For Quick Alerts
ALLOW NOTIFICATIONS  
For Daily Alerts

ಹಲ್ಲಿಗಳಿಂದ ಪರಿಹಾರ ಕಂಡುಕೊಳ್ಳಲು ಮನೆಮದ್ದುಗಳು

By Arpitha Rao
|

ಭಾರತೀಯ ಸಂಸ್ಕೃತಿಯ ಪ್ರಕಾರ ಹಲ್ಲಿಗಳು ಮನೆಯಲ್ಲಿ ತುಂಬಿಕೊಂಡರೆ ಅದೊಂದು ಅಪಶಕುನ.ಸಂಜೆ ದೀಪ ಹಚ್ಚಿದ ತಕ್ಷಣ ಎಲ್ಲೆಡೆ ಗೋಡೆಗಳ ಮೇಲೆ ಕಾಣಿಸಿಕೊಳ್ಳುವ ಹಲ್ಲಿಗಳು ಒಂದು ರೀತಿಯ ಕೆಟ್ಟ ಭಾವನೆ ಮೂಡಿಸಿಬಿಡುತ್ತವೆ.ಇದನ್ನು ಹೋಗಲಾಡಿಸಲು ಕೆಲವೊಮ್ಮೆ ಪರದಾಡುವಂತಾಗಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮ್ಯಾಟ್ ನ ಬೂಸ್ಟ್ ತೆಗೆಯುವ ವಿಧಾನಗಳು

ಹಲ್ಲಿಗಳು ಮನೆಯ ತುಂಬಾ ತುಂಬಿಕೊಂಡಿದ್ದರೆ ಒಂದು ರೀತಿ ಅಸಹ್ಯ ಎನಿಸುತ್ತದೆ.ಹಲ್ಲಿಗಳು ಕೆಲವು ಸಣ್ಣಪುಟ್ಟ ಹುಳುಗಳನ್ನು ತಿನ್ನುತ್ತವೆಯಾದರೂ ಹಲ್ಲಿಯನ್ನು ಮನೆಯಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲ್ಲಿ ನಿವಾರಕಗಳು ವಿಷಯುಕ್ತವಾಗಿದ್ದು ಇದರಿಂದ ಮನೆಯಲ್ಲಿರುವ ಮಕ್ಕಳಿಗೆ ಮತ್ತು ಇತರ ಪೆಟ್ ಗಳಿಗೆ ತೊಂದರೆಯಾಗಬಹುದು.ಆದ್ದರಿಂದ ನೈಸರ್ಗಿಕವಾದ ಮನೆಯಲ್ಲಿಯೇ ಸಿಗುವ ಕೆಲವು ಮನೆಮದ್ದುಗಳನ್ನು ಬಳಸಿ ಹಲ್ಲಿಯನ್ನು ಹೋಗಲಾಡಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಚ್ಚನೆಯ ಮೈಗೆ ಫ್ಯಾಷನೆಬಲ್ ಜಾಕೆಟ್

ಕಾಫಿ ಪುಡಿ:

ಕಾಫಿ ಪುಡಿ:

ಸ್ವಲ್ಪ ಕಾಫಿ ಪುಡಿಯನ್ನು ತಂಬಾಕು ಪುಡಿಯೊಂದಿಗೆ ಸೇರಿಸಿ.ಇದನ್ನು ಸಣ್ಣ ಸಣ್ಣ ಉಂಡೆ ಮಾಡಿ ಒಂದು ಕಡ್ಡಿಗೆ ಸಿಕ್ಕಿಸಿ,ಹಲ್ಲಿಗಳು ಓಡಾಡುವ ಜಾಗದಲ್ಲಿ (ಅಥವಾ ಅಡಗಿಕೊಳ್ಳುವ ಜಾಗದಲ್ಲಿ)ಇರಿಸಿ.ಇದನ್ನು ತಿಂದ ನಂತರ ಹಲ್ಲಿಗಳು ಸತ್ತು ಹೋಗುತ್ತವೆ.

ನ್ಯಪ್ತಾಲಿನ್ ಬಾಲ್ ಅಥವಾ ಡಾಂಬರುಗುಳಿಗೆ:

ನ್ಯಪ್ತಾಲಿನ್ ಬಾಲ್ ಅಥವಾ ಡಾಂಬರುಗುಳಿಗೆ:

ಸೀರೆಗಳ ಮಧ್ಯ ಇಡುವ ಈ ನ್ಯಾಪ್ತಾಲಿನ್ ಬಾಲ್‌ಗಳು ಕೀಟ ನಿಯಂತ್ರಕ.ಇದನ್ನು ಕಪಾಟು,ಸಿಂಕ್,ಒಲೆಯ ಕೆಳಗೆ ಹೀಗೆ ಎಲ್ಲಾ ಕಡೆ ಇಡಿ.ಇದು ಹಲ್ಲಿಗಳನ್ನು ತಡೆಯಲು ಸುಲಭ ವಿಧಾನ.

ಮೆಣಸಿನ ಕೀಟನಾಶಕ:

ಮೆಣಸಿನ ಕೀಟನಾಶಕ:

ಮೆಣಸಿನ ಪುಡಿಗೆ ನೀರನ್ನು ಸೇರಿಸಿ ಸ್ಪ್ರೇ ತಯಾರಿಸಿಕೊಳ್ಳಿ.ಇದನ್ನು ನಿಮ್ಮ ಅಡುಗೆ ಮನೆ,ಟ್ಯೂಬ್ ಲೈಟ್ ಹತ್ತಿರ,ಫ್ರಿಜ್,ಸ್ಟೋವ್ ಕೆಳಗೆ ಇಲ್ಲೆಲ್ಲಾ ಸ್ಪ್ರೇ ಮಾಡಿ.ಹಲ್ಲಿಗಳು ಅದರ ವಾಸನೆ ಮತ್ತು ಖಾರವನ್ನು ಸಹಿಸಲಾಗದೆ ಮನೆಯಿಂದ ಹೊರಹೋಗುತ್ತವೆ.

ಐಸ್ ನೀರು:

ಐಸ್ ನೀರು:

ಹಲ್ಲಿಗಳ ಮೇಲೆ ಐಸ್ ನೀರನ್ನು ಹಾಕಿ.ಅದು ಹಲ್ಲಿಯ ದೇಹದ ಉಷ್ಣಾಂಶ ಕಡಿಮೆ ಮಾಡಿಬಿಡುತ್ತದೆ,ಇದರಿಂದ ಹಲ್ಲಿಗಳು ಹರಿದಾಡಲು ಆಗವುದಿಲ್ಲ.ಆ ಸಮಯದಲ್ಲಿ ಯಾವುದಾದರೂ ಬಾಕ್ಸ್ ಒಳಗೆ ಅದನ್ನು ಹಿಡಿದು ಮನೆಯಿಂದ ದೂರ ಎಸೆಯಿರಿ.

ಈರುಳ್ಳಿ:

ಈರುಳ್ಳಿ:

ಹಲ್ಲಿಗಳು ಅಡಗಿಕೊಳ್ಳುವ ಜಾಗದಲ್ಲಿ ಅಥವಾ ಗೋಡೆಯ ಮೇಲೆ ಈರುಳ್ಳಿ ಭಾಗವನ್ನು ಇಡಿ.ಈರುಳ್ಳಿಯಲ್ಲಿರುವ ಸಲ್ಫಾರ್ ಸಂಯುಕ್ತ ಕೆಟ್ಟ ವಾಸನೆ ನೀಡುತ್ತದೆ ಇದು ಹಲ್ಲಿಗಳು ದೂರ ಹೋಗುವಂತೆ ಮಾಡುತ್ತವೆ.

ಮೊಟ್ಟೆಗಳು:

ಮೊಟ್ಟೆಗಳು:

ಮೊಟ್ಟೆಯ ಹೊರ ಚಿಪ್ಪು ಮಾನಸಿಕವಾಗಿ ಹಲ್ಲಿಗಳಿಗೆ ಹತ್ತಿರ ಸುಳಿಯಲು ಹೆದರುವಂತೆ ಮಾಡುತ್ತವೆ.ಮೊಟ್ಟೆಯ ಈ ಚಿಪ್ಪುಗಳನ್ನು ನೋಡಿ ಹಲ್ಲಿಗಳು ಅಲ್ಲಿ ಇನ್ನೊಂದು ಜೀವವಿದೆ ಎಂದು ತಿಳಿದು ಹೆದರುತ್ತವೆ.ಮೂರು,ನಾಲ್ಕು ದಿನಗಳಿಗೊಮ್ಮೆ ಇದನ್ನು ಬದಲಾಯಿಸುತ್ತಿರಿ.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಸ್ಪ್ರೇ ಬಾಟಲಿ ತೆಗೆದುಕೊಳ್ಳಿ.ಇದಕ್ಕೆ ಈರುಳ್ಳಿ ರಸ ಮತ್ತು ನೀರು ಸೇರಿಸಿ.ಜೊತೆಗೆ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ.ಸರಿಯಾಗಿ ಕುಲುಕಿ ಇದನ್ನು ಮನೆಯ ಇತರ ಭಾಗಗಳಿಗೆ ಸಂಧಿಗಳಿಗೆ ಸ್ಪ್ರೇ ಮಾಡಿ.ಹಲ್ಲಿಗಳನ್ನು ಹೋಗಲಾಡಿಸಲು ಬೆಳ್ಳುಳ್ಳಿಯನ್ನು ನೇರವಾಗಿ ಹಲ್ಲಿಗಳು ಓಡಾಡುವ ಕಡೆಗಳಲ್ಲಿ ಇಡಬಹುದು.

English summary

Best Home Remedies to Get Rid of Lizards

Lizards are a big nuisance for all of us. Though, lizards help us in reducing the population of nasty insects, but regardless this, we simply don’t want to see these uninvited guests in our house.
Story first published: Saturday, March 1, 2014, 11:44 [IST]
X
Desktop Bottom Promotion