For Quick Alerts
ALLOW NOTIFICATIONS  
For Daily Alerts

ಈ ಉತ್ಪನ್ನಗಳಿಂದ ಹೊಳೆಯುವ ಬಾತ್‌ರೂಮ್ ನಿಮ್ಮದಾಗಲಿ

|

ನಿಮ್ಮ ಮನೆಯಲ್ಲಿ ಅತ್ಯಂತ ಕೊಳಕಾಗಿರುವ ಸ್ಥಳವೆಂದರೆ ಬಾತ್‌ರೂಮ್ ಎಂದೇ ಪರಿಗಣಿಸಲ್ಪಡುತ್ತದೆ. ಇದಕ್ಕೆ ನಿಮ್ಮ ಸಮ್ಮತಿ ಇದೆಯೇ? ಚಿಂತಿಸದಿರಿ ಕೆಲವೊಂದು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ನಿಮ್ಮ ಬಾತ್‌ರೂಮ್ ಅನ್ನು ಸ್ವಚ್ಛಗೊಳಿಸಿ ಅಷ್ಟಲ್ಲದೇ ಹೊಳೆಯುವ ಬಾತ್‌ರೂಮ್ ನೆಲವನ್ನೂ ನೋಡಿ ಖಂಡಿತ ನಿಮಗೆ ಆಶ್ಚರ್ಯವುಂಟಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಳೆ ಹಣ್ಣಿನ ಸಿಪ್ಪೆಯ ಚಮತ್ಕಾರೀ ಉಪಯೋಗ!

ಹೌದು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ನಿಮ್ಮ ಬಾತ್‌ರೂಮ್‌ಗೂ ಕೂಡ ಸ್ವಚ್ಛತೆಯ ಬಿರುದನ್ನು ನೀಡಬಹುದು. ಬಾತ್‌ರೂಮ್ ತೊಳೆಯುವುದೆಂದರೆ ಕಷ್ಟದ ಕೆಲಸ ಎಂಬುದು ಮನೆಯೊಡತಿಯ ಮಾತು. ನಾವಿಲ್ಲಿ ನೀಡುತ್ತಿರುವ ಕೆಲವೊಂದು ಸುಲಭ ವಿಧಾನಗಳು ಈ ಹೊರೆಯನ್ನು ನಿಮ್ಮ ತಲೆಯ ಮೇಲಿಂದ ನಿವಾರಿಸಬಹುದು.

ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ಬಾತ್‌ರೂಮ್ ಸ್ವಚ್ಛಕಗಳನ್ನು ನೀವು ಖರೀದಿಸುತ್ತೀರಿ ಆದರೆ ಅವುಗಳು ನಿಷ್ಪ್ರಯೋಜಕವಾಗಿರುತ್ತವೆ. ಒಂದು ಬಾರಿ ಮಾತ್ರವೇ ತಮ್ಮ ಜಾದೂವನ್ನು ತೋರಿಸಿ ಪುನಃ ನಿಮ್ಮ ನೆಲವನ್ನು ಹಾಳುಗೆಡವುತ್ತವೆ.

ಆದರೆ ನಾವಿಲ್ಲಿ ನೀಡಿರುವ ಕೆಲವು ವಿಧಾನಗಳು, ನೈಸರ್ಗಿಕ ಉತ್ಪನ್ನಗಳು ನಿಮ್ಮ ಬಾತ್‌ರೂಮ್ ನೆಲವನ್ನು ಶಾಶ್ವತವಾಗಿ ಸ್ವಚ್ಛಗೊಳಿಸಬಹುದು. ಬನ್ನಿ ಹಾಗಿದ್ದರೆ ತಡವೇಕೆ? ಆ ಉತ್ಪನ್ನಗಳು ಯಾವುವು ಎಂಬುದನ್ನು ನೋಡಲು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸಲು ಸರಳ ಸಲಹೆಗಳು

ಬೇಕಿಂಗ್ ಪೌಡರ್:

ಬೇಕಿಂಗ್ ಪೌಡರ್:

ಅರ್ಧ ಕಪ್‌ನಷ್ಟು ಬೇಕಿಂಗ್ ಸೋಡಾ ನಿಮ್ಮ ಬಾತ್‌ರೂಮ್ ನೆಲವನ್ನು ಝಗಮಗಿಸಬಹುದು. ಸೋಡಾವನ್ನು ನೆಲದ ಮೇಲೆ ಚೆಲ್ಲಿ ಅರ್ಧಗಂಟೆಯ ನಂತರ ದಪ್ಪನೆಯ ಬ್ರಶ್ ಬಳಸಿ ನೆಲವನ್ನು ತೊಳೆಯಿರಿ. ಟೈಲ್ಸ್‌ನಲ್ಲಿ ಅಂಟಿಕೊಂಡಿರುವ ಕೊಳಕು ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ. ವಾರಕ್ಕೊಮ್ಮೆ ಈ ರೀತಿ ಮಾಡಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಲಿಂಬೆ:

ಲಿಂಬೆ:

ನೆಲದ ಮೇಲೆ ಅಂಟಿರುವ ಕೊಳಕನ್ನು ಲಿಂಬೆ ಸರಳವಾಗಿ ನಿವಾರಿಸುತ್ತದೆ. ಕಮೋಡ್ ಮೇಲೆ ಕೊಳೆ ಮೆತ್ತಿಕೊಂಡಿದ್ದರೆ ಚಿಂತಿಸದಿರಿ ಅರ್ಧ ತುಂಡು ಲಿಂಬೆ ಹೋಳನ್ನು ಹಿಂಡಿ ಕಮೋಡ್ ಸುತ್ತ ಹಿಂಡಿ. ಲಿಂಬೆ ರಸ ಸುತ್ತಲೂ ಹರಡುತ್ತಿದ್ದಂತೆ ಬ್ರಶ್ ಬಳಸಿ ಆ ಜಾಗವನ್ನು ತೊಳೆಯಿರಿ. ನಿಮ್ಮ ಕಮೋಡ್‌ಗೆ ಉತ್ತಮ ಸುವಾಸನೆಯನ್ನು ಇದು ನೀಡುತ್ತದೆ.

ಉಪ್ಪು:

ಉಪ್ಪು:

ನಿಮ್ಮ ಬಾತ್‌ರೂಮ್ ನೆಲವನ್ನು ತೊಳೆಯಲು ಬಳಸುವ ಇನ್ನೊಂಸು ನೈಸರ್ಗಿಕ ವಿಧಾನವಾಗಿದೆ ಉಪ್ಪು. ನಿಮ್ಮ ಟೈಲ್ಸ್‌ನಲ್ಲಿ ಅಂಟಿಕೊಂಡಿರುವ ಹಳದಿ ಕಲೆಯನ್ನು ಹೋಗಲಾಡಿಸಲು ಇದು ಉತ್ತಮ ಪರಿಹಾರಕ. ಉಪ್ಪನ್ನು ಹಳದಿಗಟ್ಟಿರುವ ಟೈಲ್ಸ್ ಮೇಲೆ ಚಿಮುಕಿಸಿ ನಂತರ ಬಿಸಿ ನೀರಿನಿಂದ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

ವಿನೇಗರ್:

ವಿನೇಗರ್:

ನಿಮ್ಮ ಬಾತ್‌ರೂಮ್ ಸ್ವಚ್ಛತೆಗೆ ವಿನೇಗರ್ ಒಂದು ಉತ್ತಮ ಪರಿಹಾರಕವಾಗಿದೆ. ಸಿಂಕ್ ಪೈಪ್ ಮೇಲೆ ಸ್ವಲ್ಪ ವಿನೇಗರ್ ಅನ್ನು ಹಾಕಿ ನೆಲದಲ್ಲಿ ಮೂಡಿರುವ ಬಕೇಟ್ ರಿಂಗ್ ಕಲೆಯ ಮೇಲೂ ವಿನೇಗರ್ ಚಿಮುಕಿಸಿ 15 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಲಿಂಬೆ ರಸವನ್ನು ಅದರ ಮೇಲೆ ಹಾಕಿ. ನಂತರ ಇನ್ನೂ 15 ನಿಮಿಷಗಳಾದ ಮೇಲೆ ಬಾತ್‌ರೂಮ್ ಬ್ರಶ್ ಬಳಸಿಕೊಂಡು ವೃತ್ತಾಕಾರ ಮಾದರಿಯಲ್ಲಿ ನೆಲವನ್ನು ತೊಳೆಯಿರಿ.

ಸೋಡಾ:

ಸೋಡಾ:

ಹೌದು. ಸೋಡಾ ಕೂಡ ನಿಮ್ಮ ಬಾತ್‌ರೂಮ್ ನೆಲಕ್ಕೆ ಝಗಮಗಿಸುವ ಹೊಳಪನ್ನು ನೀಡುತ್ತದೆ. ಸೋಡಾವನ್ನು ನೆಲಕ್ಕೆ ಹಾಕಿ ನಂತರ ಅದು ಗುಳ್ಳೆಗಳನ್ನು ಹೊರಬಿಡುವವರೆಗೂ ಸ್ವಲ್ಪ ಕಾಯಿರಿ. ಕೂಡಲೇ ಮೃದು ಬಟ್ಟೆಯನ್ನು ತೆಗೆದುಕೊಂಡು ಆ ಜಾಗವನ್ನು ಒರೆಸಿ.

ವೋಡ್ಕಾ:

ವೋಡ್ಕಾ:

ನಿಮ್ಮ ಬಾತ್‌ರೂಮ್ ಟೈಲ್ಸ್ ಅನ್ನು ತೊಳೆಯಲು ವೋಡ್ಕಾ ಒಂದು ಉತ್ತಮ ಉತ್ಪನ್ನ ಎಂಬುದು ನಿಮಗೆ ತಿಳಿದಿದೆಯೇ? ಇದೊಂದು ವೆಚ್ಚಕರ ಉತ್ಪನ್ನವಾದರೂ, ತುಂಬಾ ಪರಿಣಾಮಕಾರಿ.

English summary

Clean You Bathroom Floor In Simple Ways

The bathroom is one of the places in your home which is considered to be the dirtiest. Do you agree? However, you can change that by using some of the best natural products to make your bathroom looks clean and sparkling too.
Story first published: Thursday, February 27, 2014, 16:12 [IST]
X
Desktop Bottom Promotion