For Quick Alerts
ALLOW NOTIFICATIONS  
For Daily Alerts

ಬಿಳಿ ಬಟ್ಟೆಗಳಿಗೆ ಹೊಸತನ ನೀಡುವ ಡಿಟರ್ಜೆಂಟ್ ಪೌಡರ್‌ ಯಾವುದು?

|

ಬಿಳಿ ಬಟ್ಟೆಗಳನ್ನು ಒಗೆಯುವಾಗ ಸ್ವಲ್ಪ ನಾಜೂಕಿನಿಂದ ಒಗೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅದರಲ್ಲೂ ಬಹುತೇಕ ಮಂದಿಗೆ ಬಿಳಿ ಬಟ್ಟೆಗಳೆಂದರೆ ಪ್ರಾಣ. ಅದರ ಮೇಲೆ ಸಣ್ಣ ಕಲೆ ಮೂಡಿದರು ಅವರ ಮುಖ ಕಪ್ಪಗಾಗುತ್ತದೆ. ಇನ್ನು ಬಣ್ಣ ಮಾಸಿದರೆ ಮುಗಿಯಿತು, ತಮ್ಮ ಆಯುಸ್ಸೆ ಕಡಿಮೆಯಾಗಿ ಬಿಟ್ಟಿತು ಎಂದು ಭಾವಿಸುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯ ಈಗಿಲ್ಲ ಬಿಡಿ. ಬಿಳಿ ಬಟ್ಟೆಗಳ ಹೊಳಪು ಮತ್ತು ಅದರ ಆಕರ್ಷಣೆಯನ್ನು ಮರಳಿ ತೆಗೆದುಕೊಂಡು ಬರಲು ಬ್ಲೀಚಿಂಗ್ ವಿಧಾನವು ನಮಗೆ ಸಹಕರಿಸುತ್ತದೆ. ಆದರೆ ಇದನ್ನು ಸರಿಯಾಗಿ ಮಾಡಿದರೆ ಸರಿ, ಇಲ್ಲವಾದಲ್ಲಿ ಇದರ ಫಲಿತಾಂಶವು ನಿಮ್ಮ ಊಹೆಯನ್ನು ಮೀರಿ ಹೋಗುವುದರಲ್ಲಿ ಸಂಶಯವೇ ಇಲ್ಲ.

ಈ ಅಂಕಣದಲ್ಲಿ ನಾವು ಬಿಳಿ ಬಟ್ಟೆಗಳನ್ನು ಯಾವ ರೀತಿಯಲ್ಲಿ ಬ್ಲೀಚ್ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದೇವೆ. ಇಲ್ಲಿರುವ ಮಾರ್ಗಗಳ ಮುಖಾಂತರ ನಿಮ್ಮ ಬಿಳಿ ಶರ್ಟ್ ಅಥವಾ ಟಿ-ಶರ್ಟ್‍ ಬಟ್ಟೆಗಳನ್ನು ಸರಿಯಾಗಿ ಬ್ಲೀಚ್ ಮಾಡಬಹುದು ಮತ್ತು ಅವುಗಳ ಹೊಳಪನ್ನು ಮತ್ತೆ ಮರಳಿ ತರಬಹುದು. ಬ್ಲೀಚ್ ಬಹುತೇಕ ಫ್ಯಾಬ್ರಿಕ್‍ಗಳಿಗೆ ತಮ್ಮ ಹೊಳಪನ್ನು ಮತ್ತು ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಬಟ್ಟೆಗಳು ತಮ್ಮ ಮೆರಗನ್ನು ಮರಳಿ ಪಡೆಯಲು ಇದು ಕೈಗೆಟುಕುವಂತಹ ಸುಲಭವಾದ ಮಾರ್ಗವಾಗಿದೆ. ಬನ್ನಿ ನಮ್ಮ ಬಿಳಿ ಬಟ್ಟೆಗಳಿಗೆ ನಾವು ಮತ್ತೆ ಹೊಸತನ ನೀಡುವ ಬ್ಲೀಚಿಂಗ್ ವಿಧಾನವನ್ನು ತಿಳಿದುಕೊಳ್ಳೋಣ. ಬನ್ನಿ ಅದು ಹೇಗೆ ಎಂದು ಮುಂದೆ ನೋಡೋಣ... ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ಬಟ್ಟೆಯನ್ನು ತಣ್ಣೀರಿನಲ್ಲಿ ನೆನೆಸಿ ಮತ್ತು ಒಗೆಯಿರಿ
ನೀವು ಒಂದು ಬಟ್ಟೆಯನ್ನು ಬ್ಲೀಚ್ ಮಾಡಲು ಬಯಸುತ್ತೀರಾ, ಹಾಗಾದರೆ ಈ ನಿಟ್ಟಿನಲ್ಲಿ ತಣ್ಣೀರು ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ. ಕಲೆಗಳನ್ನು ಹೋಗಲಾಡಿಸಲು ಬ್ಲೀಚ್ ಮಾಡಬೇಕೆಂದಲ್ಲಿ, ಕನಿಷ್ಠ 20-30 ನಿಮಿಷಗಳ ಕಾಲ ಬಟ್ಟೆಯನ್ನು ನೆನೆಸುವುದು ಉತ್ತಮ. ಬಟ್ಟೆಗಳನ್ನು ತಣ್ಣೀರಿನಲ್ಲಿ ಒಗೆಯುವ ಮೂಲಕ ಅದರಲ್ಲಿರುವ ಕಲೆಗಳನ್ನು ನೀವು ಸುಲಭವಾಗಿ ಹೋಗಲಾಡಿಸಬಹುದು. ಏಕೆಂದರೆ ಫ್ಯಾಬ್ರಿಕ್ ಮೇಲೆ ಕಲೆಯು ದುರ್ಬಲವಾಗಿ ಅಂಟಿಕೊಂಡಿರುತ್ತದೆ.

ಬ್ಲೀಚಿಂಗ್ ಜೊತೆಗೆ ಟ್ರೀಟ್ ಮಾಡಿ
ಕನಿಷ್ಠ 20-30 ನಿಮಿಷಗಳ ಕಾಲ ಬಟ್ಟೆಯನ್ನು ಒಗೆದ ನಂತರ, ಅದಕ್ಕೆ ಬ್ಲೀಚಿಂಗ್ ಹಾಕಿ. ನಂತರ ಮತ್ತೊಂದು ಹದಿನೈದು ನಿಮಿಷ ಒಗೆಯಿರಿ. ಫ್ಯಾಬ್ರಿಕ್ ಮೇಲಿನಿಂದ ಕಲೆಯು ಸಂಪೂರ್ಣವಾಗಿ ಹೋಗುವವರೆಗೆ ಬ್ಲೀಚ್ ಮಾಡಿ. ಬಟ್ಟೆಗಳ ಮೇಲಿನ ಕೆಸರಿನ ಕಲೆಗಳನ್ನು ಹೋಗಲಾಡಿಸುವುದು ಹೇಗೆ?

ಇನ್ನಿತರ ಪದಾರ್ಥಗಳು
ನೀವು ನಿಮ್ಮ ಬಟ್ಟೆಯನ್ನು ಬ್ಲೀಚ್ ಮಾಡಲು, ಬ್ಲೀಚ್ ಜೊತೆಗೆ ಡಿಟರ್ಜೆಂಟ್ ಪೌಡರ್‌ಗಳಂಥಹವನ್ನು ಸಹ ಬಳಸಬಹುದು. ಇದು ಫ್ಯಾಬ್ರಿಕ್‍ಗೆ ನೀವು ಬಯಸುವ ಬಣ್ಣವನ್ನು ನೀಡಲು ಸಹಾಯ ಮಾಡುತ್ತದೆ. ವಾಷಿಂಗ್ ಸೋಡಾ ಮತ್ತು ಲಾಂಡ್ರಿ ಡಿಟರ್ಜೆಂಟ್‍ಗಳನ್ನು ಸಾಮಾನ್ಯವಾಗಿ ಇದಕ್ಕೆ ಬೆರೆಸಬಹುದು.

ಬಿಸಿಲಿನಲ್ಲಿ ಒಣಗಿಸಿ
ಇನ್ನು ಕೊನೆಯ ಭಾಗ ಬಿಸಿಲಿನಲ್ಲಿ ಒಣಗಿಸುವುದು. ಈ ಬಟ್ಟೆಗಳ ಮೇಲೆ ಎಷ್ಟು ಬಿಸಿಲು ಬಿದ್ದರೆ, ಅಷ್ಟು ಒಳ್ಳೆಯದು. ಒಳ್ಳೆಯ ಬಿಸಿಲು ಬಟ್ಟೆಗಳಿಗೆ ಮತ್ತಷ್ಟು ಬಿಳುಪನ್ನು ನೀಡುತ್ತವೆ.

English summary

Best Ways To Bleach White Clothing

In this article, we look at the correct ways to bleach white clothing. By following these ways to bleach white clothing, Let us go ahead and look at these best ways to use bleach on your white clothing. Here are some effective ways to bleach white clothing. Read on...
Story first published: Thursday, November 20, 2014, 19:41 [IST]
X
Desktop Bottom Promotion