For Quick Alerts
ALLOW NOTIFICATIONS  
For Daily Alerts

ನೊಣಗಳನ್ನು ಹೋಗಲಾಡಿಸಲು 16 ಮನೆಮದ್ದುಗಳು

By Viswanath S
|

ಮನೆಗಳಲ್ಲಿ ಕಾಣುವ ನೊಣಕ್ಕೆ ಮುಸ್ಕ ಡೊಮೆಸ್ಟಿಕ (Musca Domestica) ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ. ಮನೆ ನೊಣಗಳು ಕಚ್ಚದಿದ್ದರೂ ಸಹ ಅವುಗಳು ಕಾಲರಾ, ಭೇದಿ, ಟೈಫಾಯಿಡ್ ಮತ್ತು ಅತಿಸಾರ ಮುಂತಾದ ಅನೇಕ ರೋಗಗಳನ್ನು ಹರಡುತ್ತವೆ. ಅಲ್ಲದೆ ತೀಕ್ಷ್ಣ ಕಣ್ಣುನೋವು ಹರಡಲು ಕಾರಣವಾಗಬಹುದು.

ಸ್ವಚ್ಚತೆ ಅಥವ ನೈರ್ಮಲ್ಯವಿರದ ಮುಕ್ತಪ್ರದೇಶಗಳಲ್ಲಿ ಕಸ ಮತ್ತು ಮಲ ಸೇರಿರುವ ಸ್ಥಳಗಳಲ್ಲಿ ಸಂಗ್ರಹವಾಗಿರುತ್ತದೆ. ಮುಚ್ಚಿರದ ಉಳಿದ ಆಹಾರವೂ ಸಹ ನೊಣಗಳನ್ನು ಆಕರ್ಷಿಸುತ್ತದೆ.

ದಟ್ಟವಾಗಿ ಬೆಳೆಯುತ್ತಿರುವ ಸಸ್ಯವರ್ಗ ಮತ್ತು ಪೊದೆಗಳು ಇಂತಹ ಪ್ರದೇಶಗಳಲ್ಲಿ ನೊಣಗಳ ಬೆಳವಣಿಗೆ ಸಾಕಷ್ಟು ಹೆಚ್ಚಾಗಿರುತ್ತದೆ. ಮನೆಗಳಲ್ಲಿ ಕಾಣುವ ಮತ್ತು ವಿಶೇಷವಾಗಿ ತಿನ್ನುವ ಪದಾರ್ಥಗಳ ಮೇಲೆ ಕೂರುವ ನೊಣಗಳನ್ನು ತೊಡೆದುಹಾಕಲು ಮನೆಮದ್ದುಗಳು ಹೀಗಿವೆ

ಅಡುಗೆ ಕೋಣೆ ಫಳ-ಫಳ ಹೊಳೆಯಬೇಕೆ? ಇಲ್ಲಿದೆ ಟಿಪ್ಸ್

ಕರ್ಪೂರ

ಕರ್ಪೂರ

ನೊಣಗಳ ಹಾವಳಿಯನ್ನು ತಡೆಯಲು ಕರ್ಪೂರವು ಒಂದು ಶ್ರೇಷ್ಠ ಮದ್ದಾಗಿದೆ. ಕರ್ಪೂರವನ್ನು ಹಚ್ಚಿ ಅದರ ಹೊಗೆಯನ್ನು ಕೊಠಡಿಯಲ್ಲಿ ಎಲ್ಲಾ ಭಾಗಗಳಲ್ಲಿ ಒಡ್ಡಿದರೆ ನೊಣಗಳು ಹಾರಿಹೋಗುತ್ತವೆ.

ಯು.ವಿ. ಬಲೆಗಳು

ಯು.ವಿ. ಬಲೆಗಳು

ಅಲ್ಟ್ರ ವೈಯಲೆಟ್ ಬಲೆಗಳು ನೊಣಗಳನ್ನು ಆಕರ್ಷಿಸಿ ಅದರ ಮೇಲೆ ಕುಳಿತ ತಕ್ಷಣ ಉ.ವಿ. ತಾಂತ್ರಿಕ ವ್ಯವಸ್ತೆಯಿಂದ ಕೊಲ್ಲಲ್ಪಡುತ್ತವೆ. ಆದ್ದರಿಂದ ಯುವಿ ಬಲೆಗಳ ಸಹಾಯದಿಂದ ನೊಣಗಳನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

ತುಳಸಿ

ತುಳಸಿ

ತುಳಸಿ ಗಿಡವು ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೆ ಅದು ಅತ್ಯಂತ ಪರಿಣಾಮಕಾರಿಯಾಗಿ ನೊಣಗಳ ವಿರುದ್ಧ ಬಲವಾಗಿ ವರ್ತಿಸುತ್ತದೆ. ಆದ್ದರಿಂದ ನಿಮ್ಮ ಮನೆತೋಟಗಳಲ್ಲಿ ನೊಣಗಳನ್ನು ದೂರವಿರಿಸಲು ಆದಷ್ಟು ತುಳಸಿ ಬೆಳೆಯಿರಿ. ಹಾಗೆಯೇ ಪುದೀನ, ನಸು ಕೆನ್ನೀಲಿ (Lavender) ಅಥವ ಚೆಂಡು ಹೂ ಗಿಡಗಳನ್ನು ಬೆಳೆಸಿ ನೊಣಗಳನ್ನು ದೂರವಿರಿಸಿರಿ.

ನೊಣಗಳನ್ನು ಕೊಳ್ಳುವ ಬಲೆ ಇರುವ ಬ್ಯಾಟ್

ನೊಣಗಳನ್ನು ಕೊಳ್ಳುವ ಬಲೆ ಇರುವ ಬ್ಯಾಟ್

ಇತ್ತೀಚೆಗೆ ಮಾರುಕಟ್ಟೆಗಲ್ಲಿ ಕಾಣಿಸಿಕೊಂಡಿರುವ ನೊಣ-ಕೊಲ್ಲುವ ರಾಕೆಟ್ ಅಥವ ಬಲೆ ಬಹಳ ಮನೆಗಳಲ್ಲಿ ಹಾರಾಡುವ ನೊಣಗಳನ್ನು ಕೊಲ್ಲುವುದಕ್ಕೆ ಅಗ್ಗದ ವಿಧಾನವಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಯಂತ್ರವನ್ನು ಅಳವಡಿಸಿರುವುದರಿಂದ ಒಂದು ಸುಲಭವಾದ ಉಪಕರಣವಾಗಿದೆ.

ಕೆಲವು ಉಪಯುಕ್ತವಾದ ಎಣ್ಣೆಗಳು

ಕೆಲವು ಉಪಯುಕ್ತವಾದ ಎಣ್ಣೆಗಳು

ಕೆಲವು ಉಪಯುಕ್ತವಾದ ಎಣ್ಣೆಗಳ ಸಹಾಯದಿಂದ ಮನೆಗಳಲ್ಲಿ ನೊಣವನ್ನು ದೂರವಿಡಲು ಸಾಧ್ಯವಾಗಿದೆ. ಅವು ಯಾವುದೆಂದರೆ ಲ್ಯಾವೆಂಡರ್, ನೀಲಗಿರಿ, ಪುದೀನಾ ಮತ್ತು ನಿಂಬೆ ಹುಲ್ಲು. ಇವುಗಳ ಸೌಮ್ಯ ಹಿತಕಾರಿ ಪರಿಮಳದಿಂದ ಮನೆಯ ನೊಣಗಳನ್ನು ಪರಿಣಾಮಕಾರಿಯಾಗಿ ದೂರವಿರಿಸಬಹುದು. ಈ ದ್ರವ್ಯವನ್ನು ನಿಮ್ಮ ಡ್ರಾಯಿಂಗ್ ರೂಮ್, ಮಲಗುವ ಕೋಣೆ ಹಾಗೂ ಅಡಿಗೆಮನೆಯಲ್ಲೂ ಸಹ ಸಿಂಪಡಿಸಿ ಆ ಪ್ರದೇಶಗಳೆಲ್ಲವನ್ನು ನೊಣಗಳಿಂದ ದೂರವಿರಿಸಬಹುದು.

ಪರದೆಗಳನ್ನು ಹಾಕುವುದರಿಂದ ನೊಣಗಳನ್ನು ತಡೆಯಬಹುದು:

ಪರದೆಗಳನ್ನು ಹಾಕುವುದರಿಂದ ನೊಣಗಳನ್ನು ತಡೆಯಬಹುದು:

ನಿಮ್ಮ ಮನೆಬಾಗಿಲು ಮೂಲಕ ಪ್ರವೇಶಮಾಡುವ ಸ್ಥಳದಲ್ಲಿ ಮತ್ತು ಕಿಟಕಿಗಳಲ್ಲಿ ಗಾಳಿ ಮತ್ತು ಬೆಳಕು ಬರುವಹಾಗಿರುವ ಸ್ಕ್ರೀನ್ ಅಳವಡಿಸಿದರೆ ನೊಣಗಳು ಮನೆಯನ್ನು ಪ್ರವೇಶಮಾಡದಂತೆ ತಡೆಯಬಹುದು.

ಹಸಿರು ಸೇಬಿನ ಸಾಬೂನು

ಹಸಿರು ಸೇಬಿನ ಸಾಬೂನು

ಸಂಶೋಧನೆಗಳ ಪ್ರಕಾರ ಹಸಿರು ಸೇಬಿನ ಸಾಬೂನು ನೊಣಗಳನ್ನು ಆಕರ್ಷಿಸುತ್ತದೆ. ಹಾಗಾಗಿ ನೀವು ಒಂದು ತೆರೆದ ಪಾತ್ರೆಯಲ್ಲಿ ಎರಡು ಚಮಚ ಹಸಿರು ಸಾಬೂನಿನ ದ್ರವವನ್ನು ನೀರಿನಲ್ಲಿ ಬೆರಸಿ ಇಟ್ಟರೆ ಅದರ ವಾಸನೆಯು ನೊಣಗಳನ್ನು ಆಕರ್ಷಿಸಿ ನೀರಿನಲ್ಲಿ ಬೀಳುತ್ತವೆ. ಈ ರೀತಿಯಲ್ಲು ನೀವು ನೊಣಗಳನ್ನು ಹಿಡಿಯಬಹುದು.

ನಿಮ್ಮ ಫ್ಯಾನ್ ಸ್ವಿಚ್ ಆನ್ ಮಾಡಿ

ನಿಮ್ಮ ಫ್ಯಾನ್ ಸ್ವಿಚ್ ಆನ್ ಮಾಡಿ

ಇದೊಂದು ಸುಲಭದ ಮಾರ್ಗ. ನಿಮ್ಮ ಫ್ಯಾನ್ ಸ್ವಿಚ್ ಆನ್ ಮಾಡಿದರೆ ನೊಣಗಳು ತಾನಾಗಿಯೇ ಬಾಗಿಲಹೊರಗೆ ಹಾರಿಹೋಗುತ್ತವೆ. ಇದಕ್ಕೆ ನಿಮ್ಮ ಸೀಲಿಂಗ್ ಫ್ಯಾನ್ ಅಥವಾ ಟೇಬಲ್ ಫ್ಯಾನ್ ಇದ್ದರೆ ಸಾಕು.

ಸೇಬು ಮತ್ತು ಲವಂಗ

ಸೇಬು ಮತ್ತು ಲವಂಗ

ಕೆಲವು ಲವಂಗವನ್ನು ಒಂದು ಸೇಬಿನ ಹಣ್ಣಿಗೆ ಚುಚ್ಚಿ ನೊಣಗಳು ಸಾಮಾನ್ಯವಾಗಿ ಬರುವ ಸ್ಥಳದಲ್ಲಿಡಿ. ಅಥವ ಲವಂಗದ ಎಣ್ಣೆಯನ್ನು ಸಹ ನೊಣಗಳು ಬರುವ ಸ್ಥಳದಲ್ಲಿ ಹಚ್ಚಿ. ನೊಣಗಳಿಗೆ ಲವಂಗದ ವಾಸನೆ ಕಂಡರೆ ಆಗುವುದಿಲ್ಲ ಮತ್ತು ಅದರ ವಾಸನೆ ಬಂದೊಡನೆಯೇ ಓಡಿ ಹೋಗುತ್ತವೆ.

ಆಪಲ್ ಸೈಡರ್ ವಿನೇಗರ್

ಆಪಲ್ ಸೈಡರ್ ವಿನೇಗರ್

ಈ ವಿನೇಗರ್ ನೊಣಗಳನ್ನು ತೊಡೆದುಹಾಕಲು ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಸ್ವಲ್ಪ ಆಪಲ್ ಸೈಡರ್ ವಿನೇಗರ್‌ಅನ್ನು ಒಂದು ತೆರೆದ ಜಾರಿನೊಳಗೆ ಹಾಕಿ. ಸ್ವಲ್ಪ ಮೇಲ್ಮೈ ಒತ್ತಡವನ್ನು ರಚಿಸಲು ಮತ್ತು ನೊಣಗಳು ತಪ್ಪಿಸಿಕೊಂಡು ಹೋಗದಿರಲು ಸೋಪಿನ ದ್ರವ (ಲಿಕ್ವಿಡ್ ಡಿಟರ್ಜೆಂಟ್) ಸ್ವಲ್ಪ ಸೇರಿಸಿ. ಈ ಮಿಶ್ರಣದ ವಾಸನೆಯಿಂದ ನೊಣಗಳು ಆಕರ್ಷಣೆಗೊಳಗಾಗಿ ದ್ರವದಲ್ಲಿ ಬಂದು ಬೀಳುತ್ತವೆ ಮತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸೌತೆಕಾಯಿ

ಸೌತೆಕಾಯಿ

ಕಸದಗುಡ್ಡೆಯಮೇಲೆ ಸೌತೆಕಾಯಿಯ ಚೂರುಗಳನ್ನು ಇಡುವುದರಿಂದ ನೊಣಗಳು ಮೊಟ್ಟೆಗಳನ್ನು ಇಡುವುದಿಲ್ಲ. ಹಾಗೆ ಮಾಡುವುದರಿಂದ ಹೊಸ ನೊಣ ಹುಟ್ಟುವುದನ್ನು ತಡೆಯಬಹುದು. ಅದೇ ರೀತಿ ಸೌತೆಕಾಯಿಯ ತುಂಡುಗಳನ್ನು ಮನೆಯಲ್ಲಿ ಆಗಾಗ್ಗೆ ಅಲ್ಲಲ್ಲಿ ಇಡುತ್ತಿದ್ದರೆ ಕೂಡ ನೊಣಗಳು ಒಳಗೆ ಬರದೆ ಹೊರಗೇ ಉಳಿಯುತ್ತದೆ.

ಫ್ಲೈ ಪೇಪರ್

ಫ್ಲೈ ಪೇಪರ್

ಕೆಲವು ಜಗ್ಗದ ನೊಣಗಳನ್ನು ತೊಡೆದುಹಾಕಲು ಮನೆಯಲ್ಲಿ ಸುಲಭವಾಗಿ ನಿಮ್ಮ ಸ್ವಂತ ಫ್ಲೈ ಪೇಪರ್ ಮಾಡಬಹುದು. ಸಕ್ಕರೆ ಮತ್ತು ಜೋಳದ ಪಿಷ್ಟವನ್ನು ಸೇರಿಸಿ ಪೇಸ್ಟ್ ಮಾಡಿಕೊಂಡು ಒಂದು ಕಂದು ಬಣ್ಣದ ದಪ್ಪಕ್ಕಿರುವ ಪೇಪರ್ ಮೇಲೆ ಬ್ರಶ್‌ನಿಂದ ಚೆನ್ನಾಗಿ ಬಳೆಯಿರಿ. ಆ ಪೇಪರಿನ ಮೂಲೆಯಲ್ಲಿ ಒಂದು ರಂಧ್ರ ಮಾಡಿ ನಿಮ್ಮ ಕೊಠಡಿ ಅಥವ ಹೊರಗಡೆ ಎಲ್ಲಿಯಾದರೂ ತಗಲುಹಾಕಿ. ಇದರ ಪರಿಣಾಮ ನೊಣಗಳು ಅದರ ಹತ್ತಿರ ಸುಳಿಯುವುದಿಲ್ಲ.

ಕೆಂಪು ಮೆಣಸಿನಕಾಯಿಯ ಪುಡಿ

ಕೆಂಪು ಮೆಣಸಿನಕಾಯಿಯ ಪುಡಿ

ಸ್ವಲ್ಪ ಕೆಂಪು ಮೆಣಸಿನಕಾಯಿಯ ಪುಡಿಯನ್ನು ಒಂದು ತುಂತುರು ಮುಚ್ಚಲವಿರುವ ಬಾಟಲ್ ಒಳಗೆ ಹಾಕಿ. ಅದಕ್ಕೆ ಸ್ವಲ್ಪ ನೀರು ಬೆರಸಿ ಚೆನ್ನಾಗಿ ಕುಲುಕಿ ಮಿಶ್ರಮಾಡಿ. ಈ ಮಿಶ್ರಣವನ್ನು ನಿಮ್ಮ ಮನೆಯಸುತ್ತ ಸ್ಪ್ರೇ ಮಾಡಿದರೆ ನೊಣಗಳು ಸತ್ತುಹೋಗುತ್ತದೆ.

ವೈಟ್ ವೈನ್

ವೈಟ್ ವೈನ್

ಒಂದು ತೆರೆದ ಜಾರಿನಲ್ಲಿ ಸ್ವಲ್ಪ ವೈಟ್ ವೈನ್ ಮತ್ತು ಸ್ವಲ್ಪ ಡಿಶ್ ವಾಶಿಂಗ್ ಲಿಕ್ವಿಡ್ ಸೇರಿಸಿ ಮಿಶ್ರಣ ಮಾಡಿ. ಈ ಜಾರನ್ನು ನೊಣಗಳು ಬರುವ ಸ್ಥಳದಲ್ಲಿಡಿ. ಆ ಮಿಶ್ರಣದ ವಾಸನೆಯಿಂದ ನೊಣಗಳು ಬಂದು ಅದರೊಳಗೆ ಬಿದ್ದು ಸತ್ತುಹೋಗುತ್ತವೆ. ಈ ಮಿಶ್ರಣ ನೊಣಗಳಿಗೆ ಒಂದು ರೀತಿಯ ವಿಷ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯ ವಾಸನೆಯನ್ನು ನೊಣಗಳು ದ್ವೇಷಿಸುತ್ತವೆ. ಹಾಗಾಗಿ ನೀವು ಅದರ ಪುಡಿಯನ್ನು ಏರ್ ಫ್ರೆಷ್ನರ್‌ನಂತೆ ಉಪಯೋಗಿಸಿದರೆ ನೊಣಗಳು ಓಡಿ ಹೋಗುತ್ತವೆ.

 ಪ್ಲಾಸ್ಟಿಕ್ ವಾಟರ್ ಚೀಲಗಳು

ಪ್ಲಾಸ್ಟಿಕ್ ವಾಟರ್ ಚೀಲಗಳು

ಪ್ಲಾಸ್ಟಿಕ್ ಚೀಲಗಳಲ್ಲಿ ನೀರು ತುಂಬಿ ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ತೂಗುಹಾಕಿದರೆ ನೊಣಗಳು ಮನೆಯೊಳಕ್ಕೆ ಬರುವುದನ್ನು ತಡೆಯುತ್ತದೆ.

English summary

16 Home Remedies to Get Rid of Flies

Flies are the insects that are dipteral (having two wings) and belong to the same order. There are more than 1.20 million species of flies in the world. They keep on changing in size as they grow towards maturity.
Story first published: Thursday, June 19, 2014, 9:49 [IST]
X
Desktop Bottom Promotion