For Quick Alerts
ALLOW NOTIFICATIONS  
For Daily Alerts

ಮನೆಯ ಹಾಲ್ ಬಗ್ಗೆ ಫೆಂಗ್ ಶುಯಿ ವಾಸ್ತು ಶಾಸ್ತ್ರ

By Super
|

ಫೆಂಗ್ ಶುಯಿ ಎನ್ನುವುದು ವಾಸ್ತುಶಾಸ್ತ್ರ. ಇದು ಮನೆಯೊಳಗೆ ಯಾವ ರೀತಿ ಪರಿಣಾಮ ಬಿರುತ್ತದೆ ಎಂದು ಚಕಿತರಾಗಬಹುದು. ಮನೆಯ ದಿಕ್ಕು, ಬಾಗಿಲುಗಳ ದಿಕ್ಕು, ದೇವರ ಕೋಣೆ, ಮನೆಯೊಳಗೆ ಹಾಕಿರುವ ಅಲಂಕಾರಿಕ ವಸ್ತುಗಳು ಹೀಗೆ ಪ್ರತಿಯೊಂದರ ಮೇಲೂ ಫೆಂಗ್ ಶುಯಿ ಪರಿಣಾಮವಿರುತ್ತದೆ. ಮನೆಯನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಂಡರೆ ಫೆಂಗ್ ಶುಯಿ ಇದ್ದಂತೆ.

ಪ್ರತಿಯೊಂದು ಮನೆಯ ಲಿವಿಂಗ್ ರೂಂ ಎನ್ನುವುದು ಎಲ್ಲಾ ವಸ್ತುಗಳಿಂದ ತುಂಬಿರುತ್ತದೆ. ಲಿವಿಂಗ್ ರೂಂನ ವಾತಾವರಣ ಪ್ರಶಾಂತವಾಗಿರಬೇಕು. ಕೆಲವೊಂದು ಅಂಶಗಳನ್ನು ಪಾಲಿಸುವುದರಿಂದ ನಾವು ಮನೆಯಲ್ಲಿ ಫೆಂಗ್ ಶುಯಿನ ಧನಾತ್ಮಕ ಪರಿಣಾಮ ಬೀರುವಂತೆ ಮಾಡಬಹುದು.

1. ಲಿವಿಂಗ್ ರೂಮ್ ಗೆ ಪೈಂಟಿಂಗ್

1. ಲಿವಿಂಗ್ ರೂಮ್ ಗೆ ಪೈಂಟಿಂಗ್

ಸೂರ್ಯೋದಯವನ್ನು ಒಳಗೊಂಡ ಭೂದೃಶ್ಯ, ನೀರು ಅಥವಾ ಪವರ್ತಗಳ ಚಿತ್ರಗಳು ಭರವಸೆ ಸೂಚಿಸುತ್ತದೆ.

2.ನಗುಮುಖದ ಜನರ ಭಾವಚಿತ್ರಗಳನ್ನು ಹಾಕಿ

2.ನಗುಮುಖದ ಜನರ ಭಾವಚಿತ್ರಗಳನ್ನು ಹಾಕಿ

ಪ್ರಶಾಂತ ಮತ್ತು ನಗುಮುಖದ ಜನರ ಭಾವಚಿತ್ರಗಳು ಧನಾತ್ಮಕ ಭಾವನೆಯನ್ನು ಉತ್ತೇಜಿಸುತ್ತದೆ.

ನೀರಿನ ಚಿತ್ರ ಒಳ್ಳೆಯದು

ನೀರಿನ ಚಿತ್ರ ಒಳ್ಳೆಯದು

ಅನುಕ್ರಮವಾಗಿರುವ ನೀರಿನ ಸಂಕೇತ ಅದೃಷ್ಟವನ್ನು ಸೂಚಿಸುತ್ತದೆ.

ಈ ವರ್ಣಚಿತ್ರಗಳು ಬೇಡ

ಈ ವರ್ಣಚಿತ್ರಗಳು ಬೇಡ

ರೇಖಾಗಣಿತ ಆಧರಿತ ವರ್ಣಚಿತ್ರಗಳು ವಿನಾಶಕಾರಿ ಭಾವನೆ ಹೆಚ್ಚಿಸುತ್ತದೆ. ಅವುಗಳನ್ನು ದೂರವಿಡಿ.

ಕಾಡು ಮತ್ತು ಕೆಟ್ಟ ಪ್ರಾಣಿಗಳ ವರ್ಣಚಿತ್ರ

ಕಾಡು ಮತ್ತು ಕೆಟ್ಟ ಪ್ರಾಣಿಗಳ ವರ್ಣಚಿತ್ರ

ಕಾಡು ಮತ್ತು ಕೆಟ್ಟ ಪ್ರಾಣಿಗಳ ವರ್ಣಚಿತ್ರಗಳು ಕಳಪೆ ಆರೋಗ್ಯ ಪ್ರೇರೇಪಿಸುತ್ತದೆ. ಇಂತಹ ವರ್ಣಚಿತ್ರಗಳನ್ನು ಗೋಡೆಗೆ ತೂಗು ಹಾಕಬೇಡಿ.

ಗೋಡೆಯ ಬಣ್ಣ

ಗೋಡೆಯ ಬಣ್ಣ

ಮನೆಯ ಕೋಣೆಗೆ ಕೆಂಪು ಬಣ್ಣವನ್ನು ಬಳಿಯಬೇಡಿ. ಇದು ಕಿರಿಕಿರಿ ಉಂಟು ಮಾಡುತ್ತದೆ.

ಕುರಿಮರಿಗಳ ಚಿತ್ರ ಒಳ್ಳೆಯದು

ಕುರಿಮರಿಗಳ ಚಿತ್ರ ಒಳ್ಳೆಯದು

ಕುರಿಮರಿಗಳು ಅದೃಷ್ಟದ ಸಂಜ್ಞೆಗಳು.

ಈಜುವ ಮೀನಿನ ಚಿತ್ರ

ಈಜುವ ಮೀನಿನ ಚಿತ್ರ

ಈಜುವ ಮೀನಿನ ಚಿತ್ರಗಳು ದೀರ್ಘಾಯುಷ್ಯವನ್ನು ಸೂಚಿಸುತ್ತದೆ.

2. ನಿಮ್ಮ ಲಿವಿಂಗ್ ರುಮ್ ನಲ್ಲಿರಬೇಕಾದ ಸಸ್ಯಗಳು

2. ನಿಮ್ಮ ಲಿವಿಂಗ್ ರುಮ್ ನಲ್ಲಿರಬೇಕಾದ ಸಸ್ಯಗಳು

ಬಾಡದೆ ಇರುವ ಬಹುತೇಕ ಎಲ್ಲಾ ಸಸ್ಯಗಳು ಕೂಡ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಪಾಪಸುಕಳ್ಳಿ, ಚೂಪಾದ ಮತ್ತು ಮುಳ್ಳುಗಳಿಂದ ಕೂಡಿರುವ ಎಲೆಗಳಿರುವ ಗಿಡಗಳನ್ನು ನಿಮ್ಮ ಮನೆಯಿಂದ ಹೊರಗಿಡಿ.

ಪ್ಲಾಸ್ಟಿಕ್ ಅಥವಾ ಕೃತಕ ಸಸ್ಯಗಳು ತಟಸ್ಥವಾಗಿರುವಂತದ್ದು, ಇದು ಫೆಂಗ್ ಶುಯಿಗೆ ಪರಿಣಾಮ ಬೀರಲ್ಲ.

3. ಮನೆಯ ಕಾರ್ಪೆಟ್ ಹೇಗಿರಬೇಕು

3. ಮನೆಯ ಕಾರ್ಪೆಟ್ ಹೇಗಿರಬೇಕು

ಯಾವ ದಿಕ್ಕಿನಲ್ಲಿ ಕಾರ್ಪೆಟ್ ಮತ್ತು ರಗ್ಗುಗಳು ಹಾಕುತ್ತೀರಿ ಎನ್ನುವುದನ್ನು ಗಮನಿಸಿ ಬಣ್ಣವನ್ನು ಆಯ್ಕೆ ಮಾಡಿ. ನಿಮ್ಮ ಇಡೀ ಕೋಣೆಯನ್ನು ಆವರಿಸುವಂತಹ ಕಾರ್ಪೆಟ್ ಕೊಠಡಿ ದಿಕ್ಕಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ನೋಡಿಕೊಳ್ಳಿ.

4. ಮನೆಯ ಸಾಕುಪ್ರಾಣಿ

4. ಮನೆಯ ಸಾಕುಪ್ರಾಣಿ

ಬೆಕ್ಕುಗಳನ್ನು ಮರದ ಅಂಶವೆನ್ನುತ್ತಾರೆ. ಇದರಿಂದ ಅವುಗಳ ಹಾಸಿಗೆ ಕಪ್ಪು, ನೀಲಿ ಅಥವಾ ಹಸಿರು ಬಣ್ಣದ್ದಾಗಿರಬೇಕು. ಕೆಂಪು ಬಣ್ಣದ ಹಾಸಿಗೆ ಬೆಕ್ಕುಗಳಿಗೆ ಸರಿಯಾದ ಆಯ್ಕೆಯಲ್ಲ. ಮನೆ ಬಾಗಿಲು ಈಶಾನ್ಯ, ದಕ್ಷಿಣ ಅಥವಾ ವಾಯುವ್ಯಕ್ಕೆ ತೆರೆದುಕೊಳ್ಳುತ್ತಿದ್ದರೆ ನಿಮ್ಮ ಬೆಕ್ಕು ದೃಢ ಮತ್ತು ಆರೋಗ್ಯವಾಗಿರುತ್ತದೆ. ನೈಋತ್ಯ ಮತ್ತು ಉತ್ತರ ಬಾಗಿಲು ಬೆಕ್ಕುಗಳಿಗೆ ಕೆಟ್ಟದೆಂದು ಪರಿಗಣಿಸಲಾಗುತ್ತದೆ.

ಮನೆಯ ಸಾಕುಪ್ರಾಣಿ

ಮನೆಯ ಸಾಕುಪ್ರಾಣಿ

ನಾಯಿಗಳು ಭೂಮಿಯ ಅಂಶಕ್ಕೆ ಸೇರಿದ್ದೆಂದು ಹೇಳಲಾಗುತ್ತದೆ. ಅವುಗಳಿಗೆ ಕಂದು ಅಥವಾ ಹಳದಿ ಬಣ್ಣದ ಬುಟ್ಟಿಯನ್ನು ಆಯ್ಕೆ ಮಾಡಿ. ಬಿಳಿ ಬುಟ್ಟಿಗಳು ನಾಯಿಗಳನ್ನು ಅನಾರೋಗ್ಯಕ್ಕೀಡು ಮಾಡಬಹುದು. ನೈಋತ್ಯ, ಈಶಾನ್ಯ ಮತ್ತು ದಕ್ಷಿಣಕ್ಕೆ ಬಾಗಿಲುಗಳಿದ್ದರೆ ನಾಯಿಗಳನ್ನು ಬಲಶಾಲಿ ಹಾಗೂ ಆರೋಗ್ಯಕರವನ್ನಾಗಿಸುತ್ತದೆ. ಪೂರ್ವ ಅಥವಾ ಆಗ್ನೇಯ ಬಾಗಿಲುಗಳು ಅವುಗಳು ಅನಾರೋಗ್ಯಕ್ಕೀಡಾಗುವಂತೆ ಮಾಡಬಹುದು.

English summary

Feng Shui for your living room

If you've been wondering how to Feng Shui your living room. Here are some ways. The living room of any house is where all the occupants of the home gather, thus the atmosphere of the living room should be peaceful and calm.
X
Desktop Bottom Promotion