For Quick Alerts
ALLOW NOTIFICATIONS  
For Daily Alerts

ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಹೇಗೆ?

|

ಸೊಳ್ಳೆಗಳು ಮನೆಯಲ್ಲಿ ಇದ್ದರೆ ಯಾರಿಗೆ ತಾನೇ ಕಿರಿಕಿರಿಯಾಗುವುದಿಲ್ಲ. ಜೊತೆಗೆ ಇದು ಸ್ವಲ್ಪ ಅಪಾಯವನ್ನು ತರುವ ಕೀಟಗಳಾದ್ದರಿಂದ ಇದರ ಬಗ್ಗೆ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಮಳೆಗಾಲ ಬಂತೆಂದರೆ ಸಾಕು ಅಧಿಕ ನೀರಿನ ಜೊತೆಗೆ, ಕೆಸರು ಮತ್ತು ನಿಂತ ನೀರು ಎಲ್ಲವೂ ಸೇರಿ ಸೊಳ್ಳೆಗಳ ಸಂತಾನೋತ್ಪತಿಯನ್ನು ಹೆಚ್ಚಿಸುತ್ತವೆ. ಆಗ ಅಪಾಯ ತಪ್ಪಿದ್ದಲ್ಲ.

ಸೊಳ್ಳೆಗಳು ಕಿರಿಕಿರಿ ಉಂಟುಮಾಡುವುದು ಮಾತ್ರವಲ್ಲ, ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಕೆಲವು ಸೊಳ್ಳೆಗಳು ಕೇವಲ ಕಚ್ಚುತ್ತವೆ, ನಿಮ್ಮ ರಕ್ತವನ್ನು ಹೀರುತ್ತವೆ, ಕೈಯಲ್ಲಿ ಕೆಂಪು ಕಲೆಯನ್ನು ಉಳಿಸುತ್ತವೆ ಮತ್ತು ಕಚ್ಚಿದ ಗುರುತನ್ನು ಹಾಗೆಯೇ ಇರಿಸುತ್ತವೆ. ಇದೇ ಸಮಯದಲ್ಲಿ, ಕೆಲವು ನಿಮ್ಮ ಆರೋಗ್ಯವನ್ನು ಇನ್ನಷ್ಟು ಅಪಾಯಕ್ಕೆ ತಲುಪುವಂತಹ ರೋಗವನ್ನು ಹರಡುವ ಇತರ ಅಪಾಯಗಳನ್ನು ಇದು ಉಂಟುಮಾಡುತ್ತವೆ.

ಸೊಳ್ಳೆ ಬರದಂತೆ ತಡೆಯುವುದು ಹೇಗೆ?

ಈ ಸೊಳ್ಳೆಗಳನ್ನು ನಿಯಂತ್ರಿಸುವ ಸಾಮಾನ್ಯ ವಿಧಾನ ಹಲವಾರು ಇವೆ. ಆದರೆ ಈ ವಿಧಾನಗಳು ಪೂರ್ಣವಾಗಿ ಸೊಳ್ಳೆಯನ್ನು ನಿಯಂತ್ರಿಸುತ್ತವೆ ಎಂದು ನೀವು ನಂಬುತ್ತೀರಾ? ಆದರೆ ಅವುಗಳ ಕಿರಿಕಿರಿ ಮತ್ತು ಕಡಿಯುವಿಕೆಗೆ ನೀವು ಒಳಗಾಗಿಲ್ಲ ಎಂಬುದನ್ನು ಖಾತ್ರಿಪಡಿಸುವುದು ಅಗತ್ಯವಾಗಿದೆ. ಹಾಗಿದ್ದರೆ ಈ ಸೊಳ್ಳೆಗಳನ್ನು ಕೊಲ್ಲುವುದು ಹೇಗೆ ಎಂಬ ಕೆಲ ವಿಧಾನಗಳನ್ನು ನಿಮ್ಮೊಂದಿಗೆ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

6 Simple Ways To Kill Mosquitoes At Home

ಈ ವಿಧಾನಗಳು ಪ್ರಯೋಜನಕಾರಿಯಾಗಿದ್ದು ಸೊಳ್ಳೆಗಳ ನಿಯಂತ್ರಣವನ್ನು ಮಾಡುತ್ತವೆ ಮತ್ತು ಅವುಗಳ ಕಡಿತದಿಂದ ನಿಮಗೆ ಸೂಕ್ತ ಪರಿಹಾರವನ್ನು ಒದಗಿಸುತ್ತದೆ. ಈ ವಿಧಾನಗಳು ಅತ್ಯಂತ ಸರಳವಾಗಿದ್ದು ನಿಮಗೆ ಸೊಳ್ಳೆಗಳ ಉಪಟಳದಿಂದ ಶಾಶ್ವತ ಪರಿಹಾರವನ್ನು ಒದಗಿಸುತ್ತದೆ.

ಮೊಟ್ಟೆ ವಾಸನೆಯನ್ನು ಈ ನಾಲ್ಕು ವಿಧಾನಗಳಿಂದ ತೆಗೆಯಿರಿ

ಬೇವಿನ ಎಣ್ಣೆ
ಸೊಳ್ಳೆಗಳನ್ನು ಓಡಿಸುವ ಅತ್ಯುತ್ತಮವಾದ ನಿವಾರಕವೆಂದರೆ ಅದು ಬೇವಿನ ಎಣ್ಣೆ!. ಇದರ ವಾಸನೆಯು ಸಾಮಾನ್ಯವಾಗಿ ಸೊಳ್ಳೆಗಳನ್ನು ದೂರವಿಡುತ್ತದೆ. ಒಮ್ಮೆ ಪ್ರಯತ್ನಿಸಿ ಮತ್ತು ಅದರ ಫಲಿತಾಂಶವನ್ನು ನೀವೇ ನೋಡಿ. ಅಧ್ಯಯನಗಳ ಪ್ರಕಾರ ರಾಸಾಯನಿಕ ಆಧಾರಿತ ಸೊಳ್ಳೆ ನಿವಾರಕಗಳಿಗಿಂತ ಅತ್ಯಂತ ಪರಿಣಾಮಕಾರಿಯಾಗಿ ಸೊಳ್ಳೆಗಳನ್ನು ನಿವಾರಿಸುತ್ತದೆ. ಎಲ್ಲೆಡೆಯಲ್ಲು ಕಂಡು ಬರುವ ಬೇವಿನ ಸೊಪ್ಪಿನಿಂದ ತಯಾರಾಗುವ ಎಣ್ಣೆಯು ಸುಲಭವಾಗಿ ಗ್ರಂಧಿಗೆ ಅಂಗಡಿಗಳಲ್ಲಿ ಮತ್ತು ಆಯುರ್ವೇದ ಅಂಗಡಿಗಳಲ್ಲಿ ನಿಮಗೆ ದೊರೆಯುತ್ತದೆ.

ಕರಿ ಮೆಣಸು
ಸೊಳ್ಳೆಗಳಿಗೆ ಕರಿ ಮೆಣಸಿನ ಘಾಟನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲ. ಇದನ್ನು ನೀವು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದಲ್ಲವೆ. ಕರಿ ಮೆಣಸಿನ ಎಣ್ಣೆಯು ಸೊಳ್ಳೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿವೆ ಎಂದು ಅಧ್ಯಯನಗಳು ಖಚಿತಪಡಿಸಿವೆ. ಅಧ್ಯಯನಗಳು ಆಲ್ಕೋಹಾಲ್ ಸೊಳ್ಳೆಗಳನ್ನು ನಿವಾರಿಸುತ್ತದೆ ಎಂದು ತಿಳಿಸಿದರು, ಕರಿಮೆಣಸು ಅದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಖಚಿತಗೊಂಡಿದೆ.

ಲ್ಯಾವೆಂಡರ್ ಲ್ಯಾವೆಂಡರ್
ಎಣ್ಣೆಯನ್ನು ಬಳಸಿ ಚಮತ್ಕಾರವನ್ನು ನೋಡಿ! ಈ ವಾಸನೆಯು ಸೊಳ್ಳೆಗಳನ್ನು ಓಡಿಸುವ ಗುಣಗಳನ್ನು ಹೊಂದಿದೆ. ಇವುಗಳನ್ನು ಅಪ್ರಿಕೊಟ್ ಕೆರ್ನೆಲ್, ಸ್ವೀಟ್ ಅಲ್ಮಾಂಡ್ ಅಥವಾ ತೆಂಗಿನ ಕಾಯಿ ಎಣ್ಣೆಯಲ್ಲಿ ಬೆರೆಸಿದಾಗ ಮತ್ತಷ್ಟು ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ನಿಮಗೆ ಬೇಕಾದಲ್ಲಿ ಸಾವಯವ ಸೋಯಾ ಎಣ್ಣೆಯಲ್ಲಿ ಬೆರೆಸಿದರೆ ಸೊಳ್ಳೆಗಳನ್ನು ದೂರವಿಡಲು ಇನ್ನಷ್ಟು ಉಪಕಾರಿಯಾಗುತ್ತದೆ.

ಸೊಳ್ಳೆ ಬ್ಯಾಟ್
ಸೊಳ್ಳೆಗಳನ್ನು ಅದನ್ನು ಕೊಲ್ಲುವ ಬ್ಯಾಟ್ ಬಳಸಿ ಸಂಪೂರ್ಣವಾಗಿ ನಾಶ ಮಾಡಬಹುದು. ಇವುಗಳು ಉದ್ದನೆಯ ಹಿಡಿಯನ್ನು ಹೊಂದಿದ್ದು ನೆಟ್‌ಗಳನ್ನು ಹೊಂದಿರುತ್ತವೆ. ಗೋಡೆ ಮತ್ತು ಇತರ ಪ್ರದೇಶಗಳಲ್ಲಿ ಅವಿತುಕುಳಿತಿರುವ ಸೊಳ್ಳೆಗಳ ಸಂಪೂರ್ಣ ನಾಶವನ್ನು ಈ ಬ್ಯಾಟ್‌ಗಳು ಮಾಡುತ್ತವೆ.

ಸೋಪು ನೀರು
ಸೋಪು ನೀರು ಜಿರಳೆಗಳನ್ನು ನಿಯಂತ್ರಿಸುತ್ತದೆ ಎಂಬುದು ತಿಳಿದಿರುವ ವಿಷಯ. ಇದೇ ವಿಧಾನವನ್ನು ಬಳಸಿ ಸೊಳ್ಳೆಗಳನ್ನು ಕೂಡ ನಿಯಂತ್ರಿಸಬಹುದಾಗಿದೆ. ಇದೊಂದು ಸುಲಭವಾದ ಮತ್ತು ಸರಳವಾದ ತಂತ್ರಗಾರಿಕೆಯಾಗಿದೆ.

ಇಲೆಕ್ಟ್ರಿಕ್ ಸೊಳ್ಳೆ ಬ್ಯಾಟ್
ಇಲೆಕ್ಟ್ರಿಕ್ ಸೊಳ್ಳೆ ಬ್ಯಾಟ್ ಬಳಸಿ ಕೂಡ ಸೊಳ್ಳೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ವಿಧಾನವಾಗಿದೆ. ಈ ಬ್ಯಾಟ್ ಅನ್ನು ವಿದ್ಯುತ್ತಿನಲ್ ಚಾರ್ಜಿಗೆ ಇರಿಸಿ ನಂತರ ಈ ಬ್ಯಾಟ್ ಅನ್ನು ಸೊಳ್ಳೆಗಳನ್ನು ನಿವಾರಿಸಲು ಬಳಸಬಹುದಾಗಿದೆ.

ನಿಮ್ಮ ಪರಿಸರವನ್ನು ಸ್ವಚ್ಛಗೊಳಿಸಿ
ಪರಿಸರವನ್ನು ಸ್ವಚ್ಛಗೊಳಿಸುವುದು ಸೊಳ್ಳೆಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧವಾಗಿದೆ. ನಿಮ್ಮ ಸುತ್ತಲಿನ ವಾತಾವರಣ ಸ್ವಚ್ಛವಾಗಿದ್ದರೆ ಸೊಳ್ಳೆಗಳು ನಿಮ್ಮ ಮನೆಯನ್ನು ನಿಮ್ಮನ್ನು ಸಮೀಪಿಸದಂತೆ ಜಾಗ್ರತೆ ವಹಿಸಬಹುದು ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತಿ ಮುಖ್ಯವಾಗಿದೆ.

English summary

6 Simple Ways To Kill Mosquitoes At Home

Mosquitoes are not only annoying, but also harmful to our health. Some mosquitoes only bite, suck your blood, and leave red, itchy bite marks. At the same time, some others carry disease causing organisms that will put you under health risks.
Story first published: Wednesday, August 27, 2014, 11:43 [IST]
X
Desktop Bottom Promotion