For Quick Alerts
ALLOW NOTIFICATIONS  
For Daily Alerts

ಸೊಳ್ಳೆ ಕಡಿತಗಳಿಂದ ಪಾರಾಗಲು ಕೆಲ ಸಲಹೆಗಳು

By Super
|

ಸೊಳ್ಳೆ ಕಡಿದಾಗ ಕೆರೆಯುವುದನ್ನು ನಿಲ್ಲಿಸಿ. ಕೆರೆತದಿಂದ ನಿಮ್ಮ ತ್ವಚೆಗೆ ಹಾನಿ ಸಂಭವಿಸಬಹುದು. ಅದರಲ್ಲಿಯು ನಿಮ್ಮ ಬೆರಳು ಮತ್ತು ಉಗುರುಗಳು ಕೊಳೆಯಿಂದ ಕೂಡಿದ್ದರೆ, ನಂಜು ( ಇನ್‍ಫೆಕ್ಷನ್) ಉಂಟಾಗುವ ಸಾಧ್ಯತೆಯು ಸಹ ಇದೆ. ಕೆರೆಯುವುದರಿಂದ ನವೆ ಹೆಚ್ಚಾಗಿ ಮತ್ತಷ್ಟು ಕೆರೆಯಬೇಕೆಂಬ ಬಯಕೆ ಉಂಟಾಗುತ್ತದೆ. ಹೀಗೆ ಮಾಡುವುದರಿಂದ ಹೆಚ್ಚು ನೋವಾಗುತ್ತದೆ.

ಸೊಳ್ಳೆ ಕಡಿತಗಳು ನಮ್ಮ ಚರ್ಮದಲ್ಲಿ ತುರಿಕೆಯನ್ನುಂಟು ಮಾಡುತ್ತವೆ. ಅಲ್ಲದೆ ಇವು ಚರ್ಮದ ಮೇಲೆ ಗುಳ್ಳೆಗಳನ್ನು ಸಹ ಉಂಟು ಮಾಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಇದು ಚರ್ಮದಲ್ಲಿ ಧೀರ್ಘಾವಧಿಯ ಕಲೆಗಳನ್ನು ಸಹ ಉಂಟು ಮಾಡುತ್ತದೆ. ಈ ಸಮಸ್ಯೆಯು ಸೊಳ್ಳೆ ನಮ್ಮ ಕಣ್ಣಿಗೆ ಕಾಣುವ ದೇಹದ ಭಾಗಗಳಾದ ಕೈ, ಮುಖ ಮತ್ತು ಕಾಲಿನ ಭಾಗಗಳ ಮೇಲೆ ಕಚ್ಚಿದಾಗ ಹೆಚ್ಚು ಕಾಡುತ್ತದೆ. ಇದಕ್ಕಾಗಿ ಹೆದರಬೇಡಿ,ಇದಕ್ಕಾಗಿ ನಿಮ್ಮ ಮನೆಯಲ್ಲಿಯೇ ದೊರೆಯುವ ಕೆಲವೊಂದು ಸುಲಭವಾಗ ಪರಿಹಾರ ಕ್ರಮಗಳನ್ನು ಅನುಸರಿಸಿ ಇದರಿಂದ ಪಾರಾಗಿ.

ಸೊಳ್ಳೆ ಕಡಿತಗಳಿಂದ ಪಾರಾಗಲು ಕೆಲವು ಸಲಹೆಗಳು

1. ಮಂಜುಗಡ್ಡೆ

1. ಮಂಜುಗಡ್ಡೆ

ಮಂಜುಗಡ್ಡೆಯ ಥೆರಪಿಯು ನಿಮಗೆ ಸೊಳ್ಳೆ ಕಡಿತದಿಂದ ಉಂಟಾದ ತುರಿಕೆಗಳಿಂದ ವಿಮುಕ್ತಿ ಒದಗಿಸುತ್ತದೆ. ಒಂದು ಮಂಜುಗಡ್ಡೆಯನ್ನು ಪೇಪರ್ ಟವೆಲ್‍ನಲ್ಲಿ ಸುತ್ತಿ ಅದನ್ನು ಸೊಳ್ಳೆ ಕಚ್ಚಿದ ಜಾಗದಲ್ಲಿ ಇಡಿ. ಇದು ತುರಿಕೆ ಮತ್ತು ಗುಳ್ಳೆಗಳನ್ನು ಕಡಿಮೆ ಮಾಡುತ್ತದೆ.

2. ಸುಗಂಧಬರಿತ ಎಣ್ಣೆ

2. ಸುಗಂಧಬರಿತ ಎಣ್ಣೆ

ಟೀ ಮರದ ಎಣ್ಣೆಯು ನಂಜು ನಿವಾರಕಗುಣಗಳನ್ನು ಹೊಂದಿರುತ್ತದೆ. ಇದನ್ನು ಬಳಸುವುದರಿಂದ ತುರಿಕೆ, ಬೊಬ್ಬೆ ಮತ್ತು ನೋವನ್ನು ಶಮನಗೊಳಿಸಬಹುದು. ಈ ಎಣ್ಣೆಯು ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ಮೇಲೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಲ್ಯಾವೆಂಡರ್ ಎಣ್ಣೆಯು ಸಹ ಅತ್ಯಂತ ಉಪಯುಕ್ತವಾದ ಎಣ್ಣೆಯಾಗಿದೆ. ಇದು ಎಲ್ಲ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ. ಇದನ್ನು ಹಚ್ಚುವುದರಿಂದ ಬೊಬ್ಬೆ ಮತ್ತು ನೋವನ್ನು ನಿವಾರಿಸಿಕೊಳ್ಳಬಹುದು.

3. ವಿನೆಗರ್

3. ವಿನೆಗರ್

ವಿನೆಗರ್ ನಿಮ್ಮನ್ನು ತುರಿಕೆಯಿಂದ ರಕ್ಷಿಸುತ್ತದೆ. 2-3 ಕಪ್ ವಿನೇಗರನ್ನು ಬೆಚ್ಚಗಿನ ನೀರಿರುವ ಬಕೆಟಿಗೆ ಹಾಕಿ ಅಥವಾ ಹತ್ತಿಯ ಉಂಡೆ ಮಾಡಿಕೊಂಡು ಅದಕ್ಕೆ ವಿನೆಗರ್ ಹಾಕಿ, ನೋವು ಇರುವ ಜಾಗದಲ್ಲಿ ಹಚ್ಚಿ. ಇದಕ್ಕಾಗಿ ನೀವು ಅಪಲ್ ಸಿಡೆರ್ ವಿನೇಗರನ್ನು ಬಳಸಿದರೆ ಉತ್ತಮ.

4. ಜೇನು

4. ಜೇನು

ಈ ಸ್ವಾಭಾವಿಕವಾಗಿ ಸಿಹಿಯಾದ ತುಪ್ಪವು ತನ್ನ ಆರೋಗ್ಯಕಾರಿ ಉಪಯೋಗಗಳಿಗೆ ಹೆಸರುವಾಸಿಯಾಗಿದೆ. ಇದು ಬೊಬ್ಬೆ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದು ಸೊಳ್ಳೆ ಕಡಿತವನ್ನು ಸಹ ನಿಯಂತ್ರಿಸುತ್ತದೆ.

5. ಟೀ ಬ್ಯಾಗ್

5. ಟೀ ಬ್ಯಾಗ್

ಟೀ ಬ್ಯಾಗ್‍ಗಳು ಕಣ್ಣಿನ ಸುತ್ತ ಉಂಟಾಗುವ ಕಲೆಯನ್ನು ನಿವಾರಿಸುವ ಜೊತೆಗೆ ಸೊಳ್ಳೆ ಕಡಿತದಿಂದ ಉಂಟಾಗುವ ಬೊಬ್ಬೆಗಳನ್ನು ಸಹ ನಿವಾರಿಸುತ್ತದೆ. ಟೀನಲ್ಲಿರುವ ಟನ್ನಿನ್ಸ್ ಸೊಳ್ಳೆ ಕಡಿತದಿಂದ ಉಂಟಾಗುವ ಬೊಬ್ಬೆಗಳಲ್ಲಿ ಕೀವು ಕೂಡದಂತೆ ತಡೆಗಟ್ಟುತ್ತದೆ.

6.ಬೇಕಿಂಗ್ ಸೋಡಾ

6.ಬೇಕಿಂಗ್ ಸೋಡಾ

ಬೇಕಿಂಗ್‍ ಸೋಡಾವನ್ನು ಬಿಸಿನೀರಿನಲ್ಲಿ ಹಾಕಿ ಅರ್ಧ ಗಂಟೆ ಬಿಡಿ ಅಥವಾ ಬೇಕಿಂಗ್‍ಸೋಡಾವನ್ನು ಸ್ವಲ್ಪ ನೀರಿನಲ್ಲಿ ಹಾಕಿ, ಅದನ್ನು ಸೊಳ್ಳೆ ಕಡಿತದ ಭಾಗದಲ್ಲಿ ಹಚ್ಚಿ.

7. ತುಳಸಿ

7. ತುಳಸಿ

ಪ್ರಾಕೃತಿಕ ಸುವಾಸನೆಯನ್ನು ಹೊಂದಿರುವ ಈ ಎಲೆಗಳು ತನ್ನಲ್ಲಿ ಕರ್ಪೂರ ಮತ್ತು ಥೈಮೊಲ್‍ ಅನ್ನು ಹೊಂದಿವೆ. ಈ ಎರಡು ಅಂಶಗಳು ತುರಿಕೆಯನ್ನು ನಿವಾರಿಸುತ್ತದೆ. ನೀವು ಈ ಎಲೆಗಳನ್ನು ಸೊಳ್ಳೆ ಕಡಿದ ಜಾಗದಲ್ಲಿ ಉಜ್ಜಿ ಅಥವಾ ತುಳಸಿ ಎಣ್ಣೆ ಕೊಂಡು ಅದನ್ನು ಹಚ್ಚಿ.

8. ನಿಂಬೆ ಹಣ್ಣು ಮತ್ತು ನಿಂಬೆ ಹಣ್ಣಿನ ರಸ

8. ನಿಂಬೆ ಹಣ್ಣು ಮತ್ತು ನಿಂಬೆ ಹಣ್ಣಿನ ರಸ

ತಙ್ಞರ ಪ್ರಕಾರ ಈ ಹಣ್ಣು ತುರಿಕೆ, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿಗಳ ಮೇಲೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಇದರ ರಸ ಅಥವಾ ಹಣ್ಣಿನ ಸಿಪ್ಪೆ ಎರಡು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

9. ಪುದಿನಾ

9. ಪುದಿನಾ

ನಿಮಗೆ ಗೊತ್ತಿರಬಹುದು. ಟೂಥ್‍ಪೇಸ್ಟ್ ಗಳು ತುರಿಕೆಯನ್ನು ನಿವಾರಿಸುತ್ತದೆ. ಏಕೆಂದರೆ ಅದರಲ್ಲಿರುವ ಪುದಿನಾವು ಈ ಕೆಲಸವನ್ನು ಮಾಡುತ್ತದೆ ಎಂದು ಹೇಳುತ್ತಾರೆ. ನಿಮಗೆ ಟೂಥ್ ಪೇಸ್ಟ್ ಬಳಸಲು ಇಷ್ಟವಾಗಲಿಲ್ಲವಾದರೆ, ಪುದಿನಾದ ಎಲೆಗಳನ್ನು ಜಜ್ಜಿ ಅಥವಾ ಪುದಿನಾ ಎಣ್ಣೆಯನ್ನು ಬಳಸಿ.

10. ಲೋಳೆಸರ

10. ಲೋಳೆಸರ

ಲೋಳೆಸರವನ್ನು ಸಾಮಾನ್ಯವಾಗಿ ಸೂರ್ಯ ಕಿರಣಗಳಿಂದ ಉಂಟಾಗುವ ಗಾಯಗಳಿಗೆ ಬಳಸುತ್ತಾರೆ. ಆದರೆ ಇದು ಸಹ ಸೊಳ್ಳೆ ಕಡಿತಕ್ಕೆ ಉಪಯೋಗಕಾರಿಯಾಗಿದೆ. ಇದನ್ನು ಹಚ್ಚುವುದರಿಂದ ತುರಿಕೆ ಮತ್ತು ಬೊಬ್ಬೆಗಳು ನಿವಾರಣೆಗೊಂಡು, ಆ ಭಾಗ ತಣ್ಣಗೆ ಆಗುತ್ತದೆ.

11. ಜಿರಾನಿಯಂ ಎಣ್ಣೆ ಮತ್ತು ನೆರೊಲಿ ಎಣ್ಣೆಯ ಮಿಶ್ರಣ

11. ಜಿರಾನಿಯಂ ಎಣ್ಣೆ ಮತ್ತು ನೆರೊಲಿ ಎಣ್ಣೆಯ ಮಿಶ್ರಣ

ನೀವು ಬಳಸುವ ಫೇಸ್ ಕ್ರೀಮ್ ಜೊತೆಗೆ ಐದು ಹನಿ ಜಿರಾನಿಯಂ ಎಣ್ಣೆಯನ್ನು (geranium oil) ಮತ್ತು ಮೂರು ಹನಿ ನೆರೊಲಿ ಎಣ್ಣೆಯನ್ನು( neroli oil ) ಬೆರೆಸಿ ಮಿಶ್ರಣ ಮಾಡಿ. ಜಿರಾನಿಯಂ ಒಂದು ನಂಜುನಿವಾರಕ ಹಾಗಾಗಿ ಇದು ಬೊಬ್ಬೆಗಳನ್ನು ನಿಯಂತ್ರಿಸುತ್ತದೆ. ಉಳಿದ ಅಂಶಗಳ ಜೊತೆಗೆ ಜಿರಾನಿಯಂ ನಿಮ್ಮ ತ್ವಚೆಯ ಮೇಲೆ ಉಂಟಾಗುವ ಕಲೆಗಳು ಕಾಣದಂತೆ ತಡೆಗಟ್ಟುತ್ತದೆ. ಹಾಗಾಗಿ ಇದು ಸೊಳ್ಳೆ ಕಡಿತದಿಂದ ಉಂಟಾಗುವ ಬೊಬ್ಬೆ ಮತ್ತು ತುರಿಕೆಗಳನ್ನು ನಿಯಂತ್ರಿಸುತ್ತದೆ.

English summary

How To Get Rid Of Mosquito Bites Naturally | ಸೊಳ್ಳೆ ಕಡಿತಗಳಿಂದ ಸುಲಭವಾಗಿ ಪಾರಾಗುವುದು ಹೇಗೆ

Mosquito bites can make our skin becomes itchy and turn into bumps on the skin surface. In some cases, bites can turn into a lasting scar. The problem arises when the bite is very visible, for example in the hands, face or feet. But do not worry there are some tips to overcome mosquito bites naturally
X
Desktop Bottom Promotion