For Quick Alerts
ALLOW NOTIFICATIONS  
For Daily Alerts

ಚಿನ್ನಾಭರಣಗಳನ್ನು ಸ್ವಚ್ಚಗೊಳಿಸುವ ಸೂಕ್ತ ಸಲಹೆ ಇಲ್ಲಿದೆ ನೋಡಿ

|

ನಮ್ಮ ದಿನನಿತ್ಯದ ಧಾವಂತದ ನಡುವೆ ಚಿನ್ನಾಭರಣಗಳ ಸ್ವಚ್ಚತೆಗಾಗಿ ಆಭರಣ ಮಳಿಗೆಗೆ ಎಡತಾಕಲು ನಮಗೆ ಪುರುಸೊತ್ತೇ ಸಿಗುವುದಿಲ್ಲ. ಈಗ ನೀವು ನಿಮ್ಮ ಮನೆಯಲ್ಲಿಯೇ ಲಭ್ಯವಿರಬಹುದಾದ ಗೃಹೋಪಯೋಗಿ ಸಾಧನಗಳಾದ ಆಮ್ಲ ಪ್ರತಿಬಂಧಕ (antacid), ಅಲ್ಯೂಮಿನಿಯಂನ ಹಾಳೆ (aluminium foil), ಮತ್ತು ವಿನೆಗರ್ ಇವೇ ಮೊದಲಾದವುಗಳನ್ನು ಬಳಸಿಕೊಂಡು ನಿಮ್ಮ ಆಭರಣಗಳನ್ನು ಸ್ವಚ್ಚಗೊಳಿಸಿಕೊಳ್ಳಬಹುದು.

ಈ ಸಾಧನಗಳನ್ನುಪಯೋಗಿಸಿ ಸ್ವಚ್ಚಗೊಳಿಸುವುದು ಅದೆಷ್ಟು ಸುಲಭ ಎಂದು ನೀವೇ ಈ ಕೆಳಗಿನದ್ದನ್ನು ಓದಿ ತಿಳಿದುಕೊಳ್ಳಿರಿ. ಇದನ್ನು ತಿಳಿದುಕೊಂಡ ಬಳಿಕ, ನೀವು ಮತ್ತೆ ಆಭರಣಗಳ ಸ್ವಚ್ಚತೆಗಾಗಿ ಮಳಿಗೆಗೆ ಭೇಟಿ ನೀಡುವ ಪ್ರಮೇಯವೇ ಬಾರದು.

ಅಮೋನಿಯಾ:
ವಜ್ರಗಳು ಹೆಣ್ಣೋರ್ವಳ ಅತ್ಯುತ್ತಮ ಸ್ನೇಹಿತೆಯಾಗಿದ್ದರೂ ಸಹ, ಅವು ಕೊಳಕಾಗಿದ್ದರೆ ಅದು ಅವಳಿಗೆ ಇಷ್ಟವಾಗಲಾರದು. ವಜ್ರಾಭರಣವನ್ನು 1 ಕಪ್ ನಷ್ಟು ಬೆಚ್ಚಗಿನ ನೀರು ಮತ್ತು 1/4 ಕಪ್ ನಷ್ಟು ಅಮೋನಿಯಾ ಮಿಶ್ರಣದ ದ್ರಾವಣದಲ್ಲಿ 15 ನಿಮಿಷಗಳ ಕಾಲ ನೆನೆಸಿ ಇಡಿರಿ. ನಂತರ ಒಂದು ನಯವಾದ ಕೂದಲುಗಳುಳ್ಳ ಟೂಥ್ ಬ್ರಶ್ ಅನ್ನು ಉಪಯೋಗಿಸಿಕೊಂಡು, ಉಳಿದಿರಬಹುದಾದ ಯಾವುದೇ ಧೂಳನ್ನು, ವಿಶೇಷವಾಗಿ ಆಭರಣದ ಕುಸುರಿ ಕೆಲಸದ ಭಾಗಗಳಲ್ಲಿ ಮತ್ತು ಆಭರಣದ ಅಡಿಭಾಗದಲ್ಲಿನ ಧೂಳನ್ನು ತಿಕ್ಕಿ ತೆಗೆಯಿರಿ.

Easy tips to claen jewellery

ಈ ವಿಧಾನದಿಂದ ತಾಮ್ರದ ಪಾತ್ರೆಯನ್ನು ಫಳಫಳ ಹೊಳೆಯಿಸಿ

ವಿನೆಗರ್:
ನಿಮ್ಮ ಚಿನ್ನ ಮತ್ತು ಹರಳುಗಳ ಆಭರಣಗಳನ್ನು ಸ್ವಚ್ಚಗೊಳಿಸಲು ಬಿಳಿಯ ವಿನೆಗರ್ ನ ಬಳಕೆಯಷ್ಟು ಸುಲಭವಾದ ಮಾರ್ಗವು, ಬಹುಶಃ ಬೇರಾವ ವಸ್ತುವಿನ ಬಳಕೆಯಿಂದಲೂ ಸಹ ಸಾಧ್ಯವಾಗಲಾರದು. ನಿಮ್ಮ ಆಭರಣವನ್ನು ಹಾಗೆಯೇ ಸುಮ್ಮನೆ ವಿನೆಗರ್ ನ ಜಾಡಿಯಲ್ಲಿ ಹಾಕಿ, ಅದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಆ ಜಾಡಿಯಲ್ಲಿಯೇ ಇರಗೊಡಿರಿ ಹಾಗೂ ಮಧ್ಯೆ ಮಧ್ಯೆ ಸ್ವಲ್ಪ ಮಟ್ಟಿಗೆ ಆ ಜಾಡಿಯನ್ನು ಅಲುಗಾಡಿಸುತ್ತಿರಿ. ನಂತರ ಆಭರಣವನ್ನು ಜಾಡಿಯಿಂದ ಹೊರತೆಗೆದು, ಅಗತ್ಯವೆನಿಸಿದರೆ ನಯವಾದ ಕೂದಲುಳ್ಳ ಟೂಥ್ ಬ್ರಶ್ ನಿಂದ ಉಜ್ಜಿರಿ. ಆಮ್ಲ ಪ್ರತಿಬಂಧಕ (antacid) ನಿಮ್ಮ ಹೊಟ್ಟೆಯನ್ನು ಅಮ್ಲಪ್ರಕೋಪದಿಂದ ಶಮನಗೊಳಿಸಲು ಕೆಲಸ ಮಾಡುವ ಆಮ್ಲ ಪ್ರತಿಬಂಧಕದ (antacid) ಬುರುಗು ಅಥವಾ ನೊರೆಯ ಶಕ್ತಿಯು, ನಿಮ್ಮ ಆಭರಣಗಳನ್ನೂ ಕೂಡ ಸ್ವಚ್ಚ ಮಾಡಿಬಿಡಬಲ್ಲದು. ಈ ಆಮ್ಲ ಪ್ರತಿಬಂಧಕದ (antacid) ದ ಎರಡು ಗುಳಿಗೆಗಳನ್ನು ಬೆಚ್ಚಗಿನ ನೀರಿರುವ ಲೋಟದಲ್ಲಿ ಹಾಕಿ, ನೊರೆಯುoಟಾಗುವoತೆ ಮಾಡಿರಿ. ನಿಮ್ಮ ಆಭರಣವನ್ನು ಈ ಲೋಟದಲ್ಲಿ ಎರಡು ನಿಮಿಷಗಳ ಕಾಲ ಇರಗೊಟ್ಟು ನಂತರ ಹೊರತೆಗೆದು ತೊಳೆಯಿರಿ.

ಟ್ರೆಂಡ್ ನಲ್ಲಿರುವ ಬಾತ್ ರೂಂ ವಿನ್ಯಾಸ

ಆಮ್ಲ ಪ್ರತಿಬಂಧಕ (antacid)
ನಿಮ್ಮ ಹೊಟ್ಟೆಯನ್ನು ಅಮ್ಲಪ್ರಕೋಪದಿಂದ ಶಮನಗೊಳಿಸಲು ಕೆಲಸ ಮಾಡುವ ಆಮ್ಲ ಪ್ರತಿಬಂಧಕದ (antacid) ಬುರುಗು ಅಥವಾ ನೊರೆಯ ಶಕ್ತಿಯು, ನಿಮ್ಮ ಆಭರಣಗಳನ್ನೂ ಕೂಡ ಸ್ವಚ್ಚ ಮಾಡಿಬಿಡಬಲ್ಲದು. ಈ ಆಮ್ಲ ಪ್ರತಿಬಂಧಕದ (antacid) ದ ಎರಡು ಗುಳಿಗೆಗಳನ್ನು ಬೆಚ್ಚಗಿನ ನೀರಿರುವ ಲೋಟದಲ್ಲಿ ಹಾಕಿ, ನೊರೆಯುoಟಾಗುವoತೆ ಮಾಡಿರಿ. ನಿಮ್ಮ ಆಭರಣವನ್ನು ಈ ಲೋಟದಲ್ಲಿ ಎರಡು ನಿಮಿಷಗಳ ಕಾಲ ಇರಗೊಟ್ಟು ನಂತರ ಹೊರತೆಗೆದು ತೊಳೆಯಿರಿ.

ಸೋಪು ಮತ್ತು ನೀರು
ಮುತ್ತುಗಳು ಮತ್ತು ಪೂರ್ಣಪ್ರಮಾಣದ ಆಭರಣಗಳಲ್ಲದ, ನಾಜೂಕಾದ ಮತ್ತು ರಂಧ್ರಗಳಿರುವ ಅಲಂಕಾರಿಕ ವಸ್ತುಗಳನ್ನು ಸ್ವಚ್ಚಗೊಳಿಸಲು, ಅವುಗಳು ಅತ್ಯುತ್ತಮವಾದ ರೀತಿಯಲ್ಲಿ ಕಾಣುವಂತೆ ಮಾಡಲು ನಿಮಗೆ ಸೋಪು ಮತ್ತು ನೀರಿನ್ನು ಹೊರತುಪಡಿಸಿ ಬೇರಾವುದರ ಅವಶ್ಯಕತೆಯೂ ಇಲ್ಲ. ಎರಡು ಕಪ್ ಗಳಷ್ಟು ಬೆಚ್ಚಗಿನ ನೀರು ಮತ್ತು ಕೆಲವು ಹನಿಗಳಷ್ಟು ಹದವಾದ woolite ನಂತಹ ಮಾರ್ಜಕ (detergent)ಗಳ ಮಿಶ್ರಣವುಳ್ಳ ದ್ರಾವಣವೊಂದರಲ್ಲಿ ನಿಮ್ಮ ಮುತ್ತುಗಳ ಹಾರವನ್ನು ಕೂಡಲೇ ಅದ್ದುವುದರ ಮೂಲಕ ಸ್ವಚ್ಚಗೊಳಿಸಿರಿ.

ಪೂರ್ಣ ಪ್ರಮಾಣವಲ್ಲದ ಆಭರಣಗಳನ್ನು ಸ್ವಚ್ಚಗೊಳಿಸಲು ಸೋಪಿನ ಅವಶ್ಯಕತೆಯೂ ಇಲ್ಲ. ನಯವಾದ ಕೂದಲುಗಳುಳ್ಳ ಒಂದು ಟೂಥ್ ಬ್ರಶ್ ಅನ್ನು ಹಾಗೆಯೇ ಸುಮ್ಮನೆ ಬೆಚ್ಚಗಿನ ನೀರಿನಲ್ಲಿ ಒಮ್ಮೆ ಅದ್ದಿ ತೆಗೆದು ಆ ಆಭರಣದ ಕಲ್ಲುಗಳನ್ನು ಉಜ್ಜಿಬಿಡಿರಿ. ನಂತರ ಒಂದು ಸ್ವಚ್ಚವಾದ ಬಟ್ಟೆಯಿಂದ ಅದನ್ನು ಒರೆಸಿ ಒಣಗಿಸಿ ತದನಂತರ ಅದನ್ನು ಒಳಗಿಡುವ ಮೊದಲು ಕೆಲವು ಘಂಟೆಗಳ ಕಾಲ ಗಾಳಿಯಲ್ಲಿ ಒಣಗಲು ಬಿಡಿರಿ.

English summary

Easy tips to claen jewellery

Now you can clean your jewelry at home with basic household items like antacid, aluminum foil and vinegar. Read on to find out how easy it is.
Story first published: Wednesday, June 4, 2014, 16:44 [IST]
X
Desktop Bottom Promotion