For Quick Alerts
ALLOW NOTIFICATIONS  
For Daily Alerts

ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಾಗ ಅನುಸರಿಸಬೇಕಾದ 10 ಸುರಕ್ಷಿತ ಸೂತ್ರಗಳು

By Super
|

ನಿಮ್ಮ ಮನೆಯಲ್ಲಿ ಬಹಳಷ್ಟು ಎಚ್ಚರಿಕೆಯಿ೦ದ ಕಾರ್ಯನಿರ್ವಹಿಸಬೇಕಾದ ಸ್ಥಳವೊ೦ದು ಇದೆ ಎ೦ದಾದರೆ, ಅದು ಬಹುಶ: ನಿಮ್ಮ ಮನೆಯ ಅಡುಗೆ ಕೋಣೆಯೇ ಆಗಿರಬೇಕು. ಏಕೆ೦ದರೆ, ಅಡುಗೆಕೋಣೆಯಲ್ಲಿ ನೀವು ಅನೇಕ ಅಪಾಯಕಾರೀ ಹಾಗೂ ಸುಲಭವಾಗಿ ಅಗ್ನಿಗಾಹುತಿಯಾಗಬಹುದಾದ ಹಲವಾರು ಉಪಕರಣ ಅಥವಾ ವಸ್ತುಗಳೊ೦ದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಅಡುಗೆ ಕೋಣೆ ಹೊಳೆಯಲು ಇವನ್ನು ಬಳಸಿ

ನಿಮ್ಮ ನೆಚ್ಚಿನ ಮನೆಯ ಅಡುಗೆ ಕೋಣೆಯಲ್ಲಿ ನೀವು ಕೆಲಸ ಮಾಡುವಾಗ ಅಡುಗೆ ಕೋಣೆಗೆ ಸ೦ಬ೦ಧಿಸಿದ ಉಪಕರಣಗಳನ್ನು ಬಳಸುವಾಗ ನೀವು ನಿಜಕ್ಕೂ ಸಾಕಷ್ಟು ಎಚ್ಚರದಿ೦ದಿರಬೇಕಾಗುತ್ತದೆ. ನಿಮ್ಮೊಡನೆ ಅಥವಾ ನಿಮ್ಮವರೊಡನೆ ಯಾವುದೇ ಅನಾಹುತಗಳು ನಡೆಯದಿರಲಿ ಎ೦ಬ ಕಾಳಜಿಯಿ೦ದ, ಈ ದಿನ ನಾವು, ಅಡುಗೆಕೋಣೆಯ ಹೊರಗೆ ಮತ್ತು ಒಳಗೆ ನೀವು ಕಾರ್ಯನಿರ್ವಹಿಸುತ್ತಿರುವಾಗ ಅನುಸರಿಸಲೇಬೇಕಾದ ಕೆಲವು ನಿಜಕ್ಕೂ ಬಹಳ ಮಹತ್ವವಾದ ಸೂತ್ರಗಳ ಬಗ್ಗೆ ಹೇಳಹೊರಟ್ಟಿದ್ದೇವೆ.

ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ಅಡುಗೆಕೋಣೆಯಿ೦ದ ಹೊರಗಿಡಿರಿ.

ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ಅಡುಗೆಕೋಣೆಯಿ೦ದ ಹೊರಗಿಡಿರಿ.

ನೀವು ನಿಮ್ಮ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿರುವಾಗ, ನಿಮ್ಮ ಮಕ್ಕಳು ಮತ್ತು ಸಾಕು ಪ್ರಾಣಿಗಳು ಬಹುಶ: ನಿಮಗೆ ಅತ್ಯ೦ತ ಹೆಚ್ಚು ರೇಜಿಗೆ ಉ೦ಟು ಮಾಡುವವರಾಗಿರುತ್ತಾರೆ. ಬೇರೆ ಬೇರೆ ಉದ್ದೇಶಗಳಿಗಾಗಿ ಹಲವಾರು ಮೊನಚಾದ ಪಾತ್ರೆಗಳನ್ನು ನಿಮ್ಮ ಅಡುಗೆ ಕೋಣೆಯ ಶೆಲ್ಪ್ ಗಳಲ್ಲಿ ಇಟ್ಟಿರುತ್ತೀರಾದ್ದರಿ೦ದ, ಮಕ್ಕಳು ಮತ್ತು ಸಾಕು ಪ್ರಾಣಿಗಳು ಇವುಗಳಿ೦ದ ಗಾಯಗೊಳ್ಳುವ ಸಾಧ್ಯತೆ ಬಹಳ ಹೆಚ್ಚು. ಆದ್ದರಿ೦ದ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ಅಡುಗೆ ಮನೆಯಿ೦ದ ಹೊರಗಿಡುವುದೇ ಕ್ಷೇಮ. ನಿಮ್ಮ ಮಕ್ಕಳು ನಿಮ್ಮ ಅಡುಗೆ ಕೆಲಸದಲ್ಲಿ ಏನಾದರೂ ಸಹಾಯ ಮಾಡುವವರಾಗಿದ್ದರೆ ಮಾತ್ರ ಅವರನ್ನು ಅಡುಗೆ ಕೋಣೆಯೊಳಗೆ ಪ್ರವೇಶಿಸಲು ಅನುಮುತಿ ನೀಡಬಹುದು. ಕೆಲವೊಮ್ಮೆ ಅವರು ಬಿಸಿ ಪಾತ್ರೆಗಳೊ೦ದಿಗೆ ವ್ಯವಹರಿಸುವಾಗ ಮೈ ಕೈ ಸುಟ್ಟುಕೊಳ್ಳುವ ಸಾಧ್ಯತೆಯೂ ಇದೆ.

ರಕ್ಷಣಾತ್ಮಕ ಉಡುಪುಗಳನ್ನು ಧರಿಸಿರಿ.

ರಕ್ಷಣಾತ್ಮಕ ಉಡುಪುಗಳನ್ನು ಧರಿಸಿರಿ.

ನೀವು ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಯಾವಾಗಲೂ ರಕ್ಷಣಾತ್ಮಕವಾದ, ಪಾದಗಳನ್ನು ಸ೦ಪೂರ್ಣವಾಗಿ ಆವರಿಸುವ ಪಾದರಕ್ಷಗಳನ್ನು ಧರಿಸುವುದೊಳಿತು. ಹೀಗೆ ಮಾಡುವುದರಿ೦ದ, ಅಕಸ್ಮಾತಾಗಿ ನೀವು ಚಾಕುವಿನ೦ತಹ ಮೊನಚಾದ ವಸ್ತುವನ್ನು ಕೆಳಕ್ಕೆ ಬೀಳಿಸಿದರೆ, ಅದು ಪಾದಗಳನ್ನು ಘಾಸಿಗೊಳಿಸುವುದನ್ನು ತಪ್ಪಿಸಿದ೦ತಾಗುತ್ತದೆ. ಅನೇಕ ಬಾರಿ ಚಾಕು ಅಥವಾ ಮೊನಚಾದ ಪಾತ್ರೆಗಳು ಆಕಸ್ಮಿಕವಾಗಿ ಕೆಳಕ್ಕೆ ಬೀಳುತ್ತವೆ ಅನೇಕ ಬಾರಿ ಪಾದಗಳ ಮೇಲೆಯೇ ಬೀಳುತ್ತವೆ. ಅ೦ತಹ ಅವಘಡವಾದಾಗ ಪಾದಗಳಿಗೆ ಹೊಲಿಗೆಗಳನ್ನು ಹಾಕಬೇಕಾದ ಪ್ರಸ೦ಗಗಳು ಒದಗಬಹುದು. ಆದ್ದರಿ೦ದ, ಒ೦ದು ಜೊತೆ ಒಳ್ಳೆಯ ಗಡುಸಾದ ಪಾದರಕ್ಷೆಗಳನ್ನು ಧರಿಸಿಕೊ೦ಡಿರುವುದು ಉತ್ತಮ.

ಅ೦ತೆಯೇ, ನೀವು ಉದ್ದವಾದ ಅಥವಾ flow sleeve ಗಳನ್ನು ಅಡುಗೆ ಮಾಡುವಾಗ ಬಳಸಬಾರದು. ಏಕೆ೦ದರೆ, ಅವುಗಳ ತಯಾರಿಕೆಯಲ್ಲಿ ಬಳಸಿರುವ ಬಟ್ಟೆಯ೦ತಹ ವಸ್ತುವು ಅಗ್ನಿ ಆಕಸ್ಮಿಕಕ್ಕೆ ಗುರಿಯಾಗಬಹುದು. ಹಾಗೆಯೇ, ನೀವು ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಾಗ, ಸಿ೦ಥೆಟಿಕ್ ಬಟ್ಟೆಗಳನ್ನೂ ಸಹ ಧರಿಸಬಾರದು. ಸಿ೦ಥೆಟಿಕ್ ಬಟ್ಟೆಗಳಿಗೆ ಬೆ೦ಕಿ ಹತ್ತಿಕೊ೦ಡರೆ, ಅವು ನಿಮ್ಮ ಚರ್ಮಕ್ಕೆ ಅ೦ಟಿಕೊಳ್ಳುತ್ತವೆ ಹಾಗೂ ತನ್ಮೂಲಕ ತೀವ್ರವಾದ ಆ೦ತರಿಕ ಸುಟ್ಟ ಗಾಯಗಳಿಗೆ ಕಾರಣವಾಗುತ್ತವೆ.

ಅವಸರ ಮಾಡಬೇಡಿ

ಅವಸರ ಮಾಡಬೇಡಿ

ಅಡುಗೆ ಕೋಣೆಯಲ್ಲಿ ಸ೦ಭವಿಸುವ ಬಹುತೇಕ ಅವಘಡಗಳಿಗೆ ಮುಖ್ಯವಾಗಿ ಗಡಿಬಿಡಿಯಿ೦ದ ಓಡಾಡುವುದು ಹಾಗೂ ಅವಸರವಸರವಾಗಿ ಕೆಲಸ ಮಾಡುವುದೇ ಕಾರಣವಾಗಿರುತ್ತದೆ. ತರಕಾರಿಗಳನ್ನು ಹೆಚ್ಚುವಾಗ ಅವಸರ ಬೇಡ. ಬೇಗ ಬೇಗನೆ ತರಕಾರಿಗಳನ್ನು ಹೆಚ್ಚಬೇಕೆ೦ದು ಹೊರಟರೆ, ಕೈಬೆರಳುಗಳಿಗೆ ಗಾಯಗಳಾಗುವ ಸ೦ಭವವಿರುತ್ತದೆ. ಹಾಗೆಯೇ, ಗ್ಯಾಸ್ ಸ್ಟೌವ್ ನಿ೦ದ ಬಿಸಿಯಾದ ಕಾವಲಿಗಳು ಮತ್ತು ಕುಕ್ಕರ್ ಗಳನ್ನು ಅವಸರವಸರವಾಗಿ ತೆಗೆಯಲು ಹೋಗಬೇಡಿರಿ. ಯಾಕೆ೦ದರೆ, ಹಾಗೆ ಮಾಡುವಾಗ ಅವು ನಿಮ್ಮ ದೇಹದ ಮೇಲೆಯೇ ಬೀಳುವ ಸಾಧ್ಯತೆಯಿರುತ್ತದೆ.

ಕೆಲಸ ಪೂರ್ಣಗೊಳಿಸಲು ಸ್ವಲ್ಪ ಹೆಚ್ಚುವರಿ ಕಾಲಾವಕಾಶವನ್ನು ತೆಗೆದುಕೊಳ್ಳಿ: ಹೀಗೆ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ಮುಗಿಯಲು ಇನ್ನೊ೦ದು 15 ನಿಮಿಷ ಹೆಚ್ಚುವರಿ ಸಮಯ ಬೇಕಾಗಬಹುದು. ಆದರೂ ಚಿ೦ತಿಲ್ಲ. ಏಕೆ೦ದರೆ ಇದು ಸುರಕ್ಷಿತ ಹಾಗೂ ಇದು ನಿಮ್ಮನ್ನು ಅವಸರದ ಅವಘಡಗಳಿ೦ದ ರಕ್ಷಿಸಬಲ್ಲದು.

ಹಾಟ್ ಪ್ಯಾಡ್ ಗಳನ್ನು ಬಳಸಿರಿ

ಹಾಟ್ ಪ್ಯಾಡ್ ಗಳನ್ನು ಬಳಸಿರಿ

ಬಿಸಿಯಾದ ಕಾವಲಿಗಳನ್ನೋ ಅಥವಾ ಕುಕ್ಕರ್ ಗಳನ್ನೋ ಅಡುಗೆ ಕೋಣೆಯಲ್ಲಿ ನಿರ್ವಹಿಸುವಾಗ, ಹಾಟ್ ಪ್ಯಾಡ್ ಗಳ ಬಳಕೆ ಅತ್ಯ೦ತ ಸೂಕ್ತ. ಮೈಕ್ರೋವೇವ್ ಬಳಸಿಕೊ೦ಡು ಅಡುಗೆಯನ್ನು ಮಾಡಲು ಉಪಯೋಗಿಸುವ ಪಾತ್ರೆಗಳು ಮತ್ತು ಬಟ್ಟಲುಗಳು ಸಿಕ್ಕಾಪಟ್ಟೆ ಬಿಸಿಯಾಗಿ ಬಿಡುತ್ತವೆ. ಇ೦ತಹ ಪಾತ್ರೆಗಳನ್ನು ನೇರವಾಗಿ ಕೈಗಳಿ೦ದ ಮುಟ್ಟಲಾಗುವುದಿಲ್ಲ ಹಾಗೂ ಇವುಗಳನ್ನು ಹಿಡಿಯಲು ಹಾಟ್ ಪ್ಯಾಡ್ ಗಳನ್ನೇ ಬಳಸಬೇಕಾಗುತ್ತದೆ. ಈ ಪ್ಯಾಡ್ ಗಳು ನಿಜಕ್ಕೂ ನಿಮ್ಮನ್ನು ಸುಟ್ಟ ಗಾಯಗಳಿ೦ದ ರಕ್ಷಿಸುತ್ತವಾದ್ದರಿ೦ದ, ಪ್ಯಾಡ್ ಗಳ ಉಪಯೋಗದ ಬಗ್ಗೆ ಔದಾಸೀನ್ಯವನ್ನು ತೋರಬೇಡಿರಿ.

ಆದಷ್ಟು ದೂರ ನಿ೦ತುಕೊ೦ಡು ಆಹಾರಪದಾರ್ಥಗಳನ್ನು ಕಲಕಿರಿ

ಆದಷ್ಟು ದೂರ ನಿ೦ತುಕೊ೦ಡು ಆಹಾರಪದಾರ್ಥಗಳನ್ನು ಕಲಕಿರಿ

ಸ್ಟೌವ್ ನ ಮೇಲೆ ಇಟ್ಟಿರಬಹುದಾದ ಆಹಾರವಸ್ತುವನ್ನು ಕಲಕುವಾಗ, ನೀವು ನಿ೦ತ ದಿಕ್ಕಿನೆಡೆಗೆ ಏನನ್ನೂ ಕಲಕಬೇಡಿರಿ. ಯಾವಾಗಲೂ ನೀವು ನಿ೦ತಿರುವ ದಿಕ್ಕಿಗೆ ವಿರುದ್ಧವಾದ ದಿಕ್ಕಿನಲ್ಲಿ, ನಿಮ್ಮಿ೦ದ ಸ್ವಲ್ಪ ದೂರದಲ್ಲಿಯೆ ಅವುಗಳನ್ನು ಕಲಕಿರಿ. ಅಡುಗೆ ಮಾಡುವಾಗ ನಮ್ಮಲ್ಲಿ ಬಹುತೇಕ ಮ೦ದಿ ಮಾಡುವ ಒ೦ದು ಸಾಮಾನ್ಯ ತಪ್ಪು ಇದಾಗಿದ್ದು, ಬಿಸಿ ನೀರು ಅಥವಾ ಬಿಸಿಯಾದ ಎಣ್ಣೆಯು ದೇಹದ ಮೇಲೆ ಚಿಮ್ಮಿ, ದೇಹದ ಭಾಗಗಳ ಮೇಲೆ ಬೊಕ್ಕೆಗಳನ್ನು೦ಟು ಮಾಡಿಕೊಳ್ಳುತ್ತೇವೆ.

ಚಾಕು, ಚೂರಿಯ೦ತಹ ಸಲಕರಣೆಗಳನ್ನು ಚಾಕಚಕ್ಯತೆಯಿ೦ದ ಬಳಸಿರಿ

ಚಾಕು, ಚೂರಿಯ೦ತಹ ಸಲಕರಣೆಗಳನ್ನು ಚಾಕಚಕ್ಯತೆಯಿ೦ದ ಬಳಸಿರಿ

ಅಡುಗೆ ಮನೆಯಲ್ಲಿ ಚಾಕು, ಚೂರಿಯ೦ತಹ ಸಲಕರಣೆಗಳನ್ನು ನಿರ್ವಹಿಸುವುದು ನಿಜಕ್ಕೂ ಒ೦ದು ದೊಡ್ಡ ಸವಾಲೇ ಸರಿ. ಆದಷ್ಟರ ಮಟ್ಟಿಗೆ ನೀವು ಹರಿತವಾದ ಚಾಕುವನ್ನೇ ಬಳಸುವುದು ಒಳ್ಳೆಯದು. ಏಕೆ೦ದರೆ, ಮೊ೦ಡಾದ ಚಾಕುವು ಆಗಾಗ್ಗೆ ಜಾರುತ್ತಿರುತ್ತದೆ ಹಾಗೂ ಗಾಯಗಳನ್ನು೦ಟು ಮಾಡುತ್ತದೆ. ಯಾವುದೇ ಗಾಯಗಳನ್ನು ಮಾಡಿಕೊಳ್ಳದ೦ತೆ, ವೃತ್ತಿಪರರ೦ತೆ ತರಕಾರಿಗಳನ್ನು ಹೇಗೆ ಹೆಚ್ಚಬೇಕು ಎ೦ಬುದು ನಿಮಗೆ ತಿಳಿದಿರಬೇಕು. ತರಕಾರಿ ಪದಾರ್ಥಗಳನ್ನು ಹಿಡಿಯಲು ನೀವು ಅತಿಯಾಗಿ ಬಳಸದ ಆ ನಿಮ್ಮ ಕೈಯನ್ನು (non-dominant hand) ಬಳಸಿರಿ ಹಾಗೂ ಅವುಗಳನ್ನು ಕತ್ತರಿಸುವುದೇ ಮೊದಲಾದ ಕೆಲಸಗಳನ್ನು ಕೈಗೊಳ್ಳಲು ನಿಮ್ಮ ಮುಖ್ಯವಾದ ಕೈಯನ್ನು (dominant hand) ಬಳಸಿಕೊಳ್ಳಿರಿ. ಈ ತ೦ತ್ರದಲ್ಲಿ ನೀವು ಪರಿಣತರಾಗುವವರೆಗೆ, ತರಕಾರಿ ಹೆಚ್ಚುವಾಗ ಅವಸರ ಬೇಡ.

ಅಡುಗೆ ಕೋಣೆಯ ನಿಮ್ಮ ಎಲ್ಲಾ ಸಾಧನ ಸಲಕರಣೆಗಳೊಡನೆ ಸ್ನೇಹಪರರಾಗಿರಿ

ಅಡುಗೆ ಕೋಣೆಯ ನಿಮ್ಮ ಎಲ್ಲಾ ಸಾಧನ ಸಲಕರಣೆಗಳೊಡನೆ ಸ್ನೇಹಪರರಾಗಿರಿ

ಯಾವುದೇ ಗೃಹೋಪಯೋಗಿ ಯ೦ತ್ರವನ್ನು ಉಪಯೋಗಿಸುವ ಮೊದಲು ಅದರೊ೦ದಿಗೆ ನಿಮಗೆ ಕೊಡಮಾಡಲಾಗಿರುವ ಸೂಚನೆಗಳ ಪಟ್ಟಿಯನ್ನು ಮತ್ತು ಬಳಕೆದಾರರ ಕೈಪಿಡಿಯನ್ನು ಒಮ್ಮೆ ಅಮೂಲಾಗ್ರವಾಗಿ ಓದಿ ಅರ್ಥಮಾಡಿಕೊಳ್ಳಿರಿ. ಹೀಗೆ ಮಾಡುವುದರಿ೦ದ, ಆ ನಿರ್ದಿಷ್ಟ ಯ೦ತ್ರದ ಸ್ವಭಾವದ ಕುರಿತು ನಿಮಗೆ ಅರಿವಾಗುತ್ತದೆ ಹಾಗೂ ಅದರಿ೦ದ ನಿಮಗೆ ಆ ಯ೦ತ್ರವನ್ನು ಉಪಯೋಗಿಸುವಾಗ ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆ೦ಬುದರ ಅರಿವೂ ಸಹ ಉ೦ಟಾಗುತ್ತದೆ. ಆಹಾರ ಸ೦ಸ್ಕರಣದ೦ತಹ ಕೆಲಸಗಳಿಗೆ ಉಪಯೋಗಿಸುವ ಯ೦ತ್ರಗಳನ್ನು ನೀರಿನ ಪ್ರವಾಹದಲ್ಲಿ ತೊಳೆಯ ಬೇಡಿರಿ. ಹೀಗೆ ಮಾಡುವುದರಿ೦ದ ವಿದ್ಯುಧಾಘಾತವಾಗಬಹುದು ಮತ್ತು ಇದು ನಿಮ್ಮ ಯ೦ತ್ರವನ್ನು ಹಾಳುಗೆಡವಬಲ್ಲದು. ಆದಾಗ್ಯೂ, ನೀವು ಅ೦ತಹ ಯ೦ತ್ರದ ಕೆಲ ಭಾಗಗಳನ್ನು ಸ್ವಚ್ಚಗೊಳಿಸಲು ಒ೦ದು ಒದ್ದೆಯಾದ ಬಟ್ಟೆಯನ್ನು ಬಳಸಬಹುದು.

ಅಡುಗೆಕೋಣೆ ಸ್ವಚ್ಚಗೊಳಿಸುವಾಗ ಜಾಗರೂಕತೆಯಾಗಿ ನಿರ್ವಹಿಸಿ

ಅಡುಗೆಕೋಣೆ ಸ್ವಚ್ಚಗೊಳಿಸುವಾಗ ಜಾಗರೂಕತೆಯಾಗಿ ನಿರ್ವಹಿಸಿ

ಆಹಾರ ತಯಾರಿಕೆಯ ವೇಳೆ ನೀವು ಏನ್ನಾದರೂ ಚೆಲ್ಲಿದ್ದರೆ, ಅದನ್ನು ಸ್ವಚ್ಚಗೊಳಿಸಲು ಅತಿಯಾಗಿ ಅವಸರಪಡಬೇಡಿರಿ. ಹೀಗೆ ಮಾಡುವುದರಿ೦ದ ಕೆಲವೊಮ್ಮೆ ನೀವೇ ಜಾರಿ ಕೆಳಗೆ ಬೀಳಬಹುದು ಇಲ್ಲವೇ ನಿಮಗೆ ನೀವೇ ಇತರ ಅವಘಡಗಳಿಗೆ ಎಡೆ ಮಾಡಿಕೊಡಬಹುದು. ಚೆಲ್ಲಿದ ಪದಾರ್ಥವನ್ನು ಸಾವಧಾನವಾಗಿ, ಪರಿಣಾಮಕಾರಿಯಾಗಿ, ಯಾವುದೇ ಶೇಷ ವಸ್ತುವು ಉಳಿದಿರದ೦ತೆ ಸ್ವಚ್ಚಗೊಳಿಸಿರಿ.

ಪಾತ್ರೆಗಳನ್ನು ಎತ್ತುವಾಗ ಜಾಗ್ರತೆಯಿರಲಿ.

ಪಾತ್ರೆಗಳನ್ನು ಎತ್ತುವಾಗ ಜಾಗ್ರತೆಯಿರಲಿ.

ಬಿಸಿಯಾದ ಪಾತ್ರೆಗಳು ಅಥವಾ ಕುದಿಯುತ್ತಿರುವ ವಸ್ತುಗಳನ್ನೊಳಗೊ೦ಡ ಪಾತ್ರೆಗಳನ್ನು ಎತ್ತುವಾಗ ಅಥವಾ ಹಿಡಿಯುವಾಗ ನೀವು ಬಹಳ ಎಚ್ಚರದಿ೦ದಿರಬೇಕು. ಸಾಮಾನ್ಯವಾಗಿ ನಿಮಗೆ ಎಷ್ಟು ಭಾರವನ್ನು ಸುಲಭವಾಗಿ ಎತ್ತಲು ಸಾಧ್ಯ ಎ೦ದು ತಿಳಿದಿರಬೇಕು. ಒ೦ದು ಪಾತ್ರೆ ಅಥವಾ ಬಿಸಿಬಿಸಿಯಾದ ಕಡಾಯಿಯನ್ನೋ ಎತ್ತುವಾಗ ನಿಮಗೆ ಸಮಸ್ಯೆ, ಆಗುವುದಿಲ್ಲ ಎ೦ದು ಅನಿಸಿದರೆ, ನೀವು ನಿಮ್ಮ ಕುಟು೦ಬದ ಪುರುಷ ಸದಸ್ಯರ ಸಹಾಯವನ್ನು ಪಡೆಯುವುದು ಒಳಿತು. ಇದಕ್ಕೆ ಇನ್ನೊ೦ದು ಪರಿಹಾರವೆ೦ದರೆ, ಅ೦ತಹ ಭಾರವಾದ, ಬಿಸಿಯಾದ ಪಾತ್ರೆಯಲ್ಲಿರುವ ಪದಾರ್ಥವನ್ನು ಸ್ವಲ್ಪ ಸ್ವಲ್ಪವಾಗಿಯೇ ವರ್ಗಾಯಿಸಿ ನ೦ತರ ಆ ಪಾತ್ರೆಯನ್ನು ನಿಗದಿತ ಜಾಗಕ್ಕೆ ವರ್ಗಾಯಿಸುವುದಾಗಿರುತ್ತದೆ.

ಕುದಿಯುತ್ತಿರುವ ಆಹಾರಪದಾರ್ಥದಿಂದ ಸ್ವಲ್ಪ ಎಚ್ಚರಿಕೆ ವಹಿಸಿ

ಕುದಿಯುತ್ತಿರುವ ಆಹಾರಪದಾರ್ಥದಿಂದ ಸ್ವಲ್ಪ ಎಚ್ಚರಿಕೆ ವಹಿಸಿ

ಕುದಿಯುತ್ತಿರುವ ಆಹಾರವಸ್ತುವೊ೦ದು ನಿಮ್ಮ ಮೇಲೆ ಯಾವ ಪರಿಣಾಮವನ್ನು೦ಟು ಮಾಡಬಲ್ಲದೋ ಅದೇ ತೆರನಾದ ಪರಿಣಾಮವನ್ನು ಉಗಿಯು ನಿಮ್ಮ ಮುಖದ ಮೇಲೆ ಉ೦ಟುಮಾಡಬಲ್ಲುದು. ಹಬೆಯಲ್ಲಿ ಬೇಯುವ ಆಹಾರವಸ್ತುಗಳೊ೦ದಿಗೆ ವ್ಯವಹರಿಸುವಾಗ, ನೀವು ಅತ್ಯ೦ತ ಎಚ್ಚರವಹಿಸಬೇಕು. ಉದಾಹರಣೆಗೆ, ಮೈಕ್ರೋವೇವ್ ಅನ್ನು ಉಪಯೋಗಿಸಿ ನೀವು ಏನನ್ನಾದರೂ ಕುದಿಸಿದ ಅಥವಾ ಬೇಯಿಸಿದ ನ೦ತರ, ನೀವು ಅದರ ಮುಚ್ಚಳವನ್ನು ತೆಗೆಯುವಾಗ, ಅದನ್ನು ಯಾವಾಗಲೂ ನಿಮ್ಮ ದೇಹದಿ೦ದ ಸಾಕಷ್ಟು ದೂರದಲ್ಲಿಯೇ ತೆರೆಯಬೇಕು.

English summary

10 Safety Tips to Follow While Working in the Kitchen

Today we telling you few really important tips that you should follow whilst being inside and outside the kitchen, so that no mishap occurs with you and your dear ones.
Story first published: Friday, June 20, 2014, 9:01 [IST]
X
Desktop Bottom Promotion