For Quick Alerts
ALLOW NOTIFICATIONS  
For Daily Alerts

ಡ್ರೈ ಕ್ಲೀನ್ ಓನ್ಲೀ ಲೇಬಲ್ ಪಾಲಿಸಲೇಬೇಕಾ?

|

ಡ್ರೆಸ್ ಕೊಳ್ಳುವಾಗ ಅದರ ಬೆಲೆಯಷ್ಟೇ ಅದರ ಲೇಬಲ್ ಕೂಡ ಗಮನಿಸುವುದು ಒಳ್ಳೆಯದು. ಏಕೆಂದರೆ ಕೆಲವೊಂದು ಡ್ರೆಸ್ ನಲ್ಲಿ ಡ್ರೈ ಕ್ಲೀನ್ ಎಂಬ ಲೇಬಲ್ ಇರುತ್ತದೆ.

ಲೇಬಲ್ ಇದ್ದ ಮಾತ್ರಕ್ಕೆ ಡ್ರೈ ಕ್ಲೀನ್ ಮಾಡಬೇಕೆ? ಮನೆಯಲ್ಲಿ ನಾವೇ ಬಟ್ಟೆ ತೊಳೆದರೆ ಬಟ್ಟೆ ಹಾಳಾಗಬಹುದೇ ಎಂಬ ಸಂಶಯ ಬರುವುದು ಸಹಜ. ಕೆಲವೊಂದು ಡ್ರೆಸ್ ಗಳಿಗೆ ಡ್ರೈ ಕ್ಲೀನ್ ಎಂಬ ಲೇಬಲ್ ಇದ್ದರೂ ಶ್ಯಾಂಪೂ ಹಾಕಿ ಬ್ರಷ್ ಹಾಕದೆ ನಾವೇ ತೊಳೆಯಬಹುದು, ಆದರೆ ಯಾವುದಕ್ಕೂ ಮೊದಲ ಸಲ ಬಟ್ಟೆ ತೊಳೆಯಲು ಡ್ರೈ ವಾಶ್ ಗೆ ಕೊಡುವುದು ಸೂಕ್ತ.

When should we follow ‘dry clean only’ labels?

ಡ್ರೈ ಕ್ಲೀನ್ ಕೊಟ್ಟ ಹಾಳಾದ ಅನುಭವ ಅನೇಕರಲ್ಲಿದೆ. ಆದ್ದರಿಂದ ಡ್ರೈ ಕ್ಲೀನ್ ಗೆ ಕೊಡುವುದಾದರೆ ಮೊದಲು ಉತ್ತಮವಾಗಿ ಡ್ರೈ ಕ್ಲೀನ್ ಮಾಡಿ ಕೊಡುವ ಅಂಗಡಿ ಯಾವುದೆಂದು ಅಕ್ಕ-ಪಕ್ಕ ವಿಚಾರಿಸಿ ಕೊಡುವುದು ಒಳ್ಳೆಯದು.

ನೀವೇ ಬಟ್ಟೆಯನ್ನು ತೊಳೆಯಲು ತೀರ್ಮಾನಿಸಿದರೆ ಆ ಬಟ್ಟೆ ಯಾವುದರಿಂದ ತಯಾರಿಸಲಾಗಿದೆ ಎಂದು ನೋಡಿ. ಕಾಟನ್ ಆದರೆ ನೀವು ಒಗೆಯಬಹುದು. ಫ್ಯಾಬ್ರಿಕ್ ಸಿಲ್ಕ್ , ರೇಷ್ಮೆ ಸೀರೆಗಳನ್ನು ನಾವೇ ಒಗೆಯುವ ಬದಲು ಡ್ರೈ ಕ್ಲೀನ್ ಗೆ ಕೊಡುವುದು ಸೂಕ್ತ.

ಇನ್ನು ಕೆಲವು ಬಟ್ಟೆಗಳು ನಾವು ಒಗೆದಾಗ ಕಲರ್ ಹೋಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮಿಕ್ಸ್ ಕಲರ್ ಬಟ್ಟೆಯಾಗಿದ್ದರೆ ಒಂದು ಕಲರ್, ಮತ್ತೊಂದು ಕಲರ್ ಗೆ ಅಂಟಿ ಬಟ್ಟೆ ಹಾಳಾಗಬಹುದು.

ಮತ್ತೊಂದು ಸಲಹೆವೆಂದರೆ ರೇಷ್ಮೆ, ಫ್ಯಾಬ್ರಿಕ್ ಬಟ್ಟೆ ತೊಳೆಯುವಾಗ ಡಿಟರ್ಜೆಂಟ್ ಬಳಸುವುದಾಗಲಿ, ಬ್ರಷ್ ಹಾಕಿ ತಿಕ್ಕುವುದಾಗಲಿ ಮಾಡಬಾರದು. ಶ್ಯಾಂಪೂ ಬಳಸಿ, ಕಲ್ಲಿನಲ್ಲಿ ಒಗೆಯದೆ ಕೈಯಲ್ಲಿ ತಿಕ್ಕಿ ತೊಳೆದರೆ ಬಟ್ಟೆ ಹಾಳಾಗುವುದಿಲ್ಲ.

English summary

When should we follow ‘dry clean only’ labels? | ಡ್ರೈ ಕ್ಲೀನ್ ಓನ್ಲೀ ಲೇಬಲ್ ಪಾಲಿಸಲೇಬೇಕಾ?

Does dry clean only actually mean dry clean only? What would happen if we were to ignore the labels and throw everything into the washing machine?
X
Desktop Bottom Promotion