For Quick Alerts
ALLOW NOTIFICATIONS  
For Daily Alerts

ರಾಸಾಯನಿಗಳಿಲ್ಲದ ನೈಸರ್ಗಿಕ ರೂಂ ಫ್ರೆಶ್ ನರ್

|
Natural Air Fresheners
ಮನೆಯಲ್ಲಿ ಏರ್ ಫ್ರೆಶ್ನರ್ ಬಳಸುವುದು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ರಾಸಾಯನಿಕಗಳಿರುವುದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಸ್ತಮಾ ಕಾಯಿಲೆ ಇರುವವರು ಈ ಏರ್ ಫ್ರೆಶ್ ನರ್ ಗಾಳಿಯನ್ನು ಸೇವಿಸಿದರೆ ಉಸಿರಾಟದ ಕಾಯಿಲೆ ಹೆಚ್ಚಾಗುತ್ತದೆ. ಕೆಲವರಿಗೆ ಏರ್ ಫ್ರೆಶ್ ನರ್ ವಾಸನೆ ಕೇಳಿದರೆ ತಲೆ ನೋವು ಉಂಟಾಗುವುದು.

ರಾಸಾಯನಿಕಗಳಿಂದ ಮನೆಯನ್ನು ಸುವಾಸನೆವಾಗಿಡುವ ಬದಲು ನೈಸರ್ಗಿಕವಾದ ವಸ್ತುಗಳನ್ನು ಬಳಸಿ. ಇದರಿಂದ ಆರೋಗ್ಯಕ್ಕೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ, ಮನೆಯೂ ಸುಗಂಧವಾಸನೆಯಿಂದ ಕೂಡಿರುತ್ತದೆ.

ರಾಸಾಯನಿಕ ಬಳಸದೆ ಮನೆಯಲ್ಲಿ ಸುಗಂಧವಾಸನೆ ಹರಡಲು ಟಿಪ್ಸ್ ನೋಡಿ ಇಲ್ಲಿದೆ:

ಸುಗಂಧವಾಸನೆಯ ಎಣ್ಣೆ
ನಿಮಗೆ ಇಷ್ಟವಾಗುವ ಸುಗಂಧ ಎಣ್ಣೆಯನ್ನು ಏರ್ ಫ್ರೆಶ್ ನರ್ ನಂತೆ ಬಳಸಿ. 2-3 ಚಮಚ ಸುಗಂಧ ಎಣ್ಣೆಗೆ ಅರ್ಧ ಕಪ್ ವಿನಿಗರ್ , 2 ಕಪ್ ನೀರು ತೆಗೆದು ಹಾಕಿ ಒಂದು ಡಬ್ಬದಲ್ಲಿ ಹಾಕಿ ಮಿಶ್ರ ಮಾಡಿ ಸ್ಪ್ರೇ ಮಾಡಿ .

ಹೂ
ಸುಗಂಧ ವಾಸನೆಯ ಹೂವನ್ನು ತಂದು ಹೂ ಗುಚ್ಛದಲ್ಲಿ ಹಾಕಿಟ್ಟರೆ ಸುವಾಸನೆಯನ್ನೂ ಬೀರುತ್ತದೆ, ಮನೆ ಅಲಂಕರಿಸಿದಂತೆ ಇರುತ್ತದೆ.

ಸಂಬಾರ
ಚಕ್ಕೆ, ಲವಂಗ, ಏಲಕ್ಕಿ ಇವನ್ನು ನೀರಿನಲ್ಲಿ ಹಾಕಿ ಕುದಿಸಿ. ಆ ನೀರು ತಣ್ಣಗಾದ ಮೇಲೆ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಸ್ಪ್ರೇ ಮಾಡಿದರೆ ಮನೆ ಸುವಾಸನೆಯಿಂದ ಕೂಡಿರುತ್ತದೆ.

ಮೇಣ
ಸುವಾಸನೆ ಇರುವ ಮೇಣದ ಬತ್ತಿ ದೊರೆಯುತ್ತದೆ ಅದನ್ನು ಹಚ್ಚಿಟ್ಟರೆ ಮನೆ ತುಂಬಾ ಸುಗಂಧ ವಾಸನೆ ಹರಡುವುದು.

ನೈಸರ್ಗಿಕವಾದ ರೂಂ ಫ್ರೆಶ್ ನರ್ ಬಳಸಿದರೆ ಹಾನಿಕಾರಕ ರಾಸಾಯನಿಕಗಳಿಂದ ಮುಕ್ತಿ ಮಾತ್ರವಲ್ಲ ನಿಮ್ಮ ಹಣವೂ ಉಳಿತಾಯವಾಗುತ್ತದೆ.

English summary

Natural Air Fresheners | Tips For Home Improvements | ನೈಸರ್ಗಿಕವಾದ ಏರ್ ಫ್ರೆಶ್ ನರ್ | ಮನೆ ಅಭಿವೃದ್ಧಿಗೆ ಕೆಲ ಸಲಹೆಗಳು

We all want a home that smells sweet all the time. So why fill our air with harmful chemicals. We have here some very outstanding natural air freshener for you all
X
Desktop Bottom Promotion