For Quick Alerts
ALLOW NOTIFICATIONS  
For Daily Alerts

ಮರದ ಪೀಠೋಪಕರಣಗಳ ಸಂರಕ್ಷಣೆಗೆ ಟಿಪ್ಸ್

|

ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ಮರದ ಪೀಠೋಪಕರಣಗಳಿಗೆ ಬದಲಾಗಿ ಇತರೆ ವಸ್ತುಗಳಿಂದ ಮಾಡಲ್ಪಟ್ಟ ಪೀಠೋಪಕರಣಗಳು ಆಗಾಗ್ಗೆ ಚಾಲ್ತಿಗೆ ಬರುತ್ತಿವೆ. ಆದರೂ ಕೂಡ ಮರದ ಪೀಠೋಪಕರಣಗಳು ತಮ್ಮದೇ ಆದ ಪ್ರಾಚೀನ ಹಾಗೂ ಅದ್ವಿತೀಯ ಕಲಾತ್ಮಕತೆಯಿಂದ ಇಂದಿಗೂ ಸಹ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ. ಈ ಕಾರಣಕ್ಕಾಗಿ, ಹೆಚ್ಚಿನವರು ಇಂದಿನ ಕಾಲಮಾನದಲ್ಲಿಯೂ ಸಹ ಮರದ ಪೀಠೋಪಕರಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇಷ್ಟಾದರೂ ಸಹ, ಇತರೆ ವಸ್ತುಗಳಿಂದ ಮಾಡಲ್ಪಟ್ಟ ಪೀಠೋಪಕರಣಗಳಿಗೆ ಹೋಲಿಸಿದರೆ, ಮರದ ಪೀಠೋಪಕರಣಗಳನ್ನು ಕಾಪಿಟ್ಟುಕೊಳ್ಳುವುದು ಕಷ್ಟದ ಕೆಲಸ. ಮರದ ಪೀಠೋಪಕರಣಗಳನ್ನು ಸುಸಜ್ಜಿತವಾದ ರೀತಿಯಲ್ಲಿ ಕಾಪಿಟ್ಟುಕೊಳ್ಳಲು ಅನುಸರಿಸಬಹುದಾದ ಕೆಲವು ಉತ್ತಮ ಸಲಹೆಗಳು ಇಲ್ಲಿವೆ.

Tips to Take Care of Wooden Furniture

ನಿಮ್ಮ ಮರದ ಪೀಠೋಪಕರಣಗಳು ಹೊಚ್ಚ ಹೊಸದರಂತೆ ಕಂಗೊಳಿಸುತ್ತಿರಬೇಕಾದರೆ, ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮೊದಲ ಸಂಗತಿಯೇನೆoದರೆ, ಪೀಠೋಪಕರಣಗಳ ಮೇಲೆ ಚೆಲ್ಲಿರಬಹುದಾದ ಯಾವುದೇ ದ್ರವ ಪದಾರ್ಥವನ್ನು ಕೂಡಲೇ ಸ್ವಚ್ಚಗೊಳಿಸುವುದು. ಮರದ ಡೆಸ್ಕ್ ಅಥವಾ ಕುರ್ಚಿಯ ಮೇಲೆ ಬಿದ್ದ ನೀರೂ ಕೂಡ ಕಲೆಯನ್ನು ಉಂಟುಮಾಡಬಹುದು. ಇದಕ್ಕೆ ಕಾರಣವೇನೆಂದರೆ, ನೀವು ನೀರನ್ನು ಒರೆಸಿ ತೆಗೆದ ನಂತರವೂ ಸಹ ಅದು, ಮರಕ್ಕೆ ಬಳಸಿರಬಹುದಾದ ವಾರ್ನೀಶ್ ನೊಂದಿಗೆ ಸೇರಿ ಶಾಶ್ವತವಾದ ಕಲೆಯನ್ನು ಪೀಠೋಪಕರಣದ ಮೇಲ್ಮೈ ಮೇಲೆ ಉಳಿಸಬಲ್ಲದು.

ಇಷ್ಟು ಮಾತ್ರವಲ್ಲದೆ, ಚೆಲ್ಲಿರಬಹುದಾದ ನೀರೂ ಸಹ ತನ್ನಲ್ಲಿ ಹಲವಾರು ವಿವಿಧ ರಾಸಾಯನಿಕಗಳನ್ನು ಕರಗಿಸಿಕೊಂಡು ಮಲಿನವಾಗಿರಬಹುದು. ಪೀಠೋಪಕರಣದ ಮೇಲೆ ಉಳಿಸಿರಬಹುದಾದ ಕಳೆಯೊಂದಿಗೆ ವಾತಾವರಣದ ಬೇರೆ ಯಾವ ಅಂಶವು ಸೇರಿಕೊಂಡು ಪೀಠೋಪಕರಣವನ್ನು ಮತ್ತಷ್ಟು ಹಾಳುಗೆಡವಬಲ್ಲದು ಎಂಬುದು ಊಹಿಸಲೂ ಅಸಾಧ್ಯ. ಅದ್ದರಿಂದ, ಅಂತಹ ಕಲೆಗಳನ್ನು ಕೂಡಲೇ ತೆಗೆದು ಹಾಕಿರಿ. ಒಂದೊಮ್ಮೆ, ನಿಮ್ಮ ಬರವಣಿಗೆಯ ಡೆಸ್ಕ್ ಅಥವಾ ಸ್ಟೂಲ್ ನ ಮೇಲೆ ಚಹಾದಂತಹ ಯಾವುದೇ ದ್ರವವು ಚೆಲ್ಲಿದಾಗ, ಅದನ್ನು ಆಲ್ಕೋಹಾಲ್ ಮತ್ತು ತರಕಾರಿ ಎಣ್ಣೆಯ ಮಿಶ್ರಣದಿಂದ ಸ್ವಚ್ಚಗೊಳಿಸಬಹುದು.

ಸಂದರ್ಭವು ಯಾವುದೇ ಇರಲಿ, ಕಲೆಗಳನ್ನು ತಕ್ಷಣ ನಿವಾರಿಸುವುದು ಬಹಳ ಮುಖ್ಯ ಹಾಗೂ ಈ ಉದ್ಧೇಶಕ್ಕಾಗಿ ಆಲ್ಕೋಹಾಲ್ ಯುಕ್ತ ಸ್ವಚ್ಚಕಾರಕವನ್ನು ಬಳಸುವುದು ಅತ್ಯಂತ ಸೂಕ್ತ ಹಾಗೂ ಪರಿಣಾಮಕಾರಿ. ಪೀಠೋಪಕರಣಗಳ ಮೇಲೆ ಯಾವುದಾದರೂ ಕಠಿಣವಾದ ಕಲೆಯಿದ್ದರೆ ಅದನ್ನು ಉಜ್ಜಿ ತೆಗೆಯಲು ಯಾವಾಗಲೂ ನುಣುಪಾದ ಬಟ್ಟೆಯನ್ನು ಉಪಯೋಗಿಸುವುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಮರದ ಪೀಠೋಪಕರಣಗಳನ್ನು ಎಂದಿಗೂ ನೇರ ಸೂರ್ಯನ ಬೆಳಕಿಗೆ ಒಡ್ಡಬೇಡಿರಿ. ಹೀಗೆ ಮಾಡುವುದರಿಂದ ಪೀಠೋಪಕರಣದ ಮೇಲ್ಮೈ ಮೇಲಿರುವ ಹೊದಿಕೆಯಲ್ಲಿ ಬಿರುಕುಗಳು ಉಂಟಾಗುತ್ತವೆ ಹಾಗೂ ಇದರಿಂದ ಪೀಠೋಪಕರಣದ ಮರವು ವಾತಾವರಣಕ್ಕೆ ತೆರೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ನಿಮ್ಮ ಪೀಠೋಪಕರಣದ ಮರದಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿದ್ದರೆ, ಅವುಗಳ ಮೂಲಕ ವಾತಾವರಣದ ನೀರಾವಿಯು ಒಳಹೊಕ್ಕು ಮರವನ್ನು ಘಾಸಿಗೊಳಿಸುತ್ತದೆ. ನಿಮ್ಮ ಪೀಠೋಪಕರಣಗಳು ತೇಗ ಅಥವಾ ಇತರೆ ಗಟ್ಟಿಮುಟ್ಟಾದ ಮರದಿಂದ ಮಾಡಲ್ಪಟ್ಟಿದ್ದರೆ, ನೀರಾವಿಯ ಬಗ್ಗೆ ನೀವು ಚಿಂತಿಸಬೇಕಾದ ಅಗತ್ಯವಿಲ್ಲ.

English summary

Tips to Take Care of Wooden Furniture

With changing times, wooden furniture is often replaced by furniture made of some other materials. However, wood still holds its place because of its quaint appeal. Here is some good advice on how to take care of wooden furniture. Read ahead and find out.
Story first published: Wednesday, June 26, 2013, 17:30 [IST]
X
Desktop Bottom Promotion