For Quick Alerts
ALLOW NOTIFICATIONS  
For Daily Alerts

ಲಂಚ್ ಬಾಕ್ಸ್ ನಿಂದ ಜಿಡ್ಡಿನಂಶ ಹೋಗಲಾಡಿಸಲು ಟಿಪ್ಸ್

|

ಈಗೆಲ್ಲಾ ಟಪ್ಪರ್ ವೇರ್ ಕಾಲ. ಲಂಚ್ ಬಾಕ್ಸ್ ಗೆ ಟಪ್ಪರ್ ವೇರ್ ಬೆಸ್ಟ್ ಎಂದು ಅದರ ಬಳಕೆ ಹೆಚ್ಚಾಗಿದೆ, ಸ್ಟೀಲ್ ಲಂಚ್ ಬಾಕ್ಸ್ ಮೂಲೆ ಸೇರುತ್ತದೆ. ಟಪ್ಪರ್ ವೇರ್ ನಲ್ಲಿ ಸಾರು ಚೆಲ್ಲಿ ಹೋಗಬಹುದೆಂಬ ಭಯವಿಲ್ಲ, ಆಫೀಸ್ ನಲ್ಲಿ ಮೈಕ್ರೋವೇವ್ ಇದ್ದರೆ ಬಿಸಿ ಮಾಡಿ ಮಧ್ಯಾಹ್ನ ಬಿಸಿ-ಬಿಸಿ ಆಹಾರ ತಿನ್ನಬಹುದು.

ಆದರೆ ಇದರಲ್ಲಿರುವ ಚಿಕ್ಕ ಸಮಸ್ಯೆಯೆಂದರೆ ಇದರಲ್ಲಿರುವ ಎಣ್ಣೆ ವಾಸನೆ ಹೋಗಲಾಡಿಸಲು ಕಷ್ಟ. ಬರೀ ಲಂಚ್ ಬಾಕ್ಸ್ ನಲ್ಲಿ ಮಾತ್ರವಲ್ಲ, ಮನೆಯಲ್ಲಿ ಬಳಸುವ ಪ್ಲಾಸ್ಟಿಕ್ ಡಬ್ಬಗಳಲ್ಲಿರುವ ಜಿಡ್ಡಿನ ವಾಸನೆ ಹೋಗಲಾಡಿಸಲು ಇಲ್ಲಿ ಕೆಲ ಸರಳವಾದ ಉಪಾಯಗಳನ್ನು ನೀಡಿದ್ದೇವೆ ನೋಡಿ:

 Remove Oil Smell From Lunch Box

ಕ್ಯೂರಿಂಗ್
ಪ್ಲಾಸ್ಟಿಕ್ ಡಬ್ಬಗಳನ್ನು ತೊಳೆದು ಬಿಸಿಲಿನಲ್ಲಿ ಇಡಿ, ಸಂಜೆ ಒಳಗೆ ತನ್ನಿ, ಈ ರೀತಿ ಮಾಡಿದರೆ ಅದರ ಜಿಡ್ಡು ವಾಸನೆವಾಗುವುದು.

ಏರ್ ಡ್ರೈ
ಮತ್ತೊಂದು ವಿಧಾನವೆಂದರೆ ತೊಳೆದು ಹಾಗೇ ಮಗುಚಿ ಇಡಿ. ಈ ರೀತಿ ಪಾತ್ರೆಯನ್ನು ಒಣಗಿಸಿದರೆ ಜಿಡ್ಡಿನವಾಸನೆ ಇರುವುದಿಲ್ಲ.

ನ್ಯೂಸ್ ಪೇಪರ್
ಆದರೂ ಜಿಡ್ಡಿನ ವಾಸನೆ ಹೋಗದಿದ್ದರೆ ಪ್ಲಾಸ್ಟಿಕ್ ಡಬ್ಬವನ್ನು ತೊಳೆದು ಅದನ್ನು ಒರೆಸಿ, ನಂತರ ಅದರಲ್ಲಿ ಪೇಪರ್ ಚೂರು ತುಂಬಿ ಬಾಯಿ ಮುಚ್ಚಿ ಇಡಿ, ಎರಡು ದಿನದ ಬಳಿಕ ಪೇಪರ್ ಚೂರು ಬಿಸಾಡಿ. ಈ ರೀತಿ ಮಾಡಿದರೆ ಜಿಡ್ಡಿನ ವಾಸನೆ ಸಂಪೂರ್ಣವಾಗಿ ಹೋಗುವುದು.

ಬ್ಲೀಚಿಂಗ್
ಸ್ವಲ್ಪ ಬ್ಲೀಚ್ ಅನ್ನು ಬಿಸಿ ನೀರಿಗೆ ಹಾಕಿ ಆ ನೀರನ್ನು ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟು ತೊಳೆದರೆ ಜಿಡ್ಡಿನ ವಾಸನೆ ಹೋಗುವುದು.

ವಿನೆಗರ್
ಬಿಸಿ ನೀರಿಗೆ ವಿನೆಗರ್ ಹಾಕಿ ಆ ನೀರನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತು ಬಿಟ್ಟ ಬಳಿಕ ಆ ಡಬ್ಬ ತೊಳೆದರೆ ಸಾಕು ಜಿಡ್ಡಿನ ಅಂಶ ಸಂಪೂರ್ಣ ಹೋಗುವುದು.
ನಿಮಗೆ ಯಾವ ಸಲಹೆ ಸೂಕ್ತ ಅನಿಸುತ್ತದೆಯೋ ಆ ಟಿಪ್ಸ್ ಪಾಲಿಸಿ, ಜಿಡ್ಡಿನ ವಾಸನೆಯನ್ನು ಸುಲಭವಾಗಿ ಹೋಗಲಾಡಿಸಿ.

English summary

Remove Oil Smell From Lunch Box

The reason behind the smell is the use of plastic containers. Plastics have a nasty habit of absorbing smells from things that are around it. Amongst them, vegetable oil smell is one of the most annoying and problematic smell to get rid of.
X
Desktop Bottom Promotion