For Quick Alerts
ALLOW NOTIFICATIONS  
For Daily Alerts

ದೀರ್ಘಕಾಲ ತರಕಾರಿ ಸಂರಕ್ಷಿಲು ಉತ್ತಮ ಟಿಪ್ಸ್‌ಗಳು

|

ಬೇಸಿಗೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ, ಈ ಬೇಸಿಗೆಯಂತೂ ನಿಮ್ಮ ಆಹಾರದಲ್ಲಿ ಹೈಜೀನ್ ನ್ಯೂಟ್ರೀನ್‌ಗಳನ್ನು ಪೂರೈಸುವಂತಹ ವಿಧ ವಿಧದ ತರಕಾರಿಗಳನ್ನು ಹೊತ್ತು ತರುತ್ತಿದೆ. ಆದರೆ ಅವುಗಳ ಪಾಲನೆ ಸಂರಕ್ಷಣೆ ತುಸು ತಲೆನೋವಿನ ಕೆಲಸವೇ. ಫ್ರಿಡ್ಜ್‌ನಲ್ಲಿ ತರಕಾರಿಗಳನ್ನು ಸಂರಕ್ಷಿಸಿಡಬಹುದು ಆದರೆ ಅವುಗಳ ತಾಜಾತನ ನಷ್ಟವಾಗದಂತೆ ಈ ಶೀತಲ ಪೆಟ್ಟಿಗೆ ಕಾಪಾಡುವುದಿಲ್ಲ.

ತಜ್ಞರ ಪ್ರಕಾರ ತರಕಾರಿಗಳನ್ನು ತಾಜಾವಾಗಿ ಇರಿಸುವಂತಹ ಕೆಲವೊಂದು ವಿಧಾನಗಳಿದ್ದು ನೀವು ಅವುಗಳನ್ನು ಬಳಸುವವರೆಗೆ ಅವುಗಳು ಬಾಡದೇ ಉತ್ತಮವಾಗಿ ಇರುತ್ತವೆ. ಇಂದು ಬೋಲ್ಡ್ ಸ್ಕೈ ನಿಮ್ಮೊಂದಿಗೆ ತರಕಾರಿಗಳನ್ನು ಜೋಪಾನವಾಗಿ ತೆಗೆದಿರಿಸುವ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನೀಡುತ್ತಿದೆ. ಇದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಾ ಹಾಗಿದ್ದರೆ ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ 16 ಆಹಾರಗಳು!

1.ಆಲೂಗಡ್ಡೆಗಳು

1.ಆಲೂಗಡ್ಡೆಗಳು

ಈ ತರಕಾರಿಯನ್ನು ಇತರ ತರಕಾರಿಯೊಂದಿಗೆ ಮಿಶ್ರ ಮಾಡದೇ ಬೇರೆಯೇ ತೆಗೆದಿರಿಸುವುದು ಉತ್ತಮ ಪ್ರಕ್ರಿಯೆ. ವಿಶೇಷವಾಗಿ ಈರುಳ್ಳಿಯಲ್ಲಿರುವ ಗ್ಯಾಸ್ ಅಂಶವು ಆಲೂಗಡ್ಡೆಯನ್ನು ಬೇಗನೇ ಹಾಳುಮಾಡುತ್ತದೆ.

2.ಈರುಳ್ಳಿ

2.ಈರುಳ್ಳಿ

ಈ ತರಕಾರಿಯನ್ನು ಬೇರೆಯೇ ಇರಿಸುವುದು ಉಳಿದ ತರಕಾರಿಗಳು ಹಾಳಾಗುವುದರಿಂದ ತಪ್ಪಿಸಬಹುದು. ಈರುಳ್ಳಿಯ ರಸ ಅಥವಾ ಅದರಲ್ಲಿರುವ ಗ್ಯಾಸ್ ಬೇರೆ ತರಕಾರಿಗಳಿಗೆ ಕಂಟಕ ಉಂಟುಮಾಡುವುದು ಖಂಡಿತ.

3.ಸಿಲೆರಿ

3.ಸಿಲೆರಿ

ನೀವು ಸಿಲೆರಿ ಸೊಪ್ಪನ್ನು ದೀರ್ಘ ಸಮಯದವರೆಗೆ ಕೆಡದಂತೆ ರೆಫ್ರಿಜರೇಟರ್‌ನಲ್ಲಿ ಸಂರಕ್ಷಿಸಿಡುವ ಉಪಾಯದಲ್ಲಿದ್ದರೆ ಸ್ವಲ್ಪ ಪ್ರಮಾಣದ ನೀರಿನಲ್ಲಿ ಸ್ಟೆಮ್ - ಪಕ್ಕ ಇಡಿ.

4.ಅಣಬೆಗಳು

4.ಅಣಬೆಗಳು

ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಅಣಬೆಗಳನ್ನು ತೆಗೆದಿರಿಸುವುದು ಒಳ್ಳೆಯದು. ಪ್ಲಾಸ್ಟಿಕ್‌ಗೆ ಕೆಲವು ಹೋಲ್‌ಗಳನ್ನು ಮಾಡಿಕೊಳ್ಳಿ ಇದರಿಂದ ತರಕಾರಿಗೆ ಬೇಕಾದ ಗಾಳಿ ರವಾನೆಯಾಗುತ್ತದೆ.

5.ಬದನೆ

5.ಬದನೆ

ಬದನೆಯನ್ನು ಸಂಗ್ರಹಿಸಿಡುವುದು ತುಂಬಾ ಸುಲಭವಾಗಿದೆ. ಅವು ಪಕ್ವಗೊಳ್ಳಲು ಅವುಗಳನ್ನು ಪಾತ್ರೆಯಲ್ಲಿ ತೆಗೆದಿಡಿ. ಸಿಪ್ಪೆ ಮೃದುವಾದಂತೆ ಅದರಿಂದ ರೆಸಿಪಿ ತಯಾರಿಸಿ.

6.ಕ್ಯಾಬೇಜ್

6.ಕ್ಯಾಬೇಜ್

ಸೂರ್ಯನ ಬಿಸಿಲು ಅಥವಾ ಬಿಸಿ ಸಂಪನ್ಮೂಲಗಳಿಂದ ಕ್ಯಾಬೇಜನ್ನು ದೂರವಿರಿಸಿ.

7.ಬೆಲ್ ಪೆಪ್ಪರ್ಸ್

7.ಬೆಲ್ ಪೆಪ್ಪರ್ಸ್

ನೀವು ಬೆಲ್ ಪೆಪ್ಪರ್ಸ್ ಅನ್ನು ಖರೀದಿಸುವಾಗ, ಮೊದಲು ತರಕಾರಿಯ ಮೇಲ್ಭಾಗವನ್ನು ಕತ್ತರಿಸಿ ಬಟ್ಟೆಯಿಂದ ಮುಚ್ಚಲಾದ ತೆರೆದ ಪಾತ್ರೆಯಲ್ಲಿ ಇದನ್ನು ಸಂಗ್ರಹಿಸಿಡಿ.

8.ಕ್ಯಾರೇಟ್

8.ಕ್ಯಾರೇಟ್

ಕ್ಯಾರೇಟ್‌ನ ಮೇಲ್ಭಾಗವನ್ನು ಕತ್ತರಿಸಿ ಹಾಗೂ ಮುಚ್ಚಿದ ಪಾತ್ರೆಯಲ್ಲಿ ಸಾಕಷ್ಟು ತೇವಾಂಶವಿರುವಲ್ಲಿ ಕ್ಯಾರೇಟ್ ಅನ್ನು ತೆಗೆದಿರಿಸಿ. ಇದು ತರಕಾರಿಗಳನ್ನು ದೀರ್ಘ ಕಾಲದವರೆಗೆ ಸಂಗ್ರಹಿಸಿಡುವ ಒಂದು ಉತ್ತಮ ವಿಧಾನವಾಗಿದೆ.

9.ಬ್ರಕೋಲಿ

9.ಬ್ರಕೋಲಿ

ತಾಜಾ ತರಕಾರಿಗಳನ್ನು ಬಹಳ ಸಮಯದವರೆಗೆ ಹೇಗೆ ತೆಗೆದಿರಿಸುವುದು ಎಂದು ಚಿಂತಿತರಾಗಿದ್ದೀರಾ? ಬ್ರಕೋಲಿಯನ್ನು ತೆರೆದ ಪಾತ್ರೆಯಲ್ಲಿ ಫ್ರಿಡ್ಜ್‌ನಲ್ಲಿಡಿ. ತೇವವಿರುವ ಬಟ್ಟೆಯಲ್ಲಿ ಬ್ರಕೋಲಿಯನ್ನು ಸುತ್ತಿ ನಂತರ ಫ್ರಿಡ್ಜ್‌ನಲ್ಲಿರಿಸಿ.

10.ಮುಳ್ಳುಸೌತೆ

10.ಮುಳ್ಳುಸೌತೆ

ಇದು ಮುಳ್ಳುಸೌತೆಯ ಸೀಸನ್ ಆಗಿದ್ದು ನಿಮ್ಮ ದೇಹವನ್ನು ತಂಪಾಗಿರಿಸಲು ಮುಳ್ಳುಸೌತೆಯನ್ನು ಸಾಧ್ಯವಾದಷ್ಟು ಸೇವಿಸಿ. ಒದ್ದೆ ಮಾಡಿದ ಬಟ್ಟೆಯಿಂದ ಮುಳ್ಳುಸೌತೆಯನ್ನು ಸುತ್ತಿ ನಂತರ ಫ್ರಿಡ್ಜ್‌ನಲ್ಲಿರಿಸುವುದು ಉತ್ತಮ.

11.ಬೆಳ್ಳುಳ್ಳಿ

11.ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ತುಂಡರಿಸಿದಾಗ ಅದಕ್ಕೆ ವಿಶೇಷ ವಾಸನೆ ಇರುವುದು ಸಹಜವೇ. ಅದಕ್ಕಾಗಿ ಅದನ್ನು ಪ್ಲಾಸ್ಟಿಕ್ ಬ್ಯಾಗ್ ಅಥವಾ ಪಾತ್ರೆಯಲ್ಲಿ ತೆಗೆದಿಡಿ. ತಂಪಾದ ಮತ್ತು ಕತ್ತಲೆಯ ಸ್ಥಳದಲ್ಲಿ ಅದನ್ನು ಸಂರಕ್ಷಿಸಿಡುವುದು ಬೆಳ್ಳುಳ್ಳಿಯ ತಾಜಾತನವನ್ನು ಕಾಪಾಡುತ್ತದೆ.

12.ಹಸಿರು ಬೀನ್ಸ್

12.ಹಸಿರು ಬೀನ್ಸ್

ಬೀನ್ಸ್ ಅನ್ನು ಆರ್ದ್ರತೆ ಇರುವಲ್ಲಿ ಸಂಗ್ರಹಿಸಿಡುವುದು ಅದರ ತಾಜಾತನಕ್ಕೆ ಯೋಗ್ಯವಾಗಿರುತ್ತದೆ. ಒದ್ದೆ ಬಟ್ಟೆಯಲ್ಲಿ ಅವುಗಳನ್ನು ಸುತ್ತಿ ನಂತರ ಮುಚ್ಚಿದ ಪಾತ್ರೆಯಲ್ಲಿ ಹಗುರವಾಗಿ ಇರಿಸುವುದು ಉತ್ತಮವಾಗಿರುತ್ತದೆ.

13.ಬೆಂಡೆಕಾಯಿ

13.ಬೆಂಡೆಕಾಯಿ

ಆರ್ದ್ರತೆ ಬೆಂಡೆಕಾಯಿಗೆ ಅವಶ್ಯವಿಲ್ಲ. ಆದ್ದರಿಂದ ಒಣಗಿದ ಬಟ್ಟೆಯಿಂದ ಬೆಂಡೆ ಕಾಯಿಯನ್ನು ಸುತ್ತಿ ಇರಿಸುವುದು ಉತ್ತಮ. ನಂತರ ಅವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ತಾಜಾವಾಗಿ ಇರಿಸಲು ತೆಗೆದಿರಿಸಬಹುದು.

14.ಪಾಲಾಕ್

14.ಪಾಲಾಕ್

ಪಾಲಾಕ್ ಅನ್ನು ತೆರೆದ ಪಾತ್ರೆಯಲ್ಲಿ ಫ್ರಿಡ್ಜ್‌ನಲ್ಲಿ ತೆಗೆದಿರಿಸುವುದು ಸೊಪ್ಪು ತಾಜಾ ಆಗಿ ಇರಲು ಸಹಾಯಕ. ಇದರಿಂದ ನೀವು ಪಾಲಾಕ್ ಅನ್ನು ಬಳಸುವವರೆಗೆ ಅದು ಗರಿಗರಿಯಾಗಿರುತ್ತದೆ.

English summary

Best Ways To Store Veggies For Long

Since summer is in full swing, the weather brings along some of the best summer vegetables which you can add to your daily diet. But, the challenge is keeping them fresh, which is not an easy task.
X
Desktop Bottom Promotion