುಗಳಿಂದ ಹೃದಯಾಕಾರದ ಚಿತ್ತಾರ ಬಿಡಿಸಬಹುದು. ನೀರಿನಲ್ಲಿ ಇದೇ ಆಕಾರವನ್ನು ಬಿಡಿಸಿದಲ್ಲಿ ಇದು ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ.

2. ಪ್ರೇಮ ಎಂದರೆ ಮಲ್ಲಿಗೆ: ಬರಿ ಕಣ್ಣಿಗೆ ಅಂದ ಅಥವಾ ಆಕರ್ಷಣೆ ಕಾಣುವುದು ಮುಖ್ಯವಲ್ಲ ಸುವಾಸನೆಯೂ ನಿಮ್ಮನ್ನು ಮತ್ಯಾವುದೋ ಲೋಕಕ್ಕೆ ಕರೆದೊಯ್ಯಬಹುದು. ಅದೂ ನೀವು ಸ್ನಾನ ಮಾಡುವ ನೀರಿನಲ್ಲಿ ಅಂತಹ ಸುವಾನಸೆ ಸೇರಿಕೊಂಡರೆ ಅದರ ಮಜವೇ ಬೇರೆ. ಇದರ ಜೊತೆಗೆ ಹಳದಿ ಬಣ್ಣದ ಕ್ಯಾಂಡಲ್ ಗಳು ಕೂಡ ಬಹಳ ಸುಂದರವಾಗಿ ಕಾಣಿಸುತ್ತವೆ. ಇದರ ಜೊತೆಗೆ ಆರ್ಕಿಡ್ ಕೂಡ ಬಹಳ ಸುಂದರವಾಗಿ ಕಾಣಿಸುತ್ತದೆ.

3. ಹಿತ್ತಲ ಪ್ರೇಮ ಕಾವ್ಯ: ನಿಮ್ಮ ಮನೆಯ ಹಿಂಭಾಗ ಸುರಕ್ಷಿತ ಮತ್ತು ಯಾರಿಗೂ ಕಾಣದೇ ಇದ್ದರೆ ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಸ್ನಾನದ ಹೇಳಿ ಮಾಡಿಸಿದ ಸ್ಥಳ. ಅಲ್ಲೇ ಒಂದು ಬಾತ್ ಟಬ್ ಅನ್ನು ಇಟ್ಟು ನಿಮ್ಮ ಸ್ನಾನವನ್ನು ಆರಂಭಿಸಬಹುದು. ಅದೂ ಆ ಬಾತ್ ಟಬ್ ನಲ್ಲಿ ನಿಮ್ಮ ಸಂಗಾತಿಯ ತೋಳಬಂದಿಯಲ್ಲಿ ಆಕಾಶವನ್ನು ಕಂಡರೆ ಅದರಷ್ಟು ಸುಖ ಮತ್ತೊಂದಿಲ್ಲ. ಇದರ ಪಕ್ಕದಲ್ಲಿ ಒಂದು ಟೇಬಲ್ ಇಟ್ಟು ಅದರಲ್ಲಿ ನಿಮ್ಮಿಬ್ಬರ ಇಷ್ಟದ ಪಾನೀಯಗಳನ್ನು ಇಟ್ಟು ಸೇವಿಸುತ್ತಿದ್ದರೆ ಅಂತಹ ಸುಖ ಮತ್ತೊಂದಿಲ್ಲ.

4. ಸ್ವಿಮ್ಮಿಂಗ್ ಪೂಲ್ ಪ್ರಣಯ: ನಿಮ್ಮ ಮನೆಯ ಒಳಗೆ ಸ್ವಿಮ್ಮಿಂಗ್ ಪೂಲ್ ಇದ್ದರೆ ನಿಮ್ಮಂತಹ ಭಾಗ್ಯಶಾಲಿ ಮತ್ತೊಂದಿಲ್ಲ. ಅಲ್ಲಿ ನಿಮಗೆ ಅಲಂಕಾರಕ್ಕೆ ಬೇಕಾದಷ್ಟು ಸ್ಥಳಾವಕಾಶವೂ ಲಭ್ಯವಿದೆ ಜೊತೆಗೆ ಬೇಕಾದ ರೀತಿಯಲ್ಲಿ ಅಲಂಕಾರ ಮಾಡಬಹುದು ಮತ್ತು ಹೆಚ್ಚು ವಸ್ತುಗಳನ್ನು ಜೋಡಿಸಿಡುವ ಅವಕಾಶವೂ ನಿಮ್ಮಲ್ಲಿದೆ. ಇಲ್ಲಿ ಬಲೂನ್ ಗಳು, ಕ್ಯಾಂಡಲ್ ಗಳು, ಹೃದಯಾಕಾರದ ಅಲಂಕಾರಿಕ ವಸ್ತುಗಳು ಬೇಕು.

5. ಸಂಗೀತಮಯ ಸ್ನಾನ: ಅಲಂಕಾರ ಮತ್ತು ಸುವಾಸನೆಯುಕ್ತ ಸ್ನಾನ ಗೃಹ ಬಿಟ್ಟರೆ ಮುಂದಿನ ಆಯ್ಕೆ ಇರುವುದು ಸಂಗೀತ. ನಿಮ್ಮ ಇಷ್ಟದ ಸಂಗೀತವನ್ನು ಹಿನ್ನೆಲೆಯಲ್ಲಿ ಹಾಕಿಕೊಂಡು ಇಬ್ಬರೂ ಸ್ನಾನ ಮಾಡುತ್ತಿದ್ದರೆ ಅದು ಬೇರೆಯದೇ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಕೇವಲ ಸಂಗೀತವೇ ನಿಮ್ಮ ಪ್ರಣಯವನ್ನು ವಿಶೇಷ ಮಾಡಬಲ್ಲುದು, ಪ್ರಯತ್ನಿಸಿ ನೋಡಿ.

English summary

How to make your bathroom look romantic

A romantic bath with your partner is the most intimate and passionate time spent together. This is always pleasant either in a warm summer evening or a cold winter night. To create a quixotic bath a proper atmosphere should be made.
Story first published: Saturday, January 4, 2014, 17:51 [IST]
X
Desktop Bottom Promotion