For Quick Alerts
ALLOW NOTIFICATIONS  
For Daily Alerts

ವಿನಿಗರ್ ಬರೀ ಅಡುಗೆಗೆ ಮಾತ್ರ ಎಂದು ಭಾವಿಸಬೇಡಿ

By Super
|

ವಿನಿಗರ್ ನಮ್ಮ ಮನೆಯಲ್ಲಿರುವ ಒಂದು ಅದ್ಭುತವಾದ ರಾಸಾಯನಿಕ. ವೈನ್, ಕೊಳೆತ ಸಿಡೆರ್, ಬೀರ್ ಮುಂತಾದ ಪಾನೀಯಗಳನ್ನು ತಯಾರಿಸುವಾಗ ಈ ಹುಳಿ ಬರಿಸುವ ರಾಸಾಯನಿಕ ಆಕಸ್ಮಿಕವಾಗಿ ಸಂಶೋಧನೆಗೊಂಡಿತು. ಇದನ್ನು ಕೇವಲ ಕಾಂಡಿಮೆಂಟ್ ತಯಾರಿಸಲು, ಗೋಬಿ ಮಂಚೂರಿ ಮುಂತಾದ ಆಹಾರ ಪದಾರ್ಥಗಳನ್ನು ತಯಾರಿಸಲು ಮಾತ್ರವಲ್ಲದೆ ಇನ್ನುಳಿದ ಕೆಲಸಗಳಿಗು ಸಹ ಬಳಸಬಹುದು. ಇದರ ಉಪಯೋಗವನ್ನು ಮನಗಂಡರೆ, ಇದರಿಂದ ಸಾವಿರಾರು ಕೆಲಸಗಳನ್ನು ನಾವು ಮಾಡಬಹುದು.

ಈ ವಿನಿಗರ್ ನಮ್ಮ ಮನೆಯಲ್ಲಿ ಒಮ್ಮೊಮ್ಮೆ ದೊಡ್ಡ ಬಾಟಲಿಗಳಲ್ಲಿ ಉಳಿದು ಬಿಡುವುದು ಸಹಜ. ಆಗ ಇದರಿಂದ ನಾವೇನು ಮಹಾ ಅಡಿಗೆ ಮಾಡುತ್ತೇವೆಯೆಂದೊ, ಅಥವಾ ಯಾವಾಗಲೋ ಬಳಸುತ್ತೇವೆ ಬಿಡು ಎಂದೋ ಎಸೆಯಬೇಡಿ. ನಿಮಗೆ ತಿಳಿದಿರಲಿ ವಿನಿಗರ್ ಒಂದು ಡಿಸ್ಟಿಲ್ ಮಾಡಿದ ಬಿಳಿಯ ಅಪ್ಪಲ್ ಸೈಡೆರ್ ವಿಧವಾಗಿರುತ್ತದೆ. ಇದರಿಂದ ಮನೆಯಲ್ಲಿ ಹಲವಾರು ಕೆಲಸಗಳನ್ನು ಮಾಡಬಹುದು. ಜೊತೆಗೆ ಸೌಂದರ್ಯಕ್ಕೆ , ಔಷಧಿಯಾಗಿ ಮತ್ತು ಕೃಷಿ ಬಳಕೆಗು ಸಹ ಇದನ್ನು ಬಳಸಬಹುದು.

ಇಲ್ಲಿ ನಾವು ನಿಮಗಾಗಿ ವಿನಿಗರ್ ನ 20 ಅಸಾಧರಣ ಉಪಯೋಗಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ. ಓದಿ ಪರಿಸರ ಸ್ನೇಹಿಯಾಗಿರುವ ವಿನಿಗರ್ ನ ಗರಿಷ್ಠ ಉಪಯೋಗಗಳ ಬಗ್ಗೆ ಹೇಳಿದ್ದೇವೆ ನೋಡಿ:

1. ಹೇರ್ ಕಂಡೀಷನರ್

1. ಹೇರ್ ಕಂಡೀಷನರ್

ಒಂದು ಬಟ್ಟಲಿಗೆ ಅರ್ಧ ಚಮಚ ವಿನಿಗರನ್ನು ಬೆರೆಸಿ, ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಕೂದಲು ಸ್ವಲ್ಪ ವಾಸನೆ ಬರಬಹುದು. ಆದರೆ ಅದು ಸ್ವಲ್ಪ ಹೊತ್ತು ಮಾತ್ರ, ಈ ವಿನಿಗರ್ ನಿಮ್ಮ ಕೂದಲಿಗೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೆಂಬುದನ್ನು ನೀವೇ ನೋಡುವಿರಿ.

2. ಸುಕ್ಕು ನಿವಾರಕ

2. ಸುಕ್ಕು ನಿವಾರಕ

ನಿಮ್ಮ ಬಟ್ಟೆಗಳಲ್ಲಿ ಸುಕ್ಕುಗಳಿದ್ದರೆ, ಸ್ವಲ್ಪ ನೀರು ಮತ್ತು ವಿನಿಗರನ್ನು ಬೆರೆಸಿ ಅದರ ಚಿಮುಕಿಸಿ. ಮುಂದೆ ನಡೆಯುವ ಪವಾಡವನ್ನು ನೀವೇ ನೋಡಿ.

ಇದರಿಂದ ನಿಮ್ಮ ಮನೆಯ ನೆಲವನ್ನು ಮತ್ತು ಫ್ರಿಡ್ಜನ್ನು ಸಹ ಸ್ವಚ್ಛಗೊಳಿಸಬಹುದು. ಅರ್ಧ ಚಮಚ ವಿನಿಗರನ್ನು ನೀರಿಗೆ ಹಾಕಿ ನಿಮ್ಮ ಮನೆಯ ಗ್ರಾನೈಟ್ ಅಥವಾ ಮಾರ್ಬಲ್ ನೆಲವನ್ನು, ಫ್ರಿಡ್ಜ್ ಮತ್ತು ಅಡುಗೆ ಮನೆಯ ಸಜ್ಜಾಗಳನ್ನು(ಕಟ್ಟೆಗಳನ್ನು) ತೊಳೆಯಿರಿ. ಇದು ನಿಮ್ಮ ಫ್ರಿಡ್ಜಿನಲ್ಲಿರುವ ಆಹಾರದ ವಾಸನೆಯನ್ನು ಹೊಡೆದೋಡಿಸುತ್ತದೆ.

3. ಕಲೆ ನಿವಾರಕ

3. ಕಲೆ ನಿವಾರಕ

ನಿಮ್ಮ ಉಡುಪಿನಲ್ಲಿರುವ ಬೆವರಿನ ಕಲೆಗಳನ್ನು ನಿವಾರಿಸಲು ತುಂಬಾ ಕಷ್ಟಪಡಬೇಡಿ. ವಿನಿಗರನ್ನು ಸ್ಪ್ರೇಗೆ ತುಂಬಿ, ಅದನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ. ಕಲೆ ಮಂಗ ಮಾಯವಾಗುತ್ತದೆ.

4. ಫ್ಯಾಬ್ರಿಕ್ ಸಾಫ್ಟನರ್

4. ಫ್ಯಾಬ್ರಿಕ್ ಸಾಫ್ಟನರ್

ನಿಮ್ಮ ಬಟ್ಟೆಗಳು ಸಾಫ್ಟ್ ಆಗಲು ಅಂಗಡಿಯಲ್ಲಿರುವ ಫ್ಯಾಬ್ರಿಕ್ ಸಾಫ್ಟನರ್ ಬಳಸಲೇ ಬೇಕು ಎಂದೇನಿಲ್ಲ. ಸ್ವಲ್ಪ ವೈಟ್ ವಿನಿಗರನ್ನು ತೆಗೆದುಕೊಂಡು, ವಾಶಿಂಗ್ ಮಷಿನಿನಲ್ಲಿ ನಿಮ್ಮ ಬಟ್ಟೆಯನ್ನು ಕಡೆಯ ಬಾರಿಗೆ ವಾಷ್ ಮಾಡುವ ಮುನ್ನ ಅದರಲ್ಲಿ ಹಾಕಿ ವಾಷ್ ಮಾಡಿ. ಇದು ಬಟ್ಟೆಯಲ್ಲಿರುವ ಸೋಪಿನ ಅಂಶಗಳನ್ನು ಸಹ ತೆಗೆದು ಹಾಕುತ್ತದೆ.

5. ಹೂವುಗಳ ತಾಜಾತನಕ್ಕಾಗಿ

5. ಹೂವುಗಳ ತಾಜಾತನಕ್ಕಾಗಿ

ಹೂವುಗಳು ಬೇಗ ಬಾಡಿ ಹೋಗುತ್ತವೆ. ಅದಕ್ಕಾಗಿ ಏಕೆ ಬೇಸರ ಮಾಡಿಕೊಳ್ಳುತ್ತೀರಿ. ನಿಮ್ಮ ಹೂದಾನಿಗೆ ನೀರಿನ ಜೊತೆ ಸ್ವಲ್ಪ ವಿನಿಗರ್ ಬೆರೆಸಿ ಹೂಗಳನ್ನು ಅದರಲ್ಲಿಡಿ. ಹೂವುಗಳು ತಾಜಾತನದಿಂದ ನಳನಳಿಸುತ್ತವೆ.

6. ಮೊಟ್ಟೆ ಹೊಡೆದು ಹೋಗದಿರುವಂತೆ ಮಾಡಲು

6. ಮೊಟ್ಟೆ ಹೊಡೆದು ಹೋಗದಿರುವಂತೆ ಮಾಡಲು

ಇನ್ನು ಮುಂದೆ ಮೊಟ್ಟೆಯನ್ನು ಬೇಯಿಸುವಾಗ, ನೀರಿಗೆ ಸ್ವಲ್ಪ ವಿನಿಗರ್ ಬೆರೆಸಿ. ಇದರಿಂದ ಮೊಟ್ಟೆ ಬೆಂದ ನಂತರ ಸುಲಿಯಲು ನೆರವಾಗುತ್ತದೆ. ಜೊತೆಗೆ ಮೊಟ್ಟೆಯಲ್ಲಿರುವ ಬಿಳಿ ಭಾಗವು ಸಹ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ.

7. ಬಿಕ್ಕಳಿಕೆಯನ್ನು ನಿವಾರಿಸಲು

7. ಬಿಕ್ಕಳಿಕೆಯನ್ನು ನಿವಾರಿಸಲು

ಇದಕ್ಕೆ ಔಷಧಿಯೇ ಇಲ್ಲವೆಂದು ವೈಧ್ಯರು ಸಹ ಕೈತೊಳೆದು ಬಿಡುತ್ತಾರೆ. ಆದರೆ ನಿಮ್ಮ ಮನೆಯಲ್ಲಿರುವ ವಿನಿಗರ್ ನಿಮಗೆ ಈ ವಿಚಾರದಲ್ಲಿ ನೆರವಿಗೆ ಬರುತ್ತದೆ. ಅರ್ಧ ಚಮಚದಷ್ಟು ವಿನಿಗರ್ ಸೇವಿಸುವುದರಿಂದ ಬಿಕ್ಕಳಿಕೆಯನ್ನು ನಿಲ್ಲಿಸಬಹುದು.

8. ವಾಸನೆ ನಿವಾರಕ

8. ವಾಸನೆ ನಿವಾರಕ

ಮನೆಯಲ್ಲಿ ಏನಾದರು ಕರಿಯುವಾಗ ಇಡೀ ಕೋಣೆಯಲ್ಲಿ ಒಂದು ಬಗೆಯ ವಾಸನೆ ತುಂಬಿ ಬಿಡುತ್ತದೆ. ಅದಕ್ಕಾಗಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ. ಅದರ ಮೂರನೆಯ ಒಂದು ಭಾಗದಷ್ಟು ವಿನಿಗರ್ ಅನ್ನು ಅದಕ್ಕೆ ಬೆರೆಸಿ, ಕೋಣೆಯಲ್ಲಿಡಿ. ವಾಸನೆ ಜಾಗ ಖಾಲಿ ಮಾಡಿಕೊಂಡು ಹೋಗುತ್ತದೆ.

9. ಕಳೆ ನಿವಾರಕ

9. ಕಳೆ ನಿವಾರಕ

ನಿಮ್ಮ ಮನೆಯಲ್ಲಿ ಬೆಳೆದ ಕಳೆಯನ್ನು ನಿವಾರಿಸಲು ದುಬಾರಿ ಕಳೆ ನಿವಾರಕಗಳನ್ನು ಬಳಸುವುದನ್ನು ಬಿಡಿ. ಇವುಗಳು ಅತ್ಯಂತ ವಿಷಕಾರಿ ಅಂಶಗಳನ್ನು ಹೊಂದಿರುತ್ತವೆ. ಆದರೆ ವಿಷ ರಹಿತವಾದ ವಿನಿಗರ್ ನಿಮ್ಮ ಮನೆಯ ಕೈತೋಟದಲ್ಲಿ ಬೆಳೆದಿರುವ ಕಳೆಗಳನ್ನು ಕೊಲ್ಲುತ್ತದೆ. ಇದರಲ್ಲಿರುವ ಶೇ.25% ಅಸಿಟಿಕ್ ಆಮ್ಲವು ಈ ಕೆಲಸಕ್ಕೆ ಪರಿಣಾಮಕಾರಿಯಾಗಿ ನೆರವಾಗುತ್ತದೆ.

10. ಬಾಯಿ ಹುಣ್ಣಿಗೆ ಉತ್ತಮ ಪರಿಹಾರ

10. ಬಾಯಿ ಹುಣ್ಣಿಗೆ ಉತ್ತಮ ಪರಿಹಾರ

ಬಾಯಿ ಹುಣ್ಣು ಆದರೆ ಅಪ್ಪಲ್ ಸಿಡೆರ್ ವಿನಿಗರನ್ನು ಸ್ವಲ್ಪ ಬೆಚ್ಚಗಿನ ನೀರಿಗೆ ಬೆರೆಸಿ ಬಾಯಿ ಮುಕ್ಕಳಿಸಿ. ವಿನಿಗರ್ ಅನ್ನು ಜೇನಿನ ಜೊತೆ ಬೆರೆಸಿ ಬಳಸಿ. ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

11. ಇರುವೆಗಳನ್ನು ತೊಲಗಿಸಲು

11. ಇರುವೆಗಳನ್ನು ತೊಲಗಿಸಲು

ಮನೆಯಲ್ಲಿ ಇರುವೆಗಳ ಸಾಲನ್ನು ನೋಡಿ ನೋಡಿ ಬೇಸತ್ತಿರಾ? ಏಕೆ ಯೋಚನೆ ಮಾಡುವಿರಿ. ಈ ಇರುವೆಗಳು ವಿನಿಗರನ್ನು ಭಾರಿ ದ್ವೇಷಿಸುತ್ತವೆ. ವಿನಿಗರನ್ನು, ನೀರಿನೊಂದಿಗೆ ಸಮ ಪ್ರಮಾಣದಲ್ಲಿ ಬೆರೆಸಿ, ಇರುವೆಗಳು ಓಡಾಡುವ ಸ್ಥಳದಲ್ಲಿ ಚಿಮುಕಿಸಿ. ಇರುವೆಗಳು ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ.

12. ಸ್ನಾಯುಗಳಿಗೆ ಹುರುಪು ತುಂಬಲು

12. ಸ್ನಾಯುಗಳಿಗೆ ಹುರುಪು ತುಂಬಲು

ಅಪ್ಪಲ್ ಸಿಡೆರ್ ವಿನಿಗರ್ ನಿಮ್ಮ ದೇಹದಲ್ಲಿರುವ ಲ್ಯಾಕ್ಟಿಕ್ ಆಮ್ಲವನ್ನು ಹೊಡೆದೋಡಿಸುತ್ತವೆ. ಇವುಗಳು ನಮ್ಮ ಸ್ನಾಯುಗಳ ವ್ಯಾಯಾಮಕ್ಕೆ ತೀರ ಅತ್ಯಾವಶ್ಯಕ. ಜೊತೆಗೆ ಇವು ಹುಣ್ಣುಗಳನ್ನು ಸಹ ಮಾಯುವಂತೆ ಮಾಡುತ್ತವೆ. ಅದಕ್ಕಾಗಿ ಒಂದು ಚಮಚ ವಿನಿಗರನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ. ಇದನ್ನು ಬಟ್ಟೆಯಲ್ಲಿ ಅದ್ದಿಕೊಂಡು ನೋವು ಇರುವ ಭಾಗಕ್ಕೆ ಹಾಕಿ, 20 ನಿಮಿಷದ ನಂತರ ತೊಳೆಯಿರಿ.

13. ಏರ್ ಫ್ರೆಶ್‍ನರ್

13. ಏರ್ ಫ್ರೆಶ್‍ನರ್

ವಿನಿಗರ್ ಗಾಳಿಯಲ್ಲಿರುವ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ. ಜೊತೆಗೆ ಇಡೀ ಕೋಣೆಯಲ್ಲಿನ ವಾಸನೆಯನ್ನು ಹದ್ದು ಬಸ್ತಿಗೆ ತಂದು ಬಿಡುತ್ತದೆ. ಇದರ ಜೊತೆಗೆ ಇದೇ ವಿನಿಗರ್ ಅನ್ನು ಬಳಸಿ ನೆಲವನ್ನು ಸಹ ಒರೆಸಬಹುದು.

14. ಸ್ಟಿಕರ್ ತೆಗೆಯಲು

14. ಸ್ಟಿಕರ್ ತೆಗೆಯಲು

ಸ್ವಲ್ಪ ವಿನಿಗರನ್ನು ತೆಗೆದುಕೊಂಡು ಸ್ಟೌವ ಮೇಲೆ ಆಗಲಿ ಅಥವಾ ಓವೆನ್‍ನಲ್ಲಾಗಲಿ ಕಾಯಿಸಿ. ಅದರಲ್ಲಿ ಒಂದು ಬಟ್ಟೆ ತುಂಡನ್ನು ಅದ್ದಿ, ನಂತರ ಅದನ್ನು ಸ್ಟಿಕರ್ ಮೇಲೆ ಇಡಿ. ಆ ಸ್ಟಿಕರ್ ನೋಡಿ ಸ್ವಲ್ಪ ಹೊತ್ತಿನಲ್ಲಿ ಕಿತ್ತರೆ ನಿಮ್ಮ ಕೈಗೆ ಬರುತ್ತದೆ.

15.ಮಾಂಸಗಳ ಸಂರಕ್ಷಣೆಗೆ

15.ಮಾಂಸಗಳ ಸಂರಕ್ಷಣೆಗೆ

ಮಾಂಸದಲ್ಲಿ ತಾಜಾತನವನ್ನು ತರುತ್ತದೆ ಮತ್ತು ಅದರಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತದೆ.

ಸಮುದ್ರ ಜನ್ಯ ಮಾಂಸವನ್ನು ಆಪ್ಪಲ್ ಸಿಡೆರ್ ವಿನಿಗರಿನಲ್ಲಿ ಸ್ವಚ್ಛಮಾಡಿರುತ್ತಾರೆ. ಇದು ಯಾವಾಗಲು ತಮ್ಮ ತಾಜಾತನವನ್ನು ಉಳಿಸಿಕೊಂಡಿರುತ್ತವೆ. ಅಧ್ಯಯನಗಳ ಪ್ರಕಾರ ಬ್ಯಾಕ್ಟೀರಿಯಾ ಮುಕ್ತ ವಾತಾವರಣವನ್ನು ನಿರ್ಮಿಸಲು ವಿನಿಗರ್ ಬೇಕಾಗುತ್ತದೆ.

16. ಸಿಂಕ್ ಅಥವಾ ಡ್ರೈನ್ ಕಟ್ಟಿದಾಗ ಇದನ್ನು ಬಳಸಿ

16. ಸಿಂಕ್ ಅಥವಾ ಡ್ರೈನ್ ಕಟ್ಟಿದಾಗ ಇದನ್ನು ಬಳಸಿ

ಕಟ್ಟಿಕೊಂಡ ಡ್ರೈನ್‍ಗಳನ್ನು ಮತ್ತು ಕಸವಿರುವ ಸ್ಥಳದಲ್ಲಿ ತಾಜಾತನವನ್ನು ತರಲು ಅವಶ್ಯಕ

ನಿಮ್ಮ ಸಿಂಕ್ ಅಥವಾ ಇನ್ನಿತರ ಡ್ರೈನ್‍ಗಳು ಕಟ್ಟಿಕೊಂಡಾಗ ವಿನಿಗರ್ ಬಳಸಿ, ಅವುಗಳನ್ನು ಸರಿಪಡಿಸಿಕೊಳ್ಳಬಹುದು. ಮುಕ್ಕಾಲು ಕಪ್ ಬೇಕಿಂಗ್ ಸೋಡದ 1/2 ಕಪ್ ಪ್ರಮಾಣಕ್ಕೆ ಕಾಲು ಭಾಗ ವೈಟ್ ವಿನಿಗರ್ ಹಾಕಿ. ಕಸ ಕೊಚ್ಚಿ ಕೊಂಡು ಹೋಗುತ್ತದೆ.

17. ಫಂಗಲ್ ಇನ್‍ಫೆಕ್ಷನ್‍ಗೆ ಮದ್ದಾಗಿ ಬಳಸಬಹುದು.

17. ಫಂಗಲ್ ಇನ್‍ಫೆಕ್ಷನ್‍ಗೆ ಮದ್ದಾಗಿ ಬಳಸಬಹುದು.

ಫಂಗಲ್ ಇನ್‍ಫೆಕ್ಷನ್ ಸರ್ವೆ ಸಾಮಾನ್ಯವಾಗಿ ನಮ್ಮ ಕಾಲಿನಲ್ಲಿ, ಉಗುರಿನಲ್ಲಿ ಬರುತ್ತಿರುತ್ತದೆ. ಇದರ ಜೊತೆಗೆ ತಲೆ ಹೊಟ್ಟಿನ ಸಮಸ್ಯೆಗು ಸಹ ಇದರಿಂದ ಪರಿಹಾರ ಸಿಗುತ್ತದೆ. ವಿನಿಗರ್ ಈ ಎರಡೂ ಸಮಸ್ಯೆಗಳನ್ನು ನಿವಾರಿಸಿ ನಿಮಗೆ ನೆಮ್ಮದಿಯನ್ನು ಕೊಡುತ್ತದೆ.

18. ಆಹಾರದಲ್ಲಿ ಖಾರ ಹೆಚ್ಚಾದರೆ ಕಮ್ಮಿ ಮಾಡಲು

18. ಆಹಾರದಲ್ಲಿ ಖಾರ ಹೆಚ್ಚಾದರೆ ಕಮ್ಮಿ ಮಾಡಲು

ನಿಮ್ಮ ಊಟ ತಿಂಡಿಯಲ್ಲಿ ಖಾರ ಹೆಚ್ಚಾದರೆ ಏನು ಮಾಡುವುದು? ಅದರಲ್ಲೂ ಅತಿಥಿಗಳು ಬಂದಿದ್ದಾರೆಂದು ಅವರಿಗಾಗಿ ವಿಶೇಷ ಅಡಿಗೆ ಮಾಡಿದಾಗ ಈಗಾದರೆ ಏನು ಮಾಡುವುದು? ಯೋಚನೆ ಮಾಡಬೇಡಿ. ಅದಕ್ಕೆ ಆಪದ್ಭಾಂಧವನಾಗಿ ವಿನಿಗರ್ ಬಳಸಿ. ಅದಕ್ಕಾಗಿ ನೀವು ಬಿಳಿಯ ಅಥವಾ ಅಪ್ಪಲ್ ಸಿಡೆರ್ ವಿನಿಗರ್ ಅನ್ನು ಬಳಸಬಹುದು. ಖಾರ ಕಡಿಮೆ ಮಾಡಲು ಒಂದು ಟೀ ಸ್ಪೂನ್‍ನಷ್ಟು ವಿನಿಗರನ್ನು ಬಳಸಿ ಸಾಕು.

19. ತುಕ್ಕನ್ನು ನಿವಾರಿಸಲು

19. ತುಕ್ಕನ್ನು ನಿವಾರಿಸಲು

ವಿನಿಗರ್ ನಲ್ಲಿರುವ ಅಸಿಟಿಕ್ ಆಮ್ಲವು ಕಬ್ಬಿಣದ ಮೇಲೆ ಇರುವ ಕಬ್ಬಿಣದ ಆಕ್ಸೈಡ್ ಅಥವಾ ತುಕ್ಕನ್ನು ನಿವಾರಿಸುತ್ತದೆ. ನಿಮ್ಮ ಮನೆಯಲ್ಲಿ ಬಾಗಿಲು- ಕಿಟಕಿಗಳಿಗೆ ಇರುವ ಹಿಂಜೆಸ್, ನಟ್ ಮತ್ತು ಬೋಲ್ಟುಗಳಲ್ಲಿರುವ ತುಕ್ಕನ್ನು ತೆಗೆಯಲು ವಿನಿಗರ್ ಬಳಸಿ. ಇದಕ್ಕಾಗಿ ಸ್ವಲ್ಪ ವಿನಿಗರನ್ನು ತುಕ್ಕು ಇರುವ ಭಾಗಕ್ಕೆ ಹಚ್ಚಿ, ನಂತರ ಅದನ್ನು ನೀರಿನಿಂದ ತೊಳೆಯಿರಿ. ಏಕೆಂದರೆ ವಿನಿಗರ್ ತೊಳೆಯದಿದ್ದರೆ, ಅದೇ ನಿಮ್ಮ ಲೋಹದ ವಸ್ತುಗಳನ್ನು ಹಾಳು ಮಾಡಿ ಬಿಡಬಹುದು.

ಆಪಲ್ ಸೈಡರ್ ವಿನಿಗರ್

ಆಪಲ್ ಸೈಡರ್ ವಿನಿಗರ್

ಮೈ ತೂಕವನ್ನು ಕಮ್ಮಿ ಮಾಡಲು ದಿನಾ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಆಪಲ್ ಸೈಡರ್ ವಿನಿಗರ್ ಹಾಕಿ ಕುಡಿದರೆ ಸಾಕು.

English summary

Top 20 unusual uses of vinegar

Here are 20 unusual, thrifty and eco-friendly uses for vinegar that you may not have thought of. Find out this unusual uses of vinega.
X
Desktop Bottom Promotion