For Quick Alerts
ALLOW NOTIFICATIONS  
For Daily Alerts

ವಾಷಿಂಗ್ ಮೆಷಿನ್ ಸ್ಕ್ರಬ್ ಮಾಡಿ ಸ್ವಚ್ಛ ಮಾಡಬೇಡಿ

|

ವಾಶಿಂಗ್ ಮೆಷಿನ್ ಅನ್ನು ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡದಿದ್ದರೆ ಅದು ತುಂಬಾ ಕಾಲ ಬಾಳಿಕೆ ಬರುವುದಿಲ್ಲ. ವಾಶಿಂಗ್ ಮೆಷಿನ್ ನಲ್ಲಿ ಬಟ್ಟೆ ತೊಳೆದರೆ ಮೆಷಿನ್ ಟಬ್ ನಲ್ಲಿ ಕೊಳೆ ಇರುತ್ತದೆ. ಇದನ್ನು ಶುಚಿ ಮಾಡದಿದ್ದರೆ ವಾಶಿಂಗ್ ಮೆಷಿನ್ ಬೇಗನೆ ಹಾಳಾಗುವುದು.

ಹಾಗಂತ ವಾಶಿಂಗ್ ಮೆಷಿನ್ ಅನ್ನು ಹಾಕಿ ತಿಕ್ಕಬಾರದು. ಈ ಕೆಳಗಿನ ವಿಧಾನಗಳಿಂದ ವಾಷಿಂಗ್ ಮೆಷಿನ್ ಸ್ವಚ್ಛ ಮಾಡಿದರೆ ವಾಷಿಂಗ್ ಮೆಷಿನ್ ತುಂಬಾ ಕಾಲ ಬಾಳಿಕೆ ಬರುತ್ತದೆ.

Tips To Clean A Washing Machine

* ಬಟ್ಟೆ ಒಗೆದ ನಂತರ ನೀರು ಹಾಕಿ ಮೆಷಿನ್ ಅನ್ನು ತೊಳೆಯಿರಿ. ನಂತರ ಅದರ ಕ್ಯಾಪ್ ಅನ್ನು ಓಪನ್ ಆಗಿಟ್ಟರೆ ಮೆಷಿನ್ ಬೇಗನೆ ಒಣಗುತ್ತದೆ. ನಂತರ ಬಟ್ಟೆಯಿಂದ ಒರೆಸಿ.

* ವಾಷಿಂಗ್ ಮೆಷಿನಲ್ಲಿರುವ ಕಲೆಯನ್ನು ತೆಗೆಯಲು ವಿನಿಗರ್ ಹಾಕಿ 5-10 ನಿಮಿಷ ಬಿಟ್ಟು ನಂತರ ಉಜ್ಜಿ ತಣ್ಣೀರಿನಿಂದ ತೊಳೆಯಿರಿ.

* ಬಟ್ಟೆ ಒಗೆದ ನಂತರ ಬರೀ ನೀರು ಹಾಕಿ ಒಂದು ರೌಂಡ್ ತಿರುಗಿಸಿ ಒಣಗಿಸಿ. ಇದರಿಂದ ಅದರೊಳಗೆ ಕೊಳೆ ನಿಲ್ಲುವುದಿಲ್ಲ. ಮೆಷಿನ್ ಟಬ್ ನಲ್ಲಿ ದಾರ ಸಿಕ್ಕಿ ಹಾಕಿಕೊಂಡಿದ್ದರೆ ಅದನ್ನು ತೆಗೆಯಿರಿ.

* ವಾಷಿಂಗ್ ಮೆಷಿನ್ ನ ಲಿಡ್ ಅಥವಾ ಕ್ಯಾಪ್ ಅನ್ನು ಶುಚಿ ಮಾಡಲು ತುಂಡು ಬಟ್ಟೆಗೆ ಸ್ವಲ್ಪ ವಿನಿಗರ್ ಹಾಕಿ ಉಜ್ಜಿದರೆ ಸಾಕು.

* ಇದನ್ನು ನಿಂಬೆ ಹಣ್ಣಿನ ತುಂಡಿಗೆ ಉಪ್ಪು ಹಾಕಿ ಉಜ್ಜಿ ಕೂಡ ಸ್ವಚ್ಛ ಮಾಡಬಹುದು.

ಈ ರೀತಿ ಮಾಡಿದರೆ ಮೆಷಿನ್ ಸ್ವಚ್ಛವಾಗಿರುತ್ತದೆ, ಕೆಟ್ಟ ವಾಸನೆ ಬೀರುವುದಿಲ್ಲ, ಅಧಿಕ ಕಾಲ ಬಾಳಿಕೆ ಬರುತ್ತದೆ.

English summary

Tips To Clean A Washing Machine | Tips For Home Improvements | ವಾಷಿಂಗ್ ಮೆಷಿನ್ ತೊಳೆಯಲು ಟಿಪ್ಸ್ | ಮನೆ ನಿರ್ವಹಣೆಗೆ ಕೆಲ ಸಲಹೆಗಳು

Scrubbing the tub of the washing machine is not effective most of the times. So, to get rid of stubborn water, salt, iodine and strong detergent stains, here are a few cleaning tips for you.
X
Desktop Bottom Promotion