For Quick Alerts
ALLOW NOTIFICATIONS  
For Daily Alerts

ಶೂಗಳಿಂದ ಕೆಸರಿನ ಕಲೆಗಳನ್ನು ತೆಗೆಯುವುದು ಹೇಗೆ?

|

ಪ್ರತಿಯೊಬ್ಬ ಮನುಷ್ಯನಿಗು ಸಹ ವೈಯುಕ್ತಿಕ ಕಾಳಜಿ ಎಂಬ ಅಂಶವು ಅತ್ಯಗತ್ಯ. ಇದು ಅವನ ವ್ಯಕ್ತಿತ್ವವನ್ನು ವಿವರಿಸುವ ಅಂಶವಾಗಿ ಸಹಾಯ ಮಾಡುತ್ತದೆ. ಕಾಳಜಿ ಎಂಬ ಪದ ವ್ಯಾಪ್ತಿಯು ಉಡುಗೆಗಳಿಂದ ಹಿಡಿದು ಶೂಗಳವರೆಗೆ ಎಲ್ಲವನ್ನು ಒಳಗೊಳ್ಳುತ್ತದೆ. ಇದು ಜೀವನದ ಪ್ರತಿ ಹಂತದಲ್ಲು ಸಹ ಅತ್ಯಗತ್ಯ. ನೀವು ಯಾವಾಗಲು ಸ್ವಚ್ಛವಾದ ಬಟ್ಟೆಗಳನ್ನು ಮತ್ತು ಶೂಗಳನ್ನು ಧರಿಸಬೇಕಾದುದು ಅಗತ್ಯ. ಬಟ್ಟೆಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು, ಏಕೆಂದರೆ ಅವುಗಳನ್ನು ಸ್ವಚ್ಛಗೊಳಿಸಲು ಹಲವಾರು ಮಾರ್ಗಗಳಿವೆ. ಆದರೆ ಸಮಸ್ಯೆ ಬರುವುದೇ ಶೂಗಳನ್ನು ಸ್ವಚ್ಛಗೊಳಿಸುವಾಗ.

ಅದರಲ್ಲೂ ಮಳೆಗಾಲದಲ್ಲಿ ಶೂಗಳನ್ನು ಸ್ವಚ್ಛಗೊಳಿಸುವುದು ಮತ್ತೂ ಕಷ್ಟ. ಇದು ಕೇವಲ ಮಕ್ಕಳಿಗಷ್ಟೆ ಅಲ್ಲ, ದೊಡ್ಡವರಿಗು ಸಹ ಅನ್ವಯಿಸುತ್ತದೆ. ಶೂಗಳಿಗೆ ಅಂಟಿದ ಕೆಸರನ್ನು ಅಥವಾ ಮಣ್ಣನ್ನು ತೆಗೆಯುವುದು ತುಂಬಾ ಕಷ್ಟದ ಕೆಲಸ. ಅದು ಶೂಗೆ ಅಂಟಿದ ಮಣ್ಣಿನ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಈ ಪ್ರಕ್ರಿಯೆಗೆ ಇಳಿಯುವ ಮೊದಲು ನಾವು ತಿಳಿಯಬೇಕಾದ ವಿಚಾರವೆಂದರೆ ಈ ಮಣ್ಣನ್ನು ಹೇಗೆ ತೆಗೆಯಬೇಕು ಎಂಬುದು.

ಇದರಲ್ಲಿ ಯಾವ ವಸ್ತುವಿನ ಜೊತೆಗೆ ನೀವು ವ್ಯವಹರಿಸುತ್ತಿರುವಿರಿ ಎಂದು ಸಹ ನೀವು ತಿಳಿಯಬೇಕು. ಒಮ್ಮೆ ಇದು ಪಕ್ಕ ಆದ ಮೇಲೆ ಮುಂದಿನ ಕಾರ್ಯ. ಯಾವ ವಿಧಾನವನ್ನು ಅನುಸರಿಸಬೇಕು ಎಂಬುದು. ಇಲ್ಲಿ ನಾವು ನಿಮ್ಮ ಶೂಗೆ ಅಂಟಿಕೊಂಡಿರುವ ಮಣ್ಣು ಅಥವಾ ಕೆಸರನ್ನು ಬಿಡಿಸುವ ವಿಧಾನಗಳನ್ನು ನಿಮಗಾಗಿ ತಿಳಿಸಿದ್ದೇವೆ, ಓದಿಕೊಳ್ಳಿ ಇದರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

ಲಿ೦ಬೆಹಣ್ಣಿನಲ್ಲಿರುವ 15 ಅಚ್ಚರಿಯ ಗುಣಗಳು

ರಬ್ಬರ್ ಶೂಗಳು

ರಬ್ಬರ್ ಶೂಗಳು

ರಬ್ಬರ್ ಶೂಗಳಿಗೆ ಅಂಟಿದ ಮಣ್ಣನ್ನು ಬಿಡಿಸುವುದು ತುಂಬಾ ಸುಲಭ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಒಂದು ಸೂಕ್ತವಾದ ಬಟ್ಟೆ ಮತ್ತು ಸೋಪ್. ಯಾವುದೇ ರೀತಿಯ ಸೋಪ್ ಬೇಕಾದರು ನೀವು ಬಳಸಬಹುದು. ಈ ಸೋಪನ್ನು ಶೂಗಳ ಮೇಲೆ ಲೇಪಿಸಿ ಮತ್ತು ಬ್ರಷ್‍ನಿಂದ ಅದನ್ನು ಉಜ್ಜಿ. ಆನಂತರ ಬಟ್ಟೆಯಿಂದ ಅದನ್ನು ಒರೆಸಿ.

ಸೋಪ್‍ನಿಂದ ಕ್ಲೀನ್ ಮಾಡುವುದು

ಸೋಪ್‍ನಿಂದ ಕ್ಲೀನ್ ಮಾಡುವುದು

ಸೋಪ್‍ನಿಂದ ಶೂಗಳನ್ನು ಸ್ವಚ್ಛಗೊಳಿಸುವುದು ಮೂಲತಃ ಇರುವ ಧೂಳನ್ನು ಒರೆಸುವ ಕ್ರಿಯೆಯನ್ನು ಒಳಗೊಂಡಿರುತ್ತದೆ. ನಿಮ್ಮ ಶೂನ ಲೇಸ್ ತೆಗೆಯಿರಿ ಮತ್ತು ಶೂಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಪ್ರಾಕೃತಿಕವಾದ ಡಿಟರ್ಜೆಂಟ್ ಅಥವಾ ಡಿಶ್ ವಾಶಿಂಗ್ ಲಿಕ್ವಿಡ್‍ಗಳನ್ನು ಬಳಸಿ ಮತ್ತು ಶೂ ಮೇಲೆ ಉಳಿದ ಇನ್ನಿತರ ಮಣ್ಣನ್ನು ತೆಗೆಯಲು ಬ್ರಷ್ ಬಳಸಿ. ನಂತರ ಇದನ್ನು ಮತ್ತೊಮ್ಮೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಮತ್ತು ಒಣಗಲು ಬಿಡಿ.

ಚರ್ಮದ ಶೂಗಳು

ಚರ್ಮದ ಶೂಗಳು

ಚರ್ಮದ ಶೂಗಳ ಮೇಲೆ ಅಂಟಿಕೊಂಡಿರುವ ಮಣ್ಣನ್ನು ಮಾರುಕಟ್ಟೆಯಲ್ಲಿರುವ ಯಾವುದೇ ವಾಣಿಜ್ಯ ಉತ್ಪನ್ನದ ಮೂಲಕ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಲೇಸ್ ತೆಗೆಯಿರಿ ಹಾಗು ಕ್ರ್ಯಾಕ್‍ಗಳನ್ನು ಬ್ರಷ್‍ನಿಂದ ಸ್ವಚ್ಛಗೊಳಿಸಿ. ಆನಂತರ ಕ್ಲೀನರ್ ಮೂಲಕ ಇದನ್ನು ಸ್ವಚ್ಛಗೊಳಿಸಿ. ಈ ಉತ್ಪನ್ನಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿದಿದ್ದಾಗ ಮಾತ್ರ ಇವುಗಳನ್ನು ಬಳಸಿ.

ಅಥ್ಲೆಟಿಕ್ ಶೂಗಳು

ಅಥ್ಲೆಟಿಕ್ ಶೂಗಳು

ಈ ಬಗೆಯ ಶೂಗಳನ್ನು ನೀರಿನ ಮೂಲಕ ಮತ್ತು ಶಾಂಪೂವಿನಂತಹ ತಟಸ್ಥ ಕ್ಲೀನರ್ ಮೂಲಕ ಅಥವಾ ಡಿಶ್ ವಾಷಿಂಗ್ ಲಿಕ್ವಿಡ್ ಮೂಲಕ ಸ್ವಚ್ಛಗೊಳಿಸಬಹುದು. ಇದಕ್ಕೂ ಸಹ ಲೇಸ್ ತೆಗೆಯಿರಿ ಮತ್ತು ಕ್ಲೀನಿಂಗ್ ಮಿಶ್ರಣದಲ್ಲಿ ಸಾಫ್ಟ್ ಬ್ರಷ್ ಅದ್ದಿ, ಆನಂತರ ಶೂ ಮೇಲೆ ಸ್ಕ್ರಬ್ ಮಾಡಿ. ಶೂವನ್ನು ಒಗೆಯಿರಿ ಹಾಗು ಇಡೀ ರಾತ್ರಿ ಪೂರ್ತಿ ಶೂವನ್ನು ಒಣಗಲು. ಲೇಸ್‍ಗಳನ್ನು ಬೇಕಾದರೆ ಯಂತ್ರದಲ್ಲಿ ಪ್ರತ್ಯೇಕವಾಗಿ ಒಗೆಯಿರಿ.

ಸ್ಯೂಡ್ ಶೂಗಳು

ಸ್ಯೂಡ್ ಶೂಗಳು

ಸ್ಯೂಡ್ ಶೂಗಳಿಗೆ ಅಂಟಿದ ಮಣ್ಣಿನ ಕಲೆಗಳನ್ನು ಬ್ರಷ್‍ನಿಂದ ಬೇಕಾದರು ತೆಗೆಯಬಹುದು. ತುಂಬಾ ಕೆಸರು ಇದ್ದಲ್ಲಿ ಮಾತ್ರ, ನೀವು ಪೆನ್ಸಿಲ್ ಎರೆಸರ್ ಬಳಸಬಹುದು. ಸ್ವಚ್ಛಗೊಳಿಸುವಾಗ ಸ್ಯೂಡ್ ಬ್ರಷ್ ಮತ್ತು ಸ್ಯೂಡ್ ಪ್ರೊಟೆಕ್ಟರ್ ಸ್ಪ್ರೇಗಳನ್ನು ಬಳಸಿ. ಇದು ಶೂಗಳ ಗುಣಮಟ್ಟವನ್ನು ಸಹ ಕಾಪಾಡುತ್ತದೆ.

ಫ್ಯಾಬ್ರಿಕ್ ಶೂಗಳು

ಫ್ಯಾಬ್ರಿಕ್ ಶೂಗಳು

ಈ ಬಗೆಯ ಶೂಗಳನ್ನು ಮಷಿನ್ ವಾಷ್ ಮೂಲಕ ಸಹ ಸ್ವಚ್ಛಗೊಳಿಸಬಹುದು. ಈ ಪ್ರಕ್ರಿಯೆ ಮಾಡುವಾಗ ಸ್ವಲ್ಪ ಹೆಚ್ಚಿನ ಮುತುವರ್ಜಿ ಅತ್ಯಗತ್ಯ. ಸಾಮಾನ್ಯವಾಗಿ ಫ್ಯಾಬ್ರಿಕ್ ಶೂಗಳನ್ನು ಮಾತ್ರ ಮಷಿನ್ ವಾಷ್ ಮಾಡಲು ಸಲಹೆ ನೀಡಲಾಗುತ್ತದೆ. ಇದನ್ನು ಸಹ ಮೊದಲು ಲೇಸ್ ತೆಗೆಯಿರಿ, ನಂತರ ಅದರಲ್ಲಿ ಮತ್ತು ಯಾವುದನ್ನು ತೆಗೆಯಲು ಸಾಧ್ಯವೋ ಅವುಗಳನ್ನು ಸಹ ತೆಗೆಯಿರಿ. ನಂತರ ಸಾಮಾನ್ಯವಾದ ಡಿಟರ್ಜೆಂಟ್ ಮತ್ತು ವಾರ್ಮ್ ಸೈಕಲ್ ಬಳಸಿ ತೊಳೆಯಿರಿ. ಹಾಗು ರಾತ್ರಿ ಪೂರ್ತಿ ಒಣಗಲು ಬಿಡಿ.

English summary

Best Tips To Remove Mud Stains From Shoes

Personal care is essential for every human being; this will help to define your personality. Care should be taken in every aspect, from the dress to the shoes you wear. This is important in every walk of life. Clothes can be cleaned easily as there are many ways to do so. The problem comes with cleaning shoes.
X
Desktop Bottom Promotion