For Quick Alerts
ALLOW NOTIFICATIONS  
For Daily Alerts

ಮನೆಗೆ ಮಾರ್ಬಲ್ ಕಲ್ಲು ಬಳಸುತ್ತಿದ್ದೀರಾ?

By Super
|

ಮನೆಯ ಒಳಾಂಗಣಕ್ಕೆ ಸಂಗಮರಿ ಕಲ್ಲಿನ ಬಳಕೆ ಮನೆಗೆ ಹೊಸ ಮೆರುಗನ್ನು ನೀಡುತ್ತದೆ. ನಿಮ್ಮ ಮನೆಯ ಒಳಹಾಸಿಗೆ ಮತ್ತು ಕೋಣೆಯ ರೂಮುಗಳಿಗೆ ದುಬಾರಿ ಬೆಲೆಯ ಸಂಗಮರಿ ಕಲ್ಲುಗಳನ್ನು ಬಳಸಿದ್ದರೆ ಅವುಗಳ ಬಗ್ಗೆ ಒಂದಷ್ಟು ಕಾಳಜಿ ಅತ್ಯಗತ್ಯ.

ಮಾರ್ಬಲ್ ಬಳಕೆಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಇಲ್ಲಿವೆ:

Take care of your marble flooring

* ಆ್ಯಸಿಡ್ ಅಂಶವುಳ್ಳ ದ್ರವ ಅಥವಾ ಆಹಾರ ಪದಾರ್ಥಗಳು ಸಂಗಮರಿ ಕಲ್ಲಿನ ನೆಲದ ಮೇಲೆ ಬಿದ್ದರೆ ಕಲೆ ಉಳಿಯುತ್ತದೆ ಅಥವಾ ಹೊಳಪು ಮಾಸಿಹೋಗುತ್ತದೆ. ಮಾಸಿಹೋದ ಕಲೆ ನಾಣ್ಯದ ಗಾತ್ರದಷ್ಟೇ ಇರಬಹುದು ಅಥವಾ ಉಳಿದ ಟೈಲ್ಸ್ ಗಳಿಗೂ ಹರಡಬಹುದು. ಹೀಗಾಗಿ, ಯಾವುದೇ ದ್ರವ ಪದಾರ್ಥಗಳಿರಲಿ, ಹಣ್ಣಿನ ರಸಗಳು, ಕಾರ್ಬೋನೇಟ್ ಪಾನೀಯಗಳು, ವೈನ್ ಅಥವಾ ಚಹ ಚೆಲ್ಲಿದರೂ ಕೂಡ ಸ್ವಚ್ಚವಾದ ಬಟ್ಟೆಯನ್ನು ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಕೆಲವು ಹನಿ ಅಮೋನಿಯಾ ಸೇರಿಸಿದ ಬಟ್ಟೆಯಿಂದ ಉಜ್ಜಿ ತೆಗೆಯಿರಿ.

* ಗುರುತು ಅಥವಾ ಕಲೆ ಉಳಿದುಹೋಗುವ ಮತ್ತೊಂದು ರೀತಿಯೆಂದರೆ ಆ್ಯಸಿಡ್ ಹೊಂದಿರುವ ಸೋಪಿನ ಪುಡಿಗಳ ಬಳಕೆ. ಸಂಗಮರಿ ನೆಲಹಾಸನ್ನು ಸ್ವಚ್ಚಗೊಳಿಸಲು ವಿನೆಗರ್ ಅಥವಾ ಇನ್ನುಳಿದ ಆ್ಯಸಿಡಿಕ್ ಉತ್ಪನ್ನಗಳನ್ನು ಎಂದಿಗೂ ಬಳಸಬೇಡಿ. ಮಾರ್ಬಲ್ ಗಳು ಸೂಕ್ಮ್ಮವಾಗಿದ್ದು ಸಹಜ ಪಿಎಚ್ ಯುಕ್ತ ದ್ರವಗಳಿಂದಲೇ ಸ್ವಚ್ಚಗೊಳಿಸಬೇಕು. ಸ್ಥಳೀಯವಾಗಿ ಸಿಗುವ ಕಳಪೆ ಗುಣಮಟ್ಟದ ಕ್ಲೀನರ್ ಗಳನ್ನು ಬಳಸಿದರೆ ಶಾಶತ್ವತವಾಗಿ ಹೊಳಪು ಮಾಯವಾಗುತ್ತದೆ.

* ಸಂಗಮವರಿ ಕಲ್ಲಿನಲ್ಲಿ ಅತಿ ಸೂಕ್ಷ್ಮ ರಂದ್ರಗಳಿರುತ್ತವೆ. ಆಹಾರ ಪದಾರ್ಥಗಳಿಂದ, ಪಾಟ್ ಗಳಿಂದ, ಕಬ್ಬಿಣದ ಪೀಠೋಪಕರಣಗಳ ಕಾಲುಗಳಿಂದ, ಎಣ್ಣೆ, ಶಾಯಿ ಇತ್ಯಾದಿಗಳಿಂದ ಸುಲಭವಾಗಿ ಹಾನಿಗೊಳ್ಳುತ್ತವೆ. ಅಡುಗೆ ಎಣ್ಣೆ ಅಥವಾ ಇನ್ಯಾವುದೇ ತರದ ಎಣ್ಣೆಯಂಶವುಳ್ಳ ಪದಾರ್ಥಗಳು ಕಲೆ ಉಳಿಸುತ್ತವೆ. ಹೀಗಾಗಿ, ತಕ್ಷಣ ನೆಲವನ್ನು ಸ್ವಚ್ಚಗೊಳಿಸಬೇಕು.

* ನಿರಂತರವಾಗಿ ನೆಲವನ್ನು ಸ್ವಚ್ಚಗೊಳಿಸುತ್ತ ಧೂಳು ತೊಳೆಯುತ್ತಿದ್ದರೆ ಅದರ ಸಹಜ ಹೊಳಪನ್ನು ಹಾಗಯೇ ಉಳಿಸಿಕೊಳ್ಳಬಹುದು. ಮ್ರದುವಾದ ಬಟ್ಟೆಯಿಂದ ಧೂಳನ್ನು ಒರೆಸಬೇಕು. ಬಿಸಿಯಾದ ನೀರು ಬಳಸುವ ಬದಲು ಉಗುರು ಬೆಚ್ಚಗಿನ ನೀರು ಬಳಸಿ. ಗಟ್ಟಿಯಾದ ಪದಾರ್ಥ ಬೀಳದ ಹೊರತು ಗಟ್ಟಿಯಾಗಿ ಉಜ್ಜಬೇಕಾದ ಅವಶ್ಯಕತೆಯಿಲ್ಲ.

English summary

Take care of your marble flooring

you need to take special care to maintain the beauty of this stone. These are some precautions you need to take when working with marble.
Story first published: Tuesday, July 30, 2013, 17:16 [IST]
X
Desktop Bottom Promotion