For Quick Alerts
ALLOW NOTIFICATIONS  
For Daily Alerts

ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ!

|

ಮನೆಯಲ್ಲಿ ಲೋಳೆಸರದ ಗಿಡ ಇದ್ದರೆ ಒಳ್ಳೆಯದು ಎಂದು ಬಾಗಿಲಿನಲ್ಲಿ ಕೆಲವರು ಆ ಗಿಡವನ್ನು ನೇತು ಹಾಕುವುದನ್ನು ನೋಡಿರಬಹುದು. ಇನ್ನು ಕೆಲವರು ಕೆಲವೊಂದು ಗಿಡಗಳನ್ನು ಅದೃಷ್ಟ ತರುವ ಗಿಡಗಳೆಂದು ಮನೆಯೊಳಗೆ ಇಡುತ್ತಾರೆ. ಈ ಗಿಡಗಳು ಅದೃಷ್ಟವನ್ನು ತರುತ್ತದೆ, ದುಷ್ಟ ಶಕ್ತಿಯನ್ನು ತಡೆಯುತ್ತದೆ ಎಂದು ನಂಬುವುದು ಅವರ ನಂಬಿಕೆಗೆ ಬಿಟ್ಟದ್ದು.

ಆದರೆ ಕೆಲವೊಂದು ಗಿಡಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯ ಶುದ್ಧತೆ ಹೆಚ್ಚುತ್ತದೆ ಅನ್ನುವುದು ಮಾತ್ರ ವೈಜ್ಞಾನಿಕವಾದ ಸತ್ಯ. ಉದಾಹರಣೆಗೆ ಗೋಲ್ಡನ್ ಪೋಥೋಸ್(golden pothes) ಗಿಡ ಮನೆಯಲ್ಲಿದ್ದರೆ ಅದು ಗಾಳಿಯಲ್ಲಿರುವ ರಾಸಾಯನಿಕಗಳಾದ ಫಾರ್ಮಲ್ ಡೀ ಹೈಡ್, ಬೆಂಜೀನ್ ಈ ರೀತಿಯ ವಿಷಕಾರಿ ಅಂಶಗಳನ್ನು ಹೋಗಲಾಡಿಸಿ, ಶುದ್ಧ ಗಾಳಿಯನ್ನು ನೀಡುವುದು.

ಮನೆಯ ಪರಿಶುದ್ಧತೆ ಹೆಚ್ಚಿಸಿ, ಶುದ್ಧ ಗಾಳಿ ತರುವಲ್ಲಿ ಈ ಕೆಳಗಿನ ಗಿಡಗಳು ತುಂಬಾ ಸಹಕಾರಿಯಾಗಿದೆ:

ಸ್ಪೈಡರ್ ಪ್ಲಾಂಟ್(spider palnt)

ಸ್ಪೈಡರ್ ಪ್ಲಾಂಟ್(spider palnt)

ಈ ಗಿಡ ಗಾಳಿಯಲ್ಲಿರುವ ವಿಷಕಾರಿ ಅಂಶವನ್ನು ಹೋಗಲಾಡಿಸಿ, ಮನೆಯೊಳಗೆ ಶುದ್ಧವಾದ ಗಾಳಿಯನ್ನು ಬಿಡುತ್ತದೆ. ಅದರಲ್ಲೂ ಈ ಗಿಡವನ್ನು ಅಡುಗೆ ಮನೆಯ ಸಮೀಪದಲ್ಲಿ ಇಟ್ಟರೆ ಕಾರ್ಬನ್ ಮಾನೋಕ್ಸೈಡ್ ಹೀರಿಕೊಂಡು ಶುದ್ಧವಾದ ಗಾಳಿಯನ್ನು ನೀಡುತ್ತದೆ.

ಫೆರ್ನ್ಸ್(ferns)

ಫೆರ್ನ್ಸ್(ferns)

ಈ ಗಿಡ ಕೂಡ ಮನೆಯೊಳಗೆ ಇದ್ದರೆ ಶುದ್ಧ ಗಾಳಿಯನ್ನು ಉಸಿರಾಡಲು ನಿಮಗೆ ನೆರವಾಗುತ್ತದೆ.

ಐವಿ(Ivy)

ಐವಿ(Ivy)

ಇದರ ಎಲೆ ವಿಷ ಪೂರಕವಾಗಿದ್ದರೂ ಈ ಎಲೆ ಗಾಳಿಯಿಂದ ಉಂಟಾಗುವ ಅಲರ್ಜಿಯನ್ನು ತಡೆಯುತ್ತದೆ. ಅಸ್ತಮಾ, ಅಲರ್ಜಿ ಸಮಸ್ಯೆ ಇರುವವರು ಈ ಗಿಡವನ್ನು ಮನೆಯ ಎದುರುಗಡೆ ನೆಡುವುದು ಒಳ್ಳೆಯದು.

ಅರೆಕಾ ಪಾಮ್(areca palm)

ಅರೆಕಾ ಪಾಮ್(areca palm)

ಇದು ತುಂಬಾ ಸೆನ್ಸಿಟಿವ್ ಆದ ಗಿಡವಾಗಿದ್ದು, ಮನೆಯಲ್ಲಿ ಶುದ್ಧ ಗಾಳಿ ತುಂಬುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು. ಇದನ್ನು ವರಾಂಡದಲ್ಲಿ, ಕಾರಿಡಾರ್ ಪಕ್ಕದಲ್ಲಿ ಇಟ್ಟರೆ ಗಾಳಿಯಲ್ಲಿರುವ ಬೇಡದ ರಾಸಾಯನಿಕಗಳನ್ನು ಹೋಗಲಾಡಿಸಿ ಶುದ್ಧವಾದ ಗಾಳಿಯನ್ನು ತುಂಬುತ್ತದೆ.

ಗೋಲ್ಡನ್ ಪಾಥೋಸ್(golden pothos)

ಗೋಲ್ಡನ್ ಪಾಥೋಸ್(golden pothos)

ಇದನ್ನು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಗಿಡವೆಂದು ಮನೆಯೊಳಗೆ ಇಡುತ್ತಾರೆ. ಹೌದು ಗಾಳಿಯಲ್ಲಿರುವ ದುಷ್ಟಶಕ್ತಿಗಳಾದ ಫಾರ್ಮಲ್ ಡೀಹೈಡ್, ಬೆಂಜೀನ್, xylene ಇವುಗಳ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ.

ಲೋಳೆಸರ

ಲೋಳೆಸರ

ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲ, ಹೊಟ್ಟೆ ನೋವು, ತುರಿಕೆ ಕಂಡು ಬಂದಾಗ ಸುಪರ್ ಮನೆ ಮದ್ದಾಗಿಯೂ ಕಾರ್ಯ ನಿರ್ವಹಿಸುತ್ತದೆ.

ಚೈನೀಸ್ ಎವರ್ಗ್ರೀನ್(chinese vergreen)

ಚೈನೀಸ್ ಎವರ್ಗ್ರೀನ್(chinese vergreen)

ಈ ಗಿಡ ಕೂಡ ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಏನೋ ಫೆಂಗ್ ಶುಯಿ ವಾಸ್ತು ಶಾಸ್ತ್ರದಲ್ಲಿ ಈ ಗಿಡಕ್ಕೂ ಮಹತ್ವವನ್ನು ನೀಡಲಾಗಿದೆ.

ಸ್ನೇಕ್ ಪ್ಲಾಂಟ್( snake plant)

ಸ್ನೇಕ್ ಪ್ಲಾಂಟ್( snake plant)

ನೋಡಲು ಆಕರ್ಷಕವಾಗಿರುವ, ಸುಲಭವಾಗಿ ಬೆಳಸಬಹುದಾದ ಈ ಗಿಡ ಕೂಡ ಮನೆಯೊಳಗೆ ಇದ್ದರೆ ಶುದ್ಧ ಗಾಳಿಯನನ್ನು ಸೇವಿಸಬಹುದು.

ಮಾರ್ಗ್ನೇಟ್(marginate)

ಮಾರ್ಗ್ನೇಟ್(marginate)

ಈ ಗಿಡ ಗಾಳಿಯಲ್ಲಿರುವ ಕಶ್ಮಲಗಳನ್ನು ಹೊರ ಹಾಕಿ, ನಮ್ಮ ಆರೊಗ್ಯಕ್ಕೆ ವೃದ್ಧಿಸುತ್ತದೆ. ಆದರೆ ನಾಯಿ ಇರುವವರು ಇದನ್ನು ಸಾಕದು ಒಳ್ಳೆಯದಲ್ಲ, ಏಕೆಂದರೆ ಈ ಗಿಡಗಳ ಗಾಳಿ ಸೋಕಿದರೆ ನಾಯಿಯ ಆರೋಗ್ಯ ಹಾಳಾಗುವುದು.

 ಪೀಸ್ ಲಿಲ್ಲಿ(peace lilly)

ಪೀಸ್ ಲಿಲ್ಲಿ(peace lilly)

ನೋಡಲು ಮನಮೋಹಕವಾಗಿರುವ ಈ ಗಿಡ ಕಲ್ಮಶವಾದ ಗಾಳಿಯನ್ನು ಶುದ್ಧೀಕರಿಸುತ್ತದೆ.

English summary

Indoor Plants Which Remove Impurities

If you are looking to purchase any of these indoor plants, make sure that they are safe around your pet. There are several indoor plants which can be poisonous to your pet, and cause health ailments to you too. So, be careful before picking up indoor plants. Lets take a look at some of the best indoor plants which can be used to absorb impurities in the air present in your home.
X
Desktop Bottom Promotion