For Quick Alerts
ALLOW NOTIFICATIONS  
For Daily Alerts

ಫೆಂಗ್ ಶುಯಿ ವಾಸ್ತು ಪ್ರಕಾರ ಮನೆಯ ವಿನ್ಯಾಸ

By Super
|

ಸಾಮಾನ್ಯವಾಗಿ ಹಲವರಿಗೆ ಜಿವನದಲ್ಲಿ ಮನೆ ಕಟ್ಟುವ, ಕೊಂಡುಕೊಳ್ಳುವ ಕನಸು ಇದ್ದೇ ಇರುತ್ತದೆ. ತಮ್ಮದೇ ಆದ ಮನೆಯನ್ನು ಮಾಡಿಕೊಂಡು ತಮಗೆ ಬೇಕಾದ ಹಾಗೆ ಅದರ ವಿನ್ಯಾಸವನ್ನು ಮಾಡಿಕೊಳ್ಳಲು ಆಸೆಪಡುತ್ತಾರೆ.

ನಿಮ್ಮದೇ ಆದ ಪ್ಲಾಟ್, ಕಟ್ಟಡ, ಮನೆ ಅದರಲ್ಲಿ ಸುಂದರ ಕೈತೋಟ ಹೀಗೆ ನಿರ್ಮಿಸಲು ಹೊರಟರೆ ಯಾವುದೇ ಅಡಚಣೆಗಳಿಲ್ಲದೆ ಸುಸೂತ್ರವಾಗಿ ನೀವು ಅಂದುಕೊಂಡದ್ದು ನೆರವೇರಬೇಕು ಎಂದೇ ಆಶಿಸುತ್ತೀರಿ ಅಲ್ಲವೇ?

ಹಾಗಾದರೆ ಅಲಂಕಾರಗಳು, ಜೋಡಣೆ ಮತ್ತು ವಿನ್ಯಾಸದ ವಿಷಯದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿದ್ದರೆ ಅದಕ್ಕೆ ಪರಿಹಾರವಂತೂ ಇದ್ದೇಇದೆ. ಅದೇ ಫೆಂಗ್ ಶುಯಿ ಸಿದ್ಧಾಂತಗಳು!

ಕಟ್ಟಡಗಳ ಮರು ನಿರ್ಮಾಣದಲ್ಲಿ, ಕಟ್ಟಡದ ವಿನ್ಯಾಸವನ್ನು ಒಳಾಂಗಣ, ಅಲಂಕಾರವನ್ನು ನಮಗೆ ಬೇಕಾದ ಹಾಗೆ ಬದಲಾವಣೆಯನ್ನು ಮಾಡಬಹುದು.

ಫೆಂಗ್ ಶುಯಿಯ ಒಂದು ಸರಳ ವಿಧಾನವು ಸರಿಯಾದ ನೆಲದ ಮಟ್ಟಗಳು, ಸೆಟ್ ಬ್ಯಾಕ್ಸ್, ಕೊಠಡಿಗಳ ಸರಿಯಾದ ವಿನ್ಯಾಸ ಮತ್ತು ಹಂಚಿಕೆ ಒದಗಿಸುವ ದೃಷ್ಟಿಯಿಂದ ಅತ್ಯಂತ ಉತ್ತಮ ಸಲಹೆಯಾಗಬಲ್ಲದು. ಸರಿಯಾದ ಕ್ಷೇತ್ರಗಳಲ್ಲಿ ಕೊಠಡಿ ನಿರ್ಮಾಣ ಮಾಡುವುದರ ಬಗ್ಗೆ ಪ್ರಾಥಮಿಕ ಅಂಶವನ್ನು ಅರಿಯುವುದು ಕಾಂತಕ್ಷೇತ್ರಗಳ ಮತ್ತು ದಿಕ್ಸೂಚಿ ದಿಕ್ಕುಗಳಲ್ಲಿ ವ್ಯಾಖ್ಯಾನವನ್ನು ತಿಳಿದ ನಂತರ ಹೆಜ್ಜೆ. ಒಂದು ರೇಖೀಯ ಅಕ್ಷದ ಬಗ್ಗೆ ಮತ್ತು ಕಾರ್ಡಿನಲ್ ಕಾಂತೀಯ ದಿಕ್ಕಿನ ಬಗೆಗೆ ತಿಳಿಯುವುದು ಅತ್ಯಂತ ಅಗತ್ಯ. ಫೆಂಗ್ ಶುಯಿ ಸಿದ್ಧಾಂತಗಳು ಪ್ರತಿಯೊಂದು ಮನೆಯನ್ನು ವಿನ್ಯಾಸಗೊಳಿಸಲು ಸಾಕಷ್ಟು ಸುಲಭ ಸಲಹೆಯನ್ನು ನೀಡುತ್ತವೆ.

ಫೆಂಗ್ ಶುಯಿ ಮನೆ ವಿನ್ಯಾಸ ಅತ್ಯಂತ ಸಾರ್ವತ್ರಿಕ ನಿಯಮಗಳಲ್ಲಿ ಕೆಲವು ಹೀಗಿವೆ: -

ಮುಖ್ಯ ಬಾಗಿಲು

ಮುಖ್ಯ ಬಾಗಿಲು

ಮುಖ್ಯ ಬಾಗಿಲು ಮನೆಯಲ್ಲಿ ದೊಡ್ಡ ಬಾಗಿಲಾಗಿರಬೇಕು ಮತ್ತು ಬಾಗಿಲು ಅಡಿಗೆ ಮನೆ ಪ್ರದೇಶಕ್ಕೆ ತೆರೆದಿರಬಾರದು. ಅಲ್ಲದೆ ಮುಖ್ಯ ಬಾಗಿಲಿನ ಸ್ಥಾನವು ಗಂಭೀರ ಮತ್ತು ನೆಲದ ದಿಕ್ಕಿನಲ್ಲಿ ಅಕ್ಷದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಸರಿಯಾದ ದಿಕ್ಕುಗಳ ಮೇಲೆ ಇರುವ ಬಾಗಿಲು ಕೆಟ್ಟ ಸ್ಥಾನಿಕ ಎಂದು ಪರಿಗಣಿಸಲಾಗುತ್ತದೆ.

ಅಡುಗೆ ಕೋಣೆ

ಅಡುಗೆ ಕೋಣೆ

ನಾವು ಏನನ್ನು ತಿನ್ನುತ್ತೇವೆ, ಎಲ್ಲಿ ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಈ ಎಲ್ಲಾ ವಿಷಯಗಳು ಆರೋಗ್ಯ ಮತ್ತು ಉತ್ಸಾಹದ ಭಾಗಗಳಾಗಿವೆ. ಆದ್ದರಿಂದ ಅಡಿಗೆ ಸ್ಥಳ ಮನೆಗೆ ಒಟ್ಟಾರೆ ಸಾಮರಸ್ಯ ಆಧಾರವಾಗಿದೆ. ಅಡುಗೆ ಕೋಣೆಯಲ್ಲಿ ನೀರು, ಬೆಂಕಿ (ಸ್ಟೋವ್/ವಿದ್ಯುನ್ಮಾನ), ಲೋಹ (ಪಾತ್ರೆಗಳು) ಮುಂದಾದ ವಿಷಯದಲ್ಲಿ ಪುನರ್ನಿಮಾಣ/ ಮರು ನಿರ್ಮಾಣ ಮಾಡುವ ಸಾಧ್ಯತೆಗಳಿರುತ್ತವೆ. ನಾವು ವಾಸಿಸುವ ಸ್ಥಳದಲ್ಲಿ ಸ್ಟೌವ್ ಮತ್ತು ನೀರಿನ ಸಿಂಕ್ ಇವುಗಳಿಂದ ಸಮಸ್ಯೆಗಳು ಉಂಟಾಗಬಹುದಾದ್ದರಿಂದ ಅವುಗಳಿಂದ ದೂರವುಳಿಯುವುದು ಪ್ರಮುಖ ಅಂಶವಾಗಿದೆ.

ಮಲಗುವ ಕೋಣೆ

ಮಲಗುವ ಕೋಣೆ

ಇದು ಮನೆಯಲ್ಲಿ ಅತ್ಯಂತ ಪ್ರಮುಖವಾದ ಕೋಣೆ. ನಾವು ಉತ್ತಮ ವಾತಾವರಣದೊಂದಿಗೆ ಆಳವಾದ ನಿದ್ದೆ ಮಾಡಿದಾಗ ಮಾತ್ರ ನಾವು ಮರುದಿನ ಸಂತೋಷದ ಮೂಡ್ ನಲ್ಲಿರಲು ಸಾಧ್ಯ ಎಂದು ಹೇಳಲಾಗುತ್ತದೆ. ಹೆಚ್ಚು ಸಮಯ ನಿದ್ದೆ ಮಾಡುವುದಕ್ಕಿಂತ ಉತ್ತಮ ನಿದ್ದೆ ಅತ್ಯಂತ ಮುಖ್ಯ. ಕೆಲವು ಸ್ಥಳಗಳಲ್ಲಿ ಇತರ ಸ್ಥಳಕ್ಕಿಂತ ಶಾಂತಿಯುತ ನಿದ್ರೆಗೆ ಹೆಚ್ಚು ದಾರಿಗಳಿವೆ. ಸೌಮ್ಯ ಮತ್ತು ಮೆತ್ತಗಿರುವ ಮರದ ಹಾಸಿಗೆ ಲೋಹದ ಹಾಸಿಗೆ (ಬೆಡ್) ಗಿಂತ ಉತ್ತಮ. ಲೋಹದ ಬೆಡ್ ಶನಿ ಗ್ರಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.

ವಿಶ್ರಾಂತಿ ಕೊಠಡಿ

ವಿಶ್ರಾಂತಿ ಕೊಠಡಿ

ಈ ಕೋಣೆಯಲ್ಲಿ ವಿಶ್ರಾಂತಿ ಪಡೆಯಲು ಇರುವ ಸ್ಥಳವಾಗಿದೆ. ಫೆಂಗ್ ಶೂಯಿ ಗ್ರಂಥಗಳ ಪ್ರಕಾರ, ಮನೆಯ ಕೇಂದ್ರ ಭಾಗ ಅಥವಾ 'ತೈ ಚೈ', ಪ್ರಮುಖ ಚಟುವಟಿಕೆಗಳಿಗೆ ಕಡಿಮೆ ಕಾಸ್ಮಿಕ್ ಶಕ್ತಿಯನ್ನು ಪಡೆಯುತ್ತದೆ. ಆದರೆ ಕಟ್ಟಡದ ಮಧ್ಯ ಭಾಗದಲ್ಲಿ ವಿಶ್ರಾಂತಿ ಕೊಠಡಿಯಿದ್ದರೆ, ಅದು ಅತ್ಯಂತ ಪ್ರಯೋಜನಕಾರಿ. ಸೋಫಾ ಮತ್ತು ಭಾರೀ ಪೀಠೋಪಕರಣನ್ನು ಕೋಣೆಯ ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ಹಾಕಬೇಕು. ಇದನ್ನು ಕೋಣೆಯ ಈಶಾನ್ಯ ವಿಭಾಗದಲ್ಲಿ ಹಾಕದಿರುವುದು ಒಳ್ಳೆಯದು.

ಶೌಚಾಲಯಗಳು

ಶೌಚಾಲಯಗಳು

ಹಿಂದೆ ಶೌಚಾಲಯಗಳನ್ನು ಮುಖ್ಯ ಮನೆಯಿಂದ ಹೊರಗೆ ಸ್ವಲ್ಪ ದೂರದಲ್ಲಿ ನಿರ್ಮಿಸಲಾಗುತ್ತಿತ್ತು. ಆದರೆ ಈಗ ಎಲ್ಲಾ ಮನೆಗಳಲ್ಲೂ ಕೊಠಡಿಗಳಿಗೆ ಅಟ್ಯಾಚ್ಡ್ / ಅಂಟಿಕೊಂಡು ನಿರ್ಮಿಸಲಾಗುತ್ತದೆ. ಶೌಚಾಲಯಗಳು ಅಡುಗೆ ಕೋಣೆಯಿಂದ ಸ್ವಲ್ಪ ದೂರದಲ್ಲಿರಬೇಕು.

ಫೆಂಗ್ ಶುಯಿ ಭೂಮಿ, ಮಾನವ ಮತ್ತು ಬ್ರಹ್ಮಾಂಡದ ನಡುವೆ ಮೂಲಭೂತ ಸಂಬಂಧದ ಬಗ್ಗೆ ನಮಗೆ ನೆನಪಿಸುತ್ತದೆ. ಈ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮೂಲಕ, ನಾವು ಸಾಮರಸ್ಯದ ಜೊತೆಗೆ ನಮ್ಮ ಕೆಲಸದ ಪರಿಸರವನ್ನು ಆರೋಗ್ಯಕರ ವಾತಾವರಣದಲ್ಲಿ ರಚಿಸಬಹುದು.

English summary

Designing homes the Feng Shui way

This is quite possible when we plan our home keeping in mind some important tenets of Feng Shui in terms of decor, alignment and design.The adaptation could extend beyond the framework of building design as it can be used to enhance the interiors, furnishing , decor and other aspects of the deisgn elements in a space.
X
Desktop Bottom Promotion