For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು 8 ಸರಳ ತಂತ್ರಗಳು

By Vishwanath
|

ಪ್ಲಾಸ್ಟಿಕ್ ಸಂಗ್ರಹ ಡಬ್ಬಿಗಳನ್ನು ಸ್ವಚ್ಛಗೊಳಿಸುವುದು ಒಂದು ಶ್ರಮದಾಯಕ ಕೆಲಸ. ಸ್ಟೀಲ್ ಅಥವ ಗಾಜಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಭಿನ್ನವಾಗಿ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಸೇರಿರುವ ಜಿಡ್ಡುತನ, ವಾಸನೆ ಮತ್ತು ಕಲೆಗಳನ್ನು ನಿರ್ಮೂಲಮಾಡುವುದು ಮುಖ್ಯ. ನೋಡುವುದಕ್ಕೆ ಸುಲಭವೆಂದೆಣಿಸಿದರೂ ಪ್ಲಾಸ್ಟಿಕ್ ಡಬ್ಬಿಗಳನ್ನು ನಿರ್ವಹಿಸುವುದು ಒಂದು ಕಷ್ಟದ ಕೆಲಸ.

ನಿಮ್ಮ ಪ್ಲಾಸ್ಟಿಕ್ ಡಬ್ಬಿಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವ ಕೆಲವು ತಂತ್ರಗಳನ್ನು ಬೋಲ್ಡ್‌ಸ್ಕೈ ಅಂತರಜಾಲವು ಇಲ್ಲಿ ಮುಂದೆ ನಿಮಗೆ ತಿಳಿಸಲಿದೆ. ಈ ತಂತ್ರಗಳ ಸಹಾಯದಿಂದ ಪ್ಲಾಸ್ಟಿಕ್ ಡಬ್ಬಿಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. ಈ ತಂತ್ರಗಳನ್ನು ಮೂರು ಭಾಗವಾಗಿ ವಿಂಗಡಿಸಿದ್ದೇವೆ: ವಾಸನೆ, ಜಿಡ್ಡು ಮತ್ತು ಕಲೆಗಳು.

ನಾವು ಮುಂದುವರೆಯುವ ಮೊದಲು ನಿಮ್ಮ ಪ್ಲಾಸ್ಟಿಕ್ ಡಬ್ಬಿಗಳ ಗುಣಮಟ್ಟವನ್ನು ತಿಳಿದುಕೊಳ್ಳುವುದು ಮುಖ್ಯ. ಪ್ರತಿನಿತ್ಯ ಉಪಯೋಗಿಸುವ ಪ್ಲಾಸ್ಟಿಕ್ ಡಬ್ಬಿ ಬಹಳ ತೆಳುವಾದ ಮತ್ತು ಬಿರುಕುಬಿಡಬಹುದಾದ ಡಬ್ಬಿಗಳ ಬದಲು ದಪ್ಪ ಮತ್ತು ಗಟ್ಟಿಮುಟ್ಟಾಗಿರುವ ಡಬ್ಬಿಗಳನ್ನು ಉಪಯೋಗಿಸಬೇಕು. ತೆಳುವಾಗಿರುವ ಪ್ಲಾಸ್ಟಿಕ್ಕಿನಿಂದ ತಯಾರುಮಾಡಿರುವ ಡಬ್ಬಿಗಳು ಸುಲಭವಾಗಿ ವಿಕಾರಗೊಂಡು ಅದು ಆಹಾರದೊಡನೆ ಸೇರಿಕೊಳ್ಳುವ ಸಂಭವವಿರುತ್ತದೆ.

ನಿಂಬೆ
ಸಿಟ್ರಿಕ್ ಆಸಿಡ್ ಸಮೃದ್ಧವಾಗಿರುವ ನಿಂಬೆ ಹಣ್ಣು ನೈಜ ಸೋಂಕುನಿವಾರಿಕೆಯ ಕ್ರಿಯೆಯಲ್ಲಿ ಒಂದಾಗಿದೆ. ಅದರಲ್ಲಿರುವ ಅತಿ ಕಡಿಮೆ pH (ಪೊಟೆಂಜ್ ಹೈಡ್ರೋಜನ್) ಮಟ್ಟವಿರುತ್ತದೆ ಮತ್ತು ಹೆಚ್ಚು ಜೀವಿ ವಿರೋಧಿ (ಆಂಟಿ ಬ್ಯಾಕ್ಟೀರಿಯಲ್) ಗುಣಗಳ ಸಹಾಯದಿಂದ ಪ್ರಬಲ ವಾಸನೆಯನ್ನು ಸುಲಭವಾಗಿ ತೊಡೆದುಹಾಕಬಹುದು. ನೀವು ನಿಂಬೆ ರಸವನ್ನು ಬಳಸಬಹುದು ಅಥವ ನಿಂಬೆ ಹಣ್ಣನ್ನು ಎರಡುಭಾಗ ಮಾಡಿಕೊಂಡು, ಡಬ್ಬಿಗಳ ಒಳಭಾಗವನ್ನು ಉಜ್ಜಿ. ನಂತರ ಅಡಿಗೆ ಸೋಡಾ ಬಳಸಿ ಉಜ್ಜಿ ಪೂರ್ತಿಮಾಡಿ, ತೊಳೆದು ಒಣಗಿಸಿ. ವಾಸನೆಯು ಸಂಪೂರ್ಣವಾಗಿ ಹೋಗಿರುತ್ತದೆ.

ಹಳೆಯ ದಿನಪತ್ರಿಕೆಗಳು
ಇದು ನಿಮಗೆ ವಿಚಿತ್ರವೆನ್ನಿಸಬಹುದು, ಆದರೂ ನಿಮ್ಮ ನೆಚ್ಚಿನ ದಿನಪತ್ರಿಕೆ ಪ್ಲಾಸ್ಟಿಕ್ ಡಬ್ಬಿಯೊಳಗಿನ ವಾಸನೆಯನ್ನು ತೆಗೆಯುವ ಮ್ಯಾಜಿಕ್ ಮಾಡಬಲ್ಲುದು. ವಾಸನೆಯಿರುವ ಪ್ಲಾಸ್ಟಿಕ್ ಡಬ್ಬಿಯೊಳಗೆ ದಿನಪತ್ರಿಕೆಗಳನ್ನು ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿ ತುಂಬಿ ಭದ್ರವಾಗಿ ಮುಚ್ಚಿ ಒಂದು ರಾತ್ರಿ ಇಡಿ (ಬೇಕಾದಲ್ಲಿ ಕೆಲವು ದಿನಗಳೂ ಇಡಬಹುದು). ಮಾರನೆಯ ದಿವ, ಡಬ್ಬಿಯೊಳಗೆ ಸೋಪು ಸೇರಿದ ಬೆಚ್ಚಗಿರುವ ನೀರನ್ನು ತೊಂಬಿ ತೊಳೆಯಿರಿ. ನಂತರ ಒಳ್ಳೆಯ ನೀರಿನಿಂದ ತೊಳೆದು ಒಣಗಿಸಿ. ವಾಸನೆಯು ಸಂಪೂರ್ಣವಾಗಿ ಹೋಗಿರುತ್ತದೆ. ಮನೆ ಶುಚಿತ್ವದಲ್ಲಿ ನಿಂಬೆ ಹಣ್ಣಿನ 10 ಮ್ಯಾಜಿಕ್

ವಿನೇಗರ್
2/3 ಭಾಗದ ವಿನೇಗರ್ ಜೊತೆಗೆ 1/3 ಭಾಗದ ನೀರಿನ ಮಿಶ್ರಣಮಾಡಿ. ಇದನ್ನು ಪ್ಲಾಸ್ಟಿಕ್ ಡಬ್ಬಿಯೊಳಗೆ ತುಂಬಿ ಒಂದು ರಾತ್ರಿಯಿಡಿ. ಮಾರನೆಯ ದಿನ ಒಳ್ಳೆಯ ನೀರಿನಿಂದ ತೊಳೆದು ಒಣಗಿಸಿ. ವಾಸನೆಯು ಸಂಪೂರ್ಣವಾಗಿ ಹೋಗಿರುತ್ತದೆ.

ಅಡಿಗೆ ಸೋಡ
ಅಡಿಗೆ ಸೋಡ ಮತ್ತು ನೀರು ಸೇರಿಸಿ ಒಂದು ರೀತಿಯ ಪೇಸ್ಟ್ ಮಾಡಿಕೊಳ್ಳಿ. ಒಂದು ಮೃದುವಾದ ಬಟ್ಟೆಯನ್ನು ತೆಗೆದುಕೊಂಡು ಪೇಸ್ಟನ್ನು ಡಬ್ಬಿಯ ಒಳಗಡೆ ಜಿಡ್ಡಿರುವ ಭಾಗದಲ್ಲಿ ಉಜ್ಜಿ. ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಅಡಿಗೆ ಸೋಡ ಒಂದು ಸೌಮ್ಯ ಅಪಘರ್ಷಕ (ಒರಟಾದ ಪುಡಿ) ಮತ್ತು ಜಿಡ್ಡಿನ ಅಂಟುತನವನ್ನು ಪ್ಲಾಸ್ಟಿಕ್ಕಿನಿಂದ ತೆಗೆದುಹಾಕುತ್ತದೆ. ಬಿಳಿ ಬಟ್ಟೆಗಳಿಗೆ ಹೊಸತನ ನೀಡುವ ಡಿಟರ್ಜೆಂಟ್ ಪೌಡರ್‌ ಯಾವುದು?

ಸೋಪಿನ ಪುಡಿ
ಇದು ಅತ್ಯಂತವಾಗಿ ಬಳಸಿದ ವಿಧಾನಗಳು. ಪ್ಲಾಸ್ಟಿಕ್ ಡಬ್ಬಿಗಳನ್ನು ಬೆಚ್ಚಗಿರುವ ನೀರಿನಿಂದ ಮಾಡಿದ ಸೋಪಿನ ನೀರನ್ನು ತುಂಬಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಡಿ. ನೀವು ಯಾವಾಗಲೂ ಉಪಯೋಗಿಸುವ ಸೋಪನ್ನು ಬಳಸಿ ಒಳಭಾಗವನ್ನು ತೊಳೆದು ಬಿಸಿಲಿನಲ್ಲಿ ಒಣಗಲು ಇಡಿ. ಈ ಸರಳ ವಿಧಾನದಿಂದ ಜಿಡ್ಡು ಹಾಗೆಯೇ ಮಾಯವಾಗಿ ಹೋಗುತ್ತದೆ.

ಕ್ಲೋರೀನ್ ಬ್ಲೀಚ್
ಒಂದು ಟೇಬಲ್ ಚಮಚ ಕ್ಲೋರೀನ್ ಬ್ಲೀಚ್ ದ್ರವಕ್ಕೆ ಒಂದು ಕಪ್ ಬೆಚ್ಚಗಿನ ನೀರನ್ನು ಸೇರಿಸಿ. ಈ ಮಿಶ್ರಣವನ್ನು ಪ್ಲಾಸ್ಟಿಕ್ ಡಬ್ಬಿಯೊಳಗೆ ತುಂಬಿ ಸುಮಾರು ಅರ್ಧ ಗಂಟೆ ನೆನೆಯಲು ಬಿಡಿ. ಡಬ್ಬಿಯನ್ನು ಬೆಚ್ಚಗಿನ ಸೋಪಿನ ನೀರಲ್ಲಿ ತೊಳೆಯಿರಿ. ನಂತರ ಒಳ್ಳೆಯ ನೀರಿನಿಂದ ತೊಳೆದು ಒಣಗಿಸಿ. ಕಲೆಯು ಸಂಪೂರ್ಣವಾಗಿ ಹೋಗಿರುತ್ತದೆ.

ಸೂರ್ಯನ ಬಿಸಿಲು
ಬಿಸಿಲಿನಲ್ಲಿ ಏನಾದರೂ ಬಹಳ ಕಾಲ ಇಟ್ಟಿದ್ದರೆ ಆ ಪದಾರ್ಥದ ಬಣ್ಣ ಮರೆಯಾಗಿ ಕಾಂತಿಹೀನವಾಗುತ್ತದೆಯೆಂದು ನಮಗೆಲ್ಲಾ ತಿಳಿದ ವಿಷಯವೇ ಆಗಿದೆ. ಹಾಗೆಯೇ ಪ್ಲಾಸ್ಟಿಕ್ ಸಂಗ್ರಹ ಪೆಟ್ಟಿಗೆಗಳ ಮೇಲಿರುವ ಕಠಿಣ ಕಲೆಗಳು ಕೂಡ ಹೋಗುತ್ತವೆ. ಕಲೆಗಳಿರುವ ಪ್ಲಾಸ್ಟಿಕ್ ಡಬ್ಬಿಗಳನ್ನು ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಅಥವ ಕಲೆಗಳು ಸಂಪೂರ್ಣವಾಗಿ ಮರೆಯಾಗುವವರೆಗೆ ಇಟ್ಟಿರಿ. ಕಲೆಗಳು ಮರೆಯಾದ ಮೇಲೆ ಸ್ವಚ್ಛವಾಗಿ ತೊಳೆಯಿರಿ.

ಅಡುಗೆ ಎಣ್ಣೆಯನ್ನು ಸಿಂಪರಿಸುವುದು
ಪ್ಲಾಸ್ಟಿಕ್ ಡಬ್ಬಿಗಳಿಗೆ ಕಲೆಗಳು ಬಾರದಿರುವುದನ್ನು ತಪ್ಪಿಸಲು ಡಬ್ಬಿಯೊಳಗೆ ಆಹಾರ ಪದಾರ್ಥವನ್ನು ತುಂಬುವ ಮುನ್ನ ಅಡುಗೆ ಎಣ್ಣೆಯನ್ನು ಸಿಂಪಡಿಸಿ. ಹಾಗೆ ಸಿಂಪರಿಸಿದ ಎಣ್ಣೆ ಅಹಾರಕ್ಕೂ ಮತ್ತು ಪ್ಲಾಸ್ಟಿಕ್ ನಡುವೆ ಒಂದು ತಡೆಯಾಗಿ ಕಾರ್ಯ ನಿರ್ವಹಿಸುತ್ತದೆ.

English summary

8 Simple Tricks To Clean Plastic Storage Containers

Cleaning plastic storage containers is a painstaking task. Unlike steel or glassware, main things to consider while scrubbing the plastic is greasiness, odour and stains. Easy as it may seem, plastic containers give a tough time in maintaining them. Boldsky brings you some of the efficient techniques to clean your plastic storage boxes.
X
Desktop Bottom Promotion