For Quick Alerts
ALLOW NOTIFICATIONS  
For Daily Alerts

ಲೆದರ್ ಸೋಫಾ ಶುಚಿಗೆ ಸಲಹೆಗಳು

By Super
|

ಲೆದರ್ ಸೋಫಾ ಇದ್ದರೆ ಅದು ಮನೆಗೆ ವಿಶೇಷ ಸೊಬಗು ಮತ್ತು ಅಪ್ಯಾಯಮಾನ ನೋಟ ನೀಡುತ್ತದೆ. ಆದರೆ ಬೆಲೆಬಾಳುವ ಈ ಸೋಫಾಗಳನ್ನು ನಿರ್ವಹಣೆ ಮತ್ತು ನಿರ್ಮಲವಾಗಿ ಇಟ್ಟುಕೊಳ್ಳುವುದು ಮನೆಯಲ್ಲಿರುವವರಿಗೆ ಒಂದು ಕಠಿಣ ಕೆಲಸ. ಅದರ ಮೌಲ್ಯ ಮತ್ತು ಐಷಾರಾಮಿಯನ್ನು ಗಮನದಲ್ಲಿಟ್ಟುಕೊಂಡು ಒದ್ದೆ ಬಟ್ಟೆಯಿಂದ ಅದರಲ್ಲಿನ ಧೂಳನ್ನು ಒರೆಸಬಹುದು.

ಇದಕ್ಕೆ ಕ್ಲೀನರ್ಸ್ ಗಳನ್ನು ಬಳಸುವಂತಿಲ್ಲ. ಗಡುಸಾದ ಕ್ಲೀನರ್ ಗಳು ಸೋಫಾದ ಅಂದವನ್ನು ಕೆಡಿಸಬಲ್ಲದು. ಅಮೋನಿಯಾದಿಂದ ಮಾಡಲಾಗಿರುವ ಕ್ಲೀನರ್ ಗಳನ್ನು ಇದಕ್ಕೆ ಬಳಸಲೇಬಾರದು. ಯಾಕೆಂದರೆ ಇದು ಬೆಲೆಬಾಳುವ ಸೋಫಾವನ್ನು ಕೆಡಿಸುತ್ತದೆ. ಲೆದರ್ ಸೋಫಾವನ್ನು ಶುಚಿಗೊಳಿಸುವ ತುಂಬಾ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಚರ್ಮವನ್ನು ಒಂದು ಬಾಳಿಕೆ ಬರುವ ವಸ್ತುವಾಗಿ ಪರಿಗಣಿಸಬಹುದು. ಆದರೆ ಇದು ರಂಧ್ರಗಳಿಂದ ತುಂಬಿರುತ್ತದೆ ಎನ್ನುವುದನ್ನು ಕೂಡ ನೆನಪಿನಲ್ಲಿಡಬೇಕು. ಮನೆಯಲ್ಲೇ ತಯಾರಿಸಿದ ಅಥವಾ ಉತ್ಪಾದಕರು ಸೂಚಿಸಿರುವಂತಹ ಸೌಮ್ಯವಾಗಿರುವ ಕ್ಲೀನರ್ ಗಳನ್ನು ಬಳಸಿಕೊಂಡು ಲೆದರ್ ಫರ್ನಿಚರ್ ಗಳನ್ನು ಶುಚಿಗೊಳಿಸಬೇಕಾಗುತ್ತದೆ.

Ways To Clean Leather Sofas At Home

ಇದೆಲ್ಲವನ್ನು ಹೊರತುಪಡಿಸಿ ಲೆದರ್ ಫರ್ನಿಚರ್ ಗಳನ್ನು ನಿಯಮಿತವಾಗಿ ಯಾವ ರೀತಿ ಶುಚಿಗೊಳಿಸಬಹುದು ಎನ್ನುವ ಬಗ್ಗೆ ಗಮನಹರಿಸಬೇಕು. ಲೆದರ್ ಫರ್ನಿಚರ್ ಗಳನ್ನು ನಿಯಮಿತವಾಗಿ ಕ್ಲೀನ್ ಮಾಡಬೇಕು. ಇದನ್ನು ನಿಯಮಿತವಾಗಿ ಶುಚಿಗೊಳಿಸುವ ಬಗ್ಗೆ ಗಮನಹರಿಸಿದಿದ್ದರೆ ಧೂಳು ಅದರಲ್ಲಿ ಮೆತ್ತಿಕೊಂಡು ನಿಮ್ಮ ಫರ್ನಿಚರ್ ಹಾಳಾಗುವ ಸಂಭವೇ ಹೆಚ್ಚು. ಲೆದರ್ ಸೋಫಾವನ್ನು ಶುಚಿಗೊಳಿಸಲು ಕೆಲವು ಟಿಪ್ಸ್ ಗಳು ಇಲ್ಲಿವೆ. ಇದು ನಿಮ್ಮ ಫರ್ನಿಚರ್ ನ್ನು ಕೂಡ ರಕ್ಷಿಸುತ್ತದೆ. ಓದಿ ಮತ್ತು ಅಳವಡಿಸಿಕೊಳ್ಳಿ.

1. ಲೆದರ್ ಸೋಫಾವನ್ನು ತುಂಬಾ ಮೃಧುವಾಗಿರುವ ಬ್ರಶ್ ನಿಂದ ವ್ಯಾಕ್ಯೂಮ್ ಕ್ಲೀನ್ ಮಾಡಿ. ಫರ್ನಿಚರ್ ನಲ್ಲಿರುವ ಎಲ್ಲಾ ಧೂಳನ್ನು ಕ್ಲೀನರ್ ಹೀರಿಕೊಳ್ಳುವಂತೆ ನೋಡಿಕೊಳ್ಳಿ.

2. ನೀರು ಮತ್ತು ವಿನೇಗರ್ ನ್ನು ಮಿಶ್ರಣದ ದ್ರಾವಣದಿಂದ ಲೆದರ್ ಸೋಫಾವನ್ನು ಶುಚಿಗೊಳಿಸಬಹುದು. ನೀರು ಮತ್ತು ವಿನೇಗರ್ ನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಮತ್ತು ದ್ರಾವಣದಿಂದ ಸೋಫಾವನ್ನು ಶುಚಿ ಮಾಡಿ.

3. ಸ್ವಲ್ಪ ಒದ್ದೆ ಮಾಡಿಕೊಂಡ ಬಟ್ಟೆಯಿಂದ ಸೋಫಾದಲ್ಲಿರುವ ಧೂಳನ್ನು ತೆಗೆಯಿರಿ. ಸಂಪೂರ್ಣ ಸೋಫಾವನ್ನು ಇದೇ ಬಟ್ಟೆಯಿಂದ ಒರೆಸಿ. ಅಗತ್ಯಬಿದ್ದಾಗ ದ್ರಾವಣದಲ್ಲಿ ಅದ್ದಿದ ಬಟ್ಟೆಯಿಂದ ಸೋಫಾವನ್ನು ಶುಚಿಗೊಳಿಸಿ.

4. ಅಂತಿಮವಾಗಿ ಒಣ ಬಟ್ಟೆಯಿಂದ ಸೋಫಾವನ್ನು ಶುಚಿಗೊಳಿಸಲು ಮರೆಯದಿರಿ. ಇದಕ್ಕೆ ಬ್ಲೋ ಡ್ರೈಯರ್ ನ್ನು ಬಳಸಬೇಡಿ. ಇದು ಲೆದರ್ ನ್ನು ಒಣಗಿಸುವ ಸಾಧ್ಯತೆಯಿದೆ.

5. ಲೆದರ್ ಫರ್ನಿಚರ್ ನ್ನು ಶುಚಿಗೊಳಿಸುವ ಮುಂದಿನ ಹೆಜ್ಜೆಯೆಂದರೆ ಅದರ ಕಂಡೀಷನಿಂಗ್. ಇದಕ್ಕಾಗಿ ವಿನೇಗರ್ ಮತ್ತು ನಾರಗಸೆ ಎಣ್ಣೆಯನ್ನು ಬಳಸಬೇಕು. ಇದನ್ನು 2:1ರ ಪ್ರಮಾಣದಲ್ಲಿ ಮಿಶ್ರ ಮಾಡಬೇಕು. ಈ ಮಿಶ್ರಣವನ್ನು ಸೋಫಾದ ಮೇಲೆ ಹಚ್ಚಿ ಮತ್ತು ಇದನ್ನು ಒಣಗಲು ಬಿಡಿ.

6. ಅಂತಿಮವಾಗಿ ಶುಭ್ರವಾದ ಬಟ್ಟೆಯಿಂದ ಸೋಫಾವನ್ನು ಶುಚಿಗೊಳಿಸಿ ಮತ್ತು ಅದು ಹೊಳೆಯುವಂತೆ ಮಾಡಿ. ಲೆದರ್ ಸೋಫಾದ ಮೇಲಿರುವ ಕಲೆಗಳನ್ನು ಶುಚಿಗೊಳಿಸುವ ಬಗ್ಗೆ ಚಿಂತೆ ಮಾಡುತ್ತಿದ್ದೀರಾ?

1. ಪರ್ಮನೆಂಟ್ ಮಾರ್ಕರ್ ನ ಕಲೆ ಲೆದರ್ ಸೋಫಾದ ಮೇಲೆ ಬಿದ್ದಿದ್ದರೆ ಆಗ ಎರೊಸಾಲ್ ನ್ನು ಅದಕ್ಕೆ ಸಿಂಪಡಿಸಿ. ನೈಸರ್ಗಿಕವಾಗಿ ಸಿಗುವ ನೀಲಗಿರಿ ಎಣ್ಣೆಯನ್ನು ಕಲೆ ಮೇಲೆ ಹಾಕಿ ಉಜ್ಜುವುದರಿಂದ ಶುಚಿಗೊಳಿಸಬಹುದು. ಅಲ್ಕೋಹಾಲ್ ಬಳಸಿ ಉಜ್ಜಿದರೂ ಕಲೆಯನ್ನು ತೆಗೆಯಬಹುದಾಗಿದೆ.

2.ಸೋಫಾದ ಮೇಲೆ ಗ್ರೀಸ್ ನ ಕಲೆಯಾದರೆ ಏನು ಮಾಡುವುದು?
ಲೆದರ್ ಸೋಫಾದ ಮೇಲೆ ಗ್ರೀಸ್ ಕಲೆಗಳು ಆಗಿದ್ದರೆ ಅದರ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ. ಕೆಲವು ಗಂಟೆಗಳ ಬಳಿಕ ಇದನ್ನು ಬಟ್ಟೆಯಿಂದ ಒರೆಸಿದರೆ ಲಿವಿಂಗ್ ರೂಮ್ ನಲ್ಲಿ ತುಂಬಾ ಶುಚಿಯಾಗಿರುವ ಫರ್ನಿಚರ್ ನ್ನು ನೋಡಬಹುದು.

3. ಸೋಫಾದ ಮೇಲೆ ಕಡುಬಣ್ಣದ ಕಲೆಗಳಿವೆಯಾ?
ಇದಕ್ಕೆ ಪರಿಹಾರ ಇಲ್ಲಿದೆ. ಲೆದರ್ ಸೋಫಾದ ಮೇಲೆ ಕಡುಬಣ್ಣದ ಕಲೆಗಳ ಬಗ್ಗೆ ನೀವು ಚಿಂತಿತರಾಗಿದ್ದರೆ ಮತ್ತು ಅದನ್ನು ಹೇಗೆ ಶುಚಿಗೊಳಿಸುವುದು ಎಂದು ಆಲೋಚಿಸುತ್ತಿದ್ದೀರಾ? ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಇದಕ್ಕೆ ಪರಿಹಾರವಿದೆ. ಟಾರ್ಟರ್ ಮತ್ತು ನಿಂಬೆರಸವನ್ನು ಬಳಸಿ. ಇದನ್ನು ಕೆಲವು ಸಮಯ ಬಿಡಿ ಮತ್ತು ಪೇಸ್ಟ್ ನ್ನು ಕಲೆಯಿರುವ ಜಾಗಕ್ಕೆ ಉಜ್ಜಿ. ಅಂತಿಮವಾಗಿ ಒಣ ಬಟ್ಟೆಯಿಂದ ಅದನ್ನು ಒರೆಸಿ ತೆಗೆಯಿರಿ.

4. ನೀವು ಬಳಸಬಹುದಾದ ಇತರ ವಸ್ತುಗಳು ಯಾವುದು?
ಲೆದರ್ ಸೋಫಾವನ್ನು ಶುಚಿಗೊಳಿಸಲು ನೀವು ಇತರ ಕೆಲವು ವಸ್ತುಗಳನ್ನು ಉಪಯೋಗಿಸಬಹುದು. ಅದರಲ್ಲಿ ನೈಲ್ ಪಾಲಿಶ್ ರಿಮೂವರ್, ಟೂಥ್ ಪೇಸ್ಟ್, ಬೇಬಿ ವಿಪ್ಸ್ ಇತ್ಯಾದಿ. ಬಣ್ಣ ಮಂಕಾದಂತೆ ಮಾಡಲು ನೀವು ಹಲವು ರೀತಿಯ ಯೋಚನೆಗಳನ್ನು ಮಾಡಿಕೊಂಡು ಸೋಫಾವನ್ನು ಶುಚಿ ಮಾಡಬಹುದು.

English summary

Ways To Clean Leather Sofas At Home

It is imperative to be cautious while you clean leather sofa.Here are a few tips to clean leather sofa, which may help you protect your furniture well. Read and relish.
X
Desktop Bottom Promotion