For Quick Alerts
ALLOW NOTIFICATIONS  
For Daily Alerts

ಮನೆಯನ್ನು ಸೌಂಡ್ ಪ್ರೂಫ್ ಮಾಡಲು ಟಿಪ್ಸ್

|

ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಹೊರಗಡೆಯ ಶಬ್ದ ನಮ್ಮ ಕಿವಿಗೆ ಬಡಿದರೆ ತುಂಬಾ ಕಿರಿಕಿರಿಯಾಗಿ ಸಿಕ್ಕಾಪಟ್ಟೆ ಕೋಪ ಬಂದು ಬಿಡುತ್ತದೆ. ಹಾಗಂತ ಹೊರಗಡೆ ಶಬ್ದ ಮಾಡುತ್ತಾ ಓಡಾಡುವ ವಾಹನಗಳನ್ನು, ಹರಟೆ ಹೊಡೆಯುತ್ತಿರುವ ಜನರನ್ನು ಬೈಯಲು ಸಾಧ್ಯವೇ?

ಶಬ್ದ ನಿಮ್ಮ ಕಿವಿಗೆ ಬಡೆಯದಿರಲು ಸರಳವಾದ ಐಡಿಯಾವೆಂದರೆ ನಿಮ್ಮ ಮನೆಯನ್ನು ಸೌಂಡ್ ಪ್ರೂಫ್ ಮಾಡುವುದು. ಸೌಂಡ್ ಪ್ರೂಫ್ ಅಂದ ತಕ್ಷಣ ಟೆಕ್ನಿಕಲ್ ಆಗಿ ಮಾಡುವುದು , ತುಂಬಾ ದುಡ್ಡು ಖರ್ಚಾಗುತ್ತದೆ ಎಂದು ಯೋಚಿಸಬೇಡಿ. ಸ್ವಲ್ಪ ಐಡಿಯಾ ಬಳಿಸಿ, ಕಡಿಮೆ ಖರ್ಚಿಯಲ್ಲಿ ಹೊರಗಡೆಯ ಶಬ್ದ ಮನೆಯೊಳಗೆ ಬರದಂತೆ ತಡೆಯಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ:

Tips To Make Your Home Sound Proof

* ಗೋಡೆಗಳು ತುಂಬಾ ನುಣ್ಣಗೆ ಇದ್ದರೆ ಅಂತಹ ಗೋಡೆಗಳು ಬೇಗನೆ ಶಬ್ದವನ್ನು ಹೀರಿಕೊಳ್ಳುತ್ತದೆ ಗೋಟೆ ತುಂಬಾ ನುಣ್ಣಗೆ ಇದ್ದರೆ ಸಾಫ್ಟ್ ಕುಷನ್ ಗಳನ್ನು ಇಟ್ಟರೆ ಸಾಕು. ಇದು ಶಬ್ದವನ್ನು ಹೀರಿಕೊಳ್ಳುವುದರಿಂದ ನಿಮಗೆ ಶಬ್ದ ಜೋರಾಗಿ ಕೇಳುವುದಿಲ್ಲ.

* ಕಬ್ಬಿಣದ ಹಾಗೂ ಮರದ ಸಾಮಾಗ್ರಿಗಳು ಶಬ್ದವನ್ನು ತಡೆಯುವುದಿಲ್ಲ. ಆದರೆ ಸೋಫಾ, ಕುಷನ್ ಬೆಡ್ ಈ ರೀತಿಯ ವಸ್ತುಗಳು ಶಬ್ದವನ್ನು ತಡೆಯುವುದರ ಜೊತೆಗೆ ಮನೆಗೆ ಶ್ರೀಮಂತಿಕೆಯ ಕಳೆಯನ್ನು ನೀಡುತ್ತದೆ.

* ಶಬ್ದವನ್ನು ತಡೆಯಲು ಮತ್ತೊಂದು ಉಪಾಯವೆಂದರೆ ಮನೆಯ ಸೀಲಿಂಗ್ ಕೆಳಗೆ ಸ್ವಲ್ಪ ಸ್ಥಳಾವಕಾಶ ಬಿಟ್ಟು ಮತ್ತೊಂದು ಸೀಲಿಂಗ್ ಮಾಡಿಸಿ. ಈ ರೀತಿ ಮಾಡಿದರೆ ಹೊರಗಡೆಯ ಶಬ್ದ ಒಳಗಡೆಗೆ ಕೇಳಿಸುವುದೇ ಇಲ್ಲ.

* ಗಾಳಿ, ಬೆಳಕು ಬರಲು ಕಿಟಕಿಗಳನ್ನು ಮಾಡುತ್ತೇವೆ. ಆದರೆ ಗಾಳಿ, ಬೆಳಕಿನ ಜೊತೆ ಶಬ್ದವೂ ಮನೆಯೊಳಗೆ ಬರುತ್ತದೆ. ಇದನ್ನು ತಡೆಯಲು double layer ಕಿಟಕಿ ಗ್ಲಾಸ್ ಬಳಸುವುದು ಒಳ್ಳೆಯದು.

English summary

Tips To Make Your Home Sound Proof | Tips To Home Improvements | ಮನೆಯನ್ನು ಸೌಂಡ್ ಪ್ರೂಫ್ ಮಾಡಲು ಟಿಪ್ಸ್ | ಮನೆ ಅಭಿವೃದ್ದಿಗೆ ಕೆಲ ಸಲಹೆಗಳು

We suggest you not to quarrel with your noise creating neighbours and raise the decibel levels further. The easiest way is to make your home sound proof and look out for sound insulation options.Some simple home decor ideas can make a huge difference in controlling the unwanted noise in your life
X
Desktop Bottom Promotion