For Quick Alerts
ALLOW NOTIFICATIONS  
For Daily Alerts

ಮನೆ ಕಿಟಕಿಗಳನ್ನು ಸ್ವಚ್ಛ ಮಾಡಲು ಟಿಪ್ಸ್

|

ಮನೆ ಆಕರ್ಷಕವಾಗಿ ಕಾಣಲು ಅದರಲ್ಲಿ ಬೆಲೆ ಬಾಳುವ ವಸ್ತುಗಳಿರಬೇಕು, ಕರ್ಟನ್ ಗಳು ಬೆಲೆ ಬಾಳುವುದು ಆಗಿರಬೇಕು ಎಂದೇನಿಲ್ಲ. ಸಾಮಾನ್ಯವಾದ ಮನೆಯನ್ನು ಸ್ವಚ್ಛವಾಗಿ, ಚೊಕ್ಕವಾಗಿ ಇಟ್ಟರೆ ಸಾಕು ಆಕರ್ಷಕವಾಗಿ ಕಾಣುವುದು. ಮನೆಯಲ್ಲಿ ನೆಲ ಸ್ವಚ್ಛ ಮಾಡುವುದಕ್ಕಿಂತ ಕಿಟಕಿಗಳನ್ನು ಶುದ್ಧ ಮಾಡುವುದು ಸ್ವಲ್ಪ ಶ್ರಮದ ಕೆಲಸ ಅಲ್ಲವೇ?

ನಿಮ್ಮ ಮನೆಯ ಕಿಟಕಿ ಗಾಜುಗಳನ್ನು ಪಳಪಳ ಹೊಳೆಯುವಂತೆ ಮಾಡಲು ಕೆಲವೊಂದು ಸರಳ ಟಿಪ್ಸ್ ಇಲ್ಲಿದೆ ನೋಡಿ:

ಡಸ್ಟ್ ಬ್ರೆಷ್
ಮನೆಯ ಕಿಟಕಿಗಳನ್ನು ಡಸ್ಟ್ ಬ್ರೆಷ್ ಬಳಸಿ ಕೊಡವಿ. ಗಾಜುಗಳನ್ನು ಉಜ್ಜಿ, ತೊಳೆಯುವ ಮುನ್ನ ಅದರ ದೂಳು ಕೊಡುವುದು ಒಳ್ಳೆಯದು.

ಕಾಟನ್ ಬಟ್ಟೆ ಬಳಸಿ
ನಂತರ ಕಿಟಕಿಯ ಗಾಜನ್ನು ಹಳೆಯ ಕಾಟನ್ ಬಟ್ಟೆ ಅಥವಾ ಸಾಕ್ಸ್ ಬಳಸಿ ಉಜ್ಜಿ.

ನೀರು ಮತ್ತು ವಿನೆಗರ್ ಬೆಸ್ಟ್

ಸೋಪು ಹಾಕಿ ಕಿಟಕಿ ತೊಳೆದರೆ ಎಷ್ಟು ಉಜ್ಜಿದರೂ ಸೋಪಿನ ಕಲೆ ಉಳಿಯುವುದು ಅದರ ಬದಲು ನೀರಿಗೆ ವಿನೆಗರ್ ಹಾಕಿ ಉಜ್ಜಿ, ಗ್ಲಾಸ್ ಬೇಗನೆ ಶುದ್ಧವಾಗುವುದು.

ನೈಫ್ ಅಥವಾ ಕಡ್ಡಿ ಬಳಸಿ ಕ್ಲೀನ್ ಮಾಡಬೇಡಿ

ಕೆಲವೊಮ್ಮೆ ಕಿಟಕಿಯಲ್ಲಿ ಏನಾದರೂ ಅಂಟಿಕೊಂಡಿದ್ದರೆ ಬಟ್ಟೆಯಿಂದ ಉಜ್ಜಿದಾಗ ಹೋಗುವುದಿಲ್ಲ. ಈ ಸಮಯದಲ್ಲಿ ಅಂಟಿದ ವಸ್ತುಗಳನ್ನು ತೆಗೆಯಲು , ಆ ಅಂಟು ಪದಾರ್ಥಗಳನ್ನು ಹೋಗಲಾಡಿಸುವ ವಸ್ತುಗಳನ್ನು ಬಳಸಿ ತೆಗೆಯಿರಿ. ಉದಾಹರಣೆಗೆ ಸೀಮೆ ಎಣ್ಣೆ ಹಾಕಿ ತಿಕ್ಕಿದರೆ ಅಂಟಿದ ಪದಾರ್ಥ ಕಿತ್ತು ಬರುತ್ತದೆ.

ಬಿಸಿ ನೀರು
ಕಿಟಕಿಯಲ್ಲಿ ಎಣ್ಣೆಯಂಶ ಕೂತಿದ್ದರೆ ಬಿಸಿ ನೀರು ಹಾಕಿ ತಿಕ್ಕಿದರೆ ಸುಲಭದಲ್ಲಿ ಹೋಗಲಾಡಿಸಬಹುದು. ಕಿಟಕಿಯಲ್ಲಿರುವ ದೂಳು ಅಥವಾ ಕೊಳೆಯನ್ನು ತೆಗೆಯಲು ಸ್ಟ್ರಾಂಗ್ ಕೆಮಿಕಲ್ ಬಳಸಬೇಡಿ. ಡಿಟರ್ಜೆಂಟ್ ಬಳಸುವುದಾದರೆ ಮೃದುವಾದ ಡಿಟರ್ಜೆಂಟ್ ಬಳಸಿ.

English summary

Tips To Clean Your Window Grills

It is important to keep your windows and window grills clean for a healthy and beautiful home. While you can clean your window pane easily, window grills needs some extra tips and tricks which will make your task easier.
X
Desktop Bottom Promotion