For Quick Alerts
ALLOW NOTIFICATIONS  
For Daily Alerts

ಚರಂಡಿ ಬ್ಲಾಕ್ ಆಗಿದೆಯಾ? ಸರಿಪಡಿಸಲು ಇಲ್ಲಿವೆ ಸರಳ ವಿಧಾನಗಳು

By Hemanth P
|

ಬಂದ್ ಆಗಿರುವ ಚರಂಡಿ ಪ್ರತಿಯೊಬ್ಬರಿಗೂ ದುಸ್ವಪ್ನ. ಇದು ದುರ್ವಾಸನೆ ಬೀರುವುದು ಮಾತ್ರವಲ್ಲದೆ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಬಂದ್ ಆಗಿರುವಂತಹ ಪೈಪ್ ನ್ನು ಸರಿಪಡಿಸಲು ಪ್ಲಂಬರ್ ನ್ನು ಶೀಘ್ರವೇ ಕರೆಸಬೇಕು.

ಆದರೆ ಆತ ಅತಿಯಾಗಿ ಹಣ ವಸೂಲಿ ಮಾಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ನೀವು ಏನು ಮಾಡುತ್ತೀರಿ? ನಮ್ಮಲ್ಲಿ ಕೇಳಿ. ಹೌದು, ಬಂದ್ ಆಗಿರುವ ಚರಂಡಿಯನ್ನು ಸರಿಪಡಿಸಲು ನಾವು ನಿಮಗೆ ಹಲವಾರು ಐಡಿಯಾಗಳನ್ನು ನೀಡಲಿದ್ದೇವೆ. ಇದು ನಿಮಗೆ ತಕ್ಷಣ ಪರಿಹಾರ ನೀಡಲಿದೆ ಮತ್ತು ವೆಚ್ಚ ಕೂಡ ತುಂಬಾ ಕಡಿಮೆ.

ನಿಮ್ಮ ಹಳೆಯ ಬ್ರಶ್‌ನ 8 ಪವಾಡ ಸದೃಶ ಕಾರ್ಯಗಳು

ವಿನೇಗರ್ ಮತ್ತು ಅಡುಗೆ ಸೋಡಾ

ವಿನೇಗರ್ ಮತ್ತು ಅಡುಗೆ ಸೋಡಾ

ಒಂದು ಮಾಪನ ಕಪ್ ತೆಗೆದುಕೊಳ್ಳಿ. ಇದರಲ್ಲಿ 1/3 ಭಾಗ ವಿನೇಗರ್ ಮತ್ತು 1/3 ಭಾಗ ಅಡುಗೆ ಸೋಡಾ ಹಾಕಿ. ಇದನ್ನು ಮಿಶ್ರಣ ಮಾಡಿ. ಇದು ಬೇಗನೆ ಕರಗುವ ಕಾರಣ ಸಮಯ ವ್ಯರ್ಥ ಮಾಡದೆ ತಕ್ಷಣ ಇದನ್ನು ಬಂದ್ ಆಗಿರುವ ಚರಂಡಿಗೆ ಹಾಕಿ. ಇದು ತಕ್ಷಣ ಪೈಪ್ ನಲ್ಲಿ ಅಂಟಿಕೊಂಡಿರುವಂತಹ ಕೊಳಚೆ, ಅಂಟು ಮತ್ತು ಕೂದಲನ್ನು ತೆಗೆಯುತ್ತದೆ. ಕೆಲವು ಗಂಟೆ ಅಥವಾ ರಾತ್ರಿಯಿಡಿ ಹಾಗೆ ಇರಲಿ. ಬಳಿಕ ಬಿಸಿ ನೀರು ಹಾಕಿ. ಮೊದಲು ಪೈಪ್ ಗೆ ಬೇಕಿಂಗ್ ಸೋಡಾ ಹಾಕಿ ಬಳಿಕ ಅದಕ್ಕೆ ವಿನೇಗರ್ ಹಾಕಬಹುದು.

ವಯರ್ ಹ್ಯಾಂಗರ್

ವಯರ್ ಹ್ಯಾಂಗರ್

ಬಟ್ಟೆಗಳನ್ನು ನೇತಾಡಿಸುವ ಹ್ಯಾಂಗರ್ ತೆಗೆದುಕೊಳ್ಳಿ ಮತ್ತು ಅದನ್ನು ನಿಮಗೆ ಸಾಧ್ಯವಿದ್ದಷ್ಟು ಮಟ್ಟಿಗೆ ನೇರಗೊಳಿಸಿ. ಇದರ ಒಂದು ಬದಿಯನ್ನು ಸ್ವಲ್ಪ ಬಗ್ಗಿಸಿ ಕೊಕ್ಕೆಯಂತೆ ಮಾಡಿ. ಇದನ್ನು ಪೈಪ್ ನ ಒಳಗೆ ಹಾಕಿ ಅಲ್ಲಿರುವ ಕಸಕಡ್ಡಿಗಳನ್ನು ಹೊರತೆಗೆಯಲು ಪ್ರಯತ್ನಿಸಿ. ಇದರಿಂದ ಎಲ್ಲಾ ರೀತಿಯ ಕಸಕಡ್ಡಿಗಳನ್ನು ತೆಗೆಯಬಹುದು. ನೀವು ಈ ರೀತಿ ಮಾಡುವಾಗ ಕಸವನ್ನು ಹೊರಗೆ ತೆಗೆಯಬೇಕೇ ಹೊರತು ಒಳಗೆ ದೂಡಬಾರದು. ವೈರ್ ನ್ನು ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಕಸ ಹೊರತೆಗೆಯಿರಿ. ಬಳಿಕ ಸರಿಯಾಗಿ ನೀರು ಹಾಕಿ ಮತ್ತು ಇದು ಪರಿಣಾಮಕಾರಿಯಾಗಿ ಚರಂಡಿ ಸ್ವಚ್ಛಗೊಳಿಸುತ್ತದೆ.

ಕಾಸ್ಟಿಕ್ ಸೋಡಾ

ಕಾಸ್ಟಿಕ್ ಸೋಡಾ

ಈ ವಿಧಾನವನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು. ಕಾಸ್ಟಿಕ್ ಸೋಡಾ ಅಥವಾ ಸೋಡಿಯಂ ಹೈಡ್ರೊಕ್ಸೈಡ್ ನಿಂದ ನಿಮ್ಮ ಚರ್ಮ ಸುಟ್ಟು ಹೋಗಬಹುದು. ಇದರಿಂದ ಈ ವಿಧಾನ ತುಂಬಾ ಪರಿಣಾಮಕಾರಿ. ಆದರೆ ಎಚ್ಚರ ಅಗತ್ಯ. ಮೊದಲಿಗೆ ಎರಡು ಕೈಗಳಿಗೆ ರಬ್ಬರ್ ಗ್ಲೌಸ್ ಹಾಕಿಕೊಳ್ಳಿ ಮತ್ತು ಕಣ್ಣಿಗೆ ಸುರಕ್ಷತೆ ಮಾಡಿಕೊಳ್ಳಿ. ಒಂದು ಬಕೆಟ್ ತೆಗೆದುಕೊಂಡು ಅದರ ಮುಕ್ಕಾಲು ಭಾಗದಷ್ಟು ನೀರು ಹಾಕಿ. ಇದರ ಬಳಿಕ ಕಾಸ್ಟಿಕ್ ಸೋಡಾ ಹಾಕಿ ಮತ್ತು ಒಂದು ಮರದ ಚಮಚದಿಂದ ಕಲಸಿ. ಇದು ಬುಗ್ಗೆಯೇಳಲು ಆರಂಭಿಸುತ್ತದೆ ಮತ್ತು ಬಿಸಿಯಾಗುತ್ತದೆ. ಇದನ್ನು ಬಂದ್ ಆಗಿರುವ ಚರಂಡಿಗೆ ಹಾಕಿ ಮತ್ತು 30 ನಿಮಿಷ ಹಾಗೆ ಇರಲಿ. ಇದರ ಬಳಿಕ ಬಿಸಿ ನೀರಿನಿಂದ ಚರಂಡಿ ಸ್ವಚ್ಛಗೊಳಿಸಿ. ಅಗತ್ಯಬಿದ್ದರೆ ಇದನ್ನು ಮತ್ತೊಮ್ಮೆ ಪ್ರಯತ್ನಿಸಿ.

ಅಡುಗೆ ಸೋಡಾ ಮತ್ತು ಉಪ್ಪು

ಅಡುಗೆ ಸೋಡಾ ಮತ್ತು ಉಪ್ಪು

ಅರ್ಧ ಕಪ್ ಅಡುಗೆ ಸೋಡಾ ತೆಗೆದುಕೊಳ್ಳಿ ಮತ್ತು ಅರ್ಧ ಕಪ್ ಉಪ್ಪು ಹಾಕಿ ಮಿಶ್ರಣ ಮಾಡಿ ಬಂದ್ ಆಗಿರುವ ಪೈಪ್ ಗೆ ಹಾಕಿ. ಇದು 10-20 ನಿಮಿಷ ಹಾಗೆ ಇರಲಿ. ಇದರ ಬಳಿಕ ಬಿಸಿ ನೀರು ಹಾಕಿ. ಅಡುಗೆ ಸೋಡಾ, ಉಪ್ಪು, ಬಿಸಿ ನೀರು ಸೇರಿ ರಾಸಾಯನಿಕ ಪ್ರಕ್ರಿಯೆ ಉಂಟುಮಾಡಿ ಬ್ಲಾಕ್ ನ್ನು ತೆಗೆದುಹಾಕುತ್ತದೆ.

ಬಿಸಿ ನೀರು

ಬಿಸಿ ನೀರು

ಇದು ಬಂದ್ ಆಗಿರುವ ಚರಂಡಿ ಸ್ವಚ್ಛಗೊಳಿಸಲು ಒಳ್ಳೆಯ ವಿಧಾನ. ಆದಾಗ್ಯೂ ಇದು ತುಂಬಾ ಪರಿಣಾಮಕಾರಿ. ಸ್ವಲ್ಪ ನೀರು ತೆಗೆದುಕೊಂಡು ಅದನ್ನು ಸರಿಯಾಗಿ ಬಿಸಿ ಮಾಡಿ. ಇದನ್ನು ನಿಧಾನವಾಗಿ ಚರಂಡಿಗೆ ಹಾಕಿ. ಎರಡು ಮೂರು ಹಂತದಲ್ಲಿ ಪೈಪ್ ಮೇಲೆ ನೀರನ್ನು ಹಾಕಿ. ಇದರಿಂದಾಗಿ ಪ್ರತೀ ಹಂತದಲ್ಲೂ ಬಿಸಿ ನೀರು ಕೆಲಸ ಮಾಡುತ್ತದೆ. ಚರಂಡಿ ಸ್ವಚ್ಛಗೊಳಿಸಲು ಇದು ಅತ್ಯಂತ ವೇಗ ಹಾಗೂ ಸುಲಭ ವಿಧಾನಗಳಲ್ಲಿ ಒಂದಾಗಿದೆ.

English summary

Drain Unclogger Ideas that are Sure to Work Wonders

Clogged drains are everyone’s nightmare. Not only do they smell horrendous (with all the strange, stale smells), but they also cause extreme annoyance when they disrupt and delay your routine with all that murk.
X
Desktop Bottom Promotion