For Quick Alerts
ALLOW NOTIFICATIONS  
For Daily Alerts

ಹಣ್ಣು ಮತ್ತು ತರಕಾರಿಗಳನ್ನು ಶುಚಿಗೊಳಿಸಲು 9 ವಿಧಾನಗಳು

By Hemanth P
|

ತರಕಾರಿಗಳು ಅಥವಾ ಹಣ್ಣುಗಳು ಬೆಳೆದಿರುವ ಮಣ್ಣು ಮತ್ತು ನೀರಿನಲ್ಲಿ ಹಲವಾರು ಹಾನಿಕಾರಕ ಬ್ಯಾಕ್ಟೀರಿಯಾಗಳಿರಬಹುದು. ಇದರಿಂದ ಇವುಗಳನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು ತುಂಬಾ ಮುಖ್ಯ. ಇವುಗಳನ್ನು ಬೆಳೆಸಿದಾಗ, ಶೇಖರಿಸಿದಾಗ ಅಥವಾ ತಯಾರಿಸಿದಾಗ ಕಲುಷಿತಗೊಂಡಿರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಾತ್ರೆಗಳಿಂದ ಮೊಟ್ಟೆ ವಾಸನೆಯನ್ನು ತೆಗೆಯುವುದು ಹೇಗೆ?

ಕಲುಷಿತಗೊಂಡಿರುವ ಉತ್ಪನ್ನಗಳಿಂದ ಆಹಾರ ವಿಷವಾಗಬಹುದು ಮತ್ತು ಆಹಾರ ಸಂಬಂಧಿ ಇತರ ಅನಾರೋಗ್ಯಗಳು ಕಾಡಬಹುದು. ನಾವು ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ಇವುಗಳನ್ನು ತೊಳೆಯಬೇಕು ಎಂದು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ. ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಮುಖ್ಯ.

ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತೆಗೆಯಲು ಹಣ್ಣು ಹಾಗೂ ತರಕಾರಿಗಳನ್ನು ಪರಿಣಾಮಕಾರಿಯಾಗಿ ತೊಳೆಯಲು ಕೆಲವೊಂದು ಅತಿ ಮುಖ್ಯವಾದ ಮಾರ್ಗಸೂಚಿಗಳು ಇಲ್ಲಿವೆ.

9 Tips To Properly Wash Fruits and Vegetables

1. ನಿಮ್ಮ ಕೈಗಳನ್ನು ತೊಳೆಯಿರಿ. ಬಿಸಿನೀರು ಮತ್ತು ಸಾಬೂನಿನಿಂದ ಕೈಗಳನ್ನು 20ರಿಂದ 30 ನಿಮಿಷಗಳ ಕಾಲ ತೊಳೆಯಿರಿ. ಯಾವುದೇ ವಸ್ತುವನ್ನು ಮುಟ್ಟುವ ಮೊದಲ ಅಥವಾ ಬಳಿಕ ಕೈಗಳನ್ನು ತೊಳೆಯಿರಿ.

2. ಎಲ್ಲಾ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ, ತಯಾರಿಸುವ ಅಥವಾ ತುಂಡರಿಸುವ ಮೊದಲು ನೀರಿನಿಂದ ತೊಳೆಯಿರಿ. ಯಾವುದೇ ರೀತಿಯ ಸಾಬೂನು, ಡಿಟರ್ಜೆಂಟ್ ಅಥವಾ ಮಾರುಕಟ್ಟೆಯಲ್ಲಿ ಸಿಗುವಂತಹ ತೊಳೆಯುವ ಸಾಧನಗಳನ್ನು ಬಳಸಬೇಡಿ. ನೀರನ್ನು ಮಾತ್ರ ಬಳಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಿಚನ್ ಶೆಲ್ಫ್ ಜೋಡಿಸುವ ವಿಧಾನಗಳು

3. ಸೇಬು, ಪೇರಳೆ ಮತ್ತು ಪೀಚ್ ನಂತಹ ಹಣ್ಣುಗಳನ್ನು ನೀವು ತಿನ್ನುವ ಅಥವಾ ಬಳಸುವ ಮೊದಲು ಸಿಪ್ಪೆ ತೆಗೆಯುತ್ತೀರಿ. ಆದರೆ ಮೊದಲು ಅವುಗಳನ್ನು ತೊಳೆಯಿರಿ. ಇದರಿಂದ ನೀವು ತುಂಡರಿಸಲು ಬಳಸುವ ಚಾಕುವಿಗೆ ಬ್ಯಾಕ್ಟೀರಿಯಾ ಅಂಟಿಕೊಳ್ಳುವುದು ತಪ್ಪುತ್ತದೆ.

4. ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆದ ಬಳಿಕ ಒಣಗಿಸಿ. ಕಾಗದ ಅಥವಾ ಒಣ ಬಟ್ಟೆ ತೆಗೆದುಕೊಂಡು ಹಣ್ಣು ಅಥವಾ ತರಕಾರಿಗಳಲ್ಲಿ ಇರುವ ಬ್ಯಾಕ್ಟೀರಿಯಾ ಅಥವಾ ಧೂಳನ್ನು ತೆಗೆಯಿರಿ.

5. ಬ್ರಷ್ ಬಳಸಿ. ಗಡುಸಾಗಿರುವ ಉತ್ಪನ್ನಗಳಿಗೆ ಇದನ್ನು ಬಳಸಬಹುದು. ಸೌತೆಕಾಯಿಯ ಮೇಲ್ಭಾಗವನ್ನು ಸ್ವಚ್ಛಗೊಳಿಸಲು ಇದನ್ನು ಬಳಸಬಹುದು. ಇದರಿಂದ ಮೇಲ್ಭಾಗದಲ್ಲಿರುವ ಸೂಕ್ಷ್ಮಾಣುಜೀವಿಗಳು(ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳು) ತೆಗೆಯಬಹುದು. ಬ್ರಷ್ ಶುಚಿಯಾಗಿರಲಿ.

6. ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ. ಹಣ್ಣುಗಳು ಅಥವಾ ತರಕಾರಿಗಳನ್ನು ತೊಳೆದ ಅಥವಾ ಸಿಪ್ಪೆ ತೆಗೆದ ಬಳಿಕ ನೀವು ಇದನ್ನು ಹಚ್ಚುವ ಸ್ಥಳವನ್ನು ಶುಚಿಯಾಗಿಡಿ. ಇದರಿಂದ ಬೇರೆ ವಸ್ತುಗಳಿಂದ ಬ್ಯಾಕ್ಟೀರಿಯಾ ಹಬ್ಬುವುದು ತಪ್ಪುತ್ತದೆ.

7. ತುಂಬಾ ಸೂಕ್ಷ್ಮ ಹಣ್ಣುಗಳಿಗೆ ನೀರನ್ನು ಸಿಂಪಡಿಸಿ. ರಾಸ್ಬೆರಿಯಂತಹ ಆಹಾರಗಳನ್ನು ನಳ್ಳಿ ನೀರಿನ ಅಡಿಗೆ ಹಿಡಿದಾಗ ಅವುಗಳು ಉದುರಬಹುದು. ಇದರಿಂದ ಅವುಗಳನ್ನು ಶುಚಿಗೊಳಿಸಲು ನೀರನ್ನು ಸಿಂಪಡಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗಿಡಗಳನ್ನು ಶಿಲೀಂಧ್ರಗಳಿಂದ ರಕ್ಷಿಸಿ

8. ಕೆಲವೊಂದು ಉತ್ಪನ್ನಗಳನ್ನು ಕೆಲವು ನಿಮಿಷಗಳ ತನಕ ನೀರಿನಲ್ಲಿ ನೆನೆಸಿಡಿ. ಹೂಕೋಸು ಅಥವಾ ಕಾಲಿಫ್ಲವರ್ ನಂತಹ ಕೆಲವೊಂದು ಆಹಾರಗಳನ್ನು ಒಂದು ಸಲ ತೊಳೆದು ಶುಚಿಗೊಳಿಸುವುದು ತುಂಬಾ ಕಷ್ಟ. ಇದನ್ನು ನೀರಿನಲ್ಲಿ ಕೆಲವು ನಿಮಿಷಗಳ ತನಕ ನೆನೆಸಿಡಬೇಕು.

9. ಸ್ಪ್ರೇ ಬಾಟಲಿಗೆ ನೀರನ್ನು ತುಂಬಿಸಿಡಿ. ಇದರಿಂದ ಸೇಬು ಅಥವಾ ಇತರ ಹಣ್ಣುಗಳನ್ನು ತೊಳೆಯಲು ಬಳಸಬಹುದು.

English summary

9 Tips To Properly Wash Fruits and Vegetables

Since the soil or water where your fruits and veggies are grown can contain harmful bacteria, it is important to wash your produce the right way. Contamination can also occur after produce is harvested,
Story first published: Wednesday, February 26, 2014, 12:43 [IST]
X
Desktop Bottom Promotion