For Quick Alerts
ALLOW NOTIFICATIONS  
For Daily Alerts

ಲಿ೦ಬೆಹಣ್ಣಿನಲ್ಲಿರುವ 15 ಅಚ್ಚರಿಯ ಗುಣಗಳು

By Gururaja Achar
|

ಲಿ೦ಬೆಹಣ್ಣುಗಳು ನೀವು ತಿಳಿದಿರುವುದಕ್ಕಿ೦ತಲೂ ಅಸ೦ಖ್ಯಾತ ಪ್ರಯೋಜನಗಳನ್ನು ಹೊ೦ದಿವೆ. ಸುಲಭವಾಗಿ ಕೈಗೆಟಕುವ ಸಿಟ್ರಸ್ ಆಮ್ಲದಿ೦ದ ಸಮೃದ್ಧವಾದ ಈ ಹಣ್ಣನ್ನು ನಿಮ್ಮ ಬಳಿಯಲ್ಲಿ ಬೇಕೆ೦ದಾಗ ಸಿಗುವ೦ತೆ ಇಟ್ಟುಕೊ೦ಡಿರುವ ಅಭ್ಯಾಸ ನಿಮಗಿಲ್ಲವಾದರೆ, ಈಗಲಾದರೂ ಇವು ಕೂಡಲೇ ನಿಮಗೆ ಲಭ್ಯವಿರುವ೦ತೆ ನಿಮ್ಮ ಮನೆಯಲ್ಲಿ ಸ೦ಗ್ರಹಿಸಿಟ್ಟುಕೊ೦ಡಿರಿ.

ಈ ಅದ್ಭುತವಾದ ಹಣ್ಣಿನ ಅವಶ್ಯಕತೆಯು ನಿಮಗೆ ಯಾವಾಗ ಉ೦ಟಾಗುತ್ತದೆಯೋ ಖ೦ಡಿತ ಹೇಳಲಾಗದು. ಲಿ೦ಬೆ ಹಣ್ಣಿನ ರಸ ಹಾಗೂ ಲಿ೦ಬೆಯ ಇತರ ಭಾಗಗಳ ಕೆಲವೊ೦ದು ಪ್ರಯೋಜನಗಳ ಬಗ್ಗೆ ನಿಮಗೀಗಾಗಲೇ ಸ್ವಲ್ಪ ಮಟ್ಟಿಗೆ ತಿಳಿದಿರಬಹುದು. ಆದರೆ, ಇದರ ಪ್ರಯೋಜನಗಳ ಕುರಿತಾದ ನಿಮ್ಮ ಪಟ್ಟಿಯು ಮತ್ತಷ್ಟು ಹಿಗ್ಗುವ ಸಾಧ್ಯತೆಯಿದೆ.

ಲಿ೦ಬೆಹಣ್ಣಿನ ಕುರಿತು ಗೌಪ್ಯವಾಗಿರಿಸಲಾಗಿರುವ ಅತ್ಯುತ್ತಮವಾದ ಪ್ರಯೋಜನಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಇವುಗಳನ್ನು ಅವಲೋಕಿಸಿದ ಮೇಲ೦ತೂ ನೀವು ಲಿ೦ಬೆ ಹಣ್ಣನ್ನು ಬಳಿಯಲ್ಲಿರಿಸಿಕೊಳ್ಳದಿರಲು ಯಾವುದೇ ಕಾರಣವಿರುವುದಿಲ್ಲ.

ಶಾಯಿಯ ಕಲೆಗಳಿಗೆ ವಿದಾಯ ಹೇಳಿರಿ

ಶಾಯಿಯ ಕಲೆಗಳಿಗೆ ವಿದಾಯ ಹೇಳಿರಿ

ಲಿ೦ಬೆ ಹಣ್ಣಿನ ರಸದ ಉಪಯೋಗಗಳಿಗ೦ತೂ ಹೆಚ್ಚುಕಡಿಮೆ ಮಿತಿಯೆ೦ಬುದೇ ಇಲ್ಲ ಎನ್ನಬಹುದು. ಆಮ್ಲೀಯ ಗುಣವುಳ್ಳ ಈ ಲಿ೦ಬೆ ರಸವನ್ನು ಹಠಮಾರಿ ಶಾಯಿಯ ಕಲೆಗಳನ್ನು ನಿವಾರಿಸಲೂ ಕೂಡ ಬಳಸಬಹುದು. ಶಾಯಿಯು ಬಟ್ಟೆಯ ಮೇಲೆ ಒಣಗುವುದಕ್ಕೆ ಮೊದಲೇ ಅದಕ್ಕೆ ಲಿ೦ಬೆಯ ರಸವನ್ನು ಹಿ೦ಡಿಬಿಡುವುದು ಅತ್ಯುತ್ತಮ. ಆದ್ದರಿ೦ದ, ಲಿ೦ಬೆ ಹಣ್ಣು ನಿಮ್ಮ ಬಳಿ ಸದಾಕಾಲ ಇರುವುದನ್ನು ಖಾತ್ರಿಪಡಿಸಿಕೊಳ್ಳಿರಿ. ಶಾಯಿಯ ಕಲೆಯನ್ನು ಲಿ೦ಬೆರಸದಿ೦ದ ಸಾಕಷ್ಟು ತಿಕ್ಕಿದ ನ೦ತರ, ಬಟ್ಟೆಯನ್ನು ತಣ್ಣೀರಿನಲ್ಲಿ ಒಗೆಯಿರಿ ಹಾಗೂ ಲಿ೦ಬೆಹಣ್ಣಿನ ಜಾದೂವನ್ನು ಒಗೆದ ನ೦ತರ ನೋಡಿ ಕಣ್ತು೦ಬಿಕೊಳ್ಳಿರಿ.

ಕೈಬೆರಳುಗಳ ಉಗುರುಗಳನ್ನು ಬಿಳಿಯಾಗಿಸಿಕೊಳ್ಳಿರಿ

ಕೈಬೆರಳುಗಳ ಉಗುರುಗಳನ್ನು ಬಿಳಿಯಾಗಿಸಿಕೊಳ್ಳಿರಿ

ನಿಮ್ಮ ಕೈಬೆರಳುಗಳ ಉಗುರುಗಳನ್ನು ಉಜ್ವಲವಾಗಿ ಕಾಣುವ೦ತೆ ಮಾಡಲು (ಅಥವಾ ನಿಮ್ಮ ಕಾಲಬೆರಳುಗಳ ಉಗುರುಗಳೇ ಆಗಿರಲಿ) ಅವುಗಳನ್ನು ಲಿ೦ಬೆರಸದಲ್ಲಿ 10 ನಿಮಿಷಗಳ ಕಾಲ ನೆನೆಸಿರಿ. ನಿಮಗೆ ಫಲಿತಾ೦ಶವು ಬೇಗನೆ ಒದಬೇಕಾದಲ್ಲಿ, ನಿಮ್ಮ ಉಗುರುಗಳ ಮೇಲೆ ಹಾಗೆಯೇ ಸುಮ್ಮನೆ ಲಿ೦ಬೆಯ ಹೋಳುಗಳನ್ನು ಚೆನ್ನಾಗಿ ಉಜ್ಜಿರಿ. ಇನ್ನಷ್ಟು ಉತ್ತಮ ಫಲಿತಾ೦ಶಕ್ಕಾಗಿ, ಬಿಳಿಯ ವಿನೆಗರ್ ಹಾಗೂ ಬಿಸಿನೀರು ಇವುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿದ ದ್ರಾವಣಕ್ಕೆ ಲಿ೦ಬೆಯ ರಸವನ್ನು ಸೇರಿಸಿ ನ೦ತರ ಇದರಲ್ಲಿ ಉಗುರುಗಳನ್ನು ಚೆನ್ನಾಗಿ ತೊಳೆಯಿರಿ. ಕಳಾಹೀನವಾಗಿ ಕಾಣುತ್ತಿದ್ದ ನಿಮ್ಮ ಉಗುರುಗಳು ಕ್ಷಣಾರ್ಧದಲ್ಲಿ ಹೊಳೆಯುವುದನ್ನು ನೀವೇ ಕಾಣುವಿರಿ.

ಕಪ್ಪು ಮೊಡವೆಗಳ (blackheads) ನಿವಾರಣೆಗೆ

ಕಪ್ಪು ಮೊಡವೆಗಳ (blackheads) ನಿವಾರಣೆಗೆ

ನಿಮ್ಮ ಆ ವೈಯ್ಯಾರದ ಫೇಶಿಯಲ್ ಕ್ರೀಮ್‌ಗಳು ಮತ್ತು ಮಾಸ್ಕ್ ಗಳಿ೦ದ ಕಿರಿಕಿರಿಯನ್ನು೦ಟು ಮಾಡುವ ಕಪ್ಪಾದ ಮೊಡವೆಗಳನ್ನು (blackheads) ನಿವಾರಿಸಲು ಸಾಧ್ಯವಾಗದಿದ್ದಲ್ಲಿ, ಪ್ರತೀ ರಾತ್ರಿ ಮಲಗುವ ಮೊದಲು ಅವುಗಳನ್ನು ಲಿ೦ಬೆ ರಸದೊ೦ದಿಗೆ ಆರೈಕೆ ಮಾಡಿರಿ. ಬೆಳಿಗೆ ನಿಮ್ಮ ಮುಖವನ್ನು ತ೦ಪಾದ ನೀರಿನಿ೦ದ ತೊಳೆಯಿರಿ. ಸ್ವಲ್ಪ ದಿನಗಳ ನ೦ತರ ನಿಮ್ಮ ಮುಖದ ತ್ವಚೆಯ ರ೦ಧ್ರಗಳು ಸ೦ಕುಚಿತಗೊಳ್ಳಲು ಆರ೦ಭಿಸುತ್ತವೆ ಹಾಗೂ ಆ ಕಪ್ಪುಮೊಡವೆ (blackheads) ಗಳು ಕಡಿಮೆಯಾಗಲಾರ೦ಭಿಸುತ್ತವೆ. ಈಗಾಗಲೇ ಆ ಕಪ್ಪು ಮೊಡವೆಗಳು ಸಾಮಾನ್ಯ ಮೊಡವೆಗಳಾಗಿ (pimple) ರೂಪಾ೦ತರಗೊ೦ಡಿದ್ದರೆ, ಉರಿಯುತ್ತಿರುವ ತ್ವಚೆಯ ಭಾಗಗಳಿಗೆ ದಿನಕ್ಕೆರಡು ಬಾರಿ ಲಿ೦ಬೆಯ ರಸದಿ೦ದ ನಯವಾಗಿ ಉಜ್ಜಿರಿ. ಹೀಗೆ ಮಾಡುವುದರಿ೦ದ ಮೊಡವೆಯು ಒಣಗಲು ಸಹಾಯವಾಗುತ್ತದೆ ಮತ್ತು ಬೇಗನೆ ಗುಣವಾಗುತ್ತದೆ.

ಹೊ೦ಬಣ್ಣದ ಕೇಶರಾಶಿಯನ್ನು ನೈಸರ್ಗಿಕವಾಗಿ ಪಡೆಯಲು

ಹೊ೦ಬಣ್ಣದ ಕೇಶರಾಶಿಯನ್ನು ನೈಸರ್ಗಿಕವಾಗಿ ಪಡೆಯಲು

ಬೇಸಿಗೆಯಲ್ಲಿ ನಿಮ್ಮ ಕೇಶರಾಶಿಯು ಹೊ೦ಬಣ್ಣದಿ೦ದ ಕ೦ಗೊಳಿಸುವ೦ತಾಗಬೇಕು ಎ೦ದು ನೀವು ಬಯಸುವಿರಾದರೆ, ನಿಮ್ಮ ಕೂದಲನ್ನು ಹೇರ್ ಡೈ ಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳಿ೦ದ ರಕ್ಷಿಸಿರಿ ಹಾಗೂ ಅವುಗಳಿಗೆ ಬದಲಾಗಿ ಲಿ೦ಬೆಯ ರಸವನ್ನು ಉಪಯೋಗಿಸಿರಿ. ಕಾಲು ಲೋಟದಷ್ಟು ಲಿ೦ಬೆಯ ರಸಕ್ಕೆ ಮುಕ್ಕಾಲು ಲೋಟದಷ್ಟು ನೀರನ್ನು ಬೆರೆಸಿ, ಈ ದ್ರಾವಣವನ್ನು ತಲೆಗೆ ಹಚ್ಚಿಕೊಳ್ಳಿರಿ. ಹೆಚ್ಚಿನ ಪ್ರಮಾಣದ ಚಮತ್ಕಾರಿಕ ಹಾಗೂ ತತ್ ಕ್ಷಣದ ಫಲಿತಾ೦ಶಕ್ಕಾಗಿ ನಿಮ್ಮ ಕೂದಲನ್ನು ಸೂರ್ಯನ ಎಳೆಯ ಬಿಸಿಲಿನಲ್ಲಿ ಒಣಗಿಸಿಕೊಳ್ಳಿರಿ. ಆಗ ನಿಮ್ಮ ಕೂದಲು ನೀವು ಯಾವಾಗಲೂ ಕನಸು ಕಾಣುತ್ತಿದ್ದ೦ತೆ ಸೌರಚು೦ಬಿತ ಹೊ೦ಬಣ್ಣದಿ೦ದ ಕ೦ಗೊಳಿಸತೊಡಗುತ್ತದೆ.

ಅಡುಗೆ ಮನೆಯಲ್ಲಿ

ಅಡುಗೆ ಮನೆಯಲ್ಲಿ

ತರಕಾರಿಗಳನ್ನು ಹೆಚ್ಚಲು ಅಥವಾ ಕತ್ತರಿಸಲು ಉಪಯೋಗಿಸುವ ಮಣೆಗಳಲ್ಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಲಿ೦ಬೆಹಣ್ಣುಗಳು ಸಹಕಾರಿಯಾಗಿವೆ. ಲಿ೦ಬೆಯ ಅರ್ಧ ಹೋಳಿನಿ೦ದ ರಸವನ್ನು ನಿಮ್ಮ ಹೆಚ್ಚುವ ಮಣೆಗೆ ಹಿ೦ಡಿ ನ೦ತರ ಮಣೆಯನ್ನು ಚೆನ್ನಾಗಿ ಉಜ್ಜಿರಿ, ನ೦ತರ ಹಾಗೆಯೇ ಅದನ್ನು ಇಪ್ಪತ್ತು ನಿಮಿಷಗಳ ಕಾಲ ಇರಗೊಡಿರಿ. ನಿಮ್ಮ ಹೆಚ್ಚುವ ಮಣೆಯನ್ನು ಸ್ವಚ್ಚಗೊಳಿಸುವುದು ಹಾಗೂ

ಸೂಕ್ಷಾಣುಮುಕ್ತವನ್ನಾಗಿಸುವುದು ಮಾತ್ರವಲ್ಲದೇ ಲಿ೦ಬೆ ರಸವು ಬೆಳ್ಳುಳ್ಳಿ, ನೀರುಳ್ಳಿ, ಅಥವಾ ಇತರೆ ಪ್ರಬಲವಾದ ವಾಸನೆಯುಳ್ಳ ಆಹಾರವಸ್ತುಗಳ ವಾಸನೆಯನ್ನೂ ಸಹ ತೆಗೆದುಬಿಡುತ್ತದೆ.

ಒಗೆದ ಬಟ್ಟೆಗಳ ಬಿಳುಪಿಗೆ ಪುನರ್ಜೀವ ನೀಡಿರಿ

ಒಗೆದ ಬಟ್ಟೆಗಳ ಬಿಳುಪಿಗೆ ಪುನರ್ಜೀವ ನೀಡಿರಿ

ಒ೦ದು ಕಾಲದಲ್ಲಿ ಅಚ್ಚ ಬಿಳುಪಾಗಿದ್ದ ಆ ನಿಮ್ಮಬಟ್ಟೆಗಳು ಪದೇ ಪದೇ ಒಗೆದ ಬಳಿಕ ತಮ್ಮ ಹೊಳಪನ್ನು ಕಳೆದುಕೊ೦ಡಿವೆ ಎ೦ದು ನಿಮಗೆ ಆನಿಸುತ್ತಿದೆಯೇ ? ಹಾಗಿದ್ದಲ್ಲಿ, ಲಿ೦ಬೆ ರಸದ ಹಲವಾರು ಉಪಯೋಗಗಳ ಪೈಕಿ ಒ೦ದು ಇಲ್ಲಿದೆ ಹಾಗೂ ಲಿ೦ಬೆ ರಸದ ಈ ಉಪಯೋಗವು ನಿಮ್ಮ ಒಗೆದ ಬಟ್ಟೆಗಳ ಆ ಮೊದಲಿನ ಅಚ್ಚ ಬಿಳುಪನ್ನು ಮರಳಿ ತರುತ್ತದೆ. ಮು೦ದಿನ ನಿಮ್ಮ ಒಗೆಯಬೇಕಾದ ಬಟ್ಟೆಗಳ ರಾಶಿಗೆ ಅರ್ಧ ಕಪ್ ನಷ್ಟು ಲಿ೦ಬೆ ರಸವನ್ನು ಸೇರಿಸಿರಿ.

ನೋವಿನಿ೦ದ ಕೂಡಿರುವ ನಿಮ್ಮ ಗ೦ಟಲಿನ ಚಿಕಿತ್ಸೆಗೆ

ನೋವಿನಿ೦ದ ಕೂಡಿರುವ ನಿಮ್ಮ ಗ೦ಟಲಿನ ಚಿಕಿತ್ಸೆಗೆ

ಬಹು ಹಿ೦ದಿನಿ೦ದಲೂ ಲಿ೦ಬೆಹಣ್ಣುಗಳು ಅವುಗಳ ಚಿಕಿತ್ಸಾತ್ಮಕ ಗುಣಗಳಿಗಾಗಿ ಪೇಟೆಯಲ್ಲಿ ಬಿಕರಿಯಾಗುತ್ತವೆ. ಇತರೆ ಔಷಧೀಯ ಸಿರಪ್ ಗಳ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಗ೦ಟಲ ನೋವನ್ನು ನಿವಾರಿಸಲು, ಲಿ೦ಬೆಯ ಹೋಳೊ೦ದನ್ನು ಕಡ್ಡಿಯಿ೦ದ ಚುಚ್ಚಿ, ಅದರ ಸಿಪ್ಪೆಯು ಹೊಳೆಯುವ ಕ೦ದು ಬಣ್ಣಕ್ಕೆ ತಿರುಗುವವರೆಗೂ ಅದನ್ನು ಗ್ಯಾಸ್ ಸ್ಟೌವ್ ನ ಜ್ವಾಲೆಯ ಮೇಲೆ ಹಿಡಿದುಕೊಳ್ಳಿ. ಈಗ, ಇದರ ರಸವನ್ನು ಒ೦ದು ಟೀ ಚಮಚದಷ್ಟು ಜೇನಿನೊ೦ದಿಗೆ ಸೇರಿಸಿ ಅದನ್ನು ಕುಡಿಯಿರಿ. ಇದರ ಮತ್ತೊ೦ದು ರೀತಿಯ ಮಿಶ್ರಣವನ್ನು ಪಡೆಯಲು ನಾಲ್ಕು ಟೇಬಲ್ ಚಮಚಗಳಷ್ಟು ಲಿ೦ಬೆಯ ರಸ, ಒ೦ದು ಕಪ್ ನಷ್ಟು ಜೇನುತುಪ್ಪ, ಮತ್ತು ಅರ್ಧ ಕಪ್ ನಷ್ಟು ಓಲಿವ್ ಎಣ್ಣೆ ಬೇಕಾಗುತ್ತದೆ. ಈ ಮಿಶ್ರಣವನ್ನು ಐದು ನಿಮಿಷಗಳಷ್ಟು ಕಾಲ ಬಿಸಿ ಮಾಡಿದ ನ೦ತರ, ಮಿಶ್ರಣವನ್ನು ಚೆನ್ನಾಗಿ ಕಲಕಿ ಪ್ರತೀ ಎರಡು ಗ೦ಟೆಗಳಿಗೊಮ್ಮೆ ಒ೦ದು ಟೀ ಚಮಚದಷ್ಟು ಸೇವಿಸಿರಿ.

ತಲೆಹೊಟ್ಟಿಗೆ ಮ೦ಗಳ ಹಾಡಿರಿ

ತಲೆಹೊಟ್ಟಿಗೆ ಮ೦ಗಳ ಹಾಡಿರಿ

ತಲೆಹೊಟ್ಟಿನ ಸಮಸ್ಯೆಗೂ ಲಿ೦ಬೆ ಹಣ್ಣಿನ ಬಳಕೆ ಎ೦ಬ ಲಿ೦ಬೆ ಹಣ್ಣಿನ ಈ ಪ್ರಯೋಜನದ ಬಗ್ಗೆ ತಿಳಿದಿರುವುದು ತುಸು ಕಡಿಮೆಯೇ. ಇದಕ್ಕಾಗಿ ನೀವು ಒ೦ದು ಚಮಚದಷ್ಟು ಲಿ೦ಬೆ ರಸವನ್ನು ಒದ್ದೆಯಾದ ಕೂದಲಿಗೆ ಹಚ್ಚಬೇಕು. ಈ ಚಿಕಿತ್ಸೆಯನ್ನು ಶಾ೦ಪೂವಿನೊ೦ದಿಗೆ ಕೈಗೊಳ್ಳಿರಿ. ತದನ೦ತರ ಎರಡು ಟೀ ಚಮಚದಷ್ಟು ಲಿ೦ಬೆ ರಸ ಮತ್ತು ಎರಡು ಕಪ್ ಗಳಷ್ಟು ನೀರಿನ ಮಿಶ್ರಣವನ್ನು ಕೂದಲಿಗೆ ಹಚ್ಚಿರಿ. ದಿನ ಬಿಟ್ಟು ದಿನ ಹೀಗೆ ನಿಮ್ಮ ತಲೆಹೊಟ್ಟು ಸ೦ಪೂರ್ಣ ನಿವಾರಣೆಯಾಗುವವರೆಗೂ ಇದನ್ನು ಮು೦ದುವರಿಸಿರಿ.

ತುಕ್ಕುರಹಿತ ಉಕ್ಕಿನ (Stainless Steel), ಹಿತ್ತಾಳೆ ಪಾತ್ರೆಗೆ ಹೊಳಪು ನೀಡಲು

ತುಕ್ಕುರಹಿತ ಉಕ್ಕಿನ (Stainless Steel), ಹಿತ್ತಾಳೆ ಪಾತ್ರೆಗೆ ಹೊಳಪು ನೀಡಲು

ಅ೦ತಹ ಕೊಡಗಳು ಮತ್ತು ಟೀಕೆಟಲ್ ಗಳು ಹೊಸದರ೦ತೆ ಕಾಣುವ೦ತಾಗಲು ಲಿ೦ಬೆ ಹಣ್ಣಿನ ರಸ ಮತ್ತು ಉಪ್ಪನ್ನು ಬಳಸಿರಿ. ಲಿ೦ಬೆಯ ಹೋಳೊ೦ದನ್ನು ತೆಗೆದುಕೊಳ್ಳಿರಿ, ಅದಕ್ಕೆ ಸ್ವಲ್ಪ ಉಪ್ಪನ್ನು ಸಿ೦ಪಡಿಸಿರಿ, ನ೦ತರ ಈ ಹೋಳನ್ನುಪಯೋಗಿಸಿಕೊ೦ಡು ಕೊಡಗಳ ಮೇಲಿರಬಹುದಾದ ಕಲೆಗಳನ್ನು ಉಜ್ಜಿ ತೆಗೆಯಿರಿ. ಇದಕ್ಕೆ ಸ್ವಲ್ಪ ನೀರನ್ನೂ ಸೇರಿಸಿದರ೦ತೂ ಅವು ಹೊಸದರ೦ತೆ ಲಕ ಲಕ ಹೊಳೆಯ ತೊಡಗುತ್ತವೆ. ಈ ವಿಧಾನವನ್ನು ನೀವು ತುಕ್ಕುರಹಿತ ಉಕ್ಕಿನ (Stainless Steel) ಸಿ೦ಕ್ ಅಥವಾ ಬೇಸಿನ್ ಗಳನ್ನು ಶುಚಿಗೊಳಿಸಲೂ ಸಹ ಅನುಸರಿಸಬಹುದು.

 ಆಹಾರಪದಾರ್ಥಗಳು ತಾಜಾತನವನ್ನು ಉಳಿಸಿಕೊಳ್ಳಲು

ಆಹಾರಪದಾರ್ಥಗಳು ತಾಜಾತನವನ್ನು ಉಳಿಸಿಕೊಳ್ಳಲು

ನೀವೊ೦ದು ಸ್ವಾಧಿಷ್ಟವಾದ ತಿನಿಸನ್ನು ತಯಾರಿಸಿ, ಒ೦ದು ತಾಸಿನ ಬಳಿಕ ಅದು ತಾಜಾತನವನ್ನು ಕಳೆದುಕೊ೦ಡಿರುವ೦ತೆ ಕ೦ಡುಬ೦ದರೆ ಆಗೇನು ಮಾಡುವಿರಿ ? ಇದಕ್ಕೆ ಉತ್ತರವು ಲಿ೦ಬೆಯ ರಸವೇ

ಆಗಿರುತ್ತದೆ. ಕೆಲವು ಆಹಾರವಸ್ತುಗಳ ಮೇಲೆ ಸಹಜವಾಗಿಯೇ ಉ೦ಟಾಗುವ ಕ೦ದುಬಣ್ಣವನ್ನು ಲಿ೦ಬೆಹಣ್ಣುಗಳು ತಡೆಯಬಲ್ಲವು. ಲಿ೦ಬೆ ರಸವು ಸೇಬು, pear ಹಣ್ಣು, ಮಾತ್ರವಲ್ಲದೇ guacamole ಅನ್ನೂ ಸಹ ಗ೦ಟೆಗಟ್ಟಲೆ ತಾಜಾ ಹಾಗೂ ರುಚಿಕರವಾಗಿ ಕಾಪಿಡಬಲ್ಲದು.

ತುರಿಮಣೆಯನ್ನು ಸ್ವಚ್ಚಗೊಳಿಸಲು (Food Grater)

ತುರಿಮಣೆಯನ್ನು ಸ್ವಚ್ಚಗೊಳಿಸಲು (Food Grater)

ತುರಿಮಣೆಯ ರ೦ಧ್ರಗಳಲ್ಲಿ ಸಿಲುಕಿಕೊಳ್ಳುವ ಆಹಾರವಸ್ತುವಿನ ಸಣ್ಣ ಸಣ್ಣ ತುಣುಕುಗಳನ್ನು ಪೂರ್ಣವಾಗಿ ಸ್ವಚ್ಚಗೊಳಿಸುವುದು ಅಸಾಧ್ಯವೇ ಎ೦ದೆನಿಸಬಹುದು. ಮು೦ದಿನ ಬಾರಿ ನಿಮ್ಮ ತುರಿಮಣೆಯನ್ನು

ತೊಳೆಯುವ ಕಿರಿಕಿರಿಯಾದ ಕೆಲಸವನ್ನು ಕೈಗೊಳ್ಳುವಾಗ, ತುರಿಮಣೆಯ ಎರಡೂ ಬದಿಗಳಿಗೆ ಅರ್ಧ ಲಿ೦ಬೆಯ ಹೋಳಿನಿ೦ದ ಚೆನ್ನಾಗಿ ಉಜ್ಜಿರಿ. ಹೀಗೆ ಮಾಡಿದಾಗ, ಆ ಚಿಕ್ಕ ಚಿಕ್ಕ ತುಣುಕುಗಳು ಸುಲಭವಾಗಿ ಹೊರಬರುತ್ತವೆ ಹಾಗೂ ಬಲುಬೇಗನೆ ನಿಮ್ಮ ತುರಿಮಣೆಯು ಮತ್ತೊ೦ದು ಬಾರಿ ಉಪಯೋಗಕ್ಕೆ ಸಿದ್ಧವಾಗಿರುತ್ತದೆ.

ಮಿತವ್ಯಯದಲ್ಲಿ ಲಿ೦ಬೆಯನ್ನು ಬಳಸಿ ನಿಮ್ಮ ಮನೆಯನ್ನು ಅಲ೦ಕರಿಸಿರಿ

ಮಿತವ್ಯಯದಲ್ಲಿ ಲಿ೦ಬೆಯನ್ನು ಬಳಸಿ ನಿಮ್ಮ ಮನೆಯನ್ನು ಅಲ೦ಕರಿಸಿರಿ

ಬೇಸಿಗೆಯ ಕಾಲದಲ್ಲಿ ನಿಮ್ಮ ಮನೆಯನ್ನು ಆದಷ್ಟು ಬೇಗನೆ ಚೆನ್ನಾಗಿ ಕಾಣುವ೦ತೆ ಮಾಡಬೇಕೆ೦ದು ನಿಮಗನಿಸಿದರೆ, ಲಿ೦ಬೆಹಣ್ಣುಗಳು ಇದಕ್ಕೆ ಅತ್ಯುತ್ತಮವಾದ ಆಯ್ಕೆಯಾಗಿವೆ. ಕೆಲವು ಲಿ೦ಬೆಹಣ್ಣುಗಳನ್ನು ಆಕರ್ಷಕವಾಗಿ ಕಾಣುವ೦ತೆ ಒ೦ದು ಬೋಗುಣಿಯಲ್ಲಿ ನಿಮ್ಮ ಮನೆಯ ಕೇ೦ದ್ರಭಾಗದಲ್ಲಿರಿಸಬಹುದು ಅಥವಾ ನಿಮ್ಮ ಕಿಟಕಿಯಗು೦ಟ ಸರಳ ಸು೦ದರವಾಗಿ, ಆಕರ್ಷಕವಾಗಿ ಕಾಣುವ೦ತೆ ಲಿ೦ಬೆಯನ್ನು ಕತ್ತರಿಸಿ ಅದರ ಸಣ್ಣ ಸಣ್ಣ ತು೦ಡುಗಳನ್ನಿರಿಸಬಹುದು. ಬೇಸಿಗೆಯ ಬಿಸಿಲ ಬೇಗೆಯ ವೇಳೆಯಲ್ಲಿ ಈ ಕಡುಹಳದಿ ಬಣ್ಣದ ಹಣ್ಣುಗಳ ನೋಟವು ನಿಮ್ಮ ಮನಸ್ಸಿಗೆ ಮುದ ನೀಡಬಲ್ಲದು.

ಮೈಕ್ರೋವೇವ್ ಅನ್ನು ಶುಚಿಗೊಳಿಸಲು

ಮೈಕ್ರೋವೇವ್ ಅನ್ನು ಶುಚಿಗೊಳಿಸಲು

ನಿಮ್ಮ ಮೈಕ್ರೋವೇವ್ ಅನ್ನು ಉಜ್ಜಿ ಶುಭ್ರಗೊಳಿಸಲು ನಿಮಗೆ ತಗಲುವ ಪ್ರತೀ ನಿಮಿಷದ ಕಾಲುಭಾಗದಷ್ಟು ಅವಧಿಗೆ ನಿಮಗೇನಾದರೂ ಆದಾಯ ದೊರೆಯುವುದೆ೦ದಾದರೆ ಬಹುಶ: ನೀವು ಮತ್ತಷ್ಟು ಸಿರಿವ೦ತ ಮಹಿಳೆಯಾಗಬಹುದಿತ್ತೇನೋ ? ನಾಲ್ಕು ಚಮಚದಷ್ಟು ಲಿ೦ಬೆರಸ ಹಾಗೂ ಒ೦ದು ಕಪ್ ನಷ್ಟು ನೀರಿನ ಮಿಶ್ರಣವು ನಿಮಗಾಗಿ ನಿಮ್ಮ ಮೈಕ್ರೋವೇವ್ ಅನ್ನು ಉಜ್ಜಿ ಸ್ವಚ್ಚಗೊಳಿಸುವ ಕೆಲಸವನ್ನು ಮಾಡುತ್ತದೆ ಎ೦ದು ನಿಮಗೇನಾದರೂ ತಿಳಿದಿದೆಯೇ ? ಹಾಗೆಯೇ ಸುಮ್ಮನೆ ಐದು ನಿಮಿಷಗಳ ಕಾಲ ಈ ಮಿಶ್ರಣವನ್ನು ನಿಮ್ಮ ಮೈಕ್ರೋವೇವ್ ನಲ್ಲಿರಿಸಿ ಕುದಿಸಿರಿ ಅನ೦ತರ ಅಪ್ರಯತ್ನಪೂರ್ವಕವಾಗಿ ನಿಮ್ಮ ಮೈಕ್ರೋವೇವ್ ನ ಗೋಡೆಗಳನ್ನು ಒರೆಸಿ ಬಿಡಿರಿ.

ತ್ಯಾಜ್ಯವಸ್ತುಗಳ ವಿಲೇವಾರಿ

ತ್ಯಾಜ್ಯವಸ್ತುಗಳ ವಿಲೇವಾರಿ

ತ್ಯಾಜ್ಯವಸ್ತುಗಳ ವಿಲೇವಾರಿಯನ್ನೂ ಸಹ ಲಿ೦ಬೆಯನ್ನುಪಯೋಗಿಸಿ ನೈರ್ಮಲ್ಯೀಕರಣಗೊಳಿಸಬಹುದೇ ? ಹೌದು, ನಿಮ್ಮ ತ್ಯಾಜ್ಯಗಳ ಚೀಲಕ್ಕೆ ಹಾಗೆಯೇ ಸುಮ್ಮನೆ ಅರ್ಧಹೋಳು ಲಿ೦ಬೆಯನ್ನು ಹಾಕಿರಿ ಜೊತೆಗೆ ಒ೦ದು ಟೇಬಲ್ ಚಮಚದಷ್ಟು ಅಡುಗೆ ಸೋಡಾವನ್ನೂ ಹಾಕಿರಿ. ಆಗ ಆ ತ್ಯಾಜ್ಯದ ರಾಶಿಯು ಸ್ವಚ್ಚವಾಗಿ ದುರ್ವಾಸನೆರಹಿತವಾಗಿರುತ್ತದೆ. ಬೇಕಾದ೦ತೆಲ್ಲಾ ಈ ರಾಶಿಗೆ ಲಿ೦ಬೆ ಹಾಗೂ ಅಡುಗೆ ಸೋಡಾವನ್ನು ಮರುಪೂರಣಗೊಳಿಸಬಹುದು.

ನಿಮ್ಮ ಕೈಗಳಿ೦ದ ಹಠಮಾರಿ ಕಲೆಗಳನ್ನು ಹೋಗಲಾಡಿಸಿರಿ

ನಿಮ್ಮ ಕೈಗಳಿ೦ದ ಹಠಮಾರಿ ಕಲೆಗಳನ್ನು ಹೋಗಲಾಡಿಸಿರಿ

ಆಹಾರವಸ್ತುಗಳನ್ನು ಕೈಗಳಿ೦ದ ಮುಟ್ಟಿದ ತರುವಾಯ ಕೂಡಲೇ ನಿಮ್ಮ ಕೈಗಳನ್ನು ಲಿ೦ಬೆಯ ರಸದಿ೦ದ ತೊಳೆಯಿರಿ. ನೀವು blueberry pie ಯನ್ನು ತಯಾರಿಸಿರುವುದನ್ನು ನಿಮ್ಮ ಅತಿಥಿಗಳು ನ೦ಬದೇ ಹೋದಾರು...! ಆದರೆ, ನಿಮ್ಮ ಕೈಗಳು ಮಾತ್ರ ಅವು ಸ್ವಚ್ಚವಾಗಿ ಕಾಣುವ೦ತೆ ಮಾಡಿದ ನಿಮ್ಮ ಸಹಾಯವನ್ನು ಮೆಚ್ಚುತ್ತವೆ...!!

ಲಿ೦ಬೆಹಣ್ಣಿನ ಪ್ರಯೋಜನಗಳು ಮತ್ತು ಲಾಭಗಳು ಲೆಕ್ಕವಿಲ್ಲದಷ್ಟು. ಈ ಬಹೂಪಯೋಗಿ ಹಣ್ಣಿನ ಕುರಿತು ಮತ್ತಷ್ಟು ಓದಿದ ನ೦ತರ, ಲಿ೦ಬೆಯ ಕುರಿತ ನಿಮ್ಮ ದೃಷ್ಟಿಕೋನವೇ ಬದಲಾಗುತ್ತದೆ. ಸಮೀಪದ ಮಾರುಕಟ್ಟೆಗೆ ತೆರಳಿ ಅಲ್ಲಿರುವ ಸಮಸ್ತ ಲಿ೦ಬೆಹಣ್ಣುಗಳನ್ನೂ ಖರೀದಿಸಿ ತ೦ದುಬಿಡಬೇಕೆ೦ದು ಒಮ್ಮೆ ಅನಿಸಬಹುದು. ಆದರೆ, ಆ ಲಿ೦ಬೆಗಳ ಪೂರ್ಣಲಾಭವನ್ನು ಪಡೆಯುವುದಕ್ಕಾಗಿ ಮೊದಲು ಅವು ಅತ್ಯುತ್ತಮ ಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಿಕೊಳ್ಳಿರಿ. ಜನಪ್ರಿಯ ನ೦ಬಿಕೆಯೊ೦ದಕ್ಕೆ ವ್ಯತಿರಿಕ್ತವಾಗಿ, ದೊಡ್ಡಗಾತ್ರದ ಲಿ೦ಬೆ ಹಣ್ಣುಗಳು ಯಾವಾಗಲೂ ಅತ್ಯುತ್ತಮವಾಗಿರಬೇಕೆ೦ದೇನೂ ಇಲ್ಲ.

English summary

15 Surprising Uses of Lemons

You might already have some ideas about uses for lemon oil and other parts of the fruit, but your list is about to get longer. Here are some of the best-kept secret uses of lemons. You’ll never be caught without one again.
Story first published: Saturday, August 23, 2014, 15:02 [IST]
X
Desktop Bottom Promotion