For Quick Alerts
ALLOW NOTIFICATIONS  
For Daily Alerts

ಬಾಳೆ ಹಣ್ಣಿನ ಸಿಪ್ಪೆಯ ಚಮತ್ಕಾರೀ ಉಪಯೋಗ!

|

ಹಣ್ಣುಗಳು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿಯೋ ಅಂತೆಯೇ ಅದರ ಸಿಪ್ಪೆ ತಿರುಳು ಕೂಡ ನಮಗೆ ಒಂದಿಲ್ಲೊಂದು ಸಹಾಯ ಮಾಡುತ್ತದೆ. ಇಂದು ನಾವಿಲ್ಲಿ ನಿಮಗಿಲ್ಲಿ ತಿಳಿಯಪಡಿಸುತ್ತಿರುವ ಒಂದು ಹಣ್ಣು

ದೇಹಕ್ಕೆ ಆರೋಗ್ಯಕಾರಿ ಮಾತ್ರವಲ್ಲ, ಅದರ ಸಿಪ್ಪೆ ಕೂಡ ಪರಿಣಾಮಕಾರಿ. ಹೌದು ಬಾಳೆಹಣ್ಣು ನಮಗೆ ಆರೋಗ್ಯಕಾರಿ ಅಭಿವೃದ್ಧಿಯನ್ನು ಹೇಗೆ ಮಾಡುತ್ತದೋ ಅಂತೆಯೇ ಅದರ ಸಿಪ್ಪೆ ಚಮತ್ಕಾರವನ್ನೇ ಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸಲು ಸರಳ ಸಲಹೆಗಳು

ನಿಮ್ಮ ಶೂವನ್ನು ಫಳಫಳನೆ ಹೊಳೆಯುವಂತೆ ಮಾಡುವ ತಾಕತ್ತು ಬಾಳೆಹಣ್ಣಿಗಿದೆ ಅಂತೆಯೇ ನಿಮ್ಮ ಮನೆಯನ್ನು ಸುಂದರವಾಗಿಟ್ಟುಕೊಳ್ಳುವ ಜವಬ್ದಾರಿಯನ್ನು ಈ ಹಣ್ಣಿನ ಸಿಪ್ಪೆ ಚೆನ್ನಾಗಿ ಮಾಡುತ್ತದೆ. ನಿಮ್ಮ ಮನೆಯನ್ನು ಬಾಳೆಹಣ್ಣಿನಲ್ಲಿ ಸ್ವಚ್ಚಮಾಡುವಾಗ ಸಿಪ್ಪೆ ಹೆಚ್ಚು ಹಣ್ಣಾಗಿಲ್ಲ ಮತ್ತು ಕೊಳೆಯಾಗಿಲ್ಲ ಎಂಬುದನ್ನು ದೃಢೀಕರಿಸಿ.

ಎಷ್ಟೋ ಬಾರಿ ನೆಲದಲ್ಲಿ ಬಿದ್ದಿರುವ ಬಾಳೆಹಣ್ಣು ಸಿಪ್ಪೆ ನಮ್ಮನ್ನು ಬೀಳುವಂತೆ ಮಾಡುತ್ತದೆ ಹಾಗಿದ್ದರೆ ಇದರಿಂದ ಮನೆಯ ಸ್ವಚ್ಛತೆ ಹೇಗೆ ಸಾಧ್ಯ ಎಂಬ ಅಚ್ಚರಿ ನಿಮ್ಮಲ್ಲಿ ಉಂಟಾಗುವುದು ಸಹಜವೇ? ನಿಮ್ಮ ನೆಲದ ಮಾರ್ಬಲ್ ಅನ್ನು ಹೊಳೆಯುವಂತೆ ಮಾಡುವ ಬಾಳೆಹಣ್ಣು ಸಿಪ್ಪೆ ನಿಮ್ಮ ಪರಿಶ್ರಮವನ್ನು ಕಡಿಮೆಗೊಳಿಸುತ್ತದೆ.

ನಿಮ್ಮ ಮನೆಯನ್ನು ಬಾಳೆಹಣ್ಣು ಸಿಪ್ಪೆ ಹೇಗೆ ಸುಂದರಪಡಿಸುತ್ತದೆ ಎಂಬುದನ್ನು ನೋಡೋಣ ಬನ್ನಿ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಡುಗೆಮನೆ ಟವೆಲ್ ಸ್ವಚ್ಛವಾಗಿಡಲು ಕೆಲವೊಂದು ಟಿಪ್ಸ್

ಬೆಳ್ಳಿಯ ಸಾಮಾಗ್ರಿಗಳು:

ಬೆಳ್ಳಿಯ ಸಾಮಾಗ್ರಿಗಳು:

ನಿಮ್ಮ ಮನೆಯನ್ನು ಸುಂದರಗೊಳಿಸುವ ವಿಧಾನ ನಿಮ್ಮ ಬೆಳ್ಳಿಯ ಪಾತ್ರಯಿಂದಲೇ ಶುರುವಾಗಲಿ. ವೃತ್ತಾಕಾರವಾಗಿ ಸಿಪ್ಪೆಯನ್ನು ಬೆಳ್ಳಿಯ ಪಾತ್ರೆಯ ಮೇಲೆ ತಿಕ್ಕಿ ನಂತರ ಬೆಚ್ಚಗಿನ ನಿರಿನಿಂದ ಪಾತ್ರೆಯನ್ನು ತೊಳೆಯಿರಿ.

ಶೂ ಪಾಲಿಶ್:

ಶೂ ಪಾಲಿಶ್:

ಮೊದಲು ಬಾಳೆ ಸಿಪ್ಪೆಯಲ್ಲಿರುವ ನಾರು ನಾರು ಅಂಶವನ್ನು ತೆಗೆಯಿರಿ. ಸಿಪ್ಪೆಯನ್ನು ಶೂನ ಒಳಭಾಗದಲ್ಲಿ ಉಜ್ಜಲು ಪ್ರಾರಂಭಿಸಿ. ಶೂ ಪಾಲಿಶ್ ಇಲ್ಲದೆ ಸಿಪ್ಪೆಯ ಮೂಲಕ ನಿಮ್ಮ ಶೂವನ್ನು ಹೊಳಪಾಗಿಸಿ.

ಮನೆಯ ಗಿಡಗಳನ್ನು ಹೊಳಪಾಗಿಸಿ:

ಮನೆಯ ಗಿಡಗಳನ್ನು ಹೊಳಪಾಗಿಸಿ:

ನಿಮ್ಮ ಮನೆಯ ಸಸ್ಯಗಳಲ್ಲಿ ಧೂಳು ಮತ್ತು ಕೊಳಕು ತುಂಬಿದೆಯೇ? ಹೆಚ್ಚಿನ ನೀರನ್ನು ಬಳಸುವ ಬದಲಿಗೆ ಸಿಪ್ಪೆಯ ಒಳಗಿನ ಅಂಶವನ್ನು ಬಳಸಿಕೊಂಡು ಎಲೆಯ ಮೇಲೆ ಉಜ್ಜಿ. ಪರಿಣಾಮ ನಿಮ್ಮ ಗಮನಕ್ಕೆ ಬರುತ್ತದೆ.

ಸಿಂಟೆಕ್ಸ್/ನೀರಿನ ಟ್ಯಾಂಕ್:

ಸಿಂಟೆಕ್ಸ್/ನೀರಿನ ಟ್ಯಾಂಕ್:

ನಿಮ್ಮ ನೀರಿನ ಟ್ಯಾಂಕಿ ಅಥವಾ ಸಿಂಟೆಕ್ಸ್ ಅನ್ನು ಸ್ವಚ್ಛಗೊಳಿಸಲು ಒಂದೆರಡು ಬಾಳೆ ಸಿಪ್ಪೆಯನ್ನು ನೀರಿಗೆ ಹಾಕಿ. ಕೊಳಕಾದ ನೀರಿನಲ್ಲಿರುವ ವಿಷಕಾರಿ ಅಂಶಗಳನ್ನು ಸಿಪ್ಪೆ ಹೀರುತ್ತದೆ.

ವ್ಯಾಕ್ಸ್ ನಿವಾರಣೆಗೆ:

ವ್ಯಾಕ್ಸ್ ನಿವಾರಣೆಗೆ:

ನಿಮ್ಮ ಗ್ಲಾಸ್ ಟೇಬಲ್ ವ್ಯಾಕ್ಸ್‌ನಿಂದ ತುಂಬಿದೆಯೇ? ವ್ಯಾಕ್ಸ್ ಕಲೆಯಿರುವಲ್ಲಿ ಬಾಳೆಹಣ್ಣು ಸಿಪ್ಪೆಯನ್ನು ಒರೆಸಿ. ವ್ಯಾಕ್ಸ್ ಅನ್ನು ಸಿಪ್ಪೆ ಮೃದುಗೊಳಿಸುತ್ತದೆ ತಕ್ಷಣ ಒದ್ದೆ ಬಟ್ಟೆಯಿಂದ ಕಲೆಯನ್ನು ನಿವಾರಿಸಿ.

ನಿಮ್ಮ ಪೀಠೋಪಕರಣಕ್ಕಾಗಿ:

ನಿಮ್ಮ ಪೀಠೋಪಕರಣಕ್ಕಾಗಿ:

ನಿಮ್ಮ ಮರದ ಪೀಠೋಪಕರಣಗಳನ್ನು ಸಿಪ್ಪೆಯ ಸಹಾಯದೊಂದಿಗೆ ಹೊಳೆಯಿಸಿ. ಸಿಪ್ಪೆಯನ್ನು ಕುರ್ಚಿ ಅಥವಾ ಸೋಪಾದ ಮೇಲೆ ತಿಕ್ಕಿ ನಂತರ ಒದ್ದೆ ಬಟ್ಟೆಯಿಂದ ಒರೆಸಿ.

ಇಂಕ್ ಕಲೆಗಳ ನಿವಾರಣೆಗಾಗಿ:

ಇಂಕ್ ಕಲೆಗಳ ನಿವಾರಣೆಗಾಗಿ:

ನಿಮ್ಮ ಕೈಯಲ್ಲಿರುವ ಇಂಕ್ ಗುರುತನ್ನು ನಿವಾರಿಸಲು ಸಿಪ್ಪೆಯನ್ನು ಕೈಗೆ ಒರೆಸಿ ನಂತರ ಸ್ವಚ್ಛ ನೀರಿನಿಂದ ನಿಮ್ಮ ಕೈ ತೊಳೆದುಕೊಳ್ಳಿ.

ಸಿಡಿಗಳ ಮೇಲಿನ ಗುರುತುಗಳನ್ನು ನಿವಾರಿಸುತ್ತದೆ:

ಸಿಡಿಗಳ ಮೇಲಿನ ಗುರುತುಗಳನ್ನು ನಿವಾರಿಸುತ್ತದೆ:

ನಿಮ್ಮ ಸಿಡಿಗಳ ಮೇಲೆ ಗುರುತುಗಳು ಹೆಚ್ಚಾಗಿದ್ದರೆ, ವೃತ್ತಾಕಾರವಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಸಿಡಿಯ ಮೇಲೆ ಉಜ್ಜಿ ನಂತರ ಮೃದು ಬಟ್ಟೆಯಿಂದ ಒರೆಸಿ.

English summary

Clean Your Home With Banana Peels

Did you know that a banana peel can make your shoes shine when you run out of shoe polish? Yes, just like this, there are some surprising ways in which banana peels can be used in 
 
 and around your home when it comes to cleaning.
X
Desktop Bottom Promotion