For Quick Alerts
ALLOW NOTIFICATIONS  
For Daily Alerts

ಬಟ್ಟೆಗೆ ಅಂಟಿದ ತಂತಿಯ ಕಲೆ ಹೋಗಲಾಡಿಸಬೇಕೆ?

|
Ways To Remove Iron Stains From Clothes
ಬಟ್ಟೆಯನ್ನು ಸ್ವಲ್ಪ ಹಳೆಯ ತಂತಿ ಅಥವಾ ಹ್ಯಾಂಗರ್ ಗೆ ಹಾಕಿದರೆ ಬಟ್ಟೆಗೆ ಕಂದು ಬಣ್ಣ ಅಂಟಿಕೊಳ್ಳುತ್ತದೆ. ಈ ಕಂದು ಬಣ್ಣವನ್ನು ತೊಳೆದರೂ ಹೋಗುವುದಿಲ್ಲ.

ಈ ರೀತಿ ಕಂದು ಬಣ್ಣ ಹಿಡಿದ ಬಟ್ಟೆಯನ್ನು ಹೊರಗಡೆ ಹಾಕಿಕೊಂಡು ಹೋಗಲು ಸಾಧ್ಯವಿಲ್ಲ, ಆ ಬಟ್ಟೆ ಹಾಳಾದಂತೆ ಎಂದು ಯೋಚಿಸಬೇಡಿ.

ಏಕೆಂದರೆ ಹೋಗಿಸಲು ಅಸಾಧ್ಯವಾದ ಕಂದು ಬಣ್ಣವನ್ನು ಹೋಗಲಾಡಿಸಲು ಟಿಪ್ಸ್ ನೋಡಿ ಇಲ್ಲಿದೆ:

* 1 ಚಮಚ ವಿನಿಗರ್ ಅನ್ನು ಬಿಸಿ ನೀರಿನಲ್ಲಿ ಹಾಕಿ, ಅದರಲ್ಲಿ ಬಿಳಿ ಬಟ್ಟೆಯನ್ನು ನೆನೆ ಹಾಕಿ ಒಗೆದರೆ ಸಾಕು ಹೋಗುವುದು.

* ಸ್ವಲ್ಪ ಉಪ್ಪನ್ನು ನೀರಿಗೆ ಹಾಕಿ. ಬಟ್ಟೆ ಒಗೆದ ನಂತರ ಬಟ್ಟೆಯನ್ನು ಉಪ್ಪು ನೀರಿನಲ್ಲಿ ಅದ್ದಿ, 20 ನಿಮಿಷ ಇಡಿ. ನಂತರ ಬಟ್ಟೆಯನ್ನು ಉಜ್ಜಿ ತೊಳೆದರೆ ಆ ಕಲೆ ಹೋಗುವುದು.

* ಇಲ್ಲದಿದ್ದರೆ ಒಂದು ರಾತ್ರಿ ಬಟ್ಟೆಯನ್ನು ವಿನೆಗರ್ ನೀರಿನಲ್ಲಿ ನೆನೆಹಾಕಿ. ಉಪ್ಪು ಹಾಕಬೇಡಿ, ಉಪ್ಪು ನಿಮ್ಮ ಬಟ್ಟೆಯ ಬಣ್ಣವನ್ನು ತೆಳು ಮಾಡುತ್ತದೆ.

* ಈ ಕಲೆಯನ್ನು ಹೋಗಲಾಡಿಸಲು ಯಾವುದೇ ಕಾರಣಕ್ಕೆ ಬ್ಲೀಚ್ ಬಳಸಬೇಡಿ. ಸ್ಟ್ರಾಂಗ್ ಡಿಟರ್ಜೆಂಟ್ ಮಾತ್ರ ಬಳಸಿ.

* ಈ ವಿಧಾನವನ್ನು ಅನುಸರಿಸಬಹುದು ವಿನಿಗರ್ ನಲ್ಲಿ ಅದ್ದಿದ ಬಟ್ಟೆಗೆ ಉಪ್ಪು ಹಾಕಿ ತಿಕ್ಕಿದರೆ ಸಾಕು ಕಲೆ ಹೋಗುವುದು.

* ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಅದರಲ್ಲಿ ಬಟ್ಟೆಯನ್ನು 20 ನಿಮಿಷ ನೆನೆ ಹಾಕಿ ಒಗೆದರೂ ಕಲೆ ಹೋಗುವುದು.

English summary

Ways To Remove Iron Stains From Clothes | Tips For Home Improvements | ಬಟ್ಟೆಯಿಂದ ತಂತಿಯ ಕಂದು ಬಣ್ಣದ ಕಲೆ ಹೋಗಲಾಡಿಸಲು ಟಿಪ್ಸ್

Iron stains can be really tricky to get rid off! These stains can come on your washed clothes when you hang them to dry on an iron wire or on an iron hanger. To get rid of iron stains from clothes, here are few tips for you.
Story first published: Monday, April 22, 2013, 17:25 [IST]
X
Desktop Bottom Promotion