For Quick Alerts
ALLOW NOTIFICATIONS  
For Daily Alerts

ಅತ್ಯುತ್ತಮ ಪೀಠೋಪಕರಣಗಳನ್ನು ಹೇಗೆ ಆಯ್ಕೆಮಾಡಿಕೊಳ್ಳುವುದು?

By Viswanath S
|

ಗಾತ್ರದಲ್ಲಿ ಸಾಕಷ್ಟೆನಿಸಿರುವ ಪೀಠೋಪಕರಣದ ಕಡೆ ಗಮನ ಕೊಡಿ. ನೀವು ನೋಡಿದ ಕುರ್ಚಿಯಲ್ಲಿ ನಿಮಗೆ ಸಾಕಷ್ಟು ವಿಶಾಲವಾಗಿದೆಯೆಂದು ಕಂಡರೆ ಅದರಲ್ಲಿ ಕುಳಿತು ನೋಡಿ. ಕುರ್ಚಿಯನ್ನು ಎತ್ತಲು ಪ್ರಯತ್ನಪಟ್ಟು ನಿಮಗೇನಿಸುತ್ತದೆಯೆಂಬುದಕ್ಕೆ ಗಮನ ಕೊಡಿ.

ಒಂದು ಒಳ್ಳೆಯ ಗುಣಮಟ್ಟದ ಕುರ್ಚಿ, ಮೇಜು, ಸೋಫಾ ಇವುಗಳನ್ನು ಒಳ್ಳೆಯ ಸಾಮಗ್ರಿಗಳನ್ನು ಒಳಗೊಂಡ ಸ್ಪ್ರಿಂಗ್, ಚೌಕಟ್ಟು ಉಪಯೋಗಿಸಿ ತಯಾರು ಮಾಡಿರುತ್ತಾರೆ. ಅಂತಹ ಪೀಠೋಪಕರಣಗಳು ಸಾಮಾನ್ಯವಾಗಿ ಸರಾಸರಿ ಮಾದರಿಗಳಿಗಿಂತಾ ಭಾರವಾಗಿರುತ್ತವೆ.

How to choose the best furniture

ಸಾಮಗ್ರಿಗಳ ಮೇಲ್ಮೈ ಗುಣಮಟ್ಟವನ್ನು ಗಮನಿಸಿ
ಸಾಮಗ್ರಿಗಳು ಸಮೃದ್ಧ ಮತ್ತು ಪರಿಪೂರ್ಣವಾಗಿ ಮುಕ್ತಾಯವಾಗಿರಬೇಕು ಅಥವ ಮೇಲಿನ ಲೋಪದೋಷಗಳನ್ನು ಮುಚ್ಚಿಡಲು ಬಣ್ಣ ಬಳಿದಿರಬಾರದು. ಒಂದು ಅರೆಪಾರದರ್ಶಕ (ಟ್ರಾನ್ಸ್‌ಪೇರೇಂಟ್) ಕೋಟಿಂಗ್ ಸೂಕ್ತ ಮತ್ತು ಮರದ ವಿನ್ಯಾಸಗಳು ಕಾಣುವಂತಿರಬೇಕು. ಬ್ರಶ್ಶಿನ ಗುರುತು ಮತ್ತು ಗುಳ್ಳೆಗಳು ಕಾಣದಂತೆ ಒಂದು ಅಪಾರದರ್ಶಕ ಕೋಟಿಂಗ್ ಮಾಡುವುದರಿಂದ ಸಮಾನ ಸಾಂದ್ರತೆಯಿರುತ್ತದೆ. ಬೆತ್ತ ಮತ್ತು ರತ್ತನ್ (ಫ್ಯಾಬ್ರಿಕ್) ಪೀಠೋಪಕರಣಗಳಲ್ಲಿ ಯಾವುದೇ ಚೆಕ್ಕೆಗಳಿರುವುದಿಲ್ಲ ಮತ್ತು ಫಾಬ್ರಿಕ್‌ಗಳನ್ನು ಸಮವಾಗಿ ನೇಯ್ಗೆ ಮಾಡಿರುತ್ತಾರೆ.

ಪೀಠೋಪಕರಣಗಳನ್ನು ತಿರುಗಿಸಿ ಕೆಳಭಾಗವನ್ನು ಪರೀಕ್ಷೆ ಮಾಡಿ
ಪೀಠೋಪಕರಣವನ್ನು ಎತ್ತಿ ಅಥವ ಅದರ ತಯಾರಿಕೆಯ ಗುಣವನ್ನು ಅಳೆಯಲು ಕೆಳಗೆ ಬಗ್ಗಿ ನೋಡಿ. ಕೆಳಮಟ್ಟದ ಮೆತ್ತೆಗಳ ಹೊಲಿಗೆ, ಸಡಿಲವಾಗಿರುವ ಸ್ಕ್ರ್ಯೂ, ಏರುಪೇರಿರುವ ಕಾಲುಗಳು ಮತ್ತು ಅಸುರಕ್ಷಿತ ಸ್ಪ್ರಿಂಗ್‌ಗಳು ಇಂತಹ ತಪ್ಪುಗಳನ್ನು ಗಮನಿಸಿ. ನೀವು ಡಿಪಾರ್ಟ್ಮೆಂಟ್ ಸ್ಟೋರ್ಸಿನಲ್ಲಿ ಇಟ್ಟಿರುವ ಮಾದರಿ ಪೀಠೋಪಕರಣವನ್ನು ನೋಡುತ್ತಿರುವುದರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸುವ ಹಾಗಿಲ್ಲ. ಆದರೆ ಅದನ್ನು ಯಾವ ರೀತಿ ತಯಾರುಮಾಡಿದ್ದಾರೆ ಎನ್ನುವ ಬಗ್ಗೆ ಒಂದು ಕಲ್ಪನೆ ನೀಡುತ್ತದೆ. ಮರದ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಲು ಟಿಪ್ಸ್

ವಿವರಗಳನ್ನು ಪರಿಶೀಲಿಸಿ
ಉತ್ತಮಗುಣಮಟ್ಟದ ಪೀಠೋಪಕರಣದ ಲಕ್ಷಣಗಳೆಂದರೆ ಕಳಂಕರಹಿತ ಸ್ಯಾಂಡಿಂಗ್ ಮತ್ತು ಫಿನಿಶಿಂಗ್, ವಿವೇಚನಾಯುಕ್ತ ಬೆಸುಗೆ, ನೇರ ಬೆಸುಗೆ ಮತ್ತು ಹಾರ್ಡ್‌ವೇರನ್ನು ಉತ್ತವಾಗಿ ಮುಚ್ಚಿರಬೇಕು. ಬೋಲ್ಟ್, ನಟ್ ಪೀಠೋಪಕರಣಕ್ಕೆ ಸರಿ ಹೋಂದುವ ಬಣ್ಣವನ್ನು ಹಚ್ಚಿರಬೇಕು.

ಪೀಠೋಪಕರಣವನ್ನು ಇರಿಸುವ ಸ್ಥಳದ ಬಗ್ಗೆ ಯೋಜನೆ ಮಾಡಿ
ಒಳ್ಳೆಯ ಗುಣಮಟ್ಟದ ಪೀಠೋಪಕರಣಗಳನ್ನು ಕಂಡರೆ ಸಾಲದು. ಅದನ್ನು ಯಾವ ಸ್ಥಳದಲ್ಲಿ ಇರಿಸಬೇಕು ಮತ್ತು ಅದರ ಸುತ್ತಮುತ್ತ ಏನಿರಬೇಕು ಎಂಬುವ ಬಗ್ಗೆ ಯೋಚನೆ ಮಾಡಿ. ನಿಮ್ಮ ಕುರ್ಚಿ ಒಂದು ಕಿಟಕಿಯ ಮುಂದೆ ಇರಿಸಿದರೆ, ಅದರ ಫ್ಯಾಬ್ರಿಕ್ ಸೂರ್ಯನಿಗೆ ಒಡ್ಡುವುದರಿಂದ ಕಾಲಾನಂತರ ಮಸುಕಾಗಬಹುದು. ಆದ್ದರಿಂದ ಒಂದು ಸಾಧಾರಣ ಪ್ರಿಂಟ್ ಮತ್ತು ಕೆಲವೇ ಬಣ್ಣಗಳಿರುವ ಕುರ್ಚಿಯನ್ನು ಕೊಳ್ಳಿ. ನೀವು ಅಧ್ಯಯನ ಮಾಡುವ ಮೇಜನ್ನು ನಿಮ್ಮ ತುಂಟ ಮತ್ತು ಚೇಷ್ಟೆಮಾಡುವ ಮಕ್ಕಳೂ ಸಹ ಅದನ್ನು ತಮ್ಮ ಒಗಟುಗಳನ್ನು ಬಿಡಿಸಲು ಬಳಸುವದಾದರೆ ಒಂದು ಗಟ್ಟಿಮುಟ್ಟಾದ ಮೇಜನ್ನೇ ಖರೀದಿಸಿ.

English summary

How to choose the best furniture

A good quality chair, table, sofa, or chaise will have more raw materials including springs, frame, and cushion; such pieces are usually heavier than average quality models.
Story first published: Monday, October 27, 2014, 15:55 [IST]
X
Desktop Bottom Promotion