For Quick Alerts
ALLOW NOTIFICATIONS  
For Daily Alerts

ಶೌಚಾಲಯವನ್ನು ಹೀಗೆ ಶುಚಿಯಾಗಿಟ್ಟುಕೊಳ್ಳಿ

By Deepak M
|

ಭೂಮಿಯ ಮೇಲೆ ಯಾವುದಾದರೂ ಸ್ವರ್ಗಕ್ಕೆ ಸಮಾನಾದಂತಹ ಒಂದು ಸ್ಥಳವಿದೆಯೆಂದರೆ ಅದು ಶೌಚಾಲಯ ಮಾತ್ರ. ಅದರಲ್ಲು ಮನೆಯಲ್ಲಿ ಒಂದು ದಿವ್ಯ ಏಕಾಂತ ಮಲಗುವ ಕೋಣೆಯಲ್ಲಿ ದೊರೆಯುತ್ತದೆಯೋ, ಇಲ್ಲವೋ, ಶೌಚಾಲಯದಲ್ಲಿ ಪ್ರತಿಯೊಬ್ಬರಿಗೂ ದೊರೆಯುತ್ತದೆ. ಇದು ಸೃಜನಶೀಲತೆಯನ್ನು ಚಿಮ್ಮಿಸುವ ಸ್ಥಳವು ಸಹ ಹೌದು. ಹಾಗಾಗಿ ಇದಕ್ಕೆ ಎಲ್ಲಾ ಕಡೆ ಭಾರೀ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಶೌಚಾಲಯಗಳು ಪ್ರತಿ ಮನೆಯ ಕನ್ನಡಿಯಿದ್ದಂತೆ. ಇದನ್ನು ನೋಡಿದರೆ ತಿಳಿಯುತ್ತದೆ ಆ ಮನೆ ಒಟ್ಟಾರೆಯಾಗಿ ಹೇಗಿರುತ್ತದೆಯೆಂದು. ಹಾಗಾಗಿ ಇದನ್ನು ಸುವ್ಯವಸ್ಥಿತವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ.ಇಲ್ಲವಾದಲ್ಲಿ ನಮ್ಮ ಮನೆಯ ಮಾನ ಮರ್ಯಾದೆ ಇದರಿಂದಲೆ ಹಾಳಾಗುತ್ತದೆ.

ಶೌಚಾಲಯವನ್ನು ಸ್ವಚ್ಚಗೊಳಿಸುವುದು ಮತ್ತು ಸುವ್ಯಸ್ಥಿತವಾಗಿಟ್ಟುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಈ ಸಣ್ಣ ಜಾಗದಲ್ಲಿ ಹಲವಾರು ವಸ್ತುಗಳನ್ನು ಅಡಗಿಸಿಡಲಾಗುತ್ತದೆ. ಹೀಗಾಗಿಯೇ ಇದನ್ನು ಸುವ್ಯವಸ್ಥಿತವಾಗಿಡಲು ಸಮಸ್ಯೆಯಾಗುವುದು. ಬಾತ್‍ರೂಮಿನಲ್ಲಿ ಸೋಪ್, ಶಾಂಪೂ ಮುಂತಾದವುಗಳು ನೆಲವನ್ನು ಜಾರುವಂತೆ ಮಾಡಿ ಬಿಡುತ್ತವೆ. ಇದರ ಜೊತೆಗೆ ನೆಲದ ಮೇಲೆ ಕೊಳೆ ತುಂಬಿಕೊಂಡಿರುತ್ತದೆ ಮತ್ತು ಬಟ್ಟೆಯನ್ನು ತೊಳೆದ ನೀರಿನಿಂದ ಒಂದು ರೀತಿಯ ಗಬ್ಬು ವಾಸನೆಯೆಲ್ಲವೂ ಸೇರಿ ಬಾತ್‍ರೂಮನ್ನು ಅವ್ಯವಸ್ಥೆಗಳ ಆಗರವನ್ನಾಗಿಸುತ್ತದೆ.

Steps To Organize Your Bathroom

ಹಾಗಾಗಿ ಬಾತ್‍ರೂಮನ್ನು ಸುವ್ಯವಸ್ಥಿತವಾಗಿಟ್ಟುಕೊಳ್ಳಲು ಕೆಲವೊಂದು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ, ಓದಿ ನೋಡಿ ನಿಮಗೆ ಸಹಾಯವಾಗಬಹುದು.

ಹಂತ 1 - ನಿಮ್ಮ ಶೌಚಾಲಯವನ್ನು ಸುವ್ಯವಸ್ಥಿತವಾಗಿಡಲು ಮೊದಲು ಮಾಡಬೇಕಾದ ಕೆಲಸ, ನಿಮ್ಮ ಶೌಚಾಲಯದಲ್ಲಿರುವ ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಬೇಕು. ಅದರಲ್ಲಿ ಶಾಂಪೂ, ಸೋಪ್, ಬಾಡಿ ವಾಶ್ ಮತ್ತು ಇನ್ನಿತರ ವಸ್ತುಗಳು. ಒಂದು ವೇಳೆ ನಿಮ್ಮ ಮನೆಯ ಬಾತ್‍ರೂಮಿನಲ್ಲಿ ಕಪ್‍ಬೋರ್ಡ್ ಇಲ್ಲವಾದಲ್ಲಿ ಮೊದಲು ಖರೀದಿಸಲು ಮನಸ್ಸು ಮಾಡಿ. ಅದರಲ್ಲಿ ನಿಮ್ಮ ದೈನಂದಿನ ಉಪಯೋಗಕ್ಕೆ ಬೇಕಾಗುವ ವಸ್ತುಗಳನ್ನು ಜೋಡಿಸಿಕೊಳ್ಳಿ. ಇದರಿಂದ ನಿಮಗೆ ಮುಂದೆ ಉಪಯೋಗವಾಗುತ್ತದೆ.

ಹಂತ 2 - ನಿಮಗೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಡಿ. ನಿಮ್ಮ ಬಟ್ಟೆಗಳನ್ನೆಲ್ಲ ಒಂದು ಕಡೆ ಇಟ್ಟುಕೊಳ್ಳಲು ಒಂದು ಬಕೆಟ್ ಅಥವಾ ಟಬ್ ಅನ್ನು ಇಡಿ. ನಿಮ್ಮ ಬಟ್ಟೆಗಳನ್ನು ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಹಾಕಿ ಬೇಡಿ. ಒಗೆಯದ ಅಥವಾ ಒದ್ದೆಯಾದ ಬಟ್ಟೆಗಳನ್ನು ಶೌಚಾಲಯದಲ್ಲಿ ತುಂಬಾ ದಿನ ಇಟ್ಟುಕೊಳ್ಳಬೇಡಿ. ಏಕೆಂದರೆ ಇವುಗಳು ದುರ್ವಾಸನೆಗೆ ಎಡೆ ಮಾಡಿಕೊಡುತ್ತವೆ.

ಹಂತ 3 - ನಿಮ್ಮ ಮನೆಯ ಶೌಚಾಲಯಕ್ಕೆ ಬಿಳಿಯ ಟೈಲ್ಸ್ ಹಾಕಿದ್ದರೆ, ನಿಮ್ಮ ಶೌಚಾಲಯವನ್ನು ಅಚ್ಚುಕಟ್ಟುಗೊಳಿಸಿದ ನಂತರ ಒಂದು ಫ್ಲೋರ್ ಕ್ಲೀನರ್ ಬಳಸಿ ತೊಳೆಯಿರಿ ಮತ್ತು ಪ್ರತಿನಿತ್ಯ ತೊಳೆಯುತ್ತಲೆ ಇರಿ. ಪ್ರತಿದಿನ ಶೌಚಾಲಯದ ನೆಲವನ್ನು ನೀರಿನಿಂದ ತೊಳೆಯಿರಿ. ಇದರಿಂದಾಗಿ ನಿಮ್ಮ ಶೌಚಾಲಯದ ನೆಲವು ಜಾರುವುದಿಲ್ಲ. ಇದನ್ನು ತಪ್ಪದೆ ಮಾಡಿ, ನಿಮ್ಮ ಶೌಚಾಲಯದಲ್ಲಿ ಅವಘಡಗಳಾಗುವುದು ತಪ್ಪುತ್ತದೆ.

ಹಂತ 4 - ಬಕೆಟ್, ಮಗ್, ಬಾತ್ ರೂಮ್ ಚೇರ್ ಮತ್ತು ಇತರ ವಸ್ತುಗಳನ್ನು ಒಂದು ಕಡೆ ಇಟ್ಟುಕೊಳ್ಳಿ. ಇವೆಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿಕೊಳ್ಳಲಿಲ್ಲವಾದಲ್ಲಿ ನಿಮ್ಮ ಶೌಚಾಲಯವು ಇಕ್ಕಟ್ಟಾಗಿ ಕಾಣಿಸುತ್ತದೆ. ಹಾಗಾಗಿ ನಿಮ್ಮ ಶೌಚಾಲಯವು ಸ್ವಲ್ಪ ವಿಶಾಲವಾಗಿ ಕಾಣಿಸಲು ಅಲ್ಲಿರುವ ವಸ್ತುಗಳನ್ನು ಜೋಡಿಸಿಡಿ, ಇದರಿಂದ ನಿಮಗೆ ಮತ್ತಷ್ಟು ಸ್ಥಳಾವಕಾಶ ದೊರೆಯುತ್ತದೆ.

ಹಂತ 5 - ಯಾವಾಗಲೂ ನಿಮ್ಮ ಶೌಚಾಲಯಕ್ಕೆ ಫ್ರೆಶ್‍ನರ್ ಮತ್ತು ಸ್ಪ್ರೇಗಳನ್ನು ಸಿಂಪಡಿಸಿ. ಇದರಿಂದಾಗಿ ನಿಮ್ಮ ಶೌಚಾಲಯವು ಘಮ ಘಮ ಎಂಬ ಸುವಾಸನೆಯನ್ನು ಬೀರುತ್ತಿರುತ್ತದೆ. ಒಂದು ವೇಳೆ ನಿಮ್ಮ ಶೌಚಾಲಯವು ಏನಾದರು ಗಬ್ಬು ನಾರುತ್ತಿದ್ದರೆ ಸಾಕು ಅಲ್ಲಿ ನೀವು ಹೋಗಿ ಕೂರುವುದಾದರು ಹೇಗೆ? ಅದಕ್ಕಾಗಿ ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನಿಮಗೆ ಇಷ್ಟವಾದಲ್ಲಿ ಹೂವಿನ ಪರಿಮಳವನ್ನು ಹೊಂದಿರುವ ಸ್ಪ್ರೇಗಳನ್ನು ಬಳಸಬಹುದು.

ಇಲ್ಲಿ ನೀಡಲಾಗಿರುವ ಕೆಲವು ಸಲಹೆಗಳನ್ನು ಪ್ರತಿನಿತ್ಯ ಪಾಲಿಸಿ, ನಿಮ್ಮ ಶೌಚಾಲಯವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ. ಮನೆಗೆ ಬಂದ ಪ್ರತಿಯೊಬ್ಬರು ಒಂದಲ್ಲ ಒಂದು ಬಾರಿ ನಿಮ್ಮ ಮನೆಯ ಶೌಚಾಲಯವನ್ನು ನೋಡೇ ತೀರುತ್ತಾರೆ. ಅದಕ್ಕಾಗಿ ಯಾವಾಗಲು ನಿಮ್ಮ ಶೌಚಾಲಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಿ.

English summary

Steps To Organize Your Bathroom

Bathrooms could be termed as the mirror of one's house. However clean and organised you keep your house, it is if no use if the bathroom is messed up and dirty.Bathrooms are like the cleanliness indicators of one's house. So you should make it a point to keep your bath up to date.
Story first published: Monday, November 25, 2013, 12:47 [IST]
X
Desktop Bottom Promotion