For Quick Alerts
ALLOW NOTIFICATIONS  
For Daily Alerts

ನಿಮ್ಮ ಒಳ ಉಡುಪುಗಳನ್ನು ಕೈಯಲ್ಲಿ ಒಗೆಯುವ ಹತ್ತು ವಿಧಾನಗಳು

|

ಹೌದು ಇದು ತುಂಬಾ ಸುಲಭದ ಕೆಲಸವಾಗಿದೆ ಅಲ್ಲವೇ? ಆದರೆ 49 ಶೇಕಡದಷ್ಟು ಮಹಿಳೆಯರು ಈ ಕೆಲಸದಲ್ಲಿ ವಿಫಲಗೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತಿದೆಯೇ? ಇದೊಂದು ಹೊರೆಯ ಕೆಲಸವೆಂದು ಅವರು ಭಾವಿಸುತ್ತಾರೆ.

ಪ್ರತಿಯೊಬ್ಬ ಮಹಿಳೆಯೂ ತಮ್ಮ ಒಳುಡುಪುಗಳನ್ನು ನಿತ್ಯವೂ ತೊಳೆಯಲು ಅನೇಕ ಸುಲಭ ವಿಧಾನಗಳಿವೆ. ನಿಮಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲವೆಂದಲ್ಲಿ, ಇಲ್ಲಿ ನಾವು ನೀಡಿರುವ ಕೆಲವೊಂದು ವಿಧಾನಗಳು ನಿಮ್ಮ ಒಳ ಉಡುಪುಗಳನ್ನು ತಾಜಾ ಮತ್ತು ಶುಭ್ರವಾಗಿಡುವಲ್ಲಿ ಸಹಕಾರಿಯಾಗಲಿವೆ.

ನಿಮ್ಮ ಒಳ ಉಡುಪುಗಳನ್ನು ನಿತ್ಯವೂ ತೊಳೆಯಲು ಕೆಲವೊಂದು ಮನೆಯಲ್ಲೇ ಸಿಗುವ ಸಾಮಾಗ್ರಿಗಳ ಪಟ್ಟಿಯನ್ನು ನೀವು ನಿಮ್ಮ ಬಳಿ ಇಟ್ಟುಕೊಂಡಿರಬೇಕಾಗುತ್ತದೆ. ರಾಸಾಯನಿಕ ವಸ್ತುಗಳಿಂದ ನಿಮ್ಮ ಧಿರಿಸುಗಳನ್ನು ತೊಳೆಯುವುದು ಅಷ್ಟೊಂದು ಸುರಕ್ಷಿತವಲ್ಲ. ಇದು ನಿಮಗೆ ಅಲರ್ಜಿ ಉಂಟು ಮಾಡಬಹುದು.

ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡುವಂತಹ ಸಾಮಾಗ್ರಿಗಳನ್ನು ಬಳಸಿ ಈ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸಲಾಗಿರುತ್ತದೆ. ಆದ್ದರಿಂದ ಇದನ್ನು ತಡೆಗಟ್ಟಲು, ನೈಸರ್ಗಿಕ ಸಾಮಾಗ್ರಿಯಾದ ನೊರೆಕ್ಕಾಯಿಯನ್ನು ಬಳಸಿ ನಿಮ್ಮ ಒಳ ಧಿರಿಸುಗಳನ್ನು ತೊಳೆಯುವುದು ಹೇಗೆಂಬುದನ್ನು ತಿಳಿದುಕೊಳ್ಳಿ. ನಿಮ್ಮ ಬಿಳಿ ಬಣ್ಣದ ಬ್ರಾ ಕಲೆಯಿಂದ ಕಂಗೆಟ್ಟಿದ್ದರೆ ಅದನ್ನು ಬಿಳಿಯಾಗಿಸಿ.

ಸ್ವಲ್ಪ ನೀರಿಗೆ ಲಿಂಬೆ ಮತ್ತು ವಿನೇಗರ್ ಬಳಸಿ ಈ ಕಲೆಯನ್ನು ನಿವಾರಿಸಬಹುದು. ಹಾಗಿದ್ದರೆ ನಿಮ್ಮ ಒಳ ಉಡುಪುಗಳನ್ನು ತೊಳೆಯಲು ಕೆಲವೊಂದು ಸಲಹೆಗಳು ಇಲ್ಲಿವೆ.

ಬಟ್ಟೆಗಳಿಂದ ಅರಶಿನದ ಕಲೆಯನ್ನು ಹೋಗಲಾಡಿಸುವ 8 ವಿಧಾನಗಳು

 ತಂಪು ನೀರನ್ನು ಬಳಸಿ

ತಂಪು ನೀರನ್ನು ಬಳಸಿ

ನಿಮ್ಮ ಒಳ ಉಡುಪುಗಳನ್ನು ಕೈಯಲ್ಲಿ ತೊಳೆಯುವಾಗ, ನೀವು ತಣ್ಣೀರನ್ನು ಮಾತ್ರ ಬಳಸಿ. ಬಿಸಿ ನೀರು ನಿಮ್ಮ ಬಟ್ಟೆಯ ಇಲಾಸ್ಟಿಕ್ ಅನ್ನು ಹಾಳು ಮಾಡುತ್ತದೆ. ತಂಪು ನೀರು ನಿಮ್ಮ ಬಟ್ಟೆ ಹಾಲಾಗುವುದನ್ನು ತಪ್ಪಿಸುತ್ತದೆ.

ಹುಕ್ಸ್ ಅನ್ನು ಬಂಧಿಸಿ

ಹುಕ್ಸ್ ಅನ್ನು ಬಂಧಿಸಿ

ನಿಮ್ಮ ಬ್ರಾಗಳನ್ನು ತೊಳೆಯುವ ಮುನ್ನ, ಅವುಗಳ ಹುಕ್ಸ್ ಅನ್ನು ಬಂಧಿಸಿ. ಇದರಿಂದ ಹುಕ್ಸ್ ಹೊರಗೆ ಬರುವುದು ತಪ್ಪುತ್ತದೆ.

 ಬ್ಲೀಚ್ ಬೇಡ

ಬ್ಲೀಚ್ ಬೇಡ

ನಿಮ್ಮ ಬ್ರಾದ ಬಣ್ಣ ಬಿಳಿಯಾಗಿದ್ದರೆ ಬ್ಲೀಚ್ ಅನ್ನು ಬಳಸದಿರಿ. ನೀವು ಬಿಳಿ ಬ್ರಾವನ್ನು ಒಗೆಯುವಾಗ ಲಿಂಬೆ ಮತ್ತು ವಿನೇಗರ್ ಅನ್ನು ಬಳಸಿ.

ಬಣ್ಣಗಳ ಮಿಶ್ರಗೊಳಿಸುವಿಕೆ

ಬಣ್ಣಗಳ ಮಿಶ್ರಗೊಳಿಸುವಿಕೆ

ಮಹಿಳೆಯರಿಗೆ ಬಣ್ಣಗಳ ಒಳ ಉಡುಪುಗಳನ್ನು ಖರೀದಿಸುವುದೆಂದರೆ ತುಂಬಾ ಇಷ್ಟ. ನೀವು ಬಣ್ಣದ ಒಳ ಉಡುಪುಗಳನ್ನು ಖರೀದಿಸುವುದು ಬಟ್ಟೆಗಳ ಬಾಳಿಕೆಯಿಂದ ಉತ್ತಮವಾಗಿರುತ್ತದೆ. ಬಣ್ಣಗಳ ಮತ್ತು ಬಿಳಿ ಬಣ್ಣದ ಒಳ ಉಡುಪುಗಳನ್ನು ಪ್ರತ್ಯೇಕವಾಗಿ ತೊಳೆಯಿರಿ.

ಹಿಂಡದಿರಿ

ಹಿಂಡದಿರಿ

ಬಟ್ಟೆಗಳನ್ನು ತೊಳೆದು ಅದನ್ನು ಹಿಂಡುವುದು ಬೇಡ. ನೀರು ತೊಟ್ಟಿಕ್ಕುವಂತೆ ಹಾಗೆಯೇ ಬಿಡಿ.

 ಬಟ್ಟೆಯ ತೂಕ

ಬಟ್ಟೆಯ ತೂಕ

ನೀವು ಒಳ ಉಡುಪುಗಳನ್ನು ತೊಳೆಯುವಾಗ ಪ್ರತ್ಯೇಕವಾಗಿ ಒಗೆಯಿರಿ. ಬೇರೆ ಭಾರವಾದ ಬಟ್ಟೆಯೊಂದಿಗೆ ನಿಮ್ಮ ಒಳ ಉಡುಪನ್ನು ತೊಳೆಯಲು ಹೋಗದಿರಿ. ಇದರಿಂದ ನಿಮ್ಮ ಉಡುಪು ಹಾಳಾಗಬಹುದು.

ಬೇಬಿ ಶ್ಯಾಂಪೂ

ಬೇಬಿ ಶ್ಯಾಂಪೂ

ನಿಮ್ಮ ಬ್ರಾಗಳನ್ನು ಕೈಯಿಂದಲೇ ಒಗೆಯಲು, ಮೃದುವಾದ ಶ್ಯಾಂಪೂವನ್ನು ಬಳಸುವುದು ಉತ್ತಮವಾಗಿರುತ್ತದೆ. ಮಕ್ಕಳ ಶ್ಯಾಂಪೂ ಮೃದುವಾಗಿದ್ದು ನೈಸರ್ಗಿಕವಾಗಿರುತ್ತದೆ.

ಪ್ಯಾಡೆಡ್ ಬ್ರಾಗಳಿಗೆ

ಪ್ಯಾಡೆಡ್ ಬ್ರಾಗಳಿಗೆ

ಸಾಮಾನ್ಯ ಬ್ರಾಗಳಿಗಿಂತ ಪ್ಯಾಡೆಡ್ ಬ್ರಾಗಳನ್ನು ಒಗೆಯುವುದು ತುಸು ಕಷ್ಟವಾಗಿರುತ್ತದೆ. ಇಂತಹ ಬ್ರಾಗಳಿಂದ ಹೆಚ್ಚು ನೀರನ್ನು ತೆಗೆಯುವುದಕ್ಕಾಗಿ ದಪ್ಪನೆಯ ಟವಲ್ ಅನ್ನು ಬಳಸಿ ಅವುಗಳನ್ನು ಒಣಗಿಸಬೇಕು. ನಂತರ ಅರ್ಧ ಗಂಟೆಯ ಬಳಿಕ ಅದನ್ನು ಬಿಸಿಲಿನಲ್ಲಿ ಒಣಗಿಸಿ.

ಒಳ ಉಡುಪುಗಳನ್ನು ನೆನೆಸದಿರಿ

ಒಳ ಉಡುಪುಗಳನ್ನು ನೆನೆಸದಿರಿ

ನಿಮ್ಮ ಒಳ ಉಡುಪುಗಳನ್ನು ದೀರ್ಘಕಾಲದವೆರೆಗೆ ನೀರಿನಲ್ಲಿ ನೆನೆಸದಿರಿ. ನೀವು ಒಗೆಯುವುದಕ್ಕಿಂತ ಮುಂಚೆ 5 ನಿಮಿಷಗಳ ಕಾಲ ಅವುಗಳನ್ನು ನೆನೆಸಿ ಸಾಕು.

ಮೃದುವಾಗಿ ಒಣಗಿಸಿ

ಮೃದುವಾಗಿ ಒಣಗಿಸಿ

ಬಿಸಿಲಿನಲ್ಲಿ ಅವುಗಳನ್ನು ಒಣಗಿಸಲು ಮರೆಯದಿರಿ. ಇದು ನಿಮ್ಮ ಒಳ ಉಡುಪು ತೇವಾಂಶರಹಿತವಾಗಿರಲು ಮತ್ತು ಬಟ್ಟೆಯ ಬೆವರುವಿಕೆಯನ್ನು ತಡೆಗಟ್ಟಲು ಬಿಸಿಲಿನಲ್ಲಿ ಒಣಗಿಸಿ.

Story first published: Wednesday, June 11, 2014, 11:38 [IST]
X
Desktop Bottom Promotion