For Quick Alerts
ALLOW NOTIFICATIONS  
For Daily Alerts

ಮನೆಯ ಅಡುಗೆ ಮನೆಯಲ್ಲಿರಬೇಕಾದ ಹತ್ತು ಸಾಧನಗಳು

By Hemanth P
|

ನಿಮ್ಮಲ್ಲಿ ವ್ಯಯಿಸಲು ಹಣವಿದ್ದರೆ ಮತ್ತು ಇದನ್ನು ನಿಮ್ಮ ಅಡುಗೆ ಮನೆಯಲ್ಲಿ ತೊಡಗಿಸಲು ಬಯಸಿದ್ದರೆ ಅಡುಗೆ ಮನೆಯನ್ನು ಮೇಲ್ದರ್ಜೆಗೇರಿಸಲು ಹಲವಾರು ಮಾರ್ಗಗಳಿವೆ.
ಅವುಗಳು ಇಲ್ಲಿವೆ...

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಅಡುಗೆ ಕೋಣೆಯ ಸ್ವಚ್ಛತೆ ಹೀಗಿರಲಿ!

ಮಾಡ್ಯೂಲರ್ ಕಿಚನ್ ಕ್ಯಾಬಿನೆಟ್:

ಮಾಡ್ಯೂಲರ್ ಕಿಚನ್ ಕ್ಯಾಬಿನೆಟ್:

ಇದರಿಂದ ಅಡುಗೆ ಮನೆಯ ಜಾಗ ತುಂಬಾ ಅಚ್ಚುಕಟ್ಟು ಮತ್ತು ಸಭ್ಯವಾಗಿ ಕಾಣಿಸುತ್ತದೆ. ಕಿಚನ್ ನಲ್ಲಿ ಯಾವುದೇ ಗೊಂದಲವಿಲ್ಲದಂತೆ ಮತ್ತು ಹಲವಾರು ಕಂಪಾರ್ಟ್ ಮೆಂಟ್ ಮತ್ತು ಕಪಾಟುಗಳಿಂದ ವಸ್ತುಗಳನ್ನು ಸರಿಯಾಗಿ ಜೋಡಿಸಿಡಲು ನೆರವಾಗುತ್ತದೆ.

ಕನ್ವೆಕ್ಷನ್ ಮೈಕ್ರೋವೇವ್:

ಕನ್ವೆಕ್ಷನ್ ಮೈಕ್ರೋವೇವ್:

ಇದು ಹೆಚ್ಚಿನ ಸಮಯ ಉಳಿಸುತ್ತದೆ ಮತ್ತು ಆಹಾರ ಬಿಸಿ ಮಾಡಲು ನೆರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಭಾರತೀಯ ಆಹಾರಗಳನ್ನು ಮೈಕ್ರೋವೇವ್ ನಲ್ಲಿ ಬೇಯಿಸಲಾಗುತ್ತದೆ. ಮೈಕ್ರೋವೇವ್ ನಲ್ಲಿ ತಯಾರಿಸಬಹುದಾದ ಹಲವಾರು ರೆಸಿಪಿಗಳಿವೆ. ಆಹಾರವನ್ನು ತುಂಬಾ ಕಡಿಮೆ ಎಣ್ಣೆ ಬಳಸಿ ಮಾಡಬಹುದು.

ಡಬಲ್ ಡೋರ್ ರೆಫ್ರಿಜರೇಟರ್:

ಡಬಲ್ ಡೋರ್ ರೆಫ್ರಿಜರೇಟರ್:

ಇಂದಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲಿ ಇದು ಅತ್ಯವಶ್ಯಕ. ರೆಫ್ರಿಜರೇಟರ್ ನಲ್ಲಿ ಹೆಚ್ಚಿನ ಜಾಗವಿದ್ದಷ್ಟು ಅದರಲ್ಲಿ ಅಷ್ಟೇ ವಸ್ತುಗಳನ್ನು ಇಡಬಹುದು. ಇದರಿಂದ ಆಗಾಗ ಮಾರುಕಟ್ಟೆಗೆ ಹೋಗಿ ತರಕಾರಿ ಮತ್ತು ಇತರ ಸಾಮಾನು ತರುವುದನ್ನು ತಡೆಯಬಹುದು.

ಅಡುಗೆ ಮನೆ ಬಾಣಲೆ:

ಅಡುಗೆ ಮನೆ ಬಾಣಲೆ:

ಇದು ಅಡುಗೆ ಮನೆಗೆ ಅತ್ಯುತ್ತಮ ಪಾತ್ರೆ. ಬಾಣಲೆಯಲ್ಲಿ ಆಹಾರ ತಯಾರಿಸುವುದು ತುಂಬಾ ಖುಷಿ ನೀಡುತ್ತದೆ. ಅತಿಥಿಗಳು ಇರುವಾಗ ಆಹಾರವನ್ನು ತಿರುಗಿಸುತ್ತಿರಬಹುದು. ಅಡುಗೆ ಮಾಡುವವರಿಗೆ ಮತ್ತು ಅಡುಗೆ ಪ್ರೀತಿಸುವವರಿಗೆ ಇದು ಒಂದು ಹೆಮ್ಮೆಯ ಸಾಧನ.

ಚಾಕುಗಳ ಸೆಟ್:

ಚಾಕುಗಳ ಸೆಟ್:

ಚಾಕುಗಳ ಸೆಟ್ ಉತ್ತಮವಾಗಿದ್ದರೆ ಆಗ ಕತ್ತರಿಸುವ ಅನುಭವ ಕೂಡ ಉತ್ತಮವಾಗಿರುತ್ತದೆ. ಬೋನಿಂಗ್ ಚಾಕುವಿನಿಂದ ಹಿಡಿದು ಪ್ರತಿಯೊಂದು ಚಾಕು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅತ್ಯುತ್ತಮ ಗುಣಮಟ್ಟದ ಚಾಕುಗಳನ್ನು ಖರೀದಿಸುವುದು ಒಳ್ಳೆಯ ಯೋಜನೆ. ಯಾಕೆಂದರೆ ಇದು ದೀರ್ಘ ಬಾಳಿಕೆ ಬರುತ್ತದೆ.

ಕಟ್ಟಿಂಗ್ ಬೋರಡ್:

ಕಟ್ಟಿಂಗ್ ಬೋರಡ್:

ಪ್ಲಾಸ್ಟಿಕ್‌ನ ಕಟ್ಟಿಂಗ್ ಬೋರ್ಡ್ ಖರೀದಿಸಬೇಡಿ. ನೀವು ಅಡುಗೆಯನ್ನು ಆನಂದಿಸಲು ಬಯಸುವುದಾದರೆ ಮರದ ತುಂಡು ಅಥವಾ ಬೋರ್ಡ್ ನಲ್ಲಿ ತರಕಾರಿ ಹಚ್ಚುವುದು ತುಂಬಾ ಒಳ್ಳೆಯದು.

ವೈನ್ ಗ್ಲಾಸ್ ಸೆಟ್:

ವೈನ್ ಗ್ಲಾಸ್ ಸೆಟ್:

ಹೊರಗಡೆ ಹೋದಾಗ ನೀವು ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವಾಗ ಅಲ್ಲಿ ಅತ್ಯುತ್ತಮವಾದ ವೈನ್ ನೀಡುತ್ತಾರೆ. ನಿಮ್ಮ ಆಯ್ಕೆಯ ಅತ್ಯುತ್ತಮ ವೈನ್ ಗ್ಲಾಸ್ ಆಯ್ಕೆ ಮಾಡಿ ಮತ್ತು ಅದನ್ನು ವಿಶೇಷ ಜಾಗದಲ್ಲಿಡಿ. ನಿಮ್ಮ ಮನೆಯಲ್ಲಿ ಸಣ್ಣ ಬಾರ್ ಇರದಿದ್ದರೂ ವೈನ್ ಗ್ಲಾಸ್ ಇರಲಿ. ಇದು ನಿಮ್ಮ ಅಡುಗೆ ಮನೆಗೆ ಶೋಭೆ.

ಒಳ್ಳೆಯ ಪಾತ್ರೆಗಳು:

ಒಳ್ಳೆಯ ಪಾತ್ರೆಗಳು:

ನೀವು ಎಲ್ಲಾ ವಸ್ತುಗಳನ್ನು ಸರಿಯಾದ ಜಾಗದಲ್ಲಿಟ್ಟಿದ್ದೀರಿ. ನಿಮ್ಮ ಮನೆಯ ಅಡುಗೆ ಮೂಡ್ ಗೆ ಅನುಗುಣವಾಗಿ ಪಾತ್ರೆಗಳ ಸೆಟ್ ನ್ನು ಆಯ್ಕೆ ಮಾಡಿ.

ಫುಡ್ ಪ್ರಾಸೆಸರ್:

ಫುಡ್ ಪ್ರಾಸೆಸರ್:

ಫುಡ್ ಪ್ರಾಸೆಸರ್ ಅಡುಗೆ ಮಾಡುವ ವಿಧಾನವನ್ನು ವೇಗವಾಗಿಸುತ್ತದೆ. ಇದನ್ನು ಒಮ್ಮೆ ಮನೆಗೆ ತಂದರೆ ಆಗ ನಿಮ್ಮೊಳಗೆ ಮಾಸ್ಟರ್ ಚೆಫ್ ಆಗಲಿದ್ದೀರಿ. ಇದರಿಂದ ತರಕಾರಿ ಹಚ್ಚುವ ಮತ್ತು ತುಂಡರಿಸುವ ಸಮಯ ಮತ್ತು ಶಕ್ತಿ ಉಳಿಯುತ್ತದೆ.

ಚಾಕು ಕತ್ತರಿ:

ಚಾಕು ಕತ್ತರಿ:

ಈ ಸಾಮಾನುಗಳನ್ನು ಖರೀದಿಸುವಾಗ ನೀವು ತಪ್ಪು ಮಾಡಲೇಬಾರದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಚಾಕುಕತ್ತರಿಗಳು ಸಿಗುತ್ತದೆ. ನಿಮ್ಮ ಆಯ್ಕೆಯ ಗಾತ್ರ ಮತ್ತು ಮಾದರಿಗೆ ಅನುಗುಣವಾಗಿ ಖರೀದಿಸಬೇಕು. ಅಂತಿಮವಾಗಿ ನೀವು ಅಡುಗೆ ಮಾಡುವುದನ್ನು ಎಷ್ಟು ಇಷ್ಟಪಡುತ್ತೀರಿ ಎನ್ನುವುದು ಮುಖ್ಯವಾಗುತ್ತದೆ.

English summary

10 kitchen must-haves for your home

If you have money to spare and want to invest in your kitchen, there are a number of ways you can upgrade your kitchen. Here's how:
Story first published: Saturday, March 15, 2014, 11:21 [IST]
X
Desktop Bottom Promotion