For Quick Alerts
ALLOW NOTIFICATIONS  
For Daily Alerts

ಅರಶಿನ ಕಲೆಯನ್ನು ನಿವಾರಿಸಲು ಇಲ್ಲಿದೆ ಸುಲಭ ಟಿಪ್ಸ್

|

ಬಟ್ಟೆಗಳಿಂದ ಕಲೆಯನ್ನು ಹೋಗಲಾಡಿಸಲು ತುಂಬಾ ಕಷ್ಟಕರವಾದ ಕಲೆಯೆಂದರೆ ಅದು ಹಳದಿಯ ಕಲೆಯಾಗಿದೆ. ಹೆಚ್ಚಿನ ಮನೆಗಳಲ್ಲಿ, ಪ್ರತಿಯೊಂದು ಅಡುಗೆಯಲ್ಲೂ ಅರಶಿನವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಈ ಅರಶಿನ ಸಾಂಬಾರು ಪದಾರ್ಥವು ನಿಮ್ಮ ಊಟಕ್ಕೆ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದರ ಒಂದು ಹನಿ ನಿಮ್ಮ ಬಟ್ಟೆಗೆ ಬಿತ್ತೆಂದರೆ ಸಾಕು ಅದನ್ನು ನಿವಾರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ.

ಪದಾರ್ಥದಿಂದ ಉಂಟಾದ ಪರಿಮಳ ಮತ್ತು ಕಲೆಯನ್ನು ನಿವಾರಿಸುವುದು ತುಂಬಾ ಕಷ್ಟವಾದ ಕೆಲಸವಾಗಿದೆ. ಆದರೆ ನಿಮಗೊಂದು ಸ್ವಾಭಾವಿಕ ಸಾಮಾಗ್ರಿ ಈ ಹಳದಿಗಟ್ಟಿದ ಕಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಬಿಳಿ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ ಏಕೆಂದರೆ ಅದರ ಬಿಳಿಯ ಬಣ್ಣ ಇಲ್ಲಿ ಮುಖ್ಯವಾಗಿರುತ್ತದೆ. ಹಾಗಿದ್ದರೆ ನಿಮ್ಮ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸುವ ಒಂದು ನೈಸರ್ಗಿಕ ಸಾಮಾಗ್ರಿ ಯಾವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ನಿಮ್ಮ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸುವ ಮುನ್ನ, ಹರಿಯುತ್ತಿರುವ ತಣ್ಣೀರಿನಿಂದ ಮೊದಲು ನಿಮ್ಮ ಬಟ್ಟೆಯನ್ನು ತೊಳೆದುಕೊಳ್ಳಿ, ಅಥವಾ ಉಗುರುಬೆಚ್ಚನೆ ನೀರಿನಲ್ಲಿ ಬಟ್ಟೆಯನ್ನು ನೆನೆಸಿಡುವುದೂ ಕೂಡ ಬಟ್ಟೆಗೆ ಮೃದುತ್ವವನ್ನು ನೀಡುತ್ತದೆ. ಕಲೆಯನ್ನು ನಿವಾರಿಸಿದ ನಂತರ ನೈಸರ್ಗಿಕ ಮೃದುತ್ವವನ್ನು ಬಟ್ಟೆಗಳಿಗೆ ನೀಡಲು ಪ್ರಯತ್ನಿಸಿ.

ಅಡುಗೆ ಕೋಣೆ ಫಳ-ಫಳ ಹೊಳೆಯಬೇಕೆ? ಇಲ್ಲಿದೆ ಟಿಪ್ಸ್

ಗ್ಲಿಸರಿನ್

ಗ್ಲಿಸರಿನ್

ಬಟ್ಟೆಯಿಂದ ಅರಶಿನ ಕಲೆಯನ್ನು ಹೋಗಲಾಡಿಸಲು ಗ್ಲಿಸರಿನ್ ಅನ್ನು ಬಳಸಬಹುದು. ಕಲೆಯಾದ ಜಾಗದಲ್ಲಿ ಗ್ಲಿಸರಿನ್‌ನಿಂದ ಉಜ್ಜಿ. ಇದು ಸ್ವಲ್ಪ ಗಂಟೆಗಳ ಕಾಲ ಬಟ್ಟೆಯಲ್ಲಿ ನೆನೆಯಲಿ. ನಂತರ ಯಾವಾಗಲೂ ಬಟ್ಟೆ ಒಗೆಯುವಂತೆ ಒಗೆಯಿರಿ.

ವಿನೇಗರ್

ವಿನೇಗರ್

ಅರಶಿನದ ಕಲೆಯನ್ನು ಬಟ್ಟೆಯಿಂದ ನಿವಾರಿಸಲು ಬಿಳಿ ವಿನೇಗರ್ ಅನ್ನು ಬಳಸಿ. ಬಿಳಿ ವಿನೇಗ‌ರ್‌ನೊಂದಿಗೆ ಬಟ್ಟೆಯ ಡಿಟರ್ಜೆಂಟ್‌ನೊಂದಿಗೆ ತಂಪು ನೀರಿನಲ್ಲಿ ತೊಳೆಯಿರಿ. ಕಲೆ ಹೋಗುವವರೆಗ ಈ ವಿಧಾನವನ್ನು ಅನುಸರಿಸಿ.

ಆಲ್ಕೋಹಾಲ್

ಆಲ್ಕೋಹಾಲ್

ಬಿಳಿ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸಲು ಮೃದು ಸ್ಪಾಂಜ್ ಅನ್ನು ಬಳಸಿ. ಕಲೆಗೆ ಆಲ್ಕೋಹಾಲ್‌ನಿಂದ ಮೊದಲು ಉಜ್ಜಿ ನಂತರ ಅದನ್ನು ಸ್ಪಾಂಜ್ ಬಳಸಿ ಉಜ್ಜಿ.

ಹೈಡ್ರೋಜನ್ ಫೆರಾಕ್ಸೈಡ್

ಹೈಡ್ರೋಜನ್ ಫೆರಾಕ್ಸೈಡ್

ನೀರಿನ ಒಂಭತ್ತನೇ ಭಾಗಕ್ಕೆ ಸ್ವಲ್ಪ ಹೈಡ್ರೋಜನ್ ಫೆರಾಕ್ಸೈಡ್ ಅನ್ನು ಬಳಸಿ ಬಿಳಿ ಬಟ್ಟೆಯನ್ನು ನೆನೆಸಿಡಿ. ಕಲೆಗೆ ಬ್ರಶ್ ಹಾಕುವ ಮುನ್ನ ಇದನ್ನು ಕನಿಷ್ಟ ಪಕ್ಷ 30 ನಿಮಿಷಗಳ ಕಾಲ ನೆನೆಸಿಡಿ.

ಬಿಸಿ ನೀರು/ತಂಪು ನೀರು

ಬಿಸಿ ನೀರು/ತಂಪು ನೀರು

ಬಿಳಿ ಬಟ್ಟೆಗೆ ಬಿದ್ದಿರುವ ಕಲೆಯನ್ನು ನಿವಾರಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಕಲೆಯನ್ನು ನಿವಾರಿಸಲು ಬಿಸಿ ನೀರಿನಲ್ಲಿ ಬಟ್ಟೆಯನ್ನು ಮುಳುಗಿಸಿಡುವುದು ಅತ್ಯವಶ್ಯಕ. ತಂಪು ನೀರು ಅಥವಾ ಐಸ್ ನೀರೂ ಕೂಡ ಕಲೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತದೆ.

ಲಿಂಬೆ

ಲಿಂಬೆ

ತಾಜಾ ಲಿಂಬೆಯನ್ನು ಬಳಸಿ ಕೂಡ ನೀವು ಬಿಳಿ ಬಟ್ಟೆಯ ಮೇಲೆ ಬಿದ್ದಿರುವ ಕಲೆಯನ್ನು ನಿವಾರಿಸಬಹುದು. ಕಲೆಯಾದ ಜಾಗಕ್ಕೆ ಲಿಂಬೆಯನ್ನು ಕತ್ತರಿಸಿ ಅದರ ರಸವನ್ನು ಉಜ್ಜಿ ಇದು ನಿಮ್ಮ ಬಟ್ಟೆಗೆ ಮೃದು ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಇದು ಬಟ್ಟೆಯ ಹಳದಿ ಕಲೆಯನ್ನು ಕೂಡಲೇ ನಿವಾರಿಸುತ್ತದೆ.

English summary

6 Ways To Remove Yellow Curry Stains

The most difficult stain to remove from clothes is that nasty yellow curry stains. In most Indian homes, turmeric is the common ingredient used in every meal. The yellow spice which adds taste to your meal also leaves behind a stubborn stain if you drop food on your clothes.
Story first published: Monday, June 16, 2014, 9:52 [IST]
X
Desktop Bottom Promotion