For Quick Alerts
ALLOW NOTIFICATIONS  
For Daily Alerts

ಜೇಡರ ಬಲೆ ತೆಗೆಯುವುದು ಹೇಗೆ?

By ವಾಣಿ
|

ಇತ್ತೀಚೆಗೆ ಬಹಳಷ್ಟು ಜನರು ಅರಚ್ನೊಫೊಬಿಯ(ಜೇಡವನ್ನು ಕಂಡರೆ ಭಯಪಡುವ ಮನೋರೋಗ) ದಿಂದ ಬಳಲುತ್ತಿದ್ದಾರೆ.ಅಂತವರಿಗೆ ಜೇಡದ ಬಲೆಗಳನ್ನು ತೆಗೆಯುವದೆಂದರೆ ಭಯ. ಅದೃಷ್ಟವಶಾತ್, ಯಾವುದೇ ಹೆದರಿಕೆ ಇಲ್ಲದೆ ಮೂಲೆ ಹಾಗೂ ಮನೆ ಸಂದುಗಳಲ್ಲಿನ ಬಲೆಗಳನ್ನು ತೆಗೆಯಲು ಕೆಲವು ಮಾರ್ಗಗಳಿವೆ.

ಹಂತಗಳು

1. ಬಲೆಯ ಒಳಗೆ ಅಥವಾ ಸುತ್ತಮುತ್ತ ಜೀವಂತ ಜೇಡಗಳು ಅಥವಾ ಕೀಟಗಳು ಇವೆಯೇ ಎಂದು ಪರಿಶೀಲಿಸಿ. ನೀವು ಬಲೆಯನ್ನು ಸ್ವಚ್ಛಗೊಳಿಸುವ ಮೊದಲೇ ಅವುಗಳನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ಅಲ್ಲಿದ್ದ ಜೇಡರ ಹುಳು ಎಲ್ಲಕಡೆಯೂ ಹರಿದಾಡಿ ನಿಮ್ಮ ಕೆಲಸವನ್ನು ಇನ್ನೂ ಕಷ್ಟಕರವಾಗಿಸುತ್ತವೆ.

How to Get Rid of Spider Webs

2. ನಿಲ್ಲಲು ಕುರ್ಚಿ, ಕೈಚೀಲಗಳು ಮತ್ತು ಹಾಳೇ ವಸ್ತ್ರಗಳು ಇವೇ ಮುಂತಾದ ಬಲೆ ತೆಗೆಯುವಲ್ಲಿ ಸಹಾಯಕಾರಿಯಾಗುವಂತಹ ವಸ್ತುಗಳನ್ನು ಮೊದಲೇ ತಂದಿರಿಸಿಕೊಳ್ಳಿ.

3. ಕೆಳಗೆ ವಿವರಿಸಲಾದ ನಾಲ್ಕು ಸರಳ ವಿಧಾನಗಳಲ್ಲಿ ಜೇಡರ ಬಲೆಗಳನ್ನು ತೆಗೆಯಲು ನೀವು ಯಾವ ವಿಧಾನವನ್ನು ಬಳಸುವಿರೆಂಬುದನ್ನು ಮೊದಲೇ ನಿರ್ಧರಿಸಿ.

ವಿಧಾನ 1

1. ಒಂದು ಕಾಗದದ ಟವಲ್ ಬಳಸಿ : ಬಲೆಯಲ್ಲಿ ಜೇಡರ ಹುಳು ಜೀವಂತವಾಗಿದ್ದರೆ ಕಾಗದದ ಟವೆಲ್ಲಿನಿಂದ ಅದನ್ನು ಹಿಡಿದು ಎಸೆದು ಬಿಡಿ ಅಥವಾ ಹೊರಗಡೆ ಹಾಕಿ ಬಿಡಿ.

2. ಕಾಗದದ ಟವೆಲನಿಂದ ಸಂಪೂರ್ಣವಾಗಿ ಬಲೆಯನ್ನು ತೆಗೆದು ಬಿಡಬಹುದು. ಹಾಗೇ ಮಾಡುವಾಗ ಕೈಗವಸುಗಳನ್ನು ಧರಿಸುವದು ಒಳ್ಳೆಯದು.

ವಿಧಾನ 2

1. ಬಲೆ ತೆಗೆಯಲು ಕೋಲು ಬಳಸಬಹುದು : ನೀವು ಬಳಸಬೇಕಾದ ಕೋಲಿನ ಅಳತೆ ನೀವು ಸ್ವಚ್ಛಗೊಳಿಸಬೇಕಾದ ವಸ್ತುವಿನ ಗಾತ್ರವನ್ನು ಅವಲಂಭಿಸಿರುತ್ತದೆ. ಉದಾಹರಣೆಗೆ, ನೀವು ಒಂದು ಬೈಸಿಕಲ್ ಸ್ವಚ್ಛಗೊಳಿಸುತ್ತಿದ್ದರೆ, ಒಂದು ಸಣ್ಣ ಕಟ್ಟೆಗೆ ಅಥವಾ ಚಾಪ್ಸ್ಟಿಕ್ ಬಳಸಿ. ಮನೆಯ ಒಳಮಾಳಿಗೆಯ ಮೂಲೆಗಳನ್ನು ಸ್ವಚ್ಛಗೊಳಿಸಬೇಕಾದಲ್ಲಿ ಪೊರಕೆಯನ್ನು ಬಳಸಬೇಕು.

2. ಕೋಲಿನಿಂದ ಬಲೆತೆಗೆಯುವುದು ಹೆಚ್ಚು ಪರಿಣಾಮಕಾರಿಯಾಗ ಬೇಕಾದರೆ ಆ ಕೋಲಿನ ಮುಂಭಾಗಕ್ಕೆ ಜಿಗುಟಾದ ಪದಾರ್ಥವನ್ನು ಕಟ್ಟಬೇಕು . ಡಕ್ಟ್ ಟೇಪಗಳು, ಪೊರಕೆಗಳನ್ನು ಕಟ್ಟುವದರಿಂದ ಬಲೆಯು ಅದಕ್ಕೆ ಅಂಟಿಕೊಂಡು ಸಂಪೂರ್ಣವಾಗಿ ಹೊರಬರುವುದು. ಟಾಯ್ಲೆಟ್ ಪೇಪರಗಳು ಮತ್ತು ಸುತ್ತಲೂ ಸೂಜಿಗಳನ್ನು ಹೊಂದಿರುವ ಪಿನ್ ಗಳು ಚಿಕ್ಕ ಸಾಧನಗಳಿಗೆ ಸ್ವಚ್ಛಗೊಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

3. ಇನ್ನೂ ಸರಳ ವಿಧಾನ ಅಂದ್ರೆ, ಕೈಗೆಟಕುವ ದೂರದಿಂದ ಸಾಧಾರಣ ಕೋಲಿನಿಂದ ಕೂಡ ಜೇಡದ ಬಲೆಗಳನ್ನು ಕೀಳಬಹುದು.

4. ಜೇಡದ ಬಲೆಯನ್ನು ಸಂಪೂರ್ಣವಾಗಿ ತೆಗೆದ ನಂತರ ಅದಕ್ಕೆ ಬಳಸಿದ ಕೋಲನ್ನು ಎಸೆದುಬಿಡಿ. ಅಥವಾ ನೀವು ಪೊರಕೆ ಬಳಸಿದ್ದರೆ ಅದನ್ನು ಚನ್ನಾಗಿ ತೊಳೆಯಿರಿ.

ವಿಧಾನ 3

1. ಯಾವುದೇ ತೆರೆದ ಸ್ಥಳದಲ್ಲಿನ ಜೇಡವನ್ನು ಶೀಘ್ರವಾಗಿ ತೆಗೆದುಹಾಕಲು ಒಂದು ಸಣ್ಣ ಹ್ಯಾಂಡ್ ಹೆಲ್ಡ್ ವ್ಯಾಕ್ಯೂಂ ಕ್ಲೀನರ್ ಬಳಸಬಹುದು. ಆದರೆ, ಇದರಿಂದ ಸೈಕಲ್ ನಂತಹ ಕೆಲವು ಸಾಧನಗಳನ್ನು ಸ್ವಚ್ಛಗೊಳಿಸಲಾಗದು.

ವಿಧಾನ 4

1. ಕ್ಲೋರೊಕ್ಸ್ ಕ್ಲೀನಪ್ ನಂತಹ ದುರ್ಬಲ ಬ್ಲೀಚ್ ನಿಂದ ಬಲೆಯನ್ನು ನಿಷ್ಕ್ರೀಯಗೊಳಿಸಬಹುದು.

ಸಲಹೆಗಳು

ಸಾದಾ ನೀರನ್ನು ಬಲೆಗಳ ಮೇಲೆ ಹಾಕಿದರೂ ಅದು ಅಷ್ಟೇನೂ ಪರಿಣಾಮಕಾರಿಯಾಗದು. ಬದಲಿಗೆ, ನೀರನ್ನು ವೇಗವಾಗಿ ಬಲೆಯಮೇಲೆ ಸಿಂಪಡಿಸುವದರಿಂದ ಬಲೆ ಕಿತ್ತು ಹೋಗಬಹುದು.ಆದರೆ ಕೆಲವೊಮ್ಮೆ ಕೀಳದೆಯೂ ಇರಬಹುದು. ಈ ವಿಧಾನವನ್ನು ಹೊರಾಂಗಣದಲ್ಲಿ ಮಾತ್ರ ಬಳಸಿ.

ಕೆಲವು ಕಂಪನಿಗಳು "ವೆಬ್ಸ್ಟರ್ಸ್" ಎಂಬ ಜೇಡದ ಬಲೆ ತೆಗೆಯುವ ದೊಡ್ಡ, ದಪ್ಪ ಕುಂಚಗಳುಳ ಬ್ರೇಷ್ ಗಳನ್ನು ಮಾರುತ್ತವೆ. ಅವುಗಳನ್ನೂ ನೀವು ಬಳಸಬಹುದು.

ಒಂದು ಸ್ಥಳದಲಿ ಜೇಡವಿದೆ ಎಂದರೆ ಅದಕ್ಕೆ ಕಾರಣ ಅಲ್ಲಿ ಅದರ ಆಹಾರವಿದೆ. ನೀವು ಬಲೆಗಳನ್ನೆಲ್ಲಾ ತೆಗೆದು ಆಹಾರವನ್ನು ಅಲ್ಲೇ ಉಳಿಸಿದ್ದರೆ ಜೇಡಗಳು ಮತ್ತೇ ಅಲ್ಲಿಗೆ ಹಿಂದಿರುಗುವದು ಖಚಿತ.

ಜೇಡದಸಂಖ್ಯೆಯು ಕಡಿಮೆಯಾದರೆ ಇತರ ಕೀಟಗಳಸಂಖ್ಯೆ ಹೆಚ್ಚಾಗುತ್ತದೆ. ಒಂದು ಪ್ರದೇಶದಲ್ಲಿ ಸಾಕಷ್ಟು ಜೇಡಗಳಿವೆ ಎಂದರೆ ಆ ಪ್ರದೇಶದಲ್ಲಿ ಅವಕ್ಕೆ ಸಾಕಷ್ಟು ಆಹಾರ ಸಿಗುತ್ತಿದೆ ಎಂದರ್ಥ. ಜೇಡಗಳು ನಮ್ಮ ಸುತ್ತಲಿನ ಕ್ರಿಮಿಗಳನ್ನು ನಾಶಮಾಡುವಲ್ಲಿ ನಮಗೆ ಸಹಾಯಕಾರಿಯಾಗಿವೆ.ಆದ್ದರಿಂದ ಅವುಗಳ ಜೊತೆ ನಾವು ಶಾಂತಿಯುತ ಸಂದಾನ ಮಾಡಿಕೊಳ್ಳುವುದು ಒಳ್ಳೆಯದು.

ನೀವು ನಿಜವಾಗಿಯೂ ಈ ಕೂದಲುಳ್ಳ 8 ಕಾಲಿನ ಜೀವಿಗಳಿಂದ ಸೋಲನುಭವಿಸಿದ್ದರೆ , ನಿಮ್ಮ ಹತ್ತಿರದ ಕುಟುಂಬ ಸದಸ್ಯ / ಸ್ನೇಹಿತ ಅವನು / ಅವಳಿಗೆ ಅದನ್ನು ಕೇಳಲು ನಾಚಿಕೆ ಪಡಬೇಕಾಗಿಲ್ಲ.

ಫ್ಲೈ ಸ್ವೆಟ್ಟರ್ ಗಳು ನೊಣಗಳ ಮೇಲೆ ಕೆಲಸ ಮಾಡುವಂತೆಯೇ ಜೇಡಗಳ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಈಗಾಗಲೇ ನಿಮ್ಮಲ್ಲಿ ಇದ್ದರೆ ಅದನ್ನು ಬಳಸಲು ಶುರುಮಾಡಿ.ಜೇಡಗಳಿಂದ ಮುಕ್ತಿ ಪಡೆಯಿರಿ.

English summary

How to Get Rid of Spider Webs | ಜೇಡರ ಬಲೆ ತೆಗೆಯುವುದು ಹೇಗೆ?

Since a lot of people suffer from arachnophobia, getting rid of spider webs can be frightening. Fortunately, there are ways of getting a web out of nooks and crannies without the surprises and scares.
X
Desktop Bottom Promotion