For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಬೆಸ್ಟ್ ವಿಧಾನಗಳು

|

ಪ್ಲಾಸ್ಟಿಕ್ ಪಾತ್ರೆಗಳನ್ನು ಸೋಪು ಬಳಸಿ ತೊಳೆದ ನಂತರವೂ ಪಾತ್ರೆಯಲ್ಲಿನ ವಾಸನೆ ಹೋಗಿರುವುದಿಲ್ಲ. ಈ ವಾಸನೆಯನ್ನು ತೆಗೆಯಲು ನೀವು ಕಷ್ಟದ ವಿಧಾನಗಳನ್ನು ಅನುಸರಿಸಬೇಕೆಂದೇನಿಲ್ಲ. ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಪ್ಲಾಸ್ಟಿಕ್ ಪಾತ್ರೆಯಲ್ಲಿನ ವಾಸನೆಯನ್ನು ದೂರ ಮಾಡಬಹುದು.

ಹೌದು ಈ ಲೇಖನದಲ್ಲಿ ನಾವಿಂದು ಅತಿ ಸರಳ ವಿಧಾನದಲ್ಲಿ ಪ್ಲಾಸ್ಟಿಕ್ ಪಾತ್ರೆಯ ವಾಸನೆಯನ್ನು ದೂರ ಮಾಡುವುದು ಹೇಗೆಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಮೊದಲಿಗೆ ತಂಪು ನೀರಿನಲ್ಲಿ ನಂತರ ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ಪ್ಲಾಸ್ಟಿಕ್ ಪಾತ್ರೆಯನ್ನು ನೆನೆಸಿಡಿ. ನಂತರ ಈ ಕೆಳಗಿನ ವಿಧಾನಗಳನ್ನು ಬಳಸಿಕೊಂಡು ಪ್ಲಾಸ್ಟಿಕ್‌ನ ವಾಸನೆಯನ್ನು ದೂರ ಮಾಡಿ.

Best Ways To Clean Plastic Containers

ಬಟ್ಟೆಯಿಂದ ಇಂಕ್ ಕಲೆಯನ್ನು ಹೋಗಲಾಡಿಸಲು ಸರಳ ವಿಧಾನಗಳು

1.ಸುದ್ದಿಪತ್ರಿಕೆ:
ಸುದ್ದಿಪತ್ರಿಕೆಯನ್ನು ಫೋಲ್ಡ್ ಮಾಡಿಕೊಂಡು ಪ್ಲಾಸ್ಟಿಕ್ ಪಾತ್ರೆಯೊಳಗೆ ಹಾಕಿಡಿ. ಮುಚ್ಚಳವನ್ನು ಭದ್ರವಾಗಿ ಮುಚ್ಚಿ ಮತ್ತು ತಡರಾತ್ರಿಯವರೆಗೆ ಹಾಗೆಯೇ ಬಿಡಿ. ಮರುದಿನ ಬೆಚ್ಚಗಿನ ನೀರಿನಲ್ಲಿ ಪಾತ್ರೆಯನ್ನು ತೊಳೆಯಿರಿ.

2.ಕ್ಯಾರಕೋಲ್:
ಪ್ಲಾಸ್ಟಿಕ್ ಪಾತ್ರೆಗೆ ಒಂದು ತುಂಡು ಸ್ವಚ್ಛ ಕ್ಯಾರಕೋಲ್ ತುಂಡನ್ನು ಹಾಕಿಡಿ. ಪಾತ್ರೆ ಒಣಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಪ್ಲಾಸ್ಟಿಕ್ ನಲ್ಲಿರುವ ವಾಸನೆಯನ್ನು ಹೋಗಲಾಡಿಸಿ, ಅದನ್ನು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ.

3.ಬೇಕಿಂಗ್ ಸೋಡಾ:
ಬೇಕಿಂಗ್ ಸೋಡಾ ಮತ್ತು ನೀರನ್ನು ಬಳಸಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಪ್ಲಾಸ್ಟಿಕ್ ಪಾತ್ರೆಗೆ ಉಜ್ಜಿ. ಎರಡು ದಿನಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಅದನ್ನು ಹರಿಯುತ್ತಿರುವ ನೀರಿನಲ್ಲಿ ತೊಳೆಯಿರಿ.

ಲಂಚ್ ಬಾಕ್ಸ್ ನಿಂದ ಜಿಡ್ಡಿನಂಶ ಹೋಗಲಾಡಿಸಲು ಟಿಪ್ಸ್

4.ಲಿಂಬೆ:
ತಾಜಾ ಲಿಂಬೆಯನ್ನು ಬಳಸಿ ನಿಮ್ಮ ಪ್ಲಾಸ್ಟಿಕ್ ಪಾತ್ರೆಯ ವಾಸನೆಯನ್ನು ದೂರಮಾಡಿ. ಪ್ಲಾಸ್ಟಿಕ್ ಪಾತ್ರೆಯ ಒಳಗೆ ಲಿಂಬೆಯ ತುಂಡನ್ನು ಬಳಸಿ ಉಜ್ಜಿದರೆ ಪ್ಲಾಸ್ಟಿಕ್ ಬಣ್ಣ ಇನ್ನಷ್ಟು ಹೊಳೆಯುವಂತೆ ಆಗುತ್ತದೆ.

5.ಕಾಫಿ:
ಕಾಫಿಯ ಡಿಕಾಕ್ಷನ್ ಬಳಸಿ ಪ್ಲಾಸ್ಟಿಕ್ ಪಾತ್ರೆಯ ವಾಸನೆಯನ್ನು ದೂರ ಮಾಡಬಹುದು. ಕಾಫಿ ಡಿಕಾಕ್ಷನ್ (ಒದ್ದೆ ಅಥವಾ ಒಣಗಿದ) ಅನ್ನು ಪಾತ್ರೆಯ ಒಳಗೆ ಚೆನ್ನಾಗಿ ತಿಕ್ಕಿ ಮತ್ತು ನಂತರ ಶುದ್ಧ ನೀರಿನಲ್ಲಿ ತೊಳೆಯಿರಿ.

English summary

Best Ways To Clean Plastic Containers

If your soap does not clean out the grime from your plastic containers, then you should try using home ingredients. These natural ingredients will leave behind a lovely odour and no stains.
Story first published: Friday, May 30, 2014, 10:03 [IST]
X
Desktop Bottom Promotion